ಆನ್‌ಲೈನ್‌ನಲ್ಲಿ ಬ್ಯಾಂಕ್ ಖಾತೆಯನ್ನು ಮತ್ತೊಂದು ಶಾಖೆಗೆ ವರ್ಗಾವಣೆ ಮಾಡುವುದು ಹೇಗೆ?
ಒಂದು ಶಾಖೆಯಲ್ಲಿ ನೀವು ಉಳಿತಾಯ ಖಾತೆ ಹೊಂದಿದ್ದು, ಮತ್ತೊಂದು ಶಾಖೆಗೆ ಅದನ್ನು ವರ್ಗಾಯಿಸಲು ನಾನ ಅರ್ಜಿಗಳನ್ನು ಭರ್ತಿ ಮಾಡಿ 15-20 ದಿನ ಅಥವಾ ತಿಂಗಳ ತನಕ ಕಾಯುವ ಅಗತ್ಯವೂ ಇಲ್ಲ.!!
ಒಂದು ಬ್ಯಾಂಕ್ ಶಾಖೆಯಲ್ಲಿರುವ ಬ್ಯಾಂಕ್ ಖಾತೆಯನ್ನು ಮತ್ತೊಂದು ಶಾಖೆಗೆ ವರ್ಗಾವಣೆ ಮಾಡಿಸುವುದು ಕೆಲವೊಮ್ಮೆ ಅನಿವಾರ್ಯವಾಗಿರುತ್ತದೆ. ಉದಾರಹಣೆಗೆ ನೀವು ಮೊದಲು ಹಾಸನದಲ್ಲಿ ಬ್ಯಾಂಕ್ ಖಾತೆ ತೆರೆದಿದ್ದು, ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದರೆ ಬ್ಯಾಂಕ್ ಖಾತೆಯನ್ನು ವರ್ಗಾವಣೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು.!!
ಏಕೆಂದರೆ, ಎಲ್ಲಾ ಬ್ಯಾಂಕ್ ಕಾರ್ಯಗಳಿಗೂ ದೂರದ ಶಾಖೆಗೆ ಭೇಟಿ ನೀಡಲು ಸಾಧ್ಯವಿಲ್ಲ.! ಮತ್ತು ಒಂದು ಶಾಖೆಯಲ್ಲಿ ನೀವು ಉಳಿತಾಯ ಖಾತೆ ಹೊಂದಿದ್ದು, ಮತ್ತೊಂದು ಶಾಖೆಗೆ ಅದನ್ನು ವರ್ಗಾಯಿಸಲು ನಾನ ಅರ್ಜಿಗಳನ್ನು ಭರ್ತಿ ಮಾಡಿ 15-20 ದಿನ ಅಥವಾ ತಿಂಗಳ ತನಕ ಕಾಯುವ ಅಗತ್ಯವೂ ಇಲ್ಲ.!!
ಹಾಗಾಗಿ, ಇಂದಿನ ಲೇಖನದಲ್ಲಿ ಆನ್‌ಲೈನ್‌ನಲ್ಲಿಯೇ ನೀವು ನಿಮ್ಮ ಖಾತೆಯನ್ನು ಮತ್ತೊಂದು ಶಾಖೆಗೆ ಹೇಗೆ ವರ್ಗಾಯಿಸಬಹದು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ಬಹುತೇಕ ಎಲ್ಲಾ ಬ್ಯಾಂಕ್‌ಗಳೂ ಈ ಸೌಲಭ್ಯ ನೀಡಿದ್ದು, ನಾವು ಪ್ರಮುಖ ಎಸ್‌ಬಿಐ ಬ್ಯಾಂಕ್ ಶಾಖೆ ವರ್ಗಾವಣೆ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ.!!

ಮೊಬೈಲ್ ಸಂಖ್ಯೆ ನೋಂದಣಿಯಾಗಿರಬೇಕು.!!
ಆನ್‌ಲೈನ್‌ನಲ್ಲಿಯೇ ನೀವು ನಿಮ್ಮ ಖಾತೆಯನ್ನು ಮತ್ತೊಂದು ಶಾಖೆಗೆ ವರ್ಗಾಯಿಸಲು ಬ್ಯಾಂಕ್‌ಗೆ ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿಯಾಗಿರಬೇಕು. ಜತೆಗೆ ನೀವು ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿದ್ದರೆ ಮಾತ್ರ ಉಚಿತವಾಗಿ ಖಾತೆ ಬದಲಾವಣೆಯನ್ನು ನೀವೆ ಮಾಡಬಹುದು.

'ಪರ್ಸನಲ್ ಬ್ಯಾಂಕಿಂಗ್ ಆಯ್ದುಕೊಳ್ಳಿ.!!
ಮೊದಲಿಗೆ www.onlinesbi.com ಅನ್ನು ಮನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬ್ರೌಸರ್ ಮೂಲಕ ತೆರೆಯಿರಿ. ನಂತರ 'ಪರ್ಸನಲ್ ಬ್ಯಾಂಕಿಂಗ್' ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.

ಇ-ಸವೀರ್‍ಸಸ್ ಟ್ಯಾಪ್ ಮಾಡಿ.!!
ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆದ ನಂತರ ಇ-ಸವೀರ್‍ಸಸ್' ಎನ್ನುವ ಟ್ಯಾಪ್ ಅನ್ನು ಆಯ್ಕೆ ಮಾಡಿ. ನಂತರ ಟ್ರಾನ್ಸ್‌ಫರ್ ಆಫ್ ಸೇವಿಂಗ್ ಅಕೌಂಟ್' ಅನ್ನುವುದನ್ನು ಕ್ಲಿಕ್ ಮಾಡಿ. ನಂತರ ಮುಂದಿನ ಪುಟ ತೆರೆದುಕೊಳ್ಳುತ್ತದೆ.!!

ಶಾಖೆಯ ಕೋಡ್ ಅನ್ನು ನಮೂದಿಸಿ!
ಟ್ರಾನ್ಸ್‌ಫರ್ ಆಫ್ ಸೇವಿಂಗ್ ಅಕೌಂಟ್ ಆಯ್ಕೆ ಕ್ಲಿಕ್ ಮಾಡಿದರೆ ನಿಮ್ಮ ಖಾತೆ ವಿವರ ಕಾಣಿಸುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ. ನಂತರ ನೀವು ಬದಲಿಸಬೇಕಿರುವ ಶಾಖೆಯ ಕೋಡ್ ಅನ್ನು ನಮೂದಿಸಿ. ಕೋಡ್ ನಮೂದಿಸಿದಾದ ಆ ನಂತರ ಶಾಖೆ ಹೆಸರು ತನ್ನಿಂದ ತಾನೇ ಬಂದಾಗ, ಅದನ್ನು ಆಯ್ಕೆ ಮಾಡಿ ಸಬ್‌ಮಿಟ್ ಕೊಡಿ.!!

ಶಾಖೆಯ ಕೋಡ್ ಪಡೆಯುವುದು ಹೇಗೆ?
https://www.sbi.co.in/corporate/branchlocator.html ಗೆ ಭೇಟಿ ನೀಡಿದರೆ ನೀವು ಬದಲಿಸಬೇಕಿರುವ ಶಾಖೆಯ ಕೋಡ್ ಅನ್ನು ಪಡೆಯಬಹುದು. ಅಥವಾ ನೇರವಾಗಿ ಬ್ಯಾಂಕ್ ಹೆಸರನ್ನು ಆನ್‌ಲೈನ್‌ನಲ್ಲಿ ಸರ್ಚ್ ಮಾಡಿ ಕೂಡ ಶಾಖೆಯ ಕೋಡ್ ಪಡೆಯಬಹುದು.!!

ಓಟಿಪಿ ನೀಡಿ ಕನ್‌ಫರ್ಮ್ ಮಾಡಿ.
ಒಮ್ಮೆ ನೀವು ಸಬ್‌ಮಿಟ್ ಬಟನ್ ಒತ್ತಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ನಂತರ ಮತ್ತೆ ಕನ್ಫರ್ಮ್ ಮಾಡಿ. ಇಷ್ಟು ಕೆಲಸವಾದರೆ ನಿಮ್ಮ ಬ್ಯಾಂಕ್ ಶಾಖೆ ಬದಲಾವಣೆಯ ನಿಮ್ಮ ಕೆಲಸ ಮುಗಿದಂತೆ.!!


Click it and Unblock the Notifications








