ಮೊಬೈಲ್ ಇಂಟರ್ನೆಟ್ ಸಮರ್ಪಕ ಬಳಕೆಗೆ App

Posted By: Varun
ಮೊಬೈಲ್ ಇಂಟರ್ನೆಟ್ ಸಮರ್ಪಕ ಬಳಕೆಗೆ App

ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದು ಅದರಲ್ಲಿ ಇಂಟರ್ನೆಟ್ ಉಪಯೋಗಿಸುತ್ತಿರುವವರಿಗೆ ತಾವು ಎಷ್ಟು ಡೇಟಾ ಬಳಸುತ್ತೇವೆ ಎಂದು ಲೆಕ್ಕವೇ ಇರುವುದಿಲ್ಲ. ಫೇಸ್ ಬುಕ್ ನೋಡುತ್ತೇವೆ, ಚಾಟ್ ಮಾಡುತ್ತೇವೆ, ಮೇಲ್ ಕಳಿಸುತ್ತೇವೆ, ಬ್ರೌಸಿಂಗ್ ಮಾಡುತ್ತೇವೆ, ಆಪ್ ಗಳನ್ನ ಡೌನ್ಲೋಡ್ ಮಾಡಿಕೊಳ್ಳುತ್ತವೆ, ಆನ್ಲೈನ್ ವೀಡಿಯೋ ನೋಡುತ್ತವೆ. ಹೀಗಾಗಿ ಯಾವುದೇ ಡೇಟಾ ಪ್ಲಾನ್ ಇದ್ದರೂ ಕೂಡ ನಮಗೆ ಪ್ರತಿಯೊಂದು ಇಂಟರ್ನೆಟ್ ಚಟುವಟಿಕೆಗೆ ಎಷ್ಟು ಡೇಟಾ ಖರ್ಚು ಆಗುತ್ತೆ ಎಂದು ಗೊತ್ತಾಗುವುದಿಲ್ಲ.

ವೈಫೈ ಮೂಲಕ ಇಂಟರ್ನೆಟ್ ಬಳಸಿದರೆ ಪರವಾಗಿಲ್ಲ, ಆದರೆ 3G ಸಿಮ್ ನಿಂದ ಡೇಟಾ ಖರ್ಚಾಗುತ್ತಿದ್ದರೆ ಬಿಲ್ ಜಾಸ್ತಿಯಾಗುತ್ತದೆ. ಹೀಗಾಗಿ ನಿಮಗೆ ಪ್ರತಿಯೊಂದು ಇಂಟರ್ನೆಟ್ ಕೆಲಸದಿಂದ ಎಷ್ಟು ಡೇಟಾ ಖರ್ಚು ಆಗುತ್ತದೆ, ನಿಮ್ಮ ಡೇಟಾ ಲಿಮಿಟ್ ಯಾವಾಗ ಮೀರುತ್ತದೆ, ಎಂದು ತಿಳಿದುಕೊಳ್ಳಲು ಹಾಗು ಜಾಸ್ತಿ ಡೇಟಾ ಕಬಳಿಸುವ ಆಪ್ ಗಳನ್ನು ತಡೆಹಿಡಿಯಲು ಆಂಡ್ರಾಯ್ಡ್ ಆಪ್ ಒಂದು ಬಂದಿದೆ.

ಒನವೋ ಕೌಂಟ್ ಎಂಬ ಹೆಸರಿನ ಉಚಿತ ಆಂಡ್ರಾಯ್ಡ್ App ನಿಂದ ನೀವು ಇಂಟರ್ನೆಟ್ ಡೇಟಾದ ಸಮರ್ಪಕ ಬಳಕೆ ಮಾಡಿಕೊಳ್ಳಬಹುದು.

ಇದನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot