ಬರುತ್ತಿದೆ OnePlus 13T ಫೋನ್! ಯಾವಾಗ ಬಿಡುಗಡೆ? ಎಲ್ಲಿ ಮತ್ತು ಹೇಗೆ ಲೈವ್ ವೀಕ್ಷಿಸಬೇಕು?
ಒನ್‌ಪ್ಲಸ್ ನಾಳೆ ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಲಿದೆ. ಇದನ್ನು ಒನ್‌ಪ್ಲಸ್ 13 ಸರಣಿಯ ಅಡಿಯಲ್ಲಿ ಪರಿಚಯಿಸಲಾಗುವುದು. ಹೌದು, ಈಗಾಗಲೇ OnePlus 13 ಮತ್ತು OnePlus 13R ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದೀಗ, ಒನ್‌ಪ್ಲಸ್ 13T (OnePlus 13T) ಮೊಬೈಲ್ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಕಳೆದ ಹಲವು ದಿನಗಳಿಂದ ಒನ್‌ಪ್ಲಸ್ 13T ಫೋನಿನ ಸುದ್ದಿ ಮತ್ತು ಟೀಸರ್‌ಗಳು ಸೋರಿಕೆಯಾಗಿವೆ. ಈ ಫೋನಿನ ಬಿಡುಗಡೆ (Oneplus 13T Launch)ಕಾರ್ಯಕ್ರಮವನ್ನು ಎಲ್ಲಿ ಮತ್ತು ಹೇಗೆ ಲೈವ್ ವೀಕ್ಷಿಸಬೇಕು ಎಂದು ತಿಳಿಯೋಣ.
ವಿಶೇಷವೆಂದರೆ, ಒನ್‌ಪ್ಲಸ್ 13T ಫೋನಿನ ವಿನ್ಯಾಸವು ಐಫೋನ್ 16e ನಂತೆಯೇ ಇದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುತ್ತದೆ. ಈ ಮೊಬೈಲ್ 6.3 ಇಂಚಿನ OLED ಡಿಸ್ಪ್ಲೇಯೊಂದಿಗೆ ಬರಲಿದೆ. ಈ ಫೋನಿನಲ್ಲಿ 50MP + 50MP ಹಿಂಬದಿಯ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. ಇದರೊಂದಿಗೆ 6100mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್, 16GB RAM + 256GB ಸ್ಟೋರೇಜ್, IP69 ರೇಟಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳು ಲಭ್ಯವಿರುತ್ತವೆ. ಈ ಫೋನಿನ ಬೆಲೆ ಮತ್ತು ಇನ್ನಿತರ ಮಾಹಿತಿಗಾಗಿ ಮುಂದೆ ಓದಿ.

ಒನ್‌ಪ್ಲಸ್ 13T ಬಿಡುಗಡೆ ಯಾವಾಗ, ಎಲ್ಲಿ ವೀಕ್ಷಿಸಬೇಕು?
ಕಂಪನಿಯು ನಾಳೆ (ಏಪ್ರಿಲ್ 24) ಒನ್‌ಪ್ಲಸ್ 13T ಅನ್ನು ಬಿಡುಗಡೆ ಮಾಡಲಿದೆ. ಈ ಕಾರ್ಯಕ್ರಮವು ಚೀನಾದಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ. ಭಾರತೀಯ ಸಮಯ ಸಂಜೆ 4.30ಕ್ಕೆ ಪ್ರಾರಂಭವಾಗಲಿದೆ. ನೀವು ಈ ಕಾರ್ಯಕ್ರಮವನ್ನು ಒನ್‌ಪ್ಲಸ್‌ನ ಅಧಿಕೃತ ವೆಬ್‌ಸೈಟ್ ಮತ್ತು ಸೋಶಿಯಲ್ ಮೀಡಿಯಾ ಚಾನೆಲ್‌ಗಳಲ್ಲಿ ಲೈವ್ ವೀಕ್ಷಿಸಬಹುದು. ಒನ್‌ಪ್ಲಸ್ 13T ಭಾರತದಲ್ಲಿ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಕಂಪನಿ ಯಾವುದೇ ಮಾಹಿತಿ ಪ್ರಕಟಿಸಿಲ್ಲ. ನೀವು ಒನ್‌ಪ್ಲಸ್ 13T ಲಾಂಚ್ ಈವೆಂಟ್ ಅನ್ನು ನೇರಪ್ರಸಾರ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ.
ಒನ್‌ಪ್ಲಸ್ 13T ಬೆಲೆ (ನಿರೀಕ್ಷಿತ)
ಇತ್ತೀಚೆಗೆ ಬಿಡುಗಡೆಯಾದ Realme GT 7 Pro ರೇಸಿಂಗ್ ಆವೃತ್ತಿಗಿಂತ ಕಡಿಮೆ ಬೆಲೆಗೆ ಒನ್‌ಪ್ಲಸ್ 13T ಮೊಬೈಲ್ ಬರಲಿದೆ. ಇದು ಸುಮಾರು 37,000 ರೂ. ನಿಂದ ಪ್ರಾರಂಭವಾಗುತ್ತದೆ. ಇನ್ನು 2022ರ ಆಗಸ್ಟ್‌ನಲ್ಲಿ ಒನ್‌ಪ್ಲಸ್ 10T ಮೊಬೈಲ್ ಬಿಡುಗಡೆಯಾಗಿತ್ತು. ಇದು ಕೊನೆಯ ಒನ್‌ಪ್ಲಸ್ 'T' ಮಾಡೆಲ್ ಫೋನ್ ಆಗಿದೆ. ಇದರ ಬೆಲೆ 49,999 ರೂ. ಆಗಿದೆ.
ಒನ್‌ಪ್ಲಸ್ 13T ವೈಶಿಷ್ಟ್ಯಗಳು (ನಿರೀಕ್ಷಿತ)
ಡಿಸ್ಪ್ಲೇ ವಿವರ
ಒನ್‌ಪ್ಲಸ್ 13T ಸ್ಮಾರ್ಟ್‌ಫೋನ್ 6.3 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಇದು LTPO OLED ಪ್ರೀಮಿಯಂ ಸ್ಕ್ರೀನ್ ಆಗಿದೆ. ಈ ಒನ್‌ಪ್ಲಸ್ ಫೋನಿನ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 1600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನವನ್ನು ಸಹ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಒನ್‌ಪ್ಲಸ್ 13T ಮೊಬೈಲ್ ಅನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗುವುದು. OnePlus 13 ಫೋನಿನಲ್ಲಿಯೂ ಇದೇ ಪ್ರೊಸೆಸರ್ ಅಳವಡಿಸಲಾಗಿದೆ. ಇದು, ಈ ಪ್ರೊಸೆಸರ್ ಹೊಂದಿರುವ ವಿಶ್ವದ ಅತ್ಯಂತ ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ ಆಂಡ್ರಾಯ್ಡ್ 15 ನಲ್ಲಿ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ 16GB RAM ಮತ್ತು 512GB ಸ್ಟೋರೇಜ್ ಆಯ್ಕೆ ಹೊಂದಿದೆ.

ಕ್ಯಾಮೆರಾ ಸೆಟಪ್
ಒನ್‌ಪ್ಲಸ್ 13T ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ದ್ವಿತೀಯ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN5 2x ಟೆಲಿಫೋಟೋ ಲೆನ್ಸ್ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. ಇದು ಬಾರ್ ಆಕಾರದ ಡ್ಯುಯಲ್ ಕ್ಯಾಮೆರಾ ವಿನ್ಯಾಸವನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒನ್‌ಪ್ಲಸ್ 13T ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ತಂತ್ರಜ್ಞಾನ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗುವುದು. ಕಂಪನಿಯು OnePlus 13 ಫೋನನ್ನು 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ.
ಇತರೆ ವೈಶಿಷ್ಟ್ಯಗಳು
ಒನ್‌ಪ್ಲಸ್ 13T ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್ ಪಡೆದಿದೆ. ಈ ಫೋನಿನಲ್ಲಿ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು ಸಹ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ 7, ಬ್ಲೂಟೂತ್ 5.4, ಎನ್‌ಎಫ್‌ಸಿ ಮತ್ತು ಐಆರ್ ಬ್ಲಾಸ್ಟರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








