ಆನ್‌ಲೈನ್ ಬ್ಯಾಂಕಿಂಗ್‌ನಿಂದಾಗಿ ಬ್ಯಾಂಕಿಂಗ್ ಸೇವೆ ಎಷ್ಟು ಸುಲಭವಾಗಿದೆಯೋ ಅಷ್ಟೆ ಆತಂಕಕಾರಿಯೂ ಆಗಿದೆ.! ಕಳೆದ ಮೂರು ವರ್ಷಗಳ ಅವಧಿಯಲ್ಲಿ ಆನ್‌ಲೈನ್ ಬ್ಯಾಂಕಿಂಗ್ ವಂಚನೆಯಿಂದಾಗಿ ಗ್ರಾಹಕರು 203 ಕೋಟಿ ರೂ.ಗೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ ಎನ್ನುವ ಆತಂಕದ ಮಾಹಿತಿಯೊಂದು ಹೊರಬಿದ್ದಿದೆ.
ಆರ್ಬಿಐ ಮತ್ತು ಕೇಂದ್ರ ಹಣಕಾಸು ಸಚಿವಾಲಯ ಬ್ಯಾಂಕ್ಗಳಿಗೆ ಸೂಚಿಸಿದ್ದು, ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಬ್ಯಾಂಕಿನ ವ್ಯವಹಾರದಲ್ಲಿ ಒಳಪಡುವ ಎಲ್ಲರಿಗೂ ಜಾಗೃತಿ ಮೂಡಿಸಲು ಸುಪ್ರೀಂಕೋರ್ಟ್ ಸುತ್ತೋಲೆ ರವಾನಿಸಿದೆ.!! ಹಾಗಾದರೆ, ಆನ್‌ಲೈನ್ ಬ್ಯಾಂಕಿಂಗ್ ಸುರಕ್ಷತೆ ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!
ನಕಲಿ ಇ-ಮೇಲ್ಗಳು (ಫಿಷಿಂಗ್)
ಯಾವುದೇ ಕಾರಣಕ್ಕೂ ಬ್ಯಾಂಕಿನವರು ಗ್ರಾಹಕರೊಂದಿಗೆ ಇ-ಮೇಲ್ ವ್ಯವಹಾರ ನಡೆಸುವುದಿಲ್ಲ. ಹಾಗಾಗಿ, ಬ್ಯಾಂಗ್ ವಿವರಗಳಿಗೆ ಸಂಬಂಧಿಸಿದಂತೆ ಯಾವುದೇ ಇ-ಮೇಲ್ ಬಂದರೂ ಪ್ರತಿಕ್ರಿಯಿಸಬೇಡಿ. ಇದು ಸೈಬರ್ ಕ್ರಿಮಿನಲ್‌ಗಳು ಕೆಲಸವಾಗಿರುತ್ತದೆ. ಇಂತಹ ಇ ಮೇಲ್‌ಗಳಿಗೆ ನೀವು ಉತ್ತರಿಸಿದರೆ ನಿಮ್ಮ ಖಾತೆಯ ಮಾಹಿತಿ ಮತ್ತು ಹಣ ಸುಲಭವಾಗಿ ವಂಚಕರ ಪಾಲಾಗುತ್ತದೆ.!!
ಪಾಸ್ವರ್ಡ್
ಬ್ಯಾಂಕಿಂಗ್ ವ್ಯವಹಾರಕ್ಕೆ ಹೆಚ್ಚು ನೆನಪಿರುವ ಮತ್ತು ಹೆಚ್ಚು ಬಳಕೆ ಮಾಡುತ್ತಿರುವ ಯೂಸರ್ ನೇಮ್/ಐಡಿ ಮತ್ತು ಪಾಸ್‌ವರ್ಡ್ ಅನ್ನೇ ಕೊಡಬಾರದು. ನಮ್ಮ ಖಾತೆಯ ಮಾಹಿತಿ ಮತ್ತು ಹಣದ ರಕ್ಷಣೆಗೆ ಆನ್‌ಲೈನ್ ಬ್ಯಾಂಕಿಂಗ್ ಐಡಿ ಮತ್ತು ಪಾಸ್‌ವರ್ಡ್ ಹೆಚ್ಚು ಖಾಸಗಿಯಾಗಿರುವಂತಿರಬೇಕು.!!
ಅಧಿಕೃತ ತಾಣವೇ?
ಆನ್‌ಲೈನ್ ಬ್ಯಾಂಕಿಂಗ್ ಆರಂಭಿಸುವುದಕ್ಕೂ ಮುನ್ನ ನೀವು ಬಳಸುತ್ತಿರುವ ತಾಣ ಅಧಿಕೃತವಾದುದೆ ಎಂದು ಖಾತ್ರಿಪಡಿಸಿಕೊಳ್ಳಬೇಕು. ಕೆಲವು ನಕಲಿ ಆನ್‌ಲೈನ್ ತಾಣಗಳು ನಮ್ಮ ಮಾಹಿತಿ ಪಡೆಯಲು ಲಾಗಿನ್ ಆಗಲು ಪ್ರೇರೇಪಿಸುತ್ತವೆ ಅವುಗಳಿಂದ ದೂರವಿರಿ.
ಒನ್‌ಟೈಮ್ ಪಾಸ್ವರ್ಡ್ ಉತ್ತಮ.!!
ಮೊಬೈಲ್ ನಂಬರನ್ನು ಬ್ಯಾಂಕಿನಲ್ಲಿ ನಮೂದಿಸಿದರೆ ನೋಂದಾಯಿತ ಫೋನ್ ನಂಬರಿಗೆ ಬರುವ ಕೋಡ್ ನಿಮ್ಮ ವ್ಯವಹಾರವನ್ನು ಸುರಕ್ಷಿತವಾಗಿಡುತ್ತದೆ. ಈ ಒನ್‌ಟೈಮ್ ಪಾಸ್ವರ್ಡ್ ಬಳಕೆಯಿಂದ ನಿಮ್ಮ ಹಣವನ್ನು ಅಷ್ಟು ಸುಲಭವಾಗಿ ಕದಿಯಲಾಗದು.! ಈ ಎಲ್ಲಾ ಅಂಶಗಳು ಸುರಕ್ಷತಾ ಆನ್‌ಲೈನ್ ವ್ಯವಹಾರಕ್ಕೆ ಅತ್ಯಗತ್ಯವಾಗಿದೆ. ಹಾಗಾಗಿ, ಇದನ್ನು ಶೇರ್ ಮಾಡಿ ಇತರರಿಗೂ ಸಹಾಯ ಮಾಡಿ.!!
ಸ್ಮಾರ್ಟ್‌ಫೋನ್ ರಕ್ಷಣೆ!!
ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್ ಅನ್ನು ವೈರಸ್‌ಗಳಿಂದ ರಕ್ಷಣೆ ಮಾಡುವುದು ಅತ್ಯಗತ್ಯ. ಹ್ಯಾಕರ್‌ಗಳಿಂದ ಹುಟ್ಟಿರುವ ಇಂತಹ ವೈರಸ್ ತಂತ್ರಾಂಶಗಳು ಬ್ಯಾಂಕ್ ಖಾತೆಯ ಮಾಹಿತಿ ಪಡೆಯುವ ಸಾಧ್ಯತೆ ಇರುತ್ತದೆ.!! ಹಾಗಾಗಿ, ಆಂಟಿ ವೈರಸ್ ಉಪಯೋಗಿಸಬೇಕು ಜೊತೆಗೆ ಬ್ಯಾಂಕಿಂಗ್ ಹಿಸ್ಟರಿಯನ್ನು ಡಿಲೀಟ್ ಮಾಡಬೇಕು!!
ಓದಿರಿ:ಈ ಆಪ್ ಇದ್ದರೆ ಒಂದು ಸುಂದರ ಸೆಲ್ಫಿಗಾಗಿ ನೂರು ಸೆಲ್ಫಿ ತೆಗೆಯಬೇಕಿಲ್ಲ!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.