ಮೊಬೈಲ್‌ನಲ್ಲಿ ಬ್ಯಾಂಕಿಂಗ್ ವ್ಯವಹಾರ ಮಾಡುತ್ತಿದ್ದರೆ ತಿಳಿಯಲೇಬೇಕಾದ 5 ವಿಷಯಗಳಿವು!!

  ಭಾರತದಲ್ಲಿ ಆನ್‌ಲೈನ್‌ ಬ್ಯಾಂಕಿಂಗ್ ವ್ಯವಹಾರ ಇತ್ತೀಚಿಗಷ್ಟೇ ಕಾಲಿಡುತ್ತಿದೆ. ಹಾಗಾಗಿ, ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಸೈಬರ್ ಕ್ರಿಮಿನಲ್‌ಗಳು ಜನರನ್ನು ಬಹಳ ಸುಲಭವಾಗಿ ಮೋಸಗೊಳಿಸುತ್ತಿದ್ದಾರೆ. ದೇಶದಲ್ಲಿ ಪ್ರತಿವರ್ಷಕ್ಕೆ ಸರಿಸುಮಾರು 1 ಲಕ್ಷಕ್ಕೂ ಹೆಚ್ಚು ಆನ್‌ಲೈನ್ ಮೊಸದ ಕೇಸ್‌ಗಳು ದಾಖಲಾಗಿರುವುದು ಇದಕ್ಕೆ ಉದಾಹರಣೆಯಾಗಿದೆ.!

  ಹೌದು, ಭಾರತದಲ್ಲಿ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಸಾವಿರಾರು ಪಟ್ಟು ಹೆಚ್ಚಾಗಿದೆ. ಇದರ ಜೊತೆಯಲ್ಲಿಯೇ ಆನ್‌ಲೈನ್‌ ಮೋಸವೂ ಸಹ ಹೆಚ್ಚಾಗಿದೆ. ಹಾಗಂತ ಆನ್‌ಲೈನ್‌ ಬ್ಯಾಂಕಿಂಗ್ ವ್ಯವಹಾರ ಬಿಡಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲಾ . ಏಕೆಂದರೆ, ಕಾಲ ಬದಲಾದಂತೆ ನಾವು ಕೂಡ ಬದಲಾಗಬೇಕಿದ್ದು, ತಂತ್ರಜ್ಞಾನದ ಹಿಂದೆ ಎಲ್ಲರೂ ಓಡಬೇಕಿದೆ.

  ಮೊಬೈಲ್‌ನಲ್ಲಿ ಬ್ಯಾಂಕಿಂಗ್ ವ್ಯವಹಾರ ಮಾಡುತ್ತಿದ್ದರೆ ತಿಳಿಯಲೇಬೇಕಾದ 5 ವಿಷಯಗಳಿವು

  ಹಾಗಾಗಿ, ಇಂದಿನ ಲೇಖನದಲ್ಲಿ ಆನ್‌ಲೈನ್‌ ಬ್ಯಾಂಕಿಂಗ್ ವ್ಯವಹಾರ ನಡೆಸಲು ನಾವು ತೆಗೆದುಕೊಳ್ಳಬೇಕಾದ ಮನ್ನೆಚ್ಚರಿಕೆ ಕ್ರಮಗಳನ್ನು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. ಇದರಿಂದ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರದಲ್ಲಿ ನೀವು ನಿಮ್ಮ ಹಣವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು. ಹಾಗಾದರೆ, ಆ ಮುನ್ನೆಚ್ಚರಿಕೆ ಕ್ರಮಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ನಕಲಿ ಇ-ಮೇಲ್ಗಳು (ಫಿಷಿಂಗ್)

  ಯಾವುದೇ ಕಾರಣಕ್ಕೂ ಬ್ಯಾಂಕಿನವರು ಗ್ರಾಹಕರೊಂದಿಗೆ ಇ-ಮೇಲ್ ವ್ಯವಹಾರ ನಡೆಸುವುದಿಲ್ಲ. ಹಾಗಾಗಿ, ಬ್ಯಾಂಗ್ ವಿವರಗಳಿಗೆ ಸಂಬಂಧಿಸಿದಂತೆ ಯಾವುದೇ ಇ-ಮೇಲ್ ಬಂದರೂ ಪ್ರತಿಕ್ರಿಯಿಸಬೇಡಿ. ಇದು ಸೈಬರ್ ಕ್ರಿಮಿನಲ್‌ಗಳು ಕೆಲಸವಾಗಿರುತ್ತದೆ. ಇಂತಹ ಇ ಮೇಲ್‌ಗಳಿಗೆ ನೀವು ಉತ್ತರಿಸಿದರೆ ನಿಮ್ಮ ಖಾತೆಯ ಮಾಹಿತಿ ಮತ್ತು ಹಣ ಸುಲಭವಾಗಿ ವಂಚಕರ ಪಾಲಾಗುತ್ತದೆ.!!

  ಪಾಸ್‌ವರ್ಡ್ ಬಗ್ಗೆ ಜಾಗೃತ!

  ನಿಮ್ಮ ಪಾಸ್‌ವರ್ಡ್ ಬಹಳ ಶಕ್ತಿಶಾಲಿಯಾಗಿರುವಂತೆ ನೋಡಿಕೊಳ್ಳಿ. ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಯಾವುದೇ ಕಾರಣಕ್ಕೂ ಹೆಚ್ಚು ನೆನಪಿರುವ ಮತ್ತು ಹೆಚ್ಚು ಬಳಕೆ ಮಾಡುತ್ತಿರುವ ಯೂಸರ್ ನೇಮ್/ಐಡಿ ಮತ್ತು ಪಾಸ್‌ವರ್ಡ್‌ ಅನ್ನೇ ಕೊಡಬಾರದು. ನಮ್ಮ ಖಾತೆಯ ಮಾಹಿತಿ ಮತ್ತು ಹಣದ ರಕ್ಷಣೆಗೆ ಆನ್‌ಲೈನ್ ಬ್ಯಾಂಕಿಂಗ್ ಐಡಿ ಮತ್ತು ಪಾಸ್‌ವರ್ಡ್‌ ಹೆಚ್ಚು ಖಾಸಗಿಯಾಗಿರಬೇಕು.!

  ಅಧಿಕೃತ ತಾಣವೇ ಪರೀಕ್ಷಿಸಿ?

  ಆನ್‌ಲೈನ್ ಬ್ಯಾಂಕಿಂಗ್ ಆರಂಭಿಸುವುದಕ್ಕೂ ಮುನ್ನ ನೀವು ಬಳಸುತ್ತಿರುವ ತಾಣ ಅಧಿಕೃತವಾದುದೆ ಎಂದು ಖಾತ್ರಿಪಡಿಸಿಕೊಳ್ಳಬೇಕು. ಕೆಲವು ನಕಲಿ ಆನ್‌ಲೈನ್ ತಾಣಗಳು ನಮ್ಮ ಮಾಹಿತಿ ಪಡೆಯಲು ಲಾಗಿನ್ ಆಗಲು ಪ್ರೇರೇಪಿಸುತ್ತವೆ ಅವುಗಳಿಂದ ದೂರವಿರಿ. ಇಲ್ಲವಾದರೆ, ಕೆಲವೇ ಕ್ಷಣಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿರುವ ಹಣ ಮಂಗಮಾಯವಾಗುತ್ತದೆ.

  ಸ್ಮಾರ್ಟ್‌ಫೋನ್ ರಕ್ಷಣೆ!!

  ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ ಅನ್ನು ವೈರಸ್‌ಗಳಿಂದ ರಕ್ಷಣೆ ಮಾಡುವುದು ಅತ್ಯಗತ್ಯ. ಹ್ಯಾಕರ್‌ಗಳಿಂದ ಹುಟ್ಟಿರುವ ಇಂತಹ ವೈರಸ್ ತಂತ್ರಾಂಶಗಳು ಬ್ಯಾಂಕ್ ಖಾತೆಯ ಮಾಹಿತಿ ಪಡೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ, ಆಂಟಿ ವೈರಸ್ ಉಪಯೋಗಿಸಬೇಕು ಜೊತೆಗೆ ಬ್ಯಾಂಕಿಂಗ್ ಹಿಸ್ಟರಿಯನ್ನು ಡಿಲೀಟ್ ಮಾಡಬೇಕು!!

  Riversong Jelly Kids GPS tracker hands-on - GIZBOT KANNADA
  ಒನ್‌ಟೈಮ್ ಪಾಸ್ವರ್ಡ್ ಉತ್ತಮ.!!

  ಒನ್‌ಟೈಮ್ ಪಾಸ್ವರ್ಡ್ ಉತ್ತಮ.!!

  ಮೊಬೈಲ್ ನಂಬರನ್ನು ಬ್ಯಾಂಕಿನಲ್ಲಿ ನಮೂದಿಸಿದರೆ ನೋಂದಾಯಿತ ಫೋನ್ ನಂಬರಿಗೆ ಬರುವ ಕೋಡ್ ನಿಮ್ಮ ವ್ಯವಹಾರವನ್ನು ಸುರಕ್ಷಿತವಾಗಿಡುತ್ತದೆ. ಈ ಒನ್‌ಟೈಮ್ ಪಾಸ್ವರ್ಡ್ ಬಳಕೆಯಿಂದ ನಿಮ್ಮ ಹಣವನ್ನು ಅಷ್ಟು ಸುಲಭವಾಗಿ ಕದಿಯಲಾಗದು.! ಈ ಎಲ್ಲಾ ಅಂಶಗಳು ಸುರಕ್ಷತಾ ಆನ್‌ಲೈನ್ ವ್ಯವಹಾರಕ್ಕೆ ಅತ್ಯಗತ್ಯವಾಗಿದೆ. ಹಾಗಾಗಿ, ಇದನ್ನು ಶೇರ್ ಮಾಡಿ ಇತರರಿಗೂ ಸಹಾಯ ಮಾಡಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Here are five tips for safe online banking. to know more visit to kannada.gizbot.com
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more