ಉದ್ಯೋಗದಾತರ ಮರ್ಜಿ ಇಲ್ಲದೆ ಆನ್‌ಲೈನಿನಲ್ಲಿ 'ಪಿಎಫ್' ಹಣ ಪಡೆಯುವುದು ಹೇಗೆ?

|

ಈ ಹಿಂದೆ ನೀವು ಭವಿಷ್ಯ ನಿಧಿ(ಪಿಎಫ್) ಹಣವನ್ನು ಹಿಂಪಡೆಯಲು ಪ್ರಯತ್ನಿಸಿದ್ದರೇ, ಅದು ಎಷ್ಟೊಂದು ತಲೆನೋವಿನ ಕೆಲಸ ಎನ್ನುವುದಾಗಿತ್ತು. ಅನೇಕ ಅರ್ಜಿಗಳನ್ನು ತುಂಬಿ ನಿಮ್ಮ ಹಣ ಪಡೆಯಲು ತಿಂಗಳುಗಟ್ಟಲೇ ಕಾಯಬೇಕಾಗಿತ್ತು. ಆದರೆ, ತಂತ್ರಜ್ಞಾನ ಈಗ ಕೆಲಸವನ್ನು ಹಗುರಗೊಳಿಸಿದ್ದು, ಈಗ ಆನ್‌ಲೈನ್ ಮೂಲಕವೇ ಪಿಎಫ್ ಹಣವನ್ನು ನೀವು ಹಿಂಪಡೆಯಬಹುದಾಗಿದೆ.

ಹೌದು, ಇಂಟರ್ನೆಟ್ ಸಂಪರ್ಕವಿದ್ದರೆ ಇದ್ದಲ್ಲಿಂದಲೇ ಆನ್‌ಲೈನ್ ಮುಖಾಂತರವೇ ಭವಿಷ್ಯ ನಿಧಿಯ ಬಗ್ಗೆ ತಿಳಿದುಕೊಳ್ಳಲು ಇತ್ತೀಚಿಗಷ್ಟೇ ಅವಕಾಶ ಕಲ್ಪಿಸಿದ್ದ ಸುದ್ದಿ ನಿಮಗೆ ಈಗಾಗಲೇ ತಿಳಿದಿರಬಹುದು. ಜೊತೆಗೆ ಈಗ ನೀವು ಯಾವ ಕಚೇರಿಗೂ ಅಲೆದಾಡದೇ ಆನ್‌ಲೈನ್‌ ಮೂಲಕ ಮಾಹಿತಿ ಜೊತೆಗೆ ಸುಲಭವಾಗಿ ಪಿಎಫ್ ಹಣವನ್ನು ಹಿಂಪಡೆಯಲು ಸಹ ಅವಕಾಶ ಲಭ್ಯವಿದೆ.

ಉದ್ಯೋಗದಾತರ ಮರ್ಜಿ ಇಲ್ಲದೆ ಆನ್‌ಲೈನಿನಲ್ಲಿ 'ಪಿಎಫ್' ಹಣ ಪಡೆಯುವುದು ಹೇಗೆ?
How To Link Aadhaar With EPF Account Without Login (KANNADA)

ಉದ್ಯೋಗದಾತರ ಮರ್ಜಿ ಸಹ ಬೇಕಿಲ್ಲದೆ ಆನ್‌ಲೈನಿನಲ್ಲಿ ಪಿಎಫ್ ಹಣವನ್ನು ಪಡೆಯುವ ಕೆಲಸ ಈಗ ಬಹಳ ಸರಳ ಮತ್ತು ಸುಲಭದ್ದಾಗಿದೆ. ಹಾಗಾದರೆ, ಆನ್‌ಲೈನ್ ಮೂಲಕವೇ ನೀವು ನಿಮ್ಮ ಭವಿಷ್ಯ ನಿಧಿ(ಪಿಎಫ್) ಹಣವನ್ನು ಹಿಂಪಡೆಯುವುದು ಹೇಗೆ? ಇದಕ್ಕಾಗಿ ಏನೆಲ್ಲಾ ದಾಖಲೆಗಳನ್ನು ನೀವು ಹೊಂದಿರಬೇಕು ಎಂಬೆಲ್ಲಾ ಅಂಶಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ನಿಮ್ಮ ಬಳಿ ಇರಬೇಕಿರುವ ದಾಖಲೆಗಳು!

ನಿಮ್ಮ ಬಳಿ ಇರಬೇಕಿರುವ ದಾಖಲೆಗಳು!

ಆಧಾರ್ ಸಂಖ್ಯೆ, ಬ್ಯಾಂಕ್‌ ಖಾತೆ, ಯುನಿವರ್ಸಲ್ ಅಕೌಂಟ್ ನಂಬರ್‌(ಯುಎಎನ್) ನಿಮ್ಮ ಬಳಿಯಿದ್ದರೆ ನೇರವಾಗಿ ಆನ್‌ಲೈನ್‌ ಮೂಲಕ ಪಿಎಫ್‌ ಹಣವನ್ನು ಕ್ಲೈಮ್ ಮಾಡಬಹುದು. ಇಪಿಎಫ್ಒ ವೆಬ್‌ಸೈಟ್‌ಗೆ ಹೋಗಿ ನೀವು ಕಂಪೋಸಿಟ್ ಕ್ಲೇಮ್ ಅರ್ಜಿಯನ್ನು ಭರ್ತಿ ಮಾಡುವ ಮೂಲಕ ಆನ್‌ಲೈನಿನಲ್ಲಿ ಪಿಎಫ್ ಹಣಪಡೆಯಲು ಸುಲಭದ ಹೆಜ್ಜೆಗಳು ಇಲ್ಲಿವೆ.

ಎಷ್ಟು ಜಮಾ ಆಗಿದೆ ನೋಡಿ!

ಎಷ್ಟು ಜಮಾ ಆಗಿದೆ ನೋಡಿ!

www.epfindia.com ಜಾಲತಾಣ ತೆರೆದು ಅಗತ್ಯವಿರುವ ಸೇವೆಯ ಲಿಂಕ್ ಅನ್ನು ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು. ನಿಮ್ಮ ಖಾತೆಯಿರುವ ಪ್ರಾದೇಶಿಕ ಪಿಎಫ್ ಕಚೇರಿಯನ್ನು ಆಯ್ಕೆ ಮಾಡಿಕೊಂಡು, ಇಪಿಎಫ್ ನಂಬರ್ ತಿಳಿಸಿ ಮೊಬೈಲ್ ಮುಖಾಂತರವೂ ನೌಕರರ ಮತ್ತು ಮಾಲಿಕರ ಕೊಡುಗೆ ಎಷ್ಟು, ಮತ್ತು ಎಷ್ಟು ಜಮಾ ಆಗಿದೆ ಎಂಬ ವಿವರಗಳನ್ನು ಪಡೆಯಿರಿ.

ಮುಖ್ಯ ಅಂಶಗಳನ್ನು ತಿಳಿದಿರಿ!

ಮುಖ್ಯ ಅಂಶಗಳನ್ನು ತಿಳಿದಿರಿ!

ಆನ್‌ಲೈನ್‌ನಲ್ಲಿ ಪಿಎಫ್ ವಾಪಸ್‌ ಪಡೆಯುವ ಪ್ರಕ್ರಿಯೆಯಲ್ಲಿ ಕೆಲವು ಷರತ್ತುಗಳೂ ಇವೆ. ನೀವು ನಿಮ್ಮ ಯುಎಎನ್ ಅನ್ನು ಸಕ್ರಿಯಗೊಳಿಸಿರಬೇಕು. ನಿಮ್ಮ ಮೊಬೈಲ್‌ ಸಂಖ್ಯೆ ಅದಕ್ಕೆ ಲಿಂಕ್‌ ಆಗಿರಬೇಕು. ನಿಮ್ಮ ಆಧಾರ್ ಮತ್ತು ಬ್ಯಾಂಕ್‌ ವಿವರಗಳು, ಪ್ಯಾನ್‌ ಸಂಖ್ಯೆ ಇವೆಲ್ಲವೂ ಜೋಡಣೆ ಆಗಿರಬೇಕು. ಹೀಗಿದ್ದಾಗ ಮಾತ್ರ ನಿಮ್ಮ ಪಿಎಫ್ ಹಣವನ್ನು ಆನ್‌ಲೈನಿನಲ್ಲಿ ಪಡೆಯಬಹುದು.

ಆನ್‌ಲೈನ್‌ನಲ್ಲಿ ಪಿಎಫ್ ಹಣ..ಸ್ಟೆಪ್ 1

ಆನ್‌ಲೈನ್‌ನಲ್ಲಿ ಪಿಎಫ್ ಹಣ..ಸ್ಟೆಪ್ 1

ಮೊದಲು ನಿಮ್ಮ ವಿವರಗಳೊಂದಿಗೆ ಯುಎಎನ್ ಪೋರ್ಟಲ್‌ಗೆ ಲಾಗ್‌ ಇನ್‌ ಆಗಿ. ಲಾಗಿನ್ ಆದ ನಂತರ ನಿಮ್ಮ ಕೆವೈಸಿ ಸ್ಟೇಟಸ್ ಅನ್ನು ಪರೀಕ್ಷಿಸಿ. ಕೆವೈಸಿ ಸ್ಟೇಟಸ್ ಪರೀಶೀಲಿಸಿದ ನಂತರ, ನೀವು ಪಿಎಫ್ ಹಣ ಹಿಂಪಡೆಯಲು ಸೂಕ್ತವಾಗುವ ಕಾರಣವಿರುವ ಅರ್ಜಿ ನಮೂನೆಯನ್ನು ಆಯ್ಕೆ ಮಾಡಿಕೊಳ್ಳಿ. ಅರ್ಜಿ ನಮೂನೆ ಕಾರಣಗಳು ಕೆಳಗಿನಂತಿವೆ.

ಆನ್‌ಲೈನ್‌ನಲ್ಲಿ ಪಿಎಫ್ ಹಣ..ಸ್ಟೆಪ್ 2

ಆನ್‌ಲೈನ್‌ನಲ್ಲಿ ಪಿಎಫ್ ಹಣ..ಸ್ಟೆಪ್ 2

ಎರಡು ತಿಂಗಳಿಗಿಂತಲೂ ಹೆಚ್ಚು ಕಾಲ ನಿರುದ್ಯೋಗಿಯಾಗಿದ್ದರೇ ಪಿಎಫ್‌ನಲ್ಲಿನ ಪೂರ್ತಿ ಹಣ ವಾಪಸ್‌ ಪಡೆಯಬಹುದಾಗಿದೆ. ಇನ್ನು ಶಿಕ್ಷಣ, ಮದುವೆ ವೆಚ್ಚ, ಮನೆ ಖರೀದಿ ಮತ್ತಿತರ ಕಾರಣಗಳಿಗೆ ಪಿಎಫ್ ಅನ್ನು ಮುಂಗಡವಾಗಿ ಪಡೆಯಬಹುದು. ಇಪಿಎಸ್‌(ಪಿಂಚಣಿ) ಸೌಲಭ್ಯಗಳನ್ನೂ ಸಹ ಮುಂಗಡವಾಗಿ ಪಡೆಯಬಹುದುಮ ಎಂಬುದನ್ನು ನೋಡಿ.

ಆನ್‌ಲೈನ್‌ನಲ್ಲಿ ಪಿಎಫ್ ಹಣ..ಸ್ಟೆಪ್ 3

ಆನ್‌ಲೈನ್‌ನಲ್ಲಿ ಪಿಎಫ್ ಹಣ..ಸ್ಟೆಪ್ 3

ಸರಿಯಾದ ಕಾರಣ ನೀಡಿ ಅರ್ಜಿಯನ್ನು ಭರ್ತಿ ಮಾಡಿದ ನಂತರ ಸಬ್‌ಮಿಟ್ ನೀಡಿ. ಈಗ ನಿಮ್ಮ ನೊಂದಾಯಿತ ಮೊಬೈಲ್‌ಗೆ ಬರುವ ಒನ್ ಟೈಮ್‌ ಪಾಸ್‌ವರ್ಡ್‌(ಒಟಿಪಿ) ಅನ್ನು ಹಾಕಬೇಕು. ನಿಮ್ಮ ಯುಎಎನ್ ಆಧಾರ್‌ಗೆ ಲಿಂಕ್‌ ಆಗಿದ್ದರೇ ಮಾತ್ರ ಒಟಿಪಿ ಬರುತ್ತದೆ. ನಂತರ ಒಟಿಪಿಯನ್ನು ತುಂಬಿ ಅರ್ಜಿಯನ್ನು ಮುಗಿಸಿದರೆ ನಿಮ್ಮ ಹಂತ ಮುಗಿಯುತ್ತದೆ.

ಆನ್‌ಲೈನ್‌ನಲ್ಲಿ ಪಿಎಫ್ ಹಣ..ಸ್ಟೆಪ್ 4

ಆನ್‌ಲೈನ್‌ನಲ್ಲಿ ಪಿಎಫ್ ಹಣ..ಸ್ಟೆಪ್ 4

ನೀವು ಸರಿಯಾಗಿ ಅರ್ಜಿಯನ್ನು ತುಂಬಿದ ನಂತರ ಯುಐಡಿಎಐ ಮೂಲಕ ಇಪಿಎಫ್‌ಒ ಅಧಿಕಾರಿಗಳು ನಿಮ್ಮ ಇ-ಕೆವೈಸಿ(ಆಧಾರ್) ದೃಢೀಕರಿಸಿಕೊಳ್ಳುತ್ತಾರೆ. ಜತೆಗೆ ನಿಮ್ಮ ಆನ್‌ಲೈನ್‌ ಪಿಎಫ್ ಕ್ಲೈಮ್‌ಗೆ ಅನುವು ಮಾಡಿಕೊಡುತ್ತಾರೆ. ಈ ಮೂಲಕ ಉದ್ಯೋಗದಾತರ ಮರ್ಜಿ ಸಹ ಬೇಕಿಲ್ಲದೆ ಕೆಲವೇ ವಾರಗಳಲ್ಲಿ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಬಂದು ಬೀಳುತ್ತದೆ.

Best Mobiles in India

English summary
Employees' Provident Fund Organisation (EPFO) has created an online facility through which its members can withdraw their employee. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X