Home
ಟೆಕ್ ನೌಕರಿ

ಬಹುಬೇಗ ಇಂಗ್ಲೀಷ್ ಕಲಿಯಬೇಕೆ?..ಹಾಗಿದ್ರೆ ಈ ಸರ್ಚ್ ಎಂಜಿನ್ ಬಳಸಿ!! ಏಕೆ?

ಈ ಸರ್ಚ್ ಎಂಜಿನ್ ಮೂಲಕ ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಕಲಿಯಬಹುದಾಗಿದ್ದು, ಆ ಸರ್ಚ್ ಎಂಜಿನ್ ಯಾವುದು? ಅದರ ವಿಶೇಷತೆ ಏನು? ಎಂಬುದನ್ನು ತಿಳಿಯಿರಿ.

By Bhaskar N J

ಎಲ್ಲಾ ಭಾಷೆಯನ್ನು ಕಲಿಯಬೇಕು ಆದರೆ ಮಾತೃ ಭಾಷೆಯನ್ನು ಪ್ರೀತಿಸಬೇಕು ಎಂಬುದು ನಿಜವಾದ ಸತ್ಯ.! ಹೌದು, ನಾವು ಸಾಧ್ಯವಾದಷ್ಟು ಎಲ್ಲಾ ಭಾಷೆಯನ್ನು ಕಲಿಯಲು ಪ್ರಯತ್ನ ಪಡಲೇಬೇಕು ಏಕೆಂದರೆ, ಜಾಗತಿಕರಣ ಸಂವಹನ ನಮ್ಮನ್ನು ಇಂದು ಅಂತಹ ಪರಿಸ್ಥಿತಿಗೆ ತಂದಿಟ್ಟಿದೆ.!!

ಅದರಲ್ಲಿಯೂ ಇಂಗ್ಲೀಷ್ ಭಾಷೆ ಇಂದು ನಮ್ಮ ಜೀವನಾಧಾರವಾಗಿ ಕೆಲಸ ಮಾಡುತ್ತಿದೆ ಎಂದರೆ ಇಂಗ್ಲೀಷ್ ಭಾಷೆ ಕಲಿಯಲೇಬೇಕಾದ ಅವಶ್ಯಕತೆ ಎಷ್ಟಿದೆ ಎಂಬುದನ್ನು ನಾವು ತಿಳಿಯಬೇಕು. ಅದಕ್ಕಾಗಿ ನೀವು ಇಂಗ್ಲೀಷ್ ಕಲಿಯಲು ಹೆಚ್ಚಾಗಿ ಗೂಗಲ್ ಮೂಲಕ ಹುಡುಕುವುದು ಸಾಮಾನ್ಯ.!!

ಆದರೆ, ಹೊಸ ಭಾಷೆ ಕಲಿಯುತ್ತಿರುವವರಿಗೆ ಗೂಗಲ್‌ಗಿಂತಲೂ ಹೆಚ್ಚು ಉಪಯುಕ್ತವಾದ ಒಂದು ಸರ್ಚ್ ಎಂಜಿನ್ ಲಭ್ಯವಿದೆ. ಈ ಸರ್ಚ್ ಎಂಜಿನ್ ಮೂಲಕ ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಕಲಿಯಬಹುದಾಗಿದ್ದು, ಆ ಸರ್ಚ್ ಎಂಜಿನ್ ಯಾವುದು? ಅದರ ವಿಶೇಷತೆ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!

ಲಡ್‌ವಿಗ್(Ludwig) ಸರ್ಚ್ ಎಂಜಿನ್‌!!

ಲಡ್‌ವಿಗ್(Ludwig) ಸರ್ಚ್ ಎಂಜಿನ್‌!!

ಭಾಷೆ ಕಲಿಯುತ್ತಿರುವವರಿಗೆ ಗೂಗಲ್‌ಗಿಂತಲೂ ಹೆಚ್ಚು ಉಪಯುಕ್ತವಾದ ಒಂದು ಸರ್ಚ್ ಎಂಜಿನ್ ಎಂದರೆ ಲಡ್‌ವಿಗ್(Ludwig) ಸರ್ಚ್ ಎಂಜಿನ್‌.! ಯಾವುದಾದರೂ ಪದವನ್ನು ಟೈಪ್‌ ಮಾಡಿದರೆ ಸಾಕು, ಅದರ ಅರ್ಥ, ಮಾಡಬಹುದಾದ ವಾಕ್ಯ ರಚನೆಯನ್ನು ಮಾಡುವ ಕಾರ್ಯಕ್ಷಮತೆ ಇದಕ್ಕಿದೆ.!!

ಪದಗಳ ಬಳಕೆ ವಿಧಾನ!!

ಪದಗಳ ಬಳಕೆ ವಿಧಾನ!!

ಲಡ್‌ವಿಗ್(Ludwig) ಸರ್ಚ್ ಎಂಜಿನ್‌ ಮೂಲಕ ನೀವು ಹುಡುಕಿದ ಪದವನ್ನು ಪ್ರಮುಖ ಪತ್ರಿಕೆಗಳು, ಜಾಲತಾಣಗಳು ಯಾವ ಸಂದರ್ಭದಲ್ಲಿ ಹೇಗೆ ಬಳಸಿವೆ ಎಂಬ ವಿವರಗಳು ಇಲ್ಲಿ ಸಿಗುತ್ತವೆ. ಇದರಿಂದ ನೀವು ಪದಗಳ ಬಳಕೆ ಬಗ್ಗೆ ಹೆಚ್ಚು ತಿಳಿಯಲು ಸಹಾಯಕವಾಗುತ್ತದೆ.!!

ಪ್ರಶ್ನೆಗಳಿಗೆ ಸೂಕ್ತ ಸಲಹೆ.!!

ಪ್ರಶ್ನೆಗಳಿಗೆ ಸೂಕ್ತ ಸಲಹೆ.!!

ಈ ವಾಕ್ಯವನ್ನು ಹೀಗೆ ಬರೆಯಬಹುದೇ? ಈ ಪದವನ್ನು ಇಲ್ಲಿ ಬಳಸಬಹುದೇ? ಈ ಪದದ ಅರ್ಥವೇನು? ಎಂದು ಭಾಷೆಗಳನ್ನು ಕಲಿಯುವಾಗ ಕಾಡುವ ಸಾಮಾನ್ಯ ಸಂದೇಹಗಳಿಗೆ ಲಡ್‌ವಿಗ್(Ludwig) ಸರ್ಚ್ ಎಂಜಿನ್‌ ಉತ್ತರ ನೀಡುತ್ತದೆ. ಇದರ ಸರ್ಚ್‌ಬಾರ್‌ನಲ್ಲಿ ಕ್ಲಿಕ್ಕಿಸಿದರೆ ನಿಮಗೆ ಬೇಕಾದ ಮಾಹಿತಿ ಸಿಗುತ್ತದೆ.!!

ಗೂಗಲ್ ಟ್ರಾನ್ಸ್‌ಲೇಟ್ ಉಪಯೋಗ ಕಮ್ಮಿ.!!

ಗೂಗಲ್ ಟ್ರಾನ್ಸ್‌ಲೇಟ್ ಉಪಯೋಗ ಕಮ್ಮಿ.!!

ಯಾವುದೇ ಪದದ ಭಾಷಾಂತರ ಅರ್ಥ ತಿಳಿಯಲು ನೀವು ಇಂದು ಗೂಗಲ್ ಟ್ರಾನ್ಸ್‌ಲೇಟ್ ಮೂಲಕ ತಿಳಿಯುತ್ತೀರಾ. ಆದರೆ, ಲಡ್‌ವಿಗ್(Ludwig) ಸರ್ಚ್ ಎಂಜಿನ್‌ಗೆ ಹೋಲಿಸಿದರೆ ಗೂಗಲ್ ಟ್ರಾನ್ಸ್‌ಲೇಟ್ ಮೂಲಕ ಆಗುವ ಉಪಯೋಗ ಬಹಳ ಕಮ್ಮಿ ಎಂದು ಹೇಳಬಹುದು.!!

ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.!!

ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.!!

ಗೂಗಲ್‌ಗಿಂತಲೂ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವ ಕಾರ್ಯಶಕ್ತಿ ಈ ಲಡ್‌ವಿಗ್(Ludwig) ಸರ್ಚ್ ಎಂಜಿನ್‌ಗಿದೆ.!! ನೀವು ಭಾಷೆಯನ್ನು ಕಲಿಯಲು ಬಹಳ ಉಪಯೋಗಕಾರಿ ಸರ್ಚ್ ಎಂಜಿನ್ ಇದಾದಿದೆ! ಹಾಗಾಗಿ, ಈಗ್ಲೇ ಈ ಸರ್ಚ್ ಎಂಜಿನ್ ಟ್ರೈ ಮಾಡಿ.!!

Best Mobiles in India

English summary
Transate from Kannada to English via Ludwig. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+