ಕೇವಲ 12 ನಿಮಿಷಗಳಲ್ಲೇ ಆನ್‌ಲೈನಿನಲ್ಲಿ 'ಆಸ್ತಿ ನೋಂದಣಿ' ಮಾಡಿಸುವುದು ಹೇಗೆ?

|

ಆಸ್ತಿ ಖರೀದಿದಾರರು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿ, ನೋಂದಣಿ ಪ್ರಕ್ರಿಯೆಗೆ ಸಮಯ ಗೊತ್ತುಪಡಿಸಿಕೊಳ್ಳಬಹುದು. 12 ನಿಮಿಷಗಳಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು ಎಂದು ಮುದ್ರಾಂಕ ಇಲಾಖೆಯ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಅವರು ತಿಳಿಸಿದ್ದಾರೆ. ಬೆಂಗಳೂರಿನ 45 ಸಬ್‌ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಕ್ಟೋಬರ್‌ನಿಂದ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ಬಂದಿದ್ದು, ಈಗಾಗಲೇ 4 ಸಾವಿರ ಜನರು ಆನ್‌ಲೈನ್‌ನಲ್ಲೇ ಹಣ ಪಾವತಿ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೇವಲ 12 ನಿಮಿಷಗಳಲ್ಲೇ ಆನ್‌ಲೈನಿನಲ್ಲಿ 'ಆಸ್ತಿ ನೋಂದಣಿ' ಮಾಡಿಸುವುದು ಹೇಗೆ?

ಬೆಂಗಳೂರಿನ 45 ಸಬ್‌ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಕ್ಟೋಬರ್‌ನಿಂದ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಒಂದೂವರೆ ತಿಂಗಳಲ್ಲಿ ಒಂದು ಲಕ್ಷ ಜನರು ಕಾವೇರಿ ಆನ್‌ಲೈನ್‌ಗೆ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ವಾರ್ಷಿಕ 20 ಲಕ್ಷಕ್ಕೂ ಹೆಚ್ಚು ಆಸ್ತಿ ನೋಂದಣಿಯಾಗುತ್ತಿದ್ದು, ಅದರಲ್ಲಿ, ಬೆಂಗಳೂರಿನಲ್ಲೇ ಶೇ.70ರಷ್ಟು ಆಸ್ತಿ ನೋಂದಣಿಯಾಗುತ್ತಿದೆ. ಹಾಗಾಗಿ, ಸದ್ಯದಲ್ಲೇ ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ಆಸ್ತಿ ನೋಂದಣಿ ವ್ಯವಸ್ಥೆ ವ್ಯವಸ್ಥೆಯನ್ನು ಇಲಾಖೆ ಜಾರಿಗೊಳಿಸದೆ. ಹಾಗಾದರೆ, ಇದರ ಕಾರ್ಯನಿರ್ವಹಣೆ ಹೇಗಿರಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ತಿಳಿಸುವ ಆಪ್!

ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ತಿಳಿಸುವ ಆಪ್!

ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ತಿಳಿಯುವ ಸಲುವಾಗಿ ಎಂಬ ‘ಮೌಲ್ಯ' ಆಪ್‌ ಅನ್ನು ಬಿಡುಗಡೆ ಮಾಡಲಾಗಿದೆ. ಈ ಆಪ್‌ನಲ್ಲಿ ಜಿಲ್ಲೆ, ತಾಲ್ಲೂಕು, ಗ್ರಾಮ, ಸರ್ವೆ ಸಂಖ್ಯೆ ನಮೂದಿಸಿದರೆ ಸಾಕು. ಕೂಡಲೇ ಆ ‍ಪ್ರದೇಶದ ಮಾರುಕಟ್ಟೆ ಮೌಲ್ಯ ಗೊತ್ತಾಗುತ್ತದೆ. 10 ಸಾವಿರ ಜನರು ಡೌನ್‌ಲೋಡ್ ಮಾಡಿರುವ ಈ ಆಪ್ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು

ಇನ್ಮುಂದೆ ಖುದ್ದಾಗಿ ಹಾಜರಾಗಬೇಕಿಲ್ಲ.!

ಇನ್ಮುಂದೆ ಖುದ್ದಾಗಿ ಹಾಜರಾಗಬೇಕಿಲ್ಲ.!

ಆಸ್ತಿ ನೋಂದಣಿಗಾಗಿ, ಅಗತ್ಯ ದಾಖಲೆ ಹೊಂದಿಸಿಕೊಳ್ಳುವುದು, ಆಸ್ತಿಯ ಪ್ರಸ್ತುತ ಮಾರ್ಗಸೂಚಿ ದರದ ಮಾಹಿತಿ ಪಡೆಯುವುದು, ನಿಗದಿತ ಶುಲ್ಕದ ವಿವರ ತಿಳಿದು ಡಿ.ಡಿ. ಪಡೆಯುವುದರ ಜತೆಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಇಡೀ ದಿನ ಖುದ್ದಾಗಿ ಹಾಜರಿದ್ದು ನೋಂದಾಯಿಸಿಕೊಳ್ಳಬೇಕಿದೆ. ಆದರೆ, ಇನ್ಮುಂದೆ ಈ ಕೆಲಸವೆಲ್ಲವೂ ಆನ್‌ಲೈನ್ ಮೂಲಕವೇ ಆಗಲಿದೆ.

48 ಗಂಟೆಯಲ್ಲೇ ಕೆಲಸ ಆಗುತ್ತದೆ.!

48 ಗಂಟೆಯಲ್ಲೇ ಕೆಲಸ ಆಗುತ್ತದೆ.!

ಆನ್‌ಲೈನ್‌ನಲ್ಲಿ ಸಲ್ಲಿಸುವ ದಾಖಲೆಗಳು, ಶುಲ್ಕ ಪಾವತಿ ಸಮಪರ್ಕವಾಗಿದ್ದರೆ 48 ಗಂಟೆಯಲ್ಲೇ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿ ಪೂರ್ಣಗೊಳ್ಳಲಿದೆ. ಕೆಲವೇ ನಿಮಿಷಗಳಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳುವಂತಹ "ನೋಂದಣಿ ಪೂರ್ವ ಮಾಹಿತಿ ದಾಖಲೀಕರಣ' ವ್ಯವಸ್ಥೆ ಜಾರಿಗೆ ಬರಲಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ತಿಳಿಸಿದೆ.

ನೋಂದಣಿ ಮಾಡಿಸುವುದು ಹೇಗೆ?

ನೋಂದಣಿ ಮಾಡಿಸುವುದು ಹೇಗೆ?

ಆಸ್ತಿ ಮಾರುವವರು ಅಥವಾ ಖರೀದಿ ಮಾಡುವವರು ಮುದ್ರಾಂಕ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ಕೊಟ್ಟು, ಕಾವೇರಿ ತಂತ್ರಾಂಶವನ್ನು ತೆರೆಯಬೇಕು. ಬಳಿಕ, ಬಳಕೆದಾರರ ಗುರುತು ಮತ್ತು ಪಾಸ್‌ವರ್ಡ್‌ ನಮೂದಿಸಿ ನೋಂದಣಿ ಆಗಬೇಕು. ಬಳಿಕ ಲಾಗಿನ್‌ ಆಗಿ, ನೋಂದಣಿಪೂರ್ವ ದತ್ತಾಂಶಗಳನ್ನು ದಾಖಲಿಸಬೇಕು. ಇದಾದ ನಂತರ ನೋಂದಣಿ ಕಾರ್ಯ ಆರಂಭವಾಗಲಿದೆ.

ಕಾರ್ಯನಿರ್ವಹಣೆ ಹೇಗಿರಲಿದೆ?

ಕಾರ್ಯನಿರ್ವಹಣೆ ಹೇಗಿರಲಿದೆ?

ಸಾರ್ವಜನಿಕರು ಆನ್‌ಲೈನಿನಲ್ಲೇ ತಾವು ಖರೀದಿಸುವ ಆಸ್ತಿಯ ಅಳತೆ, ವಿಳಾಸ ವಿವರ ದಾಖಲಿಸಿ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು.ಇದನ್ನು ಉಪನೋಂದಣಾಧಿಕಾರಿ ಸಮರ್ಪಕ ಎಂದು ದೃಢೀಕರಿಸಿದ ನಂತರ, ಆಸ್ತಿಗೆ ಸಂಬಂಧಿಸಿದ ನಿಗದಿತ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ತಾವು ಬಯಸುವ ದಿನದಂದು ನೊಂದಣಿ ಮಾಡಿಕೊಳ್ಳಲು ಸಮಯ ದಾಖಲಿಸಬೇಕಿರುತ್ತದೆ.

12 ನಿಮಿಷಗಳಲ್ಲೇ ಆಸ್ತಿ ನೋಂದಣಿ

12 ನಿಮಿಷಗಳಲ್ಲೇ ಆಸ್ತಿ ನೋಂದಣಿ

ಆನ್‌ಲೈನಿನಲ್ಲಿ ದಾಖಲಿಸಿದ ಮಾಹಿತಿಗಳನ್ನು ಕೇವಲ 24 ಗಂಟೆಯೊಳಗೆ ಸಂಬಂಧಪಟ್ಟ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪರಿಶೀಲಿಸಲಾಗುತ್ತದೆ. ನಂತರ, ಖರೀದಿದಾರ ವಿವರ, ದಾಖಲೆ, ಶುಲ್ಕ ಮೊತ್ತ ಸಮರ್ಪಕವಾ ಗಿದ್ದರೆ ಮುಂದಿನ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ವಿವರಗಳು ಸಮರ್ಪಕವಾಗಿದ್ದರೆ, 12 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಗೊಂದಲಕ್ಕೂ ಇದೆ ಪರಿಹಾರ!

ಗೊಂದಲಕ್ಕೂ ಇದೆ ಪರಿಹಾರ!

ಆನ್‌ಲೈನಿನಲ್ಲಿ ದಾಖಲಿಸಿದ ಮಾಹಿತಿಗಳಲ್ಲಿ ಸಾರ್ವಜನಿಕರಿಗೆ ಇರುವ ಗೊಂದಲ, ಮಾರ್ಗಸೂಚಿ ದರದಲ್ಲಿ ವ್ಯತ್ಯಯ ಲೋಪಗಳಿದ್ದರೆ ಆ ಬಗ್ಗೆ ಅಧಿಕಾರಿಗಳು ಆನ್‌ಲೈನ್‌ನಲ್ಲೇ ಮಾಹಿತಿ ನೀಡಲಿಲಿದ್ದಾರೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ತಿಳಿಸಿದೆ. ಸಲ್ಲಿಸಿರುವ ಮಾಹಿತಿಯಲ್ಲಿ ಲೋಪಗಳಿದ್ದರೆ, ಸರಿಪಡಿಸಿ ಸಲ್ಲಿಸುವ ಆಯ್ಕೆ ಕೂಡ ಸಾರ್ವಜನಿಕರಿಗೆ ಸಿಗಲಿದೆ.

ರಾಜ್ಯಾದ್ಯಂತ ವಿಸ್ತರಣೆ

ರಾಜ್ಯಾದ್ಯಂತ ವಿಸ್ತರಣೆ

ಆನ್‌ಲೈನಿನಲ್ಲೇ 'ಆಸ್ತಿ ನೋಂದಣಿ ಮಾಡಿಸುವ ಪ್ರಕ್ರಿಯೆ ಬೆಂಗಳೂರಿನಲ್ಲಿ ಪ್ರಾಯೋಗಿಕ ಜಾರಿ ಪ್ರಾಯೋಗಿಕವಾಗಿ ಜಾರಿಯಾಗಲಿದೆ. ನಗರದ 45 ಉಪನೋಂದಣಾಧಿಕಾರಿ ಕಚೇರಿಗಳಲ್ಲಿಯೂ ನೂತನ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದರ ಕಾರ್ಯನಿರ್ವಹಣೆಯನ್ನು ಗಮನಿಸಿ ಮುಂದೆ ರಾಜ್ಯಾದ್ಯಂತ ವಿಸ್ತರಿಸುವುದಾಗಿ ತಿಳಿಸಿದ್ದಾರೆ.

ದಲ್ಲಾಳಿಗಳಿಗೆ ಬ್ರೇಕ್?

ದಲ್ಲಾಳಿಗಳಿಗೆ ಬ್ರೇಕ್?

ಮಧ್ಯವರ್ತಿಗಳ ಹಾವಳಿ, ಇತರರ ನೆರವು ಪಡೆಯದೆ ಖರೀದಿದಾರರೇ ನೇರವಾಗಿ ಆಸ್ತಿ ಖರೀದಿಸಿ ನೋಂದಣಿ ಮಾಡಿಸಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಈಗ ಇದೆ. ಹಾಗಾಗಿ, ಆನ್‌ಲೈನಿನಲ್ಲೇ ಆಸ್ತಿ ನೋಂದಣಿ ವ್ಯವಸ್ಥೆ ದಲ್ಲಾಳಿಗಳಿಗೆ ಬ್ರೇಕ್ ಹಾಕುವ ಆಸೆಯನ್ನು ಮೂಡಿಸಿದೆ. ಆದರೆ, ಇದು ಸಾಧ್ಯವಾಗುವುದು ಸಾರ್ವಜನಿಕರು ಮತ್ತು ಅಧಿಕಾರಿಗಳಿಂದ ಮಾತ್ರ.

Best Mobiles in India

English summary
time than it does to find property in the first place. It is to address this very issue that the Karnataka government has launched an online portal.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X