Home
ಟೆಕ್ ನೌಕರಿ

ನಿಮ್ಮ PAN ಕಾರ್ಡ್ ಡಿಸೆಂಬರ್ 31 ಬಳಿಕ ಬ್ಲಾಕ್ ಆಗಬಹುದು!..ಈಗಲೇ ಈ ಕೆಲಸ ಮಾಡಿ!

ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಇನ್ನೂ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿಲ್ಲವೆ?. ಆದರೆ, ಈ ಕೂಡಲೇ ಲಿಂಕ್ ಮಾಡಿ.! ಕೇಂದ್ರ ನೇರ ತೆರಿಗೆ ಮಂಡಳಿ (CBDT) ಪ್ರಕಟಿಸಿರುವ ಅಧಿಸೂಚನೆ (CBDT Notification No. 26/2025) ಪ್ರಕಾರ, ಎಲ್ಲ ಪ್ಯಾನ್ ಕಾರ್ಡ್‌ಧಾರಕರು ತಮ್ಮ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು. ಇಲ್ಲದಿದ್ದರೆ, 2026 ಜನವರಿ 1 ರಿಂದ ನಿಮ್ಮ ಪ್ಯಾನ್ ನಿಷ್ಕ್ರಿಯಗೊಳ್ಳಬಹುದು. ಹಾಗಾದರೆ, ಇತ್ತೀಚಿನ CBDT ನಿಯಮಗಳು ಯಾವುವು ಮತ್ತು ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ.

ಹೊಸ ಗಡುವು ಮತ್ತು ಮುಖ್ಯ ಬದಲಾವಣೆಗಳು (CBDT Notification No. 26/2025)
ಇತ್ತೀಚಿನ CBDT ನಿಯಮಗಳ ಪ್ರಕಾರ, 1 ಅಕ್ಟೋಬರ್ 2024 ರ ಮೊದಲು ಆಧಾರ್ ನೋಂದಣಿ ID ಮೂಲಕ ಪ್ಯಾನ್ ಪಡೆದವರು, ತಮ್ಮ ಆಧಾರ್ ಸಂಖ್ಯೆಯನ್ನು 2025 ಡಿಸೆಂಬರ್ 31 ರೊಳಗೆ ಲಿಂಕ್ ಮಾಡಬೇಕು. ಈ ಗಡುವಿನ ನಂತರ 2026 ಜನವರಿ 1 ರಿಂದ ಅವರ ಪ್ಯಾನ್ ನಿಷ್ಕ್ರಿಯವಾಗಬಹುದು. ಹಾಗೆಯೇ, ಹೊಸ ಪ್ಯಾನ್ ಅರ್ಜಿದಾರರು (2025 ಜುಲೈ 1 ನಂತರ) ಆಧಾರ್ ಪ್ರಾಮಾಣೀಕರಣ (Aadhaar Authentication) ಕಡ್ಡಾಯವಾಗಿ ಮಾಡಬೇಕಾಗಿದೆ. ಆಧಾರ್ ಇಲ್ಲದೆ ಹೊಸ ಪ್ಯಾನ್ ಸಿಗುವುದಿಲ್ಲ. ಜೊತೆಗೆ ಪ್ಯಾನ್ ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡರೂ ಗಡುವಿನೊಳಗೆ ಲಿಂಕ್ ಮಾಡಿದರೆ ಹೆಚ್ಚಿನ TDS/TCS ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.

ನಿಮ್ಮ PAN ಕಾರ್ಡ್ ಡಿಸೆಂಬರ್ 31 ಬಳಿಕ ಬ್ಲಾಕ್ ಆಗಬಹುದು!..ಈಗಲೇ ಈ ಕೆಲಸ ಮಾಡಿ!

ಪ್ಯಾನ್ ಲಿಂಕ್ ಮಾಡುವುದೇಕೆ ಅಗತ್ಯ?..ಪ್ಯಾನ್ ನಿಷ್ಕ್ರಿಯವಾದರೆ ಏನಾಗುತ್ತದೆ?
ಪ್ಯಾನ್ ಕಾರ್ಡ್ (Permanent Account Number) ಭಾರತದ ಪ್ರತಿಯೊಬ್ಬ ಹಣಕಾಸು ನಾಗರಿಕನಿಗೂ ಅತಿ ಮುಖ್ಯ ದಾಖಲೆ. ಇದು ಬ್ಯಾಂಕ್ ಖಾತೆ ತೆರೆಯಲು, ಇನ್‌ಕಂ ಟ್ಯಾಕ್ಸ್ ರಿಟರ್ನ್ ಸಲ್ಲಿಸಲು, ಡಿಮ್ಯಾಟ್ ಖಾತೆ ಪ್ರಾರಂಭಿಸಲು, ಹೂಡಿಕೆ ಅಥವಾ ಸಾಲ ಪಡೆಯಲು ಅಗತ್ಯ. ಪ್ಯಾನ್ ನಿಷ್ಕ್ರಿಯವಾದರೆ, ಈ ಎಲ್ಲಾ ಕಾರ್ಯಗಳು ನಿಂತುಹೋಗುತ್ತವೆ. ಅಂದರೆ, ನಿಮ್ಮ ಹಣಕಾಸು ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತವೆ.ಪ್ಯಾನ್ ನಿಷ್ಕ್ರಿಯವಾದಾಗ, ನೀವು ಬಹುತೇಕ ಎಲ್ಲ ಹಣಕಾಸು ಸೇವೆಗಳನ್ನು ಕಳೆದುಕೊಳ್ಳಬಹುದು. ಉದಾಹರಣೆಗೆ,

  • ಹೊಸ ಬ್ಯಾಂಕ್ ಅಥವಾ ಡಿಮ್ಯಾಟ್ ಖಾತೆ ತೆರೆಯಲು ಸಾಧ್ಯವಿಲ್ಲ.
  • ₹50,000 ಕ್ಕಿಂತ ಹೆಚ್ಚು ನಗದು ಠೇವಣಿ ಅಥವಾ ಫಿಕ್ಸ್‌ಡ್ ಡೆಪಾಸಿಟ್ ಮಾಡಲಾಗುವುದಿಲ್ಲ.
  • ಷೇರು ಮಾರುಕಟ್ಟೆ, ಮ್ಯೂಚುಯಲ್ ಫಂಡ್ ಅಥವಾ SIP ವ್ಯವಹಾರಗಳು ನಿಂತುಹೋಗುತ್ತವೆ.
  • ಸಾಲ ಅರ್ಜಿ, ಆಸ್ತಿ ನೋಂದಣಿ ಅಥವಾ ವಾಹನ ಖರೀದಿಗೆ ಅವಕಾಶ ಇರದು.
  • ವಿದೇಶಿ ಕರೆನ್ಸಿ ವ್ಯವಹಾರಗಳು ಹಾಗೂ ಸರ್ಕಾರಿ ಕಲ್ಯಾಣ ಯೋಜನೆಗಳಿಗೂ ಪ್ಯಾನ್ ಅಗತ್ಯವಿರುತ್ತದೆ.

ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ?

  • incometax.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಹೋಮ್‌ಪೇಜ್‌ನಲ್ಲಿ 'Link Aadhaar' ಆಯ್ಕೆಮಾಡಿ.
  • ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.
  • 'Validate' ಕ್ಲಿಕ್ ಮಾಡಿ.
  • OTP ಬಂದರೆ ಅದನ್ನು ನಮೂದಿಸಿ 'Submit' ಒತ್ತಿ.
  • ಯಶಸ್ವಿಯಾಗಿ ಲಿಂಕ್ ಆದ ನಂತರ ದೃಢೀಕರಣ ಸಂದೇಶ ಕಾಣಿಸುತ್ತದೆ.

CBDT ಎನ್ನುವುದು ಹಣಕಾಸು ಸಚಿವಾಲಯದ ಆದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ ಪ್ರಾಧಿಕಾರ. ಇದು ದೇಶದ ನೇರ ತೆರಿಗೆ ನೀತಿಗಳನ್ನು ರೂಪಿಸುವುದು ಮತ್ತು ಇನ್‌ಕಂ ಟ್ಯಾಕ್ಸ್ ಇಲಾಖೆಯ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುವುದು ಇದರ ಪ್ರಮುಖ ಜವಾಬ್ದಾರಿ. ಮತ್ತೊಮ್ಮೆ ಎಚ್ಚರ ವಹಿಸಿ, ನಿಮ್ಮ ಪ್ಯಾನ್ ಇನ್ನೂ ಆಧಾರ್‌ಗೆ ಲಿಂಕ್ ಆಗಿಲ್ಲದೆ ಇದ್ದರೆ, 2025 ಡಿಸೆಂಬರ್ 31 ರೊಳಗೆ ಲಿಂಕ್ ಮಾಡಿ. ಇಲ್ಲವಾದರೆ 2026 ಜನವರಿ 1 ರಿಂದ ಪ್ಯಾನ್ ನಿಷ್ಕ್ರಿಯಗೊಳ್ಲಬಹುದು.ಹೊಸ ಪ್ಯಾನ್ ಪಡೆಯುವವರು 2025 ಜುಲೈ 1 ರಿಂದ ಆಧಾರ್ ದೃಢೀಕರಣ ಕಡ್ಡಾಯ ಎಂದು ಗಮನದಲ್ಲಿಟ್ಟುಕೊಳ್ಳಿ.

Best Mobiles in India

English summary
According to the notification (CBDT Notification No. 26/2025) issued by the Central Board of Direct Taxes (CBDT), it is mandatory for all PAN cardholders to link their Aadhaar number. Otherwise, your PAN may become inoperative from January 1, 2026. So, let's see what are the latest CBDT rules and how to link Aadhaar-PAN.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+