ಪೇಟಿಎಂನಲ್ಲಿ ಹೊಸ ಫೀಚರ್‌..! ಈಗ ಬಿಲ್‌ ಪಾವತಿ ಇನ್ನೂ ಸುಲಭ..!

By Gizbot Bureau
|

ಆನ್‌ಲೈನ್ ಪೇಮೆಂಟ್‌ ಪ್ಲಾಟ್‌ಫಾರ್ಮ್‌ ಪೇಟಿಎಂ ತನ್ನ ಗ್ರಾಹಕರಿಗೆ ಮರುಕಳಿಸುವ ಪಾವತಿ ಸೇವೆಯನ್ನು ಪರಿಚಯಿಸಿದೆ. ಹೊಸ ಪೇಟಿಎಂ ಪಾವತಿ ಗೇಟ್‌ವೇ ಅಡಿಯಲ್ಲಿ, ಬಳಕೆದಾರರು ತಮ್ಮ ಮಾಸಿಕ ಬಿಲ್‌ ಮತ್ತು ಯುಟಿಲಿಟಿ ರೀಚಾರ್ಜ್‌, ಒಟಿಟಿ ಚಂದಾದಾರಿಕೆ, ಸಾಲ ಮರುಪಾವತಿ, ಸದಸ್ಯತ್ವ ಶುಲ್ಕ ಸೇರಿ ಇತರ ಕಾರ್ಯಗಳಿಗೆ ಪೇಟಿಎಂ ವಾಲೆಟ್‌ ಬಳಸಿಕೊಂಡು ಸ್ವಯಂಚಾಲಿತ ಪಾವತಿಗಳನ್ನು ಹೊಂದಿಸಬಹುದು.

ಎನ್‌ಪಿಸಿಐನ

ಈ ಹೊಸ ವೈಶಿಷ್ಟ್ಯದ ಭಾಗವಾಗಿ 2,000 ರೂ.ಗಳ ಮಿತಿಯೊಂದಿಗೆ ಪೇಟಿಎಂ ವಾಲೆಟ್‌ ಬಳಸಿ ಮರುಕಳಿಸುವ ಪಾವತಿಗಳನ್ನು ಮಾಡಬಹುದು. ಪ್ರಸ್ತುತ, ಎನ್‌ಪಿಸಿಐನ ಇ-ಆದೇಶ ಪರಿಹಾರ ಬಳಸಿಕೊಂಡು, ಬ್ಯಾಂಕ್ ಕಾರ್ಡ್‌ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಪೇಟಿಎಂ ಮರುಕಳಿಸುವ ಪಾವತಿಗಳನ್ನು ನೀಡುತ್ತದೆ. ಶೀಘ್ರದಲ್ಲಿಯೇ ಮರುಕಳಿಸುವ ಪಾವತಿಗಳ ಹೆಚ್ಚುವರಿ ವಿಧಾನವಾಗಿ ಯುಪಿಐಯನ್ನು ಪ್ರಾರಂಭಿಸಲು ಪೇಟಿಎಂ ಯೋಜಿಸಿದೆ.

ಪೇಟಿಎಂ

ಈ ವೈಶಿಷ್ಟ್ಯ ಬಳಸಲು ಬಳಕೆದಾರರು ತಮ್ಮ ಆಯ್ಕೆಯ ವ್ಯಾಪಾರಿಗಳಿಗೆ ನಿಯಮಿತವಾಗಿ ಹಣ ಪಾವತಿಸಲು ಬಯಸುತ್ತಾರೋ ಅವರಿಗೆ ಒಂದು ಬಾರಿ ಅನುಮೋದನೆ ನೀಡಬೇಕಾಗುತ್ತದೆ ಎಂದು ಪೇಟಿಎಂ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹೊಸ ಫೀಚರ್‌ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಸಿರುವ ಪೇಟಿಎಂ, ಬಳಕೆದಾರರು ಚಂದಾದಾರಿಕೆ ರಚಿಸುವ ಸಮಯದಲ್ಲಿ ಒಂದು ಬಾರಿ ಒಪ್ಪಿಗೆ ನೀಡಬೇಕಾಗುತ್ತದೆ. ಇದು ವ್ಯಾಪಾರಿ ಹೆಸರು, ಚಂದಾದಾರಿಕೆ ಪ್ರಾರಂಭ ದಿನಾಂಕ, ಡೆಬಿಟ್‌ನ ಆವರ್ತನ ಮತ್ತು ಪಾವತಿಸಬೇಕಾದ ಮೊತ್ತದಂತಹ ವಿವರಗಳನ್ನು ಕೇಳುತ್ತದೆ. ನಂತರದ ಪಾವತಿಗಳಿಗಾಗಿ ಬಳಕೆದಾರರು ಬೇರೆ ಯಾವುದೇ ವಿವರಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲ ಎಂದು ಪೇಟಿಎಂ ಹೇಳಿದೆ.

ಪೇಟಿಎಂ

ಹೊಸ ಸೇವೆಯಡಿಯಲ್ಲಿ, ನಿಗದಿತ ಪಾವತಿಗೆ ಕನಿಷ್ಠ ಒಂದು ದಿನದ ಮೊದಲು ಪೇಟಿಎಂ ಗ್ರಾಹಕರಿಗೆ ಪೂರ್ವ-ವಹಿವಾಟು ಅಧಿಸೂಚನೆಯನ್ನು ಕಳುಹಿಸುತ್ತದೆ. ವಹಿವಾಟು ಮುಗಿದ ನಂತರ, ಅವರು ಮತ್ತೊಂದು ಅಧಿಸೂಚನೆಯನ್ನು ಬಳಕೆದಾರರು ಪಡೆಯುತ್ತಾರೆ. ಇನ್ನು, ಬಳಕೆದಾರರು ವ್ಯಾಪಾರಿ ಸೇವೆಗಳನ್ನು ಪಡೆಯಲು ಬಯಸದಿದ್ದಲ್ಲಿ ನಿಗದಿತ ಪಾವತಿಯನ್ನು ತ್ಯಜಿಸಲು ನೊಟಿಫಿಕೇಷನ್‌ನಲ್ಲಿ ಲಿಂಕ್ ಅನ್ನು ಸಹ ನೀಡಲಾಗಿರುತ್ತದೆ.

ಒಟಿಟಿ ಪ್ಲಾಟ್‌ಫಾರ್ಮ್‌

ಒಟಿಟಿ ಪ್ಲಾಟ್‌ಫಾರ್ಮ್‌ಗಳ ತ್ವರಿತ ಅಳವಡಿಕೆ ಮತ್ತು ಬಿಲ್ ಪಾವತಿ ಹಾಗೂ ಹಣಕಾಸು ಹೂಡಿಕೆಗಳಂತಹ ಬಳಕೆಯ ಪ್ರಕರಣಗಳ ಡಿಜಿಟಲೀಕರಣವು ದೇಶದಲ್ಲಿ ಚಂದಾದಾರಿಕೆ ಆಧಾರಿತ ಪಾವತಿಗಳ ಬೇಡಿಕೆಯನ್ನು ಉತ್ತೇಜಿಸುತ್ತಿದೆ ಎಂದು ಪೇಟಿಎಂನ ಹಿರಿಯ ಉಪಾಧ್ಯಕ್ಷ ಪುನೀತ್ ಜೈನ್ ಹೇಳಿದರು. ನಮ್ಮ ಮರುಕಳಿಸುವ ಪಾವತಿ ಸೌಲಭ್ಯದೊಂದಿಗೆ, ಗ್ರಾಹಕರಿಗೆ ಸಹಾಯ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಪಾವತಿಗಳನ್ನು ಸಮಯೋಚಿತವಾಗಿ ಸ್ವೀಕರಿಸುವ ಮೂಲಕ ವ್ಯಾಪಾರಿಗಳಿಗೆ ಇದು ಪ್ರಯೋಜನವನ್ನು ನೀಡುತ್ತದೆ. ಈ ವರ್ಷ, ನಾವು ಈ ವಿಭಾಗದಲ್ಲಿ 10 ಪಟ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಪುನೀತ್ ಜೈನ್ ತಿಳಿಸಿದರು.

Best Mobiles in India

English summary
Pay Monthly Bill On Paytm PG: Here's How It Works.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X