ಇಂಟರ್‌ನೆಟ್, ಸ್ಮಾರ್ಟ್‌ಫೊನ್ ಇಲ್ಲದಿದ್ದರೂ ಪೇಟಿಎಂ ಬಳಸಿ!! ಹೇಗೆ ಗೊತ್ತಾ?

Written By:

500 ಮತ್ತು 1000 ರೂಪಾಯಿ ನೋಟು ಬ್ಯಾನ್‌ ಆದ ನಂತರ ಎಲ್ಲರೂ ಆನ್‌ಲೈನ್ ವ್ಯವಹಾರವನ್ನು ಹೆಚ್ಚು ಉಪಯೋಗಿಸುತ್ತಿದ್ದಾರೆ. ಆದರೆ, ನನ್ನ ಬಳಿ ಸ್ಮಾರ್ಟ್‌ಫೊನ್ ಇಲ್ಲ ಇದ್ದರೂ ಇಂಟರ್‌ನೆಟ್ ಬಳಕೆ ಸಾಧ್ಯವಿಲ್ಲ ಎನ್ನುವವರಿಗಿಂತ ನನಗೆ ಆನ್‌ಲೈನ್ ವ್ಯವಹಾರ ತಿಳಿದಿಲ್ಲ ಎನ್ನುವವರೆ ಜಾಸ್ತಿ!!

ಹಾಗಾಗಿ ಪೇಟಿಎಂ ನೂತನ ಆನ್‌ಲೈನ್ ಪೀಚರ್‌ಒಂದನ್ನು ಬಿಡುಗಡೆ ಮಾಡುತ್ತಿದೆ! ಹೌದು, ಕೇವಲ ಒಂದು ನಂಬರ್‌ಗೆ ಕರೆ ಮಾಡುವ ಮೂಲಕ ನೀವು ಆನ್‌ಲೈನ್ ಬಿಲ್ ಪಾವತಿಸುವ ಸೌಲಭ್ಯವನ್ನು ಪೇಟಿಎಂ ನೀಡಿದೆ.!! ಇಂಟರ್‌ನೆಟ್ ಇಲ್ಲದಿದ್ದರೂ ಅಥವಾ ಸ್ಮಾರ್ಟ್‌ಫೋನ್ ಬಳಸದೇ ಇದ್ದರೂ ಇನ್ನು ಆನ್‌ಲೈನ್ ವ್ಯವಹಾರವನ್ನು ಎಲ್ಲರೂ ಉಪಯೋಗಿಸಬಹುದಾಗಿದೆ!

ಉಚಿತ HD ಸಿನಿಮಾ ವೀಕ್ಷಣೆಗೆ ಇರುವ ಟಾಪ್ 4 ಆನ್‌ಲೈನ್ ವೆಬ್‌ಸೈಟ್‌ಗಳು

ಇಂಟರ್‌ನೆಟ್ ಇಲ್ಲದಿದ್ದರೂ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್‌ನಿಂದ 1800 1800 1234 ನಂಬರ್‌ಗೆ ಕರೆ ಮಾಡಿ ಮೂಲಕ ಹಣ ಸಂದಾಯ ಮಾಡಬಹುದು! ಹಾಗಾದರೆ ಕರೆ ಮಾಡಿ ಹಣ ಹೇಗೆ ಸಂದಾಯ ಮಾಡಬಹುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಕೌಂಟ್ ತೆರೆದು ಮೊಬೈಲ್ ನಂಬರ್‌ ರಿಜಿಸ್ಟರ್ ಮಾಡಿ

ಅಕೌಂಟ್ ತೆರೆದು ಮೊಬೈಲ್ ನಂಬರ್‌ ರಿಜಿಸ್ಟರ್ ಮಾಡಿ

ಕಂಪ್ಯೂಟರ್‌ನಲ್ಲಿ ಮೊದಲು ಪೇಟಿಎಂ ಅಕೌಂಟ್ ತೆರೆದು ನಿಮ್ಮ ಮೊಬೈಲ್ ನಂಬರ್‌ ಅನ್ನು ರಿಜಿಸ್ಟರ್ ಮಾಡಿಕೊಳ್ಳಿ. ತಿಳಿಯದಿದ್ದರೆ ಹತ್ತಿರದ ಸೈಬರ್‌ನೆಟ್‌ಗಳನ್ನು ಸಂಪರ್ಕಿಸಬಹುದು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಿನ್ ಸಂಖ್ಯೆ ಪಡೆಯಿರಿ.

ಪಿನ್ ಸಂಖ್ಯೆ ಪಡೆಯಿರಿ.

ನೀವು ಹಣ ಸಂದಾಯ ಮಾಡುವಾಗ 1800 1800 1234 ಗೆ ಕರೆ ಮಾಡಿ ಅಲ್ಲಿನ ಆದೇಶಗಳನ್ನು ಕೇಳಿಸಿಕೊಳ್ಳಿ. ನಂತರ ನಿಮ್ಮ ಪಿನ್ ಸಂಖ್ಯೆಯನ್ನು ಪಡೆಯಿರಿ. ಪ್ರತಿಯೊಂದು ಹಣ ಸಂದಾಯಕ್ಕೂ ಹೊಸ ಪಿನ್ ತೆಗೆದುಕೊಳ್ಳಬೇಕು.

ಮತ್ತೆ ಕಾಲ್ ಮಾಡಿ ಮಾಹಿತಿ ನೀಡಿ.

ಮತ್ತೆ ಕಾಲ್ ಮಾಡಿ ಮಾಹಿತಿ ನೀಡಿ.

ಪಿನ್ ಸಂಖ್ಯೆ ಪಡೆದ ನಂತರ ಮತ್ತೆ 1800 1800 1234 ಗೆ ಕಾಲ್ ಮಾಡಿ ಅಲ್ಲಿನ ಆದೇಶವನ್ನು ಕೇಳಿ ತಿಳಿಯಿರಿ. ನಂತರ ನೀವು ಹಣವನ್ನು ಪೇ ಮಾಡಬೇಕಾದವರ ಮೊಬೈಲ್ ನಂಬರ್ ಮತ್ತು ಹಣದ ಮೊತ್ತವನ್ನು ನಮೂದಿಸಿ. ನಿಮ್ಮ ಪಿನ್ ಒತ್ತಿರಿ.ನಂತರ ಅವರಿಗೆ ಹಣ ಸಂದಾಯವಾಗುತ್ತದೆ.

ಪೇಟಿಎಂ ಕರೆಯ ಮಿತಿಗಳು

ಪೇಟಿಎಂ ಕರೆಯ ಮಿತಿಗಳು

#1 ಹಣ ಪಡೆಯಬೇಕಾದ ವ್ಯಕ್ತಿಯ ಮೊಬೈಲ್ ನಂಬರ್ ರಿಜಿಸ್ಟರ್ ಆಗಿರಬೇಕು.
#2 ಪ್ರತಿಬಾರಿಯೂ ಹೊಸ ಪಿನ್ ಪಡೆಯಬೇಕಿದೆ.
#3 ಮುಂದಿನ ದಿನಗಳಲ್ಲಿ ಹೆಚ್ಚು ಉಪಯೋಗಕ್ಕೆ ಬರಬಹುದಾದ ಸೌಲಭ್ಯ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This will work even without a smartphone or the Paytm app To know more visit to kannda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot