Home
ಟೆಕ್ ನೌಕರಿ

ಪೆಟ್ರೋಲ್, ಡೀಸೆಲ್ ಹಾಕಿಸಿ ಕ್ಯಾಶ್‌ಬ್ಯಾಕ್‌ ಪಡೆಯಿರಿ..! ಹೇಗೆ ಗೊತ್ತಾ..?

ಕೆಲವು ಪ್ರದೇಶಗಳಲ್ಲಿ ಪೆಟ್ರೋಲ್ ಬೆಲೆ 90 ರೂಪಾಯಿಗೆ ಏರಿಕೆಯಾಗುತ್ತಿದೆ. ಇದು ಬೈಕ್ ಮತ್ತು ಕಾರು ಸವಾರರಿಗೆ ಇನ್ನಿಲ್ಲದ ಚಿಂತೆಯನ್ನುಂಟು ಮಾಡಿರುವುದಂತೂ ಸುಳ್ಳಲ್ಲ. ಸರ್ಕಾರ ಎಲ್ಲೋ ಸ್ವಲ್ಪ ಬೆಲೆಯನ್ನು ಇಳಿಕೆ ಮಾಡಿದೆ ಆದರೆ ಇದನ್ನು ಹೊರತು ಪಡಿಸಿ ಬೆಲೆಯಲ್ಲಿ ಇನ್ನೂ ಕಡಿತವನ್ನು ಪಡೆಯಲು ಗ್ರಾಹಕರಿಗೆ ಅವಕಾಶವಿದೆ. ಹೇಗೆ ಎಂದು ಕೇಳುತ್ತಿದ್ದೀರಾ? ಮುಂದೆ ಓದಿ.

ಪೆಟ್ರೋಲ್, ಡೀಸೆಲ್ ಹಾಕಿಸಿ ಕ್ಯಾಶ್‌ಬ್ಯಾಕ್‌ ಪಡೆಯಿರಿ..! ಹೇಗೆ ಗೊತ್ತಾ..?

ಇಂಧನ ಬೆಲೆಯಲ್ಲಿ ಇನ್ನಷ್ಟು ಆಫರ್ ಪಡೆದು ಕಡಿಮೆ ಬೆಲೆಗೆ ನಿಮ್ಮ ವೆಹಿಕಲ್ ಗೆ ಇಂಧನ ತುಂಬಿಸಿಕೊಳ್ಳಲು ಅವಕಾಶ ನೀಡುತ್ತಿದೆ ಪೇಟಿಎಂ, ಫೋನ್ ಪೇ ಮತ್ತು ಮೊಬಿಕ್ ವಿಕ್ ಗಳು. ಈ ಸೇವೆಗಳನ್ನು ಬಳಸಿ ನೀವು ಇಂಧನ ಹಾಕಿಸಿಕೊಂಡರೆ ನಿಮಗೆ ಕ್ಯಾಷ್ ಬ್ಯಾಕ್ ಆಫರ್ ಗಳು ಲಭ್ಯವಾಗಲಿದೆ.

ಯಾವ್ಯಾವ ಆಪ್‌ಗಳಲ್ಲಿ ಲಭ್ಯ

ಯಾವ್ಯಾವ ಆಪ್‌ಗಳಲ್ಲಿ ಲಭ್ಯ

7,500 ರುಪಾಯಿವರೆಗಿನ ಕ್ಯಾಷ್ ಬ್ಯಾಕ್ ನ್ನು ಇವುಗಳಲ್ಲಿ ಪಡೆಯಲು ಸಾಧ್ಯವಿದೆಯಂತೆ. ಇಂಧನ ಬೆಲೆಯಿಂದ ತತ್ತರಿಸುವ ಗ್ರಾಹಕರಿಗೆ ಖಂಡಿತ ಪೇಟಿಎಂ , ಫೋನ್ ಪೇ ಮತ್ತು ಮೊಬಿಕ್ವಿಕ್‌ ಗಳು ಭರ್ಝರಿ ಉಡುಗೊರೆಯನ್ನೇ ನೀಡುತ್ತಿದೆ. ಹಾಗಾದ್ರೆ ಈ ಕ್ಯಾಷ್ ಬ್ಯಾಕ್ ಆಫರ್ ನ್ನು ಪಡೆದುಕೊಳ್ಳುವುದು ಹೇಗೆ?

ಪೇಟಿಎಂನಲ್ಲಿ ಕ್ಯಾಷ್ ಬ್ಯಾಕ್:

ಪೇಟಿಎಂನಲ್ಲಿ ಕ್ಯಾಷ್ ಬ್ಯಾಕ್:

ಪೇಟಿಎಂನಲ್ಲಿ ನೀವು 7,500 ರುಪಾಯಿ ವರೆಗೆ ಕ್ಯಾಷ್ ಬ್ಯಾಕ್ ಪಡೆಯಲು ಸಾಧ್ಯವಾಗುತ್ತದೆ. ಕೆಲವು ನಿಗಧಿತ ಇಂಧನ ಬಂಕ್ ಗಳಲ್ಲಿ ಖರೀದಿ ಮಾಡುವುದರಿಂದಾಗಿ ಈ ಆಫರ್ ನ್ನು ನಿಮ್ಮದಾಗಿಸಿಕೊಳ್ಳಬಹುದು.ಈ ಆಫರ್ ಅಗಸ್ಟ್ 1,2019 ರ ವರೆಗೆ ಲಭ್ಯವಿರುತ್ತದೆ. ಕನಿಷ್ಟ ಎಂದರೆ 50 ರುಪಾಯಿ ಇಂಧನ ಹಾಕಿಸಿಕೊಂಡಾಗಲೂ ಕೂಡ ಈ ಆಫರ್ ಲಭ್ಯವಾಗುತ್ತದೆ.

ತಮ್ಮ ಸ್ಮಾರ್ಟ್ ಫೋನಿನ ಆಪ್ ಮೂಲಕ ಅವರು ನಿರ್ಧಿಷ್ಟ ಇಂಧನ ಸ್ಟೇಷನ್ ನಲ್ಲಿ ಹಾಕಿಸಿಕೊಂಡಾಗ ಈ ಆಫರ್ ಲಭ್ಯವಾಗುತ್ತದೆ ಎಂಬುದು ಗ್ರಾಹಕರ ಗಮನದಲ್ಲಿರಬೇಕು. ಪ್ರತಿ 10 ಟ್ರಾನ್ಸ್ಯಾಕ್ಷನ್ ಗೆ 1,350 ರುಪಾಯಿ ವರೆಗಿನ ಕ್ಯಾಷ್ ಬ್ಯಾಕ್ ನ್ನು ಪಡೆದುಕೊಳ್ಳಲು ಗ್ರಾಹಕರಿಗೆ ಅವಕಾಶವಿರುತ್ತದೆ. ಅಂದರೆ ಗ್ರಾಹಕರಿಗೆ ಒಟ್ಟು 7,500 ರುಪಾಯಿ ವರೆಗಿನ ಕ್ಯಾಷ್ ಬ್ಯಾಕ್ ನ್ನು ಈ ಆಫರ್ ಮೂಲಕ ಪಡೆಯಲು ಸಾಧ್ಯವಾಗುತ್ತದೆಯಂತೆ. ಪ್ರತಿಯೊಂದು ಟ್ರಾನ್ಸ್ಯಾಕ್ಷನ್ ನಲ್ಲೂ ಇತರೆ ರಿಯಾಯಿತಿಗಳು ಮತ್ತು ಕ್ಯಾಷ್ ಬ್ಯಾಕ್ ಗಳು ಲಭ್ಯವಿರುತ್ತದೆ. 48 ಘಂಟೆಗಳ ಅವಧಿಯೊಳಗೆ ಗ್ರಾಹಕರಿಗೆ ಲಭ್ಯವಾಗುವ ಕ್ಯಾಷ್ ಬ್ಯಾಕ್ ಮೊತ್ತವು ಅವರ ಪೇಟಿಎಂ ವ್ಯಾಲೆಟ್ ಗೆ ಬಂದು ತಲುಪುತ್ತದೆ ಮತ್ತು ಅದನ್ನು ಇತರೆ ಖರೀದಿಗೆ ಮತ್ತು ಪೇಟಿಎಂ ಫ್ಲ್ಯಾಟ್ ಫಾರ್ಮ್ ನ ಇತರೆ ವ್ಯವಹಾರಗಳಿಗೆ ಬಳಕೆ ಮಾಡಬಹುದು.

ಮೊಬಿಕ್ವಿಕ್‌ ಪೆಟ್ರೋಲ್ ಆಫರ್

ಮೊಬಿಕ್ವಿಕ್‌ ಪೆಟ್ರೋಲ್ ಆಫರ್

ಈ ಆಫರ್ ನ ಅನ್ವಯ, ಮೊಬಿಕ್ವಿಕ್‌ ಫ್ಲ್ಯಾಟ್ ಫಾರ್ಮ್ ನ ಮೂಲಕ ಗ್ರಾಹಕರು ಡಿಸೆಂಬರ್ 31,2018 ರ ವರೆಗೆ ಈ ಆಫರ್ ನ್ನು ನಿರ್ಧಿಷ್ಟ ಪೆಟ್ರೋಲ್ ಬಂಕ್ ಗಳಲ್ಲಿ ಪಡೆಯಲು ಅವಕಾಶವಿದೆ. 50 ರುಪಾಯಿ ಅಥವ ಅದಕ್ಕಿಂತ ಹೆಚ್ಚಿನ ಪೆಟ್ರೋಲ್ ಖರೀದಿ ಮಾಡಿದಾಗ ಶೇಕಡಾ 25 ರಷ್ಟು "ಸೂಪರ್ ಕ್ಯಾಷ್" ನ್ನು ಬಳಕೆದಾರರಿಗೆ ನೀಡಲಾಗುತ್ತದೆ.

100 ರುಪಾಯಿ ವರೆಗಿನ ಸೂಪರ್ ಕ್ಯಾಷ್ ಬೆನಿಫಿಟ್ ನ್ನು ಗಳಿಸಬಹುದು.ಆದರೆ ಇದನ್ನು ತಿಂಗಳಿಗೆ ಒಂದು ಬಾರಿ ಮಾತ್ರ ಬಳಕೆ ಮಾಡಲು ಅವಕಾಶವಿರುತ್ತದೆ. ಇನ್ನು ಸೂಪರ್ ಕ್ಯಾಷ್ ನ್ನು ಮೊಬಿಕ್ವಿಕ್‌ ನಲ್ಲಿ ಕೆಲವು ನಿರ್ಧಿಷ್ಟ ಪಾವತಿಗಳಿಗೆ ಮಾತ್ರವೇ ಬಳಕೆ ಮಾಡಲು ಅವಕಾಶವಿರುತ್ತದೆ. ಇನ್ನು ಮೊಬಿಕ್ವಿಕ್‌ ನಲ್ಲಿ 50 ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಟ್ರಾನ್ಸ್ಯಾಕ್ಷನ್ ಗಳಿಗೆ 0.75 ಶೇಕಡಾ ಕ್ಯಾಷ್ ಬ್ಯಾಕ್ ಸಿಗುತ್ತದೆ. ಇದನ್ನು ಗ್ರಾಹಕರ ಮೊಬೈಲ್ ವ್ಯಾಲೆಟ್ ಗೆ ರೀಫಂಡ್ ಮಾಡಲಾಗುತ್ತದೆ.

ಫೋನ್ ಪೇ ಕ್ಯಾಷ್ ಬ್ಯಾಕ್

ಫೋನ್ ಪೇ ಕ್ಯಾಷ್ ಬ್ಯಾಕ್

ಇಲ್ಲಿ ಹೇಳಿರುವ ಎಲ್ಲಾ ಆಫರ್ ಗಳಿಗಿಂತ ಫೋನ್ ಪೇ ನಲ್ಲಿ ಬಹಳ ಕುತೂಹಲಕಾರಿಯಾಗಿರುವ ಕ್ಯಾಷ್ ಬ್ಯಾಕ್ ಆಫರ್ ನ್ನು ನೀಡಲಾಗುತ್ತದೆ.ಫ್ಲಿಪ್ ಕಾರ್ಟ್ ಮಾಲೀಕತ್ವದ ಬಹಳ ಪ್ರಸಿದ್ಧ ಯುಪಿಐ ಬೇಸ್ಡ್ ಪೇಮೆಂಟ್ ಆಪ್ ನಲ್ಲಿ ಇಂಧನ ಖರೀದಿಗಾಗಿ ಬಹಳ ಆಕರ್ಷಣೀಯವಾಗಿರುವ ಆಫರ್ ನೀಡಲಾಗುತ್ತಿದೆ.

ಫೋನ್ ಪೇ ಮೂಲಕ ನೀವು ನಿರ್ಧಿಷ್ಟ ಬಂಕ್ ಗಳಲ್ಲಿ ಅಂದರೆ ಇಂಡಿಯಲ್ ಆಯಿಲ್ ಔಟ್ ಲೆಟ್ ಗಳಲ್ಲಿ ಇಂಧನ ಖರೀದಿಸಿದಾಗ ಬಳಕೆದಾರರು 40 ರುಪಾಯಿ ಕ್ಯಾಷ್ ಬ್ಯಾಕ್ ನ್ನು ಪಡೆಯಲಿದ್ದಾರೆ(100 ರುಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಖರೀದಿಯಲ್ಲಿ). ಇದೇ ಹಿಂದೂಸ್ತಾನ್ ಪೆಟ್ರೋಲ್ ಔಟ್ ಲೆಟ್ ಗಳಲ್ಲಿ ಒಂದು ವೇಳೆ ಗ್ರಾಹಕರು 100 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಇಂಧನ ಖರೀದಿಸಿದಾಗ ಅವರಿಗೆ 35 ರುಪಾಯಿ ಕ್ಯಾಷ್ ಬ್ಯಾಕ್ ನೀಡಲಾಗುತ್ತದೆ. ಈ ಆಫರ್ ಡಿಸೆಂಬರ್ 31,2018 ರ ವರೆಗೆ ಲಭ್ಯವಿರುತ್ತದೆ. ಆದರೆ ದಿನಕ್ಕೆ ಒಂದು ಬಾರಿ ಮಾತ್ರ ಈ ಆಫರ್ ನ್ನು ಪಡೆಯಬಹುದು.

ಸೂಚನೆ: ನೀವು ಈ ಆಫರ್ ಗಳನ್ನು ಪಡೆಯಲು ಇದರ ಟರ್ಮ್ಸ್ ಮತ್ತು ಕಂಡೀಷನ್ ಗಳನ್ನು ಒಮ್ಮೆ ಸರಿಯಾಗಿ ಒದಿಕೊಳ್ಳುವುದು ಸೂಕ್ತ.

Best Mobiles in India

English summary
Petrol, diesel price rise: How to earn cashbacks from Paytm, PhonePe and Mobikwik. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+