ಮೆಮೊರಿ ಕಾರ್ಡ್ ಮೇಲೆ 2,4,6,10 ಎಂಬ ಸಂಖ್ಯೆಗಳು ಏಕಿರುತ್ತವೆ ಗೊತ್ತಾ?

1 GB, 2 GB, 32GB ಮತ್ತು 256 GB ಮೆಮೊರಿ ಕಾರ್ಡಗಳನ್ನು ನೀವು ಖರೀದಿಸುತ್ತೀರಾ. ಆದರೆ, ಮೆಮೊರಿ ಕಾರ್ಡ್‌ಗಳ ಮೇಲಿರುವ 2,4,6,10 ಸಂಖ್ಯೆಗಳು ಏಕಿರುತ್ತದೆ ಎಂಬುದನ್ನು ನೀವು ಗಮನಿಸಿರುವುದಿಲ್ಲ.!

|

ಪ್ರತಿದಿವಸ ಸ್ಮಾರ್ಟ್‌ಫೋನ್ ಬಳಸುವ ನೀವು ಕೆಲವು ಚಿಕ್ಕ ಚಿಕ್ಕ ವಿಷಯಗಳನ್ನು ನೋಡಿರುವುದೇ ಇಲ್ಲ. ಇದಕ್ಕೆ ಒಂದು ಉದಾಹರಣೆ ಸ್ಮಾರ್ಟ್‌ಫೋನ್ ಮೆಮೊರಿ ಕಾರ್ಡ್ ಮೇಲಿರುವ 2,4,6,10 ಎಂಬ ಸಂಖ್ಯೆಗಳು ಏಕಿರುತ್ತದೆ ಎಂಬುದು ಬಹಳ ಜನರಿಗೆ ಗೊತ್ತಿರುವುದಿಲ್ಲ.!!ಹೌದು, 1 GB, 2 GB, 32GB ಮತ್ತು 256 GB ಮೆಮೊರಿ ಕಾರ್ಡಗಳನ್ನು ನೀವು ಖರೀದಿಸುತ್ತೀರಾ. ಆದರೆ, ಮೆಮೊರಿ ಕಾರ್ಡ್‌ಗಳ ಮೇಲಿರುವ 2,4,6,10 ಸಂಖ್ಯೆಗಳು ಏಕಿರುತ್ತದೆ ಎಂಬುದನ್ನು ನೀವು ಗಮನಿಸಿರುವುದಿಲ್ಲ.!

ಮೆಮೊರಿ ಕಾರ್ಡಗಳ ಮೇಲಿರುವ 2,4,6,10 ಸಂಖ್ಯೆಗಳು ಮೆಮೊರಿ ಕಾರ್ಡ್ ಕ್ಲಾಸ್ ಅನ್ನು ತೋರಿಸುತ್ತವೆ. ಅಂದರೆ ಮೆಮೊರಿ ಕಾರ್ಡ್ ಎಷ್ಟು ವೇಗವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಇವು ಸೂಚಿಸುತ್ತವೆ.ಹೆಚ್ಚು ನಂಬರ್ ಹೊಂದಿರುವ ಮೆಮೊರಿ ಕಾರ್ಡ್ ಡೇಟಾವನ್ನು ವೇಗವಾಗಿ ಕಾಪಿ ಮಾಡುತ್ತವೆ. ಇದನ್ನು ತಿಳಿಸುವುದಕ್ಕಾಗಿ ಮೆಮೊರಿ ಕಾರ್ಡ್ ಮೇಲೆ 2,4,6,10 ಎಂಬ ಸಂಖ್ಯೆಗಳಿರುತ್ತವೆ.! ಹಾಗಾಗಿ, ಯಾವ ಮೆಮೊರಿಕಾರ್ಡ್ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಕ್ಲಾಸ್ 2 ಮೆಮೊರಿ ಕಾರ್ಡ್!!

ಕ್ಲಾಸ್ 2 ಮೆಮೊರಿ ಕಾರ್ಡ್!!

ಕ್ಲಾಸ್ 2 ಮೆಮೊರಿ ಕಾರ್ಡ್ 2 ಎಂಬಿಪಿಎಸ್ ವೇಗದಲ್ಲಿ ಡೇಟಾ ರೀಡ್ ಮತ್ತು ರೈಟ್ ಮಾಡುತ್ತದೆ. ಈ ವೇಗ ಬಹಳ ಕಡಿಮೆ ಎನ್ನಬಹುದು. ಸಾಮಾನ್ಯವಾಗಿ 1 GB, 2 GB, ಕಾರ್ಡ್‌ಗಳು ಈ ವೇಗದಲ್ಲಿ ಕೆಲಸ ಮಾಡುತ್ತವೆ.

ಕ್ಲಾಸ್ 4 ಮೆಮೊರಿ ಕಾರ್ಡ್!!

ಕ್ಲಾಸ್ 4 ಮೆಮೊರಿ ಕಾರ್ಡ್!!

ಇವುಗಳಲ್ಲಿ ಸೆಕೆಂಡಿಗೆ 4 ಎಂಬಿ ವೇಗದಲ್ಲಿ ರೀಡ್ ಮತ್ತು ರೈಟ್ ಮಾಡಬಹುದು. ಹೆಚ್ಚಾಗಿ 4 GB, 8 GB ಕಾರ್ಡ್‌ಗಳು ಈ ವೇಗದಲ್ಲಿ ಕೆಲಸ ಮಾಡುತ್ತವೆ.

ಕ್ಲಾಸ್ 6 ಮೆಮೊರಿ ಕಾರ್ಡ್!!

ಕ್ಲಾಸ್ 6 ಮೆಮೊರಿ ಕಾರ್ಡ್!!

ಕ್ಲಾಸ್ 6 ಮೆಮೊರಿ ಕಾರ್ಡ್ 6 ಎಂಬಿಪಿಎಸ್ ವೇಗದಲ್ಲಿ ಡೇಟಾ ವನ್ನು ರೀಡ್ ಹಾಗೂ ರೈಟ್ ಮಾಡಬಹುದು. ಸಾಮಾನ್ಯವಾಗಿ 4 GB, 8 GB, 16 GB ಸೈಜ್ ಕಾರ್ಡ್‌ಗಳು ಈ ವೇಗದಲ್ಲಿ ಕೆಲಸ ಮಾಡುತ್ತವೆ.

ಕ್ಲಾಸ್ 10 ಮೆಮೊರಿ ಕಾರ್ಡ್!!

ಕ್ಲಾಸ್ 10 ಮೆಮೊರಿ ಕಾರ್ಡ್!!

ಇವುಗಳಿಂದ ಸೆಕೆಂಡಿಗೆ 10 ಎಂಬಿ ವೇಗದಲ್ಲಿ ಡೇಟಾ ರೀಡ್ ಹಾಗೂ ರೈಟ್ ಮಾಡಬಹುದು. ಕೆಲವು ಕಾರ್ಡ್ ಗಳಲ್ಲಿ ಗರಿಷ್ಠ 60 ಎಂಬಿಪಿಎಸ್ ವೇಗ ಸಹ ಲಭಿಸುತ್ತದೆ.!!

<strong>ಮತ್ತೊಂದು ಇತಿಹಾಸದ ದಾಖಲೆ ನಿರ್ಮಿಸಿದ ಜಿಯೋ!..ಬಿದ್ದ ಏರ್‌ಟೆಲ್!!</strong>ಮತ್ತೊಂದು ಇತಿಹಾಸದ ದಾಖಲೆ ನಿರ್ಮಿಸಿದ ಜಿಯೋ!..ಬಿದ್ದ ಏರ್‌ಟೆಲ್!!

Best Mobiles in India

English summary
if you’re doing any sort of work in digital media. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X