ಅಂತರ್ಜಾಲದಲ್ಲಿ ಯಾವುದೇ ಪೋಟೊ ಕದ್ದರೆ ಹುಷಾರ್!!..ಕ್ಷಣಾರ್ಧದಲ್ಲಿ ಸಿಕ್ಕಿಬೀಳ್ತೀರಾ!!
ಅಂತರ್ಜಾಲದಲ್ಲಿ ಹೆಚ್ಚು ಓಡಾಡುತ್ತಿರುವ ಈ ಚಿತ್ರವನ್ನು ನಾನು ಚಿತ್ರಿಸಿದ್ದು ಎಂದು ಯಾರಿಗಾದರೂ ಹೇಳಿದರೆ, ಅದನ್ನು ನಂಬುವವರು ಸಹ ಯಾರೂ ಇರುವುದಿಲ್ಲ ಎಂಬುದು ಎಷ್ಟೋ ಫೋಟೊಗ್ರಾಫರ್ಸ್ ಆಂಬೋಣ. ಏಕೆಂದರೆ, ಅಂತರ್ಜಾಲದಲ್ಲಿ ಶೇರ್ ಮಾಡಿದ ಫೋಟೊ ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಕಳ್ಳತನ ಆಗಬಹುದು.!
ಹೌದು, ವಾಟರ್ ಮಾರ್ಕ್ ಹಾಕಿ ಫೋಟೊ ಕಳ್ಳತನಕ್ಕೆ ನಿಯಂತ್ರಣ ಹೇರಬಹುದಾದರೂ ಎಲ್ಲರೂ ವಾಟರ್ ಮಾರ್ಕ್ ಹಾಕಿಯೇ ಫೋಟೊ ಶೇರ್ ಮಾಡುವುದಿಲ್ಲ ಮತ್ತು ವಾಟರ್ ಮಾರ್ಕ್ ಅನ್ನು ಸಹ ತೆಗೆಯುವ ತಂತ್ರಜ್ಞಾನಗಳು ಇವೆ. ಹಾಗಾಗಿ, ಫೋಟೊ ಕಳ್ಳತನಕ್ಕೆ ನಿಯಂತ್ರಣ ಹೇರಲು ಸಾಧ್ಯವೇ ಇಲ್ಲ ಎಂದು ಕೊರಗುತ್ತಿರುವುವವರಿಗೆ ಹೊಸದೊಂದು ಅವಕಾಶ ತೆರೆದುಕೊಂಡಿದೆ.

ನಾವು ಕ್ಲಿಕ್ಕಿಸಿದ ಫೋಟೊಗಳನ್ನು ಇನ್ಯಾರಾದರೂ ಕದ್ದು ಬಳಕೆ ಮಾಡಿದ್ದರೆ ಆ ವಿಷಯವನ್ನು ಆ ತಕ್ಷಣವೇ ನಮ್ಮ ಗಮನಕ್ಕೆ ತಂದು, ಪರಿಹಾರವನ್ನು ಸಹ ಒದಗಿಸುವ ವೆಬ್‌ಸೈಟ್ ಒಂದಿದೆ. ಈ ವೆಬ್‌ಸೈಟ್ ಮೂಲಕ ನಿಮ್ಮ ಪೋಟೊ ಸುರಕ್ಷತೆಯನ್ನು ಕಾಪಾಡಿಕೊಳಬಹುದಾಗಿದೆ.! ಹಾಗಾದರೆ, ಆ ವೆಬ್‌ಸೈಟ್ ಯಾವುದು? ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಮುಂದೆ ತಿಳಿಯಿರಿ.

ಫೋಟೊ ಟ್ರ್ಯಾಕ್ ಮಾಡುತ್ತದೆ ವೆಬ್‌ಸೈಟ್!!
ನೀವು ಬೇರೆ ಯಾವುದಾದರೂ ವೆಬ್‍ಸೈಟ್‍ಗಳಲ್ಲಿ ಅಥವಾ ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದ ಫೋಟೊವನ್ನು ಬೇರೆ ಯಾರಾದರೂ ಬಳಸಿದ್ದಾರೆಯೇ ಎಂದು ಟ್ರ್ಯಾಕ್ ಮಾಡುವುದಕ್ಕಾಗಿ ಈ ವೆಬ್‌ಸೈಟ್ ಮುಂದಾಗುತ್ತದೆ. ಹಾಗಾಗಿ, ನಿಮ್ಮ ಪೋಟೊ ಪ್ರಪಂಚದ ಯಾವ ಭಾಗದಲ್ಲಿ ಕಳ್ಳತನವಾದರೂ ಕೂಡ ಅದು ನಿಮಗೆ ಕ್ಷಣಾರ್ಧದಲ್ಲಿ ಮಾಹಿತಿ ನೀಡುತ್ತದೆ.

www.pixsy.com!!
ನಾವು ಚಿತ್ರಿಸಿದ ಫೋಟೊ ಕಳ್ಳತನವಾದರೆ ನಿಮ್ಮ ಫೋಟೊ ಕಳ್ಳತನವಾಗಿದೆ ಮತ್ತು ಕಳ್ಳತನ ಮಾಡಿದವರ ವಿರುದ್ಧ ದೂರು ದಾಖಲಿಸಿ, ನಷ್ಟ ಪರಿಹಾರ ಪಡೆಯಲು www.pixsy.com ಎಂಬ ವೆಬ್‌ಸೈಟ್ ಸಹಾಯ ಮಾಡುತ್ತದೆ. ನಾವು ಕ್ಲಿಕ್ಕಿಸಿದ ಫೋಟೊಗಳನ್ನು ಇನ್ಯಾರಾದರೂ ಕದ್ದು ಬಳಕೆ ಮಾಡಿದ್ದರೆ ಅವರ ಮೇಲೆ ಮೊಕದ್ದಮೆಯನ್ನು ಪಿಕ್ಸಿ ಹೂಡುತ್ತದೆ.

ವೆಬ್‍ಸೈಟ್ ಹೇಗೆ ಕಾರ್ಯವೆಸಗುತ್ತದೆ?
ವೆಬ್‍ಸೈಟ್‌ನಲ್ಲಿ ಹೆಸರು ನೋಂದಾಯಿಸಿದ ಮೇಲೆ ಲಾಗಿನ್ ಆಗಿ. ನಮ್ಮ ಫೋಟೊವನ್ನು ಬೇರೆ ಯಾರಾದರೂ ಬಳಸಿದ್ದಾರೆಯೇ ಎಂದು ತಿಳಿಯಲು ಆ ಫೋಟೊವನ್ನು ಪಿಕ್ಸಿಯಲ್ಲಿ ಅಪ್‍ಲೋಡ್ ಮಾಡಿ. ನೀವು ಅಪ್‌ಲೋಡ್ ಮಾಡಿದ ಆ ಫೋಟೊ ಬೇರೆ ಕಡೆ ಬಳಕೆಯಾಗಿದೆಯೇ ಎಂದು ಪಿಕ್ಸಿ ಚೆಕ್ ಮಾಡಿ, ಎಲ್ಲಿಯಾದರೂ ಬಳಕೆಯಾಗಿರುವುದು ಕಂಡರೆ ನಿಮಗೆ ಮಾಹಿತಿ ನೀಡುತ್ತದೆ.

ಪರಿಹಾರ ಗಳಿಸಿಕೊಡುತ್ತದೆ.!!
ನಿಮ್ಮ ಚಿತ್ರವನ್ನು ಯಾರಾದರೂ ಕದ್ದರೆ ಆ ಬಗ್ಗೆ ನಿಮಗೆ ಕೇವಲ ಮಾಹಿತಿಯನ್ನಲ್ಲದೆ, ಪರಿಹಾರವನ್ನು ಸಹ ಈ ಪಿಕ್ಸಿ ವೆಬ್‌ಸೈಟ್ ಗಳಿಸಿಕೊಡುತ್ತದೆ. ನೀವು ಕ್ಲಿಕ್ಕಿಸಿದ ಆ ಫೋಟೊವಿನ ನಷ್ಟ ಪರಿಹಾರ ಪಡೆಯುವ ಕಾರ್ಯಗಳನ್ನೆಲ್ಲಾ ಪಿಕ್ಸಿ ಮಾಡುತ್ತದೆ. ಆ ನಂತರ ನಿಮಗೆ ಸಿಕ್ಕಿದ ನಷ್ಟ ಪರಿಹಾರದ ಅರ್ಧ ಹಣ ಪಿಕ್ಸಿಗೆ ನೀಡಬೇಕು ಅಷ್ಟೇ. !

ಉಚಿತವಾಗಿ ಟ್ರ್ಯಾಕ್ ಮಾಡಬಹುದು!!
ಪಿಕ್ಸಿಯು ಕಾನೂನು ಕ್ರಮಗಳನ್ನು ಕೈಗೊಂಡಿದ್ದಕ್ಕೆ ಖರ್ಚಾದ ಹಣವನ್ನು ಪಿಕ್ಸಿ ನಿಮಗೆ ಸಿಕ್ಕಿದ ನಷ್ಟ ಪರಿಹಾರ ಮೊತ್ತದಿಂದ ವಸೂಲಿ ಮಾಡುತ್ತದೆ. ನಂತರ ನಷ್ಟ ಪರಿಹಾರದ ಮೊತ್ತ ನೇರವಾಗಿ ನಿಮ್ಮ ಖಾತೆಗೆ ಬಂದಿರುತ್ತದೆ. 500 ಫೋಟೊಗಳನ್ನು ಉಚಿತವಾಗಿ ಟ್ರ್ಯಾಕ್ ಮಾಡುವ ಅವಕಾಶ ಇಲ್ಲಿದೆ. ಈ ಮಿತಿ ದಾಟಿದರೆ ಫೋಟೊ ಟ್ರ್ಯಾಕ್ ಮಾಡುವುದಕ್ಕೆ ಹಣ ನೀಡಬೇಕು!


Click it and Unblock the Notifications








