ಗೂಗಲ್ ಪೇನಲ್ಲಿ ಕ್ರಿಕೆಟ್ ಆಡಿ ದುಡ್ಡು ಗೆಲ್ಲಿ!!
ತನ್ನ ಬಳಕೆದಾರರಿಗೆ ಹೊಸ ಸೇವೆಗಳನ್ನು ಪರಿಚಯಿಸುವಲ್ಲಿ ಯಾವಾಗಲೂ ಮುಂದಿರುವ ಸರ್ಚ್ ಇಂಜಿನ್ ದೈತ್ಯ ಗೂಗಲ್, ಈಗ ಮತ್ತೊಂದು ಹೊಸ ಆಕರ್ಷಣೆಯೊಂದಿಗೆ ಜನರ ಮುಂದೆ ಬಂದದಿದೆ. ಹೌದು, ತನ್ನ ಗೂಗಲ್ ಪೇ ಆಪ್‌ನಲ್ಲಿ ತೇಜ್ ಶಾಟ್ಸ್ ಎಂಬ ಮಿನಿ ಗೇಮ್‌ನ್ನು ಪರಿಚಯಿಸಿರುವ ಗೂಗಲ್ ಬಳಕೆದಾರರಿಗೆ ಹೊಸತನದ ಅನುಭೂತಿ ನೀಡುತ್ತಿದೆ.
ಗೂಗಲ್ ಇಂಡಿಯಾದ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಗೂಗಲ್, ನಿಮ್ಮನ್ನು ಪಿಚ್ ಕರೆಯುತ್ತಿದ್ದು, ನೀವು ಆಡಲೇಬೇಕು. ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಗೂಗಲ್ ಪೇ ಆಪ್‌ನಲ್ಲಿ ತೇಜ್ ಶಾಟ್ಸ್ ಆಟ ಆಡಿ, ರನ್ ಸ್ಕೋರ್ ಮಾಡಿ ಸ್ಕ್ರಾಚ್ ಕಾರ್ಡ್ ಗೆಲ್ಲಿ ಎಂದು ಹೇಳಿರುವ ಗೂಗಲ್ ಇಂಡಿಯಾ, ಬಳಕೆದಾರರಿಗೆ ಟಿಪ್ಸ್ ಕೂಡ ಕೊಟ್ಟಿದ್ದು, ನಿಮ್ಮ ಬೆರಳುಗಳು ಫ್ಲೆಕ್ಸಿಬಲ್ ಆಗಿದ್ದರೆ ನೀವು ಉತ್ತಮವಾದ ಹೊಡೆತವನ್ನು ಹೊಡೆಯಬಹುದು ಎಂದಿದೆ.

ತೇಜ್ ಶಾಟ್ಸ್
ತೇಜ್ ಶಾಟ್ಸ್ ಗೇಮ್ ಬಳಕೆದಾರರು ಗೂಗಲ್ ಪೇನಲ್ಲಿ 3,300 ರೂ. ಮೌಲ್ಯದ ಸ್ಕ್ರಾಚ್ ಕಾರ್ಡ್ ಗೆಲ್ಲಬಹುದಾಗಿದೆ. ಬಳಕೆದಾರರು ಸ್ಕ್ರಾಚ್ ಕಾರ್ಡ್‌ನ್ನು ಗೆಲ್ಲಲು ಹೆಚ್ಚು ರನ್ ಗಳಿಸಬೇಕಾಗಿದೆ. ಹೆಚ್ಚು ರನ್ ಗಳಿಸಲು ಬಹಳಷ್ಟು ಸಲ ನೀವು ತೇಜ್ ಶಾಟ್ಸ್ ಗೇಮ್ ಆಡಬೇಕಾಗುತ್ತದೆ. ಆಟಗಾರರು ಕೇವಲ್ ಬಾಲ್‌ನ್ನು ಹೊಡೆದರೆ ಸಾಕು, ರನ್‌ಗಳು ಬಂದ ನಿಮ್ಮ ಸ್ಕೋರ್ ಬೋರ್ಡ್‌ನಲ್ಲಿ ದಾಖಲಾಗುತ್ತವೆ. ಇಷ್ಟೇ ಅಲ್ಲದೇಏ ಈ ಗೇಮ್ ಉತ್ತಮ ಸ್ಕೋರ್, ಆಲ್ ಇಂಡಿಯಾ ರ್ಯಾಂಕಿಂಗ್ ಮತ್ತು ಒಟ್ಟು ಸ್ಕೋರ್‌ನ್ನು ನಿಮಗೆ ತೋರಿಸುತ್ತದೆ.

ಸ್ಕ್ರಾಚ್ ಕಾರ್ಡ್ ಹೇಗೆ ಪಡೆಯುವುದು..?
- ಬಳಕೆದಾರರು ಗೇಮ್ ಆಡುವ ಮೂಲಕ ಹೆಚ್ಚು ಸ್ಕೋರ್ ಮಾಡಬಹುದಾಗಿದೆ. ನೀವೆಷ್ಟು ಗೇಮ್‌ಗಳನ್ನು ಆಡಿರುತ್ತಿರೋ ಅದರಲ್ಲಿ ಗಳಿಸಿರುವ ರನ್‌ಗಳ ಸರಾಸರಿ ಒಟ್ಟು ಸ್ಕೋರ್ ಆಗಿರುತ್ತದೆ.
- ಮೈಲ್‌ಸ್ಟೋನ್‌ನಲ್ಲಿ ಸೂಚಿಸಿರುವ ಒಟ್ಟು ಸ್ಕೋರ್ ಮುಟ್ಟಿದಾಗ ನೀವು ಸ್ಕ್ರಾಚ್ ಕಾರ್ಡ್ ಗೆಲ್ಲಬಹುದಾಗಿದೆ. (100 ರನ್‌ಗೆ 50 ರೂ., 500 ರನ್‌ಗೆ 100 ರೂ., 1000 ರನ್‌ಗೆ 150 ರೂ., 2000 ರನ್‌ಗೆ 1000 ರೂ., 3000 ರನ್‌ಗೆ 2000 ರೂ.)
- ಮೇಲೆ ತಿಳಿಸಿದ ಆರ್ಡರ್‌ನಲ್ಲಿ ಸ್ಕ್ರಾಚ್ ಕಾರ್ಡ್ ಅನ್‌ಲಾಕ್ ಮಾಡಿ ರೀವಾರ್ಡ್‌ಗಳನ್ನು ಯಶಸ್ವಿಯಾಗಿ ಪಡೆಯಬಹುದು. ಈ ಆಫರ್ ಜುಲೈ 31 ರವರೆಗೆ ಚಾಲ್ತಿಯಲ್ಲಿದೆ.

ಈ ಗೇಮ್ ಕೇವಲ ಆಂಡ್ರಾಯ್ಡ್‌ನಲ್ಲಿ ಗೂಗಲ್ ಪೇ ಬಳಸುವ ಗ್ರಾಹಕರಿಗೆ ಮಾತ್ರ ಲಭ್ಯವಿದೆ.
ಇನ್ನು, ಇತ್ತೀಚಿನ ವರದಿಯಂತೆ ಗೂಗಲ್ ಪೇ UPI ವೇದಿಕೆಯಲ್ಲಿ ಮೊದಲನೇ ಸ್ಥಾನ ಹೊಂದಿದ್ದು, ಸುಮಾರು ಶೇ.25ರಷ್ಟು UPI ವ್ಯವಹಾರ ಗೂಗಲ್ ಪೇ ಮೂಲಕ ನಡೆದಿದೆ. ಮಾರ್ಚ್‌ನಲ್ಲಿ 43 ರಿಂದ 45 ಸಾವಿರ ಕೋಟಿ ರೂ. ವ್ಯವಹಾರವನ್ನು ಗೂಗಲ್ ಪೇ ನಡೆಸಿದ್ದರೆ, ಪೋನ್ ಪೇ ಮತ್ತು ಪೇಟಿಎಂ ತಲಾ 31 ರಿಂದ 32 ಸಾವಿರ ಕೋಟಿ ರೂ. ವಹಿವಾಟು ನಡೆಸಿವೆ. ಇನ್ನು ಪೇಟಿಎಂಗಿಂತ ಪೋನ್ ಪೇ ಸ್ವಲ್ಪ ಮುಂದಿದೆ ಎಂದು ವರದಿ ತಿಳಿಸುತ್ತದೆ.


Click it and Unblock the Notifications








