ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೂ ಈಗ ಸುಲಭವಾಗಿ ಲಭ್ಯ ಶಿಯೋಮಿ 'ಪೊಕೊ ಲಾಂಚರ್'.!!
ಭಾರತದಲ್ಲಿ ನಂ 1 ಮೊಬೈಲ್ ಬ್ರ್ಯಾಂಡ್ ಕಂಪೆನಿ ಶಿಯೋಮಿ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೊಂದು ಸಿಹಿಸುದ್ದಿ ನೀಡಿದೆ. ಶಿಯೋಮಿಯ 'ಪೊಕೊ ಲಾಂಚರ್' ಈಗ ಪ್ರತಿ ಶಿಯೋಮಿ ಸ್ಮಾರ್ಟ್‌ಫೋನ್ ಬಳಕೆದಾರರ ಜೊತೆಗೆ ಇತರೆ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೂ ಈಗ ಲಭ್ಯವಿದೆ. ಅಂದರೆ, ಗೂಗಲ್ ಪ್ಲೇಸ್ಟೋರ್‌ನಲ್ಲಿ ಈಗ ಪೊಕೊ ಲಾಂಚರ್ ಬೀಡುಬಿಟ್ಟಿದೆ.!
ಹೌದು, ಆಂಡ್ರಾಯ್ಡ್ ಓರಿಯೊ ಆಧರಿಸಿ ಕೆಲವು ಹೆಚ್ಚುವರಿ ಕಸ್ಟಮೈಸೇಷನ್‌ಗಳೊಂದಿಗೆ ಬಂದಿರುವ 'ಪೊಕೊ ಲಾಂಚರ್' ಈ ಮೊದಲೇ ಬಳಕೆಗೆ ಲಭ್ಯವಿತ್ತು. ಆದರೆ, ಇದನ್ನು ಡೌನ್‌ಲೋಡ್ ಮಾಡುವುದು ಕಷ್ಟವಾಗಿತ್ತು. ಈಗ ಗೂಗಲ್ ಪ್ಲೇ ಸ್ಟೋರ್‌ನಲ್ಲೇ 'ಪೊಕೊ ಲಾಂಚರ್' ಲಭ್ಯವಿದ್ದು, ಈಗ ಪೊಕೊ ಲಾಂಚರ್ ಆಪ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

MIUI ಲಾಂಚರ್‌ಗೆ ಹೋಲಿಸಿದರೆ, ಪೊಕೊ ಎಫ್ 1 ಸ್ಮಾರ್ಟ್‌ಫೋನಿನೊಂದಿಗೆ ಬಂದಿರುವ ಲಾಂಚರ್ ಹೊಸ ಮತ್ತು ಸುಧಾರಿತ ಅಪ್ಲಿಕೇಶನ್ ಸರ್ಚ್ ಅಲ್ಗಾರಿದಮ್ ಅಪ್ಲಿಕೇಶನ್ ಟ್ರೇನೊಂದಿಗೆ ಬಂದಿದೆ. ಹಾಗಾದರೆ, ಪೊಕೊ F1 ನೊಂದಿಗೆ ಬಂದಿರುವ 'ಪೊಕೊ ಲಾಂಚರ್' ಅನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಬಳಸುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೇಗಿದೆ 'ಪೊಕೊ ಲಾಂಚರ್' ?
ಗೂಗಲ್ ಪ್ಲೇಸ್ಟೋರ್‌ನಲ್ಲಿ 4.4 ರೇಟಿಂಗ್ ಪಡೆದಿರುವ 'ಪೊಕೊ ಲಾಂಚರ್' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಾಗಿ ಸಂಪೂರ್ಣ ವೈಶಿಷ್ಟ್ಯಗೊಳಿಸಿದ ಗ್ರಾಹಕ ಲಾಂಚರ್ ಆಗಿದೆ. ಆಪ್ ಅನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, ಅತೀ ವೇಗದ ಮತ್ತು ಸುರಕ್ಷಿತ ಆಪ್ ಆಗಿದೆ. ಕೇವಲ 14MB ಗ್ರಾತ್ರದ ಈ ಆಪ್ ಸ್ಮಾರ್ಟ್‌ಫೋನ್‌ಗೂ ಕೂಡ ಭಾರವಾಗುವುದಿಲ್ಲ.
'ಪೊಕೊ ಲಾಂಚರ್' ಇನ್‌ಸ್ಟಾಲ್ ಹೇಗೆ?
ಗೂಗಲ್ ಪ್ಲೇ ಸ್ಟೋರ್ ಅನ್ನು ತೆರೆದು ಪೊಕೊ ಲಾಂಚರ್ ಎಂದು ಟೈಪಿಸಿ ಸರ್ಚ್ ಮಾಡಿ. ನಂತರ ಪೊಕೊ ಲಾಂಚರ್ ಎಂಬ ಆಪ್ ತೆರೆದುಕೊಳ್ಳುತ್ತದೆ. ಹೀಗೆ ಮಾಡಿದ ನಂತರ ನಿಮ್ಮ ಸ್ಮಾರ್ಟ್‌ಫೋನಿಗೆ ಪೊಕೊ ಲಾಂಚರ್ ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ಆಪ್ ಅನ್ನು ತೆರೆದು ನಿಮ್ಮ ಫೋನ್ ಡಿಫಾಲ್ಟ್ ಲಾಂಚರ್ ಆಗಿ ನೀವು ಸ್ಥಾಪಿಸಿಕೊಳ್ಳಬಹುದು.


Click it and Unblock the Notifications








