Subscribe to Gizbot

ಸ್ಮಾರ್ಟ್‌ಫೊನ್ ಹ್ಯಾಕ್ ಆಗದಿರಲು ಏನು ಮಾಡಬೇಕು? ಪ್ರತಿಯೊಬ್ಬರೂ ತಿಳಿಯಲೇಬೇಕಾದ ಮಾಹಿತಿ ಇದು!!

Written By:

ಸ್ಮಾರ್ಟ್‌ಫೊನ್ ಹ್ಯಾಕಿಂಗ್ ಪ್ರಕರಣಗಳು ಪ್ರತಿದಿನ ನಮಗೆ ತಿಳಿಯುತ್ತಲೇ ಇರುತ್ತವೆ ಆದರೆ, ನಾವು ಮಾತ್ರ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ! ಏಕೆಂದರೆ ನಮ್ಮ ಫೋನ್ ಹ್ಯಾಕ್‌ಮಾಡಿ ಅವರು ಏನ್‌ಮಾಡ್ತಾರೆ ಅಂತ ಭಂಡ ಧೈರ್ಯ ಅದು!! ಇಲ್ಲಯವರೆಗೂ ಬಿಡಿ. ಆದರೆ ಇನ್ನುಂದೆ ನಿಮ್ಮ ಸ್ಮಾರ್ಟ್‌ಫೊನ್ ಹ್ಯಾಕ್ ಆಗದಂತೆ ನೋಡಿಕೊಳ್ಳಿ ಯಾಕೆ ಗೊತ್ತಾ? ಹ್ಯಾಕರ್ಸ್ ದೊಡ್ಡ ದೊಡ್ಡ ಉಧ್ಯಮಿಗಳನ್ನು ಮಾತ್ರ ಯಾಮಾರಿಸಲು ಪ್ರಯತ್ನಿಸುವುದಿಲ್ಲ. ಸಣ್ಣಮೊತ್ತ ಹೊಂದಿರುವ ಸಾಮಾನ್ಯರನ್ನು ಸಹ ಯಾಮಾರಿಸಲು ಪ್ರಯತ್ನಿಸುತ್ತಾರೆ. ಇಂತವರು ತಮ್ಮ ದಾಖಲೆಗಳನ್ನು ಹೆಚ್ಚು ರಕ್ಷಿಸಿಕೊಂಡಿರುವುದಿಲ್ಲ ಎಂದು ಅವರು ತಿಳಿದಿರುತ್ತಾರೆ! ಉದಾಹಣೆಯಾಗಿ ಇಂತಹ ಒಂದು ಘಟನೆ ಇತ್ತೀಚಿಗೆ ನಗರದಲ್ಲಿ ನಡೆದಿದೆ!!. ಮುಂದೆ ಓದಿ

ಸ್ಮಾರ್ಟ್‌ಫೊನ್ ಹ್ಯಾಕ್ ಆಗದಿರಲು ಏನು ಮಾಡಬೇಕು? ಪ್ರತಿಯೊಬ್ಬರೂ ತಿಳಿಯಲೇಬೇಕು!!

ಸೆಕೆಂಡ್ಸ್‌ನಲ್ಲಿ ಮೊಬೈಲ್ ಬ್ಯಾಟರಿ ಫುಲ್: ವಿಸ್ಮಯಗೊಳಿಸುವ ಟೆಕ್ನಾಲಜಿ ಯಾವುದು ಗೊತ್ತಾ?

ಇತ್ತೀಚಿನ ಹ್ಯಾಕಿಂಗ್ ಪ್ರಕರಣ ಒಂದರಲ್ಲಿ ರಮೇಶ್ ( ಹೆಸರು ಬದಲಿಸಲಾಗಿದೆ) ಎನ್ನುವವರಿಗೆ ಹ್ಯಾಕರ್ಸ್ ಯಾಮಾರಿದ್ದಾರೆ. ನಾವು ಬ್ಯಾಂಕ್‌ನಿಂದ ಕರೆ ಮಾಡಿದ್ದು ನಿಮ್ಮ ಪಿನ್ ಸಂಖ್ಯೆ ಬದಲಿಸಬೇಕಿದೆ. ಹಾಗಾಗಿ ನಿಮ್ಮ ಪ್ರಸ್ತುತ ಇರುವ ಪಿನ್‌ ಸಂಖ್ಯೆ ತಿಳಿಸಿ ಎಂದು ಕೇಳಿದ್ದಾರೆ. ಕರೆ ಮಾಡಿದವರು ಬ್ಯಾಂಕ್‌ನವರು ಎಂದು ನಂಬಿದ ರಮೇಶ್ ಏಕಾಏಕಿ ಪಿನ್ ಸಂಖ್ಯೆ ತಿಳಿಸಿದ ಕೆಲವೇ ನಿಮಿಷಗಳಲ್ಲಿ ಅವರ ಅಕೌಂಟ್‌ನಿಂದ 2 ಲಕ್ಷರೂಪಾಯಿಗಳು ಡ್ರಾ ಆಗಿದೆ.

ಬ್ಯಾಂಕ್ ಎಟಿಎಂ ಕಾರ್ಡ್ ಇವರ ಬಳಿ ಇದ್ದರೂ ಇವರ ಸ್ಮಾರ್ಟ್‌ಫೊನ್ ಹ್ಯಾಕ್ ಮಾಡಿ ಆ ಹಣ ಕದ್ದವರ್ಯಾರು? ಮತ್ತೆಹಣ ಸಿಗುತ್ತದೆಯೋ ಗೊತ್ತಿಲ್ಲಾ! ಸಿಕ್ಕರು ಅದು ನಿಮ್ಮ ಸಮಯಕ್ಕಲ್ಲ!! ಹಾಗಾಗಿ ನೀವು ಹುಷಾರಾಗಿರಿ. ಇಂತಹ ಹ್ಯಾಕರ್ಸ್‌ಗಳಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಾಸ್‌ವರ್ಡ್ ಶಕ್ತಿಯುತವಾಗಿರಲಿ!!

ಪಾಸ್‌ವರ್ಡ್ ಶಕ್ತಿಯುತವಾಗಿರಲಿ!!

ಈ ಪಾಸ್‌ವರ್ಡ್ ಇದ್ದರೆ ಮೊಬೈಲ್‌ ಉಪಯೋಗಿಸುವುದು ಕಷ್ಟ ಎಂದು ಸುಲಭ ಪಾಸ್‌ವರ್ಡ್‌ಗಳನ್ನು ಇಡಬೇಡಿ. 123, 0000, 12345, ಅಥವಾ ನಿಮ್ಮ ಹುಟ್ಟಿದ ದಿನಾಂಕ, ನಿಮ್ಮ ಮೊಬೈಲ್‌ನಂಬರ್‌ಗಳನ್ನು ಪಾಸ್‌ವರ್ಡ್ ಆಗಿ ಇಡಬೇಡಿ.

ನಿಮ್ಮ ಮೊಬೈಲ್ ಎನ್ಕ್ರಿಪ್ಟ್ ಮಾಡಿ

ನಿಮ್ಮ ಮೊಬೈಲ್ ಎನ್ಕ್ರಿಪ್ಟ್ ಮಾಡಿ

ನೀವು ಐಫೋನ್‌ ಬಳಕೆದಾರರಾಗಿದ್ದರೆ ನಿಮ್ಮ ಮೊಬೈಲ್ ಎನ್ಕ್ರಿಪ್ಟ್ ಆಗಿರುತ್ತದೆ. ಆದರೆ ಇತ್ತೀಚಿಗೆ ಬರುವ ಮೊಬೈಲ್‌ಗಳಲ್ಲಿ ನೀವೆ ಎನ್ಕ್ರಿಪ್ಟ್ ಆಗಬೇಕಿದೆ. ಇತ್ತೀಚಿಗಷ್ಟೆ ವಾಟ್ಸ್ಆಪ್ ಎನ್ಕ್ರಿಪ್ಟ್ ಇನ್‌ಸ್ಟಾಲ್‌ಮಾಡಿಕೊಂಡಿತು.

ಸಾಫ್ಟವೇರ್ ಅಪ್‌ಡೇಟ್ ಮಾಡಿ

ಸಾಫ್ಟವೇರ್ ಅಪ್‌ಡೇಟ್ ಮಾಡಿ

ಹ್ಯಾಕರ್ಸ್‌ಗಳಿಂದ ತಪ್ಪಿಸಿಕೊಳ್ಳುವ ಸುಲಭ ಉಪಾಯ ಎಂದರೆ ನಿಮ್ಮ ಮೊಬೈಲ್‌ ಸಾಫ್ಟವೇರ್ ಅಪ್‌ಡೇಟ್ ಮಾಡಿಕೊಳ್ಳುತ್ತಿರುವುದು. ಹೊಸ ಸಾಫ್ಟವೇರ್ ಅಪ್‌ಡೇಟ್ ಆದರೆ ಹ್ಯಾಕರ್ಸ್ ಕೆಲಸ ಹೆಚ್ಚು ನಡೆಯೊಲ್ಲಾ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Just in case you're doubting your smartphone is prone to hacking, try out these simple tips to protect your smartphone from hackers.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot