ಕ್ವಾಲ್‌ಕಾಮ್ ಟಾಕ್‌ನ ಮನಸೆಳೆಯುವ ಫೀಚರ್‌ಗಳು

By Shwetha
|

ನಿಮಗೆಲ್ಲಾ ತಿಳಿದಿರುವಂತೆ ಹೆಚ್ಚಿನ ಸ್ಮಾರ್ಟ್‌ಫೋನ್ ಕಂಪೆನಿಗಳು ತಮ್ಮ ದೃಷ್ಟಿಯನ್ನು ವೇರಿಯೇಬಲ್‌ಗಳ ಮೇಲೆ ನೆಟ್ಟಿದ್ದು ನಾ ಮುಂದು ತಾ ಮುಂದು ಎಂದು ಸ್ಮಾರ್ಟ್‌ವಾಚ್ ತಯಾರಿಯಲ್ಲಿ ಪೈಪೋಟಿಯನ್ನು ನೀಡುತ್ತಿವೆ.

ಸ್ಮಾರ್ಟ್‌ವಾಚ್ ತಯಾರಿಯಲ್ಲಿ ಎತ್ತಿದ ಕೈ ಎಂದೇ ಹೆಸರು ಮಾಡಿದವು ಸ್ಯಾಮ್‌ಸಂಗ್ ಮತ್ತು ಫೆಬಲ್. ಇದರೊಂದಿಗೆ ಜಪಾನೀ ಕಂಪೆನಿ ಸೋನಿ ಕೂಡ ತನ್ನ ಹೆಸರನ್ನು ಈ ಪಟ್ಟಿಗೆ ಕಳೆದ ವರ್ಷ ಸೇರಿಸಿಕೊಂಡಿದೆ. ಇವುಗಳೊಂದಿಗೆ ತನ್ನ ಹೆಸರನ್ನು ಬಹಿರಂಗಪಡಿಸಿ ಹೆಚ್ಚು ಕಡಿಮೆ ಯಶಸ್ಸನ್ನು ಗಳಸಿದ ಕ್ವಾಲ್‌ಕಾಮ್ ಕ್ವಾಲ್‌ಕಾಮ್ ಟಾಕ್ ಹೆಸರಿನಿಂದ ತನ್ನ ವೇರಿಯೇಬಲ್ ಅನ್ನು ಮಾರುಕಟ್ಟೆಗೆ ತಂದಿತು.

ಜೆಲ್ಲಿ ಬೀನ್ ಆವೃತ್ತಿ 4.0.3 ಮತ್ತು ಓಎಸ್‌ನ ನಂತರದ ಆವೃತ್ತಿ ಇರುವ ಆಂಡ್ರಾಯ್ಡ್ ಫೋನ್‌ಗಳಲ್ಲಿ ಸಂಯೋಜನೆಗೊಳ್ಳುವ ಟಾಕ್ ಇದರ ವಿಭಾಗಗಳನ್ನು ನಿಮಗೆ ನೇರವಾಗಿ ಸೂರ್ಯನ ಬೆಳಕಿನಡಿಯಲ್ಲಿ ನೋಡಬಹುದಾಗಿದೆ. ಇದು ಧ್ವನಿ ಗುರುತಿಸುವಿಕೆ ತಂತ್ರಜ್ಞಾನವನ್ನು ಹೊಂದಿದ್ದು ಯಾವುದೇ ಬೆಳಕಿಲ್ಲದಿದ್ದರೂ ತನ್ನ ಬ್ಯಾಕ್‌ಲೈಟ್ ಫೀಚರ್‌ನಿಂದ ಕಾರ್ಯನಿರ್ವಹಿಸುತ್ತದೆ.

ಇಂದಿನ ವಿಮರ್ಶಾತ್ಮಕ ಲೇಖನದಲ್ಲಿ ಈ ವೇರಿಯೇಬಲ್ ಕುರಿತ ಮತ್ತಷ್ಟು ಮಾಹಿತಿಯನ್ನು ನಾವು ಕೆಳಗಿನ ಸ್ಲೈಡ್‌ಗಳಲ್ಲಿ ನೀಡಿದ್ದು ಇದರ ವಿಶೇಷತೆಯನ್ನು ನಿಮಗೆ ತಿಳಿದುಕೊಳ್ಳಬಹುದು.

#1

#1

ಕ್ವಾಲ್‌ಕಾಮ್ ಟಾಕ್ 1.55 ಇಂಚಿನ ಮಿರಾಸಲ್ ಡಿಸ್‌ಪ್ಲೇಯನ್ನು ಹೊಂದಿದ್ದು 288x192 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ನೀಡುತ್ತದೆ. ಇದರಲ್ಲಿ ಕ್ವಾಲ್‌ಕಾಮ್ ಓಎಸ್ ಚಾಲನೆಯಾಗುತ್ತದೆ. 200 MHz Cortex-M3 ಮೈಕ್ರೋಕಂಟ್ರೋಲರ್ ಇದರಲ್ಲಿದ್ದು ಬ್ಯಾಟರಿ ಸಾಮರ್ಥ್ಯ 240mAh ಆಗಿದೆ. ಇದನ್ನು ಕ್ವಾಲ್‌ಕಾಮ್‌ನ ವೈಪವರ್ ಬಾಕ್ಸ್ ಮೂಲಕ ವೈರ್‌ಲೆಸ್ ಆಗಿ ಚಾರ್ಜ್ ಕೂಡ ಮಾಡಬಹುದಾಗಿದೆ. ಬ್ಲೂಟೂತ್ 3.0 ಇದರಲ್ಲಿ ಸಂಪರ್ಕಗೊಳ್ಳುತ್ತದೆ.

#2

#2

ಇದು ದೊಡ್ಡದಾದ ಡಿಸ್‌ಪ್ಲೇಯನ್ನು ಹೊಂದಿದ್ದು ಸ್ಕ್ವಾರಿಶ್ ಡಿಸ್‌ಪ್ಲೇಯೊಂದಿಗೆ ಸೋನಿಯ ಸ್ಮಾರ್ಟ್‌ವಾಚ್‌ಗಳಿಗೆ ಹೆಚ್ಚು ಸಮಾನಾಂತರವಾಗಿದೆ. ಇದು ಬಳಕೆದಾರರಿಗೆ ಉತ್ತಮವಾಗಿ ಪರದೆಯನ್ನು ವೀಕ್ಷಿಸಲು ಮತ್ತು ಸೂಚನೆಗಳನ್ನು ಓದಲು ಅನುವು ಮಾಡಿಕೊಡುತ್ತದೆ.

#3

#3

ಕ್ವಾಲ್‌ಕಾಮ್ ಟಾಕ್ ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದ್ದು ಹೆಚ್ಚಿನ 240mAh ಚಾಲಿತ ಬ್ಯಾಟರಿ ಶಕ್ತಿಯೊಂದಿಗೆ ಬಂದಿದೆ. ಬ್ಯಾಟರಿ ಉಳಿತಾಯವನ್ನು ಕ್ವಾಲ್‌ಕಾಮ್ ಅಧಿಕ ಪ್ರಮಾಣದಲ್ಲಿ ಮಾಡುತ್ತದೆ.

#4

#4

ಕ್ವಾಲ್‌ಕಾಮ್ ಟಾಕ್ ಬಳಕೆದಾರ ಸ್ನೇಹಿತ ಮೈಕ್ರೋಸಲ್ ಡಿಸ್‌ಪ್ಲೇಯನ್ನು ಬಳಸುತ್ತಿದ್ದು ಇದರ ಪರದೆ ಯಾವಾಗಲೂ ಚಾಲನೆಯಲ್ಲಿರುತ್ತದೆ ನೀವು ಇದರ ಪರದೆಯನ್ನು ನೋಡಲು ಇದನ್ನು ಪದೇ ಪದೇ ಆನ್ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ. ಬೆಳಕಿನ ಸ್ವೀಕೃತಿಗಳಿಂದ ಇದರ ಡಿಸ್‌ಪ್ಲೇಯಲ್ಲಿನ ಬೆಳಕನ್ನು ಯಾವಾಗಲೂ ಹೊಂದಿಸಲಾಗುತ್ತದೆ.

#5

#5

ಕ್ವಾಲ್‌ಕಾಮ್ ಟಾಕ್ ಬಿಲ್ಟ್ ಇನ್ ಹಾರ್ಡ್‌ವೇರ್ ಮತ್ತು ಫೀಚರ್‌ಗಳನ್ನು ಹೊಂದಿಲ್ಲದಿರುವುದರಿಂದ ಹೆಚ್ಚಿನ ಕಾರ್ಯಗಳನ್ನು ಮಾಡಲು ನೀವು ಅಪ್ಲಿಕೇಶನ್‌ಗಳನ್ನು ಬಳಸುವುದು ಅನಿವಾರ್ಯವಾಗಿರುತ್ತದೆ. ಇದು ಹೃದಯ ಬಡಿತ ಎಣಿಕೆಯನ್ನೂ ಕೂಡ ನೀಡುವುದಿಲ್ಲ. ನಿಮ್ಮ ಪೇರೆಂಟ್ ಫೋನ್‌ನಲ್ಲಿ ಸ್ಥಾಪಿತ ಸರಿಯಾದ ಅಪ್ಲಿಕೇಶನ್‌ಗಳನ್ನು ನೀವು ಹೊಂದಿದ್ದರೆ ಮಾತ್ರ ಇದು ಇತರ ವೇರಿಯೇಬಲ್‌ಗಳಂತೆ ವಿಶೇಷ ಫೀಚರ್‌ಗಳನ್ನು ಕಾರ್ಯರೂಪಕ್ಕೆ ತರುತ್ತದೆ.

<center><iframe width="100%" height="510" src="//www.youtube.com/embed/srM-ej3di38" frameborder="0" allowfullscreen></iframe></center>

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X