ಈ ಟ್ರಿಕ್ಸ್ ತಿಳಿದಿದ್ದರೆ ನೀವೇ ನಿಮ್ಮ ಸ್ಮಾರ್ಟ್‌ಫೋನ್ ವೇಗವನ್ನು ಹೆಚ್ಚಿಸಬಹುದು!!
ನೀವು ಒಂದು ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ ಕೇವಲ ಮೂರು ತಿಂಗಳಿನ ಒಳಗೆ ಆ ಸ್ಮಾರ್ಟ್‌ಫೋನಿನ ಕಾರ್ಯನಿರ್ವಹಣಾ ವೇಗ ಕಡಿಮೆಯಾಗುತ್ತದೆ. ಪೋನ್ ಖರೀದಿಸಿದ ಹೊಸದರಲ್ಲಿ ನಿಮ್ಮ ತಪ್ಪು ಬಳಕೆಯಿಂದಲೋ ಅಥವಾ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಮೇಲೆ ಹೆಚ್ಚು ಒತ್ತಡ ಬೀಳುವುದರಿಂದಲೋ ನಿಮ್ಮ ಸ್ಮಾರ್ಟ್‌ಫೋನ್ ನಿಧಾನವಾಗಿರುತ್ತದೆ ಎನ್ನಬಹುದು.
ಹಾಗಾಗಿಯೇ, ಹಳೆಯ ಸ್ಮಾರ್ಟ್‌ಪೋನ್‌ಗಳ ವೇಗ ವೃದ್ಧಿಸುವ ಸಲುವಾಗಿ ಆಪರೇಟಿಂಗ್ ಸಿಸ್ಟಂ ತಜ್ಞರು ಹಲವು ಮಾಹಿತಿಗಳನ್ನು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೀಡಿದ್ದಾರೆ. ಯಾವುದೇ ಒಂದು ಸ್ಮಾರ್ಟ್‌ಫೋನ್ ಸ್ಲೋ ಆಗಲು ಕಾರಣಗಳೇನು ಮತ್ತು ಸ್ಮಾರ್ಟ್‌ಫೋನ್ ವೇಗವನ್ನು ಹೆಚ್ಚಿಸಲು ಇರುವ ಸುಲಭ ಪರಿಹಾರಗಳು ಯಾವುವು ಎಂಬುದನ್ನು ನಮಗೆ ತಿಳಿಸಿಕೊಟ್ಟಿದ್ದಾರೆ.

ಅವರು ತಿಳಿಸಿರುವ ಪರಿಹಾರಗಳಿಂದ ಸ್ಮಾರ್ಟ್‌ಫೋನ್ ಅನ್ನು ರಿಪೇರಿ ಮಾಡಿಸದೆಯೇ, ನಾವುಗಳೇ ಕೆಲವು ಟ್ರಿಕ್ಸ್ ಮೂಲಕ ಹಳೆಯ ಫೋನ್ ವೇಗವನ್ನು ಹೆಚ್ಚಿಸಬಹುದಾಗಿದೆ. ಹಾಗಾದರೆ, ತಜ್ಞರು ಹೇಳಿದಂತೆ ನಮ್ಮ ಹಳೆ ಸ್ಮಾರ್ಟ್‌ಫೋನ್ ವೇಗವನ್ನು ಹೆಚ್ಚಿಸಲು ನಾವೇನು ಮಾಡಬೇಕು? ಇದಕ್ಕಿರುವ ಪರಿಹಾರಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಕ್ಲೀನಿಂಗ್ ಅಪ್ ಮಾಡಿ.
ದೀರ್ಘ ಅವಧಿಯಲ್ಲಿ ಕೆಲವು ಅನವಶ್ಯಕ ಫೈಲ್‌ಗಳು ಫೋನ್ ಮೆಮೊರಿಯಲ್ಲಿ ಸಂಗ್ರಹಗೊಂಡು ಮೊಬೈಲ್‌ನ ವೇಗ ಕುಂಠಿತವಾಗುತ್ತದೆ. ಹಾಗಾಗಿ, ಫೋನ್‌ನಲ್ಲಿರುವ ಅನವಶ್ಯಕ ಫೈಲ್‌ಗಳನ್ನು ಡಿಲೀಟ್ ಮಾಡಿ ಫೋನ್ ವೇಗವನ್ನು ಹೆಚ್ಚಿಸಬಹುದು. ಫೋನ್ ಸೆಟ್ಟಿಂಗ್ಸ್ ತೆರೆದು ಫೋನ್ ರಿಸೆಟ್ ಮಾಡಿದರೆ ಅನವಶ್ಯಕ ಫೈಲ್‌ಗಳು ಡಿಲೀಟ್ ಆಗಲಿದೆ. ಆದರೆ, ಫೋನ್ ರಿಸೆಟ್ ಮಾಡುವ ಮುನ್ನ ಉಪಯುಕ್ತ ಡೇಟಾವನ್ನು ಸೇವ್ ಮಾಡಿಕೊಳ್ಳಿ.!

ಕ್ಲೀನ್ ಇನ್‌ಸ್ಟಾಲ್ ಮಾಡಿ.
ಎಲ್ಲಾ ಮೊಬೈಲ್ ಕಂಪೆನಿಗಳು ಒಂದೆ ಕ್ಲಿಕ್‌ನಲ್ಲಿ ಹೊಸ ಆಪರೇಟಿಂಗ್ ಸಿಸ್ಟಂಗೆ ಅಪ್‌ಗ್ರೇಡ್ ಮಾಡಲು ಸೂಚಿಸುತ್ತವೆ. ಹಾಗಾಗಿ, ಮೊಬೈಲ್ ಅಪ್‌ಡೇಟ್ ಮಾಡುವ ಮುನ್ನ ನಿಮ್ಮೆಲ್ಲಾ ಮೊಬೈಲ್ ಡೇಟಾ ಖಾಲಿ ಮಾಡಿ ಅಪ್‌ಡೇಟ್ ಮಾಡಿ.ಮೊಬೈಲ್ ಅನ್ನು ಹಾಗೆಯೇ ಅಪ್‌ಡೇಟ್ ಮಾಡಿದರೆ ಒಎಸ್ ಕ್ರಾಶ್ ಆಗುವ ಸಂಭವ ಹೆಚ್ಚಿರುತ್ತದೆ.!

ಮೆಮೊರಿ ಬಗ್ಗೆ ಗಮನವಿರಲಿ.
16GB, 32GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇಂದು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್‌ನಿಂದಾಗಿ ಸ್ಮಾರ್ಟ್‌ಫೋನ್‌ಗಳು ನಿಧಾನವಾಗುತ್ತವೆ. ಹಾಗಾಗಿ, ಮೆಮೊರಿ ಇರುವ ಅರ್ಧಕ್ಕಿಂತ ಕಡಿಮೆ ಸ್ಟೋರೇಜ್ ಇರಲಿ.!

ಆನ್‌ಲೈನ್ ಸೇವೆ ಬಳಸಿಕೊಳ್ಳಿ.
ಯಾವುದೇ ಡಾಕ್ಯುಮೆಂಟ್ ಮತ್ತು ಇನ್ನಿತರ ಫೈಲ್‌ಗಳನ್ನು ಗೂಗಲ್ ಡ್ರೈವ್‌ನಂತಹ ಆನ್‌ಲೈನ್ ಸ್ಟೋರೇಜ್‌ನಲ್ಲಿ ಸೇವ್ ಮಾಡಿಕೊಳ್ಳಬಹುದು.ಇನ್ನು ಫೋಟೊಗಳು ಹೆಚ್ಚಿದ್ದಷ್ಟು ಫೋನ್ ನಿಧಾನವಾಗುವ ಸಾಧ್ಯತೆ ಇದ್ದು, ಫೋಟೊ ಲೈಬ್ರೆರಿಯನ್ನು ಗೂಗಲ್ ಫೋಟೊಸ್‌ನಂಥ ತಾಣಗಳಿಗೆ ಮೂವ್ ಮಾಡುವ ಮೂಲಕ ಮೆಮೊರಿ ಸಾಮರ್ಥ್ಯ ಹೆಚ್ಚಿಸಬಹುದು.!

ಕಡಿಮೆ ಆಪ್‌ಗಳನ್ನು ಬಳಸಿ.
ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡಬಹುದಾದ ಶಕ್ತಿ ಸ್ಮಾರ್ಟ್‌ಫೋನ್‌ಗಳಿಗಿದ್ದರೂ ಸಹ, ಒಮ್ಮೆಲೆ ಹೆಚ್ಚು ಆಪ್‌ಗಳನ್ನು ಬಳಕೆ ಮಾಡುವುದು ಫೋನ್ ಸ್ಲೋ ಆಗಲು ಕಾರಣವಾಗಿರುತ್ತದೆ. ಹಾಗಾಗಿ, ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡದಿರುವುದು ಒಳ್ಳೆಯದು.!


Click it and Unblock the Notifications








