Home
ಟೆಕ್ ನೌಕರಿ

RCB vs CSK: ಇಂದು ಬದ್ಧ'ವೈರಿ'ಗಳ ಫೈಟ್.. ಟಿಕೆಟ್ ಸೋಲ್ಡ್ ಔಟ್.. ರದ್ದಾಗುತ್ತಾ ಆರ್‌ಸಿಬಿ-ಸಿಎಸ್‌ಕೆ ಪಂದ್ಯ?

ಇಂದು ಆರ್‌ಸಿಬಿ ಮ್ಯಾಚ್ ಇದೆ ಮರೆಯಬೇಡಿ! ಐಪಿಎಲ್‌ನಲ್ಲಿ ಇಂದು (ಮೇ 3) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (RCB vs CSK) ನಡೆಯಲಿದೆ. ಈಗಾಗಲೇ 7 ಗೆಲುವುಗಳೊಂದಿಗೆ, ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸಮೀಪದಲ್ಲಿದೆ. ಇದರ ಜೊತೆಗೆ ತವರಿನಲ್ಲಿ ಸತತ 3 ಪಂದ್ಯಗಳ ಸೋಲಿನ ಅಭಿಯಾನವನ್ನು ಕಳೆದ ಪಂದ್ಯದಲ್ಲಿ ಮುರಿದಿದ್ದ ಆರ್‌ಸಿಬಿ, ಇದೀಗ ಚೆನ್ನೈ ವಿರುದ್ಧದ ಪಂದ್ಯದಲ್ಲಿ ತನ್ನ ಗೆಲುವಿನ ನಾಗಾಲೋಟ ಮುಂದುವರೆಸುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ.

ಚೆನ್ನೈ ಈಗಾಗಲೇ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದು, ಈ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಿದೆ. ಸಿಎಸ್‌ಕೆ ಆಡಿರುವ 10 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಸೋತಿದೆ. ಆದರೆ, ಈ ಪಂದ್ಯ ಆರ್‌ಸಿಬಿಗೆ ಮುಖ್ಯವಾದದ್ದು, ಏಕೆಂದರೆ ಆರ್‌ಸಿಬಿ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಹಾದಿಯಲ್ಲಿದೆ. ಬೆಂಗಳೂರು ತಂಡ ಆಡಿರುವ 10 ಪಂದ್ಯಗಳಲ್ಲಿ 7 ಗೆಲವು ದಾಖಲಿಸಿದೆ. ಮೂರು ಮ್ಯಾಚ್ ಸೋತಿದ್ದು, ಒಟ್ಟು 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯವನ್ನು ಗೆದ್ದರೆ ಮತ್ತೆ ಅಗ್ರಸ್ಥಾನಕ್ಕೇರುತ್ತದೆ. ಈ ಪಂದ್ಯ ಯಾವಾಗ? ನೇರಪ್ರಸಾರ ವೀಕ್ಷಣೆ ಹೇಗೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.

RCB vs CSK: ಬದ್ಧ'ವೈರಿ'ಗಳ ಫೈಟ್.. ಟಿಕೆಟ್ ಸೋಲ್ಡ್ ಔಟ್.. ರದ್ದಾಗುತ್ತಾ ಪಂದ್ಯ?

ರದ್ದಾಗುತ್ತಾ ಆರ್‌ಸಿಬಿ-ಸಿಎಸ್‌ಕೆ ಪಂದ್ಯ?

ಬೆಂಗಳೂರಿನಲ್ಲಿ ನಿನ್ನೆಯೂ ಭಾರೀ ಮಳೆ ಆಗಿದೆ. ಇವತ್ತು ಮತ್ತು ನಾಳೆಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ಹೀಗಾಗಿ ಇಂದಿನ ಆರ್‌ಸಿಬಿ ಮತ್ತು ಚೆನ್ನೈ ನಡುವಿನ ರೋಚಕ ಪಂದ್ಯಕ್ಕೆ ಮಳೆ ಕಾಟ ತಪ್ಪಿದ್ದಲ್ಲ. ಹವಾಮಾನ ವರದಿ ಪ್ರಕಾರ, ಸಂಜೆ ವೇಳೆ ಶೇ.60 ಹಾಗೂ ರಾತ್ರಿ 8 ರಿಂದ 11ರ ವರೆಗೆ ಶೇ.75 ರಷ್ಟು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

ಐಪಿಎಲ್‌ಗೆ ಧೋನಿ ವಿದಾಯ?

ಐಪಿಎಲ್‌ 2025ರ ಪ್ಲೇ ಆಪ್ ಲೆಕ್ಕಾಚಾರಗಳು ಆರಂಭವಾಗಿದೆ. ಈ ಟೂರ್ನಿಯಿಂದ ಚೆನ್ನೈ (CSK) ಅಧಿಕೃತವಾಗಿ ಹೊರಬಿದ್ದಿದೆ. ಐಪಿಎಲ್‌ಗೆ ಧೋನಿ ವಿದಾಯ ಹೇಳುತ್ತಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದ ಟಾಸ್ ವೇಳೆ ಡ್ಯಾನಿ ಮಾರಿಸನ್, ಇದು ನಿಮ್ಮ ಕೊನೆಯ ಸೀಸನ್ ಅಥವಾ ಮುಂದಿನ ಸೀಸನ್ ಆಡ್ತೀರಾ? ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಮಹೇಂದ್ರ ಸಿಂಗ್ ಧೋನಿ, ನಾನು ಮುಂದಿನ ಸೀಸನ್ ಅಲ್ಲ, ಮುಂದಿನ ಪಂದ್ಯಕ್ಕೆ ಬರುತ್ತೀನಾ ಎಂಬುದೇ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಈ ಉತ್ತರ ಅವರು ಐಪಿಎಲ್‌ಗೆ ವಿದಾಯ ಹೇಳಲಿದ್ದಾರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಐಪಿಎಲ್‌ನಲ್ಲಿ RCB vs CSK ಮುಖಾಮುಖಿ

ಒಟ್ಟು ಪಂದ್ಯಗಳು: 33
CSK ಗೆಲುವು: 21
RCB ಗೆಲುವು: 12

RCB vs CSK ಪಂದ್ಯದ ಟಿಕೆಟ್ ಸೋಲ್ಡ್ ಔಟ್!

ಆರ್​ಸಿಬಿ vs ಸಿಎಸ್​ಕೆ ಪಂದ್ಯದ ಅಂದರೆ ಕ್ರೇಜ್ ಬೇರೆ ಲೆವೆಲ್ ಇರುತ್ತದೆ. ಅದರಂತೆಯೇ ಈಗಾಗಲೇ ಆನ್‌ಲೈನ್‌ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಆದರೆ, ಈ ಅವಕಾಶವನ್ನೇ ಬಳಕೆ ಮಾಡಿಕೊಳ್ಳುತ್ತಿರುವರು ದುಪ್ಪಟ್ಟು ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕ್ರಿಕೆಟ್ ಪ್ರೇಮಿಗಳು ಬೇಸರಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಟಿಕೆಟ್ ದರ ಎಷ್ಟು?

* ಕೆಇಐ ವೈರ್ಸ್ ಅಂಡ್ ಕೇಬಲ್ಸ್ A ಸ್ಟ್ಯಾಂಡ್ = 2,300 ರೂ.

* ಪ್ಯೂಮಾ B ಸ್ಟ್ಯಾಂಡ್ = 3,300 ರೂ.

* ಬೋಟ್ C ಸ್ಟ್ಯಾಂಡ್ = 3300 ರೂ.

* ಕನ್ಫರ್ಮ್ ಟಿಕೆಟಿ D ಕಾರ್ಪೊರೇಟ್ = 3,300 ರೂ.

* ಕನ್ಫರ್ಮ್ ಟಿಕೆಟಿ GT ಅನೆಕ್ಸ್ = 4,000 ರೂ.

* ಕತಾರ್ ಏರ್‌ವೇಸ್ ಜಾವಗಲ್ ಶ್ರೀನಾಥ್ ಸ್ಟ್ಯಾಂಡ್ P1 = 6,000 ರೂ.

* ಕತಾರ್ ಏರ್‌ವೇಸ್ E ಎಕ್ಸಿಕ್ಯುಟಿವ್ ಲಾಂಜ್ = 10,000 ರೂ.

* ಬಿರ್ಲಾ ಎಸ್ಟೇಟ್ಸ್ ಬಿ.ಎಸ್ ಚಂದ್ರಶೇಖರ್ ಸ್ಟ್ಯಾಂಡ್ P ಟೆರೇಸ್ = 15,000 ರೂ.

* ಕೆಇಐ ವೈರ್ಸ್ ಅಂಡ್ ಕೇಬಲ್ಸ್ ಸೈಯ್ಯದ್ ಕಿರ್ಮಾನಿ ಸ್ಟ್ಯಾಂಡ್ P ಕಾರ್ಪೊರೇಟ್ = 25,000 ರೂ.

* ಕತಾರ್ ಏರ್‌ವೇಸ್ ರಾಹುಲ್ ದ್ರಾವಿಡ್ ಪ್ಲಾಟಿನಂ ಲಾಂಜ್ =25,000 ರೂ.

* ಕತಾರ್ ಏರ್‌ವೇಸ್ ಜಿ.ಆರ್ ವಿಶ್ವನಾಥ್ ಸ್ಟ್ಯಾಂಡ್ P2 = 42,000 ರೂ.

ಆರ್​ಸಿಬಿ vs ಸಿಎಸ್‌ಕೆ ಪಂದ್ಯದ ನೇರ ಪ್ರಸಾರದ ವಿವರಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಯಾವಾಗ ನಡೆಯಲಿದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ನಡುವಿನ ಪಂದ್ಯವು ಮೇ 3ರಂದು (ಇಂದು) ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಎಲ್ಲಿ ನಡೆಯಲಿದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಯಾವ ಸಮಯಕ್ಕೆ ಪ್ರಾರಂಭವಾಗುತ್ತದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವು ಸಂಜೆ 7:30 ಗಂಟೆಗೆ ಪ್ರಾರಂಭವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಟಾಸ್ ಪ್ರಕ್ರಿಯೆ ಯಾವಾಗ ನಡೆಯುತ್ತದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಟಾಸ್ ಪ್ರಕ್ರಿಯೆ ಸಂಜೆ 7.00 ಗಂಟೆಗೆ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವನ್ನು ಯಾವ ಟಿವಿ ಚಾನೆಲ್ ಪ್ರಸಾರ ಮಾಡಲಾಗುತ್ತದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್​ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ನೇರ ಪ್ರಸಾರವನ್ನು ಆನ್‌ಲೈನ್‌ನಲ್ಲಿ ಹೇಗೆ ವೀಕ್ಷಿಸಬಹುದು?

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವನ್ನು ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XII (ಸಂಭಾವ್ಯ)

ಫಿಲ್ ಸಾಲ್ಟ್ / ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ), ರೊಮಾರಿಯೊ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹೇಜಲ್‌ವುಡ್, ಸುಯಾಶ್ ಶರ್ಮಾ.

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XII (ಸಂಭಾವ್ಯ)

ಶೇಕ್ ರಶೀದ್, ಆಯುಷ್ ಮ್ಹಾತ್ರೆ, ಎಂ.ಎಸ್ ಧೋನಿ (ನಾಯಕ ಮತ್ತು ವಿ.ಕೀ), ಸ್ಯಾಮ್ ಕರ್ರಾನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ದೀಪಕ್ ಹೂಡಾ, ಮಥೀಶ ಪತಿರಾನ, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅಂಶುಲ್ ಕಾಂಬೋಜ್.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+