Home
ಟೆಕ್ ನೌಕರಿ

ಇಂದು RCB vs RR ಕದನ: ಬೆಂಗಳೂರಿನಲ್ಲಿ ಆರ್​ಸಿಬಿಗೆ 4ನೇ ಪಂದ್ಯ.. ಹೊರಗೆ ಹುಲಿ, ತವರಲ್ಲಿ ಇಲಿ..! ಇಂದಾದರೂ RCB ಗೆಲ್ಲುತ್ತಾ?

RCB vs RR IPL 2025 Match: ಐಪಿಎಲ್‌ನಲ್ಲಿ ಇಂದು (ಏಪ್ರಿಲ್ 24) ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಗೆಲುವಿಗಾಗಿ ಸೆಣಸಲಿವೆ. ಇದು ಐಪಿಎಲ್‌ನ 18ನೇ ಆವೃತ್ತಿಯ 42ನೇ ಪಂದ್ಯವಾಗಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಮ್ಯಾಚ್ ನಡೆಯಲಿದೆ. ತವರಿನಲ್ಲಿ ಸತತ ಸೋಲು ಅನುಭವಿಸುತ್ತಿರುವ ಆರ್​ಸಿಬಿ, ಪ್ಲೇ ಆಫ್‌ಗೆ ಮತ್ತಷ್ಟು ಹತ್ತಿರವಾಗಲು ಹೋರಾಡಲಿದೆ. ರಾಜಸ್ಥಾನ್ ತಂಡ ಪ್ಲೇ ಆಫ್ ರೇಸ್‌ನಲ್ಲಿ ಜೀವಂತವಾಗಿರಲು ಈ ಪಂದ್ಯ ಗೆಲ್ಲಲೇಬೇಕಿದೆ. ಈ ಪಂದ್ಯ ಈ ಪಂದ್ಯ ಯಾವಾಗ? ನೇರಪ್ರಸಾರ ವೀಕ್ಷಣೆ ಹೇಗೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಆರ್​ಸಿಬಿ ಈವರೆಗೆ ತವರಿನಲ್ಲಿ 3 ಪಂದ್ಯಗಳನ್ನು ಆಡಿದೆ. ವಿಪರ್ಯಾಸವೆಂದರೆ, ಈ ಮೂರು ಪಂದ್ಯಗಳನ್ನು ಸೋತಿದೆ. ಹೀಗಾಗಿ, ಇಂದಿನ ಪಂದ್ಯ ಅತ್ಯಂತ ಮಹತ್ವದಾಗಿದೆ. ಮತ್ತೊಂದೆಡೆ, ರಾಜಸ್ಥಾನ್ ಸಹ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಜೊತೆಗೆ ಪ್ಲೇ ಆಫ್ ರೇಸ್​ನಲ್ಲಿ ಜೀವಂತವಾಗಿರಲು ರಣತಂತ್ರ ರೂಪಿಸಿದೆ. ರಾಜಸ್ಥಾನ್ ಆಡಿರುವ ಎಂಟು ಪಂದ್ಯಗಳಲ್ಲಿ ಕೇವಲ ಎರಡನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಆರ್​ಸಿಬಿ ಆಡಿರುವ ಎಂಟು ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳನ್ನು ಸೋತು ಮೂರನೇ ಸ್ಥಾನದಲ್ಲಿದೆ.

ಇಂದು RCB vs RR ಕಾಳಗ: ಯಾವ ತಂಡ ಬಲಿಷ್ಠ? ಇಂದಾದರೂ RCB ಗೆಲ್ಲುತ್ತಾ?

ಐಪಿಎಲ್‌ನಲ್ಲಿ RCB vs RR ಮುಖಾಮುಖಿ

ಒಟ್ಟು ಪಂದ್ಯಗಳು : 32
RCB ಗೆಲುವು : 16
RR ಗೆಲುವು : 14
ಯಾವುದೇ ಫಲಿತಾಂಶವಿಲ್ಲ : 2

ಎರಡೂ ತಂಡಗಳು ಈವರೆಗೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 16 ರಲ್ಲಿ ಗೆಲುವು ಸಾಧಿಸಿದೆ. ರಾಜಸ್ಥಾನ್ 14 ಪಂದ್ಯ ಗೆದ್ದಿದೆ. ಇನ್ನು ಎರಡು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ. ಆದರೆ, ಬೆಂಗಳೂರಿನಲ್ಲಿ ನಡೆದ ಪಂದ್ಯಗಳಲ್ಲಿ ರಾಜಸ್ಥಾನ್ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಆರ್​ಸಿಬಿ ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಜೈಪುರದಲ್ಲಿ ನಡೆದ ಕಳೆದ ಬಾರಿ ಪಂದ್ಯದಲ್ಲಿ ಆರ್​ಸಿಬಿ 9 ವಿಕೆಟ್‌ಗಳ ಅಮೋಘ ಜಯ ಸಾಧಿಸಿತ್ತು. ಈ ಸೇಡು ತೀರಿಸಿಕೊಳ್ಳಲು ರಾಜಸ್ಥಾನ್ ಹವಣಿಸುತ್ತಿದೆ.

ನಾಯಕ ಸಂಜು ಸ್ಯಾಮ್ಸನ್ ಔಟ್?

ರಾಜಸ್ಥಾನ್ ತಂಡ ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದರೆ, ನಾಯಕ ಸಂಜು ಸ್ಯಾಮ್ಸನ್ ಅಲಭ್ಯತೆ ಮತ್ತೊಂದು ಆಘಾತ ನೀಡಿದೆ. ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ಯುವ ಬ್ಯಾಟರ್ ರಿಯಾನ್ ಪರಾಗ್ ತಂಡದ ಜವಾಬ್ದಾರಿ ಹೊರಲಿದ್ದಾರೆ. ಇದು ಮಾತ್ರವಲ್ಲದೆ, ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಕೆಲವು ಆಟಗಾರರನ್ನು ತಂಡದಿಂದ ಹೊರಗಿಡುವ ಸಾಧ್ಯತೆಯಿದೆ. ಇಂದಿನ ಪಂದ್ಯದಲ್ಲಿ ಬೆಂಚ್ ಕಾಯುತ್ತಿರುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಆರ್​ಸಿಬಿ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ
ಭಾರೀ ಬದಲಾವಣೆ ಖಚಿತವಾಗಿದೆ.

ಆರ್​ಸಿಬಿ ಪ್ಲೇಆಫ್ ಎಂಟ್ರಿ​ ಖಚಿತ!

ಐಪಿಎಲ್ ಸೀಸನ್ 18ರ ಮೊದಲಾರ್ಧ ಮುಗಿದಿದೆ. ಇದೀಗ ದ್ವಿತೀಯಾರ್ಧದ ಪಂದ್ಯಗಳು ನಡೆಯುತ್ತಿವೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯದಲ್ಲೇ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡವು ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಮುಂದಿನ 6 ಪಂದ್ಯಗಳು ಬೆಂಗಳೂರು ತಂಡಕ್ಕೆ ಬಹಳ ಮುಖ್ಯ. ಏಕೆಂದರೆ ಈ ಆರು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದರೆ ಆರ್​ಸಿಬಿ ನೇರವಾಗಿ ಪ್ಲೇಆಫ್​ಗೆ ಲಗ್ಗೆ ಇಡಲಿದೆ. 16 ಅಂಕಗಳನ್ನು ಪಡೆದರೆ ಪ್ಲೇಆಫ್​ ಪ್ರವೇಶ ಖಚಿತವಾಗಲಿದೆ. ಅಂದರೆ, ಇನ್ನುಳಿದ 6 ಮ್ಯಾಚ್​ಗಳಲ್ಲಿ 3 ರಲ್ಲಿ ಗೆದ್ದರೆ 16 ಅಂಕಗಳು ಆಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XII (ಸಂಭಾವ್ಯ): ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ), ರೊಮಾರಿಯೊ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹೇಜಲ್‌ವುಡ್, ಸುಯಾಶ್ ಶರ್ಮಾ

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XII (ಸಂಭಾವ್ಯ): ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ (ನಾಯಕ), ನಿತೀಶ್ ರಾಣಾ, ಧ್ರುವ್ ಜುರೆಲ್ (ವಿ.ಕೀ), ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ, ಶುಭಂ ದುಬೆ

RCB vs RR ಪಂದ್ಯದ ನೇರ ಪ್ರಸಾರದ ವಿವರಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ ಪಂದ್ಯ ಎಲ್ಲಿ ನಡೆಯಲಿದೆ?

ಐಪಿಎಲ್ 2025ರ (IPL 2025) ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ ಪಂದ್ಯ ಯಾವಾಗ ನಡೆಯಲಿದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ ಐಪಿಎಲ್ ನಡುವಿನ ಪಂದ್ಯವು ಇಂದು (ಏಪ್ರಿಲ್ 18) ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ ಪಂದ್ಯ ಯಾವ ಸಮಯಕ್ಕೆ ಪ್ರಾರಂಭವಾಗುತ್ತದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30 ಗಂಟೆಗೆ ಪ್ರಾರಂಭವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ ಪಂದ್ಯದ ಟಾಸ್ ಪ್ರಕ್ರಿಯೆ ಯಾವಾಗ ನಡೆಯುತ್ತದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ಟಾಸ್ ಪ್ರಕ್ರಿಯೆ ಸಂಜೆ 7.00 ಗಂಟೆಗೆ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ ಪಂದ್ಯವನ್ನು ಯಾವ ಟಿವಿ ಚಾನೆಲ್ ಪ್ರಸಾರ ಮಾಡಲಾಗುತ್ತದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ ಪಂದ್ಯದ ನೇರ ಪ್ರಸಾರವನ್ನು ಆನ್‌ಲೈನ್‌ನಲ್ಲಿ ಹೇಗೆ ವೀಕ್ಷಿಸಬಹುದು?

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವನ್ನು ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ:

ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ಯಶ್ ದಯಾಳ್, ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜೋಶ್ ಹೇಜಲ್‌ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಜೇಕಬ್ ಬೆಥೆಲ್, ಮನೋಜ್ ಭಾಂಡಗೆ, ದೇವದತ್ತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.

ರಾಜಸ್ಥಾನ್ ರಾಯಲ್ಸ್ ತಂಡ:

ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್​ ಕೀಪರ್​), ರಿಯಾನ್ ಪರಾಗ್, ಶಿಮ್ರೋನ್ ಹೆಟ್ಮೆಯರ್, ಸಂದೀಪ್ ಶರ್ಮಾ, ಜೋಫ್ರಾ ಆರ್ಚರ್, ವನಿಂದು ಹಸರಂಗ, ಮಹೇಶ್ ತೀಕ್ಷಣ, ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ, ತುಷಾರ್ ದೇಶಪಾಂಡೆ, ನಿತೀಶ್ ರಾಣಾ, ಫಜಲ್ಹಕ್ ಫಾರೂಕಿ, ಶುಭಂ ದುಬೆ, ಯುಧ್ವೀರ್ ಚರಕ್, ವೈಭವ್ ಸೂರ್ಯವಂಶಿ, ಕುನಾಲ್ ರಾಥೋಡ್, ಕ್ವೆನಾ ಮಫಕಾ, ಅಶೋಕ್ ಶರ್ಮಾ.

Best Mobiles in India

English summary
RCB vs RR IPL 2025: How to Watch Today’s Royal Challengers Bengaluru vs Rajasthan Royals Match Live
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+