Subscribe to Gizbot

ಮೆಮೊರಿ ಕಾರ್ಡ್, ಪೆನ್​ಡ್ರೈವ್ 'ಎಜೆಕ್ಟ್' ಮಾಡಿ ತೆಗೆಯಲು ಒಂದಲ್ಲ 4 ಕಾರಣಗಳಿವೆ!!

Written By:

ಮೆಮೊರಿ ಕಾರ್ಡ್, ಪೆನ್​ಡ್ರೈವ್ ಬಳಸಿ ಕಂಪ್ಯೂಟರ್‌ನಿಂದ ದತ್ತಾಂಶಗಳನ್ನು ವರ್ಗಾವಣೆ ಅಥವಾ ಸ್ವೀಕರಿಸಿದ ನಂತರ ಅವುಗಳನ್ನು ಸುರಕ್ಷಿತವಾಗಿ ತೆಗೆಯಬೇಕು.!! ಇದಕ್ಕಾಗಿ ಕಂಪ್ಯೂಟರ್‌ಗೆ ನಿರ್ದೇಶನ ನೀಡುವ ಸೌಲಭ್ಯವಿದ್ದು, ಅದನ್ನು "ಅನ್‌ಮೌಂಟ್ ಅಥವಾ ಎಜೆಕ್ಟ್" ಎಂದು ಕರೆಯುತ್ತಾರೆ.!!

ಇಂತಹ ಆಯ್ಕೆ ಇದ್ದರೂ ಹಲವರು ಈ ಆಯ್ಕೆಯನ್ನು ಬಳಕೆ ಮಾಡುವುದಿಲ್ಲ.!! ಹಾಗಾದರೆ, ಕಂಪ್ಯೂಟರ್‌ಗೆ ಚುಚ್ಚಿದ ಮೆಮೊರಿ ಕಾರ್ಡ್, ಪೆನ್​ಡ್ರೈವ್‌ಗಳನ್ನು ಏಕೆ ಅನ್‌ಮೌಂಟ್ ಅಥವಾ ಎಜೆಕ್ಟ್ ಮಾಡಿಯೇ ತೆಗೆಯಬೇಕು? ಇಲ್ಲವಾದರೆ ಆಗಬಹುದಾದ ತೊಂದರೆ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ವಯಂಚಾಲಿತವಾಗಿ ಕನೆಕ್ಟ್ ಆಗುತ್ತವೆ.!!

ಸ್ವಯಂಚಾಲಿತವಾಗಿ ಕನೆಕ್ಟ್ ಆಗುತ್ತವೆ.!!

ಕಂಪ್ಯೂಟರ್‌ಗೆ ಮೆಮೊರಿ ಕಾರ್ಡ್, ಪೆನ್​ಡ್ರೈವ್ ಜೋಡಿಸಿದ ಕೂಡಲೇ ಕಂಪ್ಯೂಟರ್‌ನಿಂದ ಅವುಗಳ ಕೆಲಸ ಸ್ವಯಂಚಾಲಿತವಾಗಿ ನಡೆಯುತ್ತದೆ.! ಆದರೆ, ಈ ಸಾಧನಗಳ ಸಂಪರ್ಕ ತಪ್ಪಿಸುವುದು ಪ್ರತ್ಯೇಕವಾಗಿ ಮಾಡಬೇಕಾದ ಕೆಲಸ. ಹಾಗಾಗಿಯೇ ನೀವು ಅವುಗಳನ್ನು ಎಜೆಕ್ಟ್ ಮಾಡಿಯೇ ತೆಗೆಯಬೇಕು.!!

ಎಜೆಕ್ಟ್ ಎಂದರೆ ಕಂಪ್ಯೂಟರ್‌ಗೆ ಹೇಳಿದಂತೆ!!

ಎಜೆಕ್ಟ್ ಎಂದರೆ ಕಂಪ್ಯೂಟರ್‌ಗೆ ಹೇಳಿದಂತೆ!!

ಕಂಪ್ಯೂಟರ್ ಮತ್ತು ಇತರ ಡಿವೈಸ್‌ಗಳ ನಡುವೆ ಫೈಲ್‌ ಶೇರ್ ಆದ ನಂತರ ಅನ್​ವೌಂಟ್ ಅಥವಾ ಎಜೆಕ್ಟ್ ಮಾಡಿದ್ದಾಯಿತು ಎಂಬ ಸಂದೇಶ ದೊರೆತ ನಂತರವೇ ಅವನ್ನು ಹೊರತೆಗೆಯಬೇಕು. ಈಗ ಮಾಹಿತಿ ವರ್ಗಾವಣೆಯನ್ನು ನಿಲ್ಲಿಸಬಹುದು ಎಂದು ಕಂಪ್ಯೂಟರಿಗೆ ಅಥವಾ ಸ್ಮಾರ್ಟ್​ಫೋನಿಗೆ ತಿಳಿಸುವ ಕ್ರಮ ಇದು.

ಕರೆಪ್ಟ್ ಆಗುತ್ತದೆ ಎಲ್ಲಾ ಮಾಹಿತಿ!!

ಕರೆಪ್ಟ್ ಆಗುತ್ತದೆ ಎಲ್ಲಾ ಮಾಹಿತಿ!!

ಕಂಪ್ಯೂಟರ್‌ ಮತ್ತು ಇತರ ಡಿವೈಸ್‌ಗಳ ಮಧ್ಯೆ ಮಾಹಿತಿ ವರ್ಗಾವಣೆಯಾಗುತ್ತಿರುವಾಗ ಎಜೆಕ್ಟ್ ಮಾಡದೇ ತೆರೆದರೆ ನಿಮ್ಮ ಮಾಹಿತಿಗಳು ಕರೆಪ್ಟ್ ಆಗುವ ಸಾಧ್ಯತೆ ಇರುತ್ತದೆ.!! ಇದರಿಂದ ಆ ಮಾಹಿತಿ ನಿಮಗೆ ಮತ್ತಿನ್ನಾವಾಗಲು ಸಿಗದೇಹೋಗಬಹುದು.!!

ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಹಾಳಾಗುತ್ತವೆ!!

ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಹಾಳಾಗುತ್ತವೆ!!

ಮಾಹಿತಿ ವರ್ಗಾವಣೆಯನ್ನು ನಿಲ್ಲಿಸಬಹುದು ಎಂದು ಕಂಪ್ಯೂಟರಿಗೆ ಅಥವಾ ಸ್ಮಾರ್ಟ್​ಫೋನಿಗೆ ತಿಳಿಸಿದರೆ ಅದು ತನ್ನ ಸಂಪರ್ಕವನ್ನು ಕಡಿತಗೊಳಿಸಿಸುತ್ತದೆ.!! ಇಲ್ಲವಾದಲ್ಲಿ ನಿಮ್ಮ ಇತರ ಡಿವೈಸ್‌ಗೆ ಸಂಪರ್ಕಿಸಿದ್ದ ಮಿಂಚು ಕೇದ್ರವು ಶಾರ್ಟ್ ಆಗಿ ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಹಾಳಾಗುತ್ತವೆ.

ಓದಿರಿ:ಇಂದಿನಿಂದ "ನೋಕಿಯಾ 6" ಆಂಡ್ರಾಯ್ಡ್ ಫೋನ್ ಸೇಲ್!!.ಎಲ್ಲೆಲ್ಲಿ?..ಏನೆಲ್ಲಾ ಆಫರ್?!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Does this mean it's safe? How do I know when I actually need to eject a drive?.to knoa more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot