Home
ಟೆಕ್ ನೌಕರಿ

ಒಂದೇ ವಾಟ್ಸಪ್ ಖಾತೆಯನ್ನು ಎರಡು ಫೋನುಗಳಲ್ಲಿ ಉಪಯೋಗಿಸುವುದು ಹೇಗೆ?

By Ashok

ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಡುಯಲ್ ಸಿಮ್ ಫೋನುಗಳನ್ನು ಉಪಯೋಗಿಸುವುದನ್ನು ನಾವು ಶುರು ಮಾಡಿದ್ದೇವೆ ಮತ್ತು ಬೇರೆ ಬೇರೆ ಉದ್ದೇಶಗಳಿಗೆ ಬೇರೆ ಬೇರೆ ಸಾಧನಗಳನ್ನು ಉಪಯೋಗಿಸುತ್ತಿದ್ದೇವೆ. ಕಾರಣಗಳು ಬೇರೆ ಇರಬಹುದು ಆದರೆ ಹಲವರಿಗೆ ಒಂದು ಫೋನು ಸಾಕಾಗುವುದಿಲ್ಲ ಎನ್ನುವುದು ಸಾಮಾನ್ಯವಾಗುತ್ತಿದೆ.

ಒಂದೇ ವಾಟ್ಸಪ್ ಖಾತೆಯನ್ನು ಎರಡು ಫೋನುಗಳಲ್ಲಿ ಉಪಯೋಗಿಸುವುದು ಹೇಗೆ?

ನೀವು ಮತ್ತೊಂದು ಸಾಧನವನ್ನು, ಅದು ಮೊಬೈಲ್ ಇರಬಹುದು ಅಥವಾ ಟ್ಯಾಬ್ಲೆಟ್ ಇರಬಹುದು, ಉಪಯೋಗಿಸಲು ಪ್ರಾರಂಭಿಸಿದಾಗ ಹುಟ್ಟುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ ಎರಡೂ ಫೋನುಗಳಲ್ಲಿ ಏಕಕಾಲಕ್ಕೆ ಒಂದೇ ವಾಟ್ಸಪ್ ಖಾತೆಯನ್ನು ಬಳಸಬಹುದಾ ಎನ್ನುವುದು. ಇದನ್ನು ಮಾಡಲು ಯಾವುದೇ ಅಧಿಕೃತ ಹಾದಿ ಸದ್ಯಕ್ಕಿಲ್ಲ.

ಓದಿರಿ: ಸ್ಯಾಮ್ಸಂಗ್ ಗೇರ್ ಎಸ್3 ಕ್ಲಾಸಿಕ್ vs ಗೇರ್ ಎಸ್3 ಫ್ರಾಂಟೀರ್ vs ಆ್ಯಪಲ್ ವಾಚ್: 6 ಮುಖ್ಯ ವ್ಯತ್ಯಾಸಗಳು.
ಕಾರಣ, ಹೊಸ ವಾಟ್ಸಪ್ ಖಾತೆಯನ್ನು ತೆರೆಯಬೇಕೆಂದರೆ ನೀವು ನಿಮ್ಮ ಮೊಬೈಲ್ ನಂಬರನ್ನು ಕೊಡಬೇಕು ಮತ್ತು ವೆರಿಫಿಕೇಷನ್ ಕೋಡ್ ಇರುವ ಸಂದೇಶ ಬರುವವರೆಗೆ ಕಾಯಬೇಕು. ಇದರಿಂದಾಗಿ ಎರಡು ಬೇರೆ ಬೇರೆ ಫೋನುಗಳಲ್ಲಿ ಒಂದೇ ವಾಟ್ಸಪ್ ಖಾತೆಯನ್ನು ಉಪಯೋಗಿಸುವುದು ಸಾಧ್ಯವಿಲ್ಲ. ಆದರೆ ಇದನ್ನು ಸಾಧ್ಯವಾಗಿಸಲು ಒಂದು ಸರಳ ವಿಧಾನವಿದೆ. ಅದೇನೆಂದು ತಿಳಿಯಲು ಕೆಳಗಿನ ಸ್ಲೈಡರ್ ನೋಡಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎರಡೂ ಫೋನುಗಳಲ್ಲಿ ಇಂಟರ್ನೆಟ್ ಸಂಪರ್ಕವಿರಲಿ.

ಎರಡೂ ಫೋನುಗಳಲ್ಲಿ ಇಂಟರ್ನೆಟ್ ಸಂಪರ್ಕವಿರಲಿ.

ಎರಡೂ ಫೋನುಗಳಲ್ಲಿ ಇಂಟರ್ನೆಟ್ ಸಂಪರ್ಕವಿರುವುದನ್ನು ಖಚಿತಪಡಿಸಿಕೊಳ್ಳಿ. ಎರಡರಲ್ಲೂ ವಾಟ್ಸಪ್ ಇನ್ಸ್ಟಾಲ್ ಆಗಿದೆಯಾ ನೋಡಿಕೊಳ್ಳಿ. ವಾಟ್ಸಪ್ ಆ್ಯಪ್ ಅಪ್ ಡೇಟ್ ಆಗಿರಬೇಕು.

ಎರಡನೇ ಫೋನಿನಲ್ಲಿ ವಾಟ್ಸಪ್ ವೆಬ್ ಪುಟಕ್ಕೆ ಲಾಗಿನ್ ಆಗಿ.

ಎರಡನೇ ಫೋನಿನಲ್ಲಿ ವಾಟ್ಸಪ್ ವೆಬ್ ಪುಟಕ್ಕೆ ಲಾಗಿನ್ ಆಗಿ.

ಒಂದು ಸ್ಮಾರ್ಟ್ ಫೋನಿನಲ್ಲಿ ಸಿಮ್ ಕಾರ್ಡ್ ಹಾಕಿ, ಅದರಲ್ಲಿಯೇ ವಾಟ್ಸಪ್ ಖಾತೆಯನ್ನು ತೆರೆಯಿರಿ. ಎರಡನೆಯ ಫೋನಿನಲ್ಲಿ, ಯಾವುದಾದರೂ ಬ್ರೌಸರ್ ತೆರೆದು web.whatsapp.com ಗೆ ಭೇಟಿ ಕೊಡಿ.

ಡೆಸ್ಕ್ ಟಾಪ್ ಪುಟವನ್ನು ತೆರೆಯಿರಿ.

ಡೆಸ್ಕ್ ಟಾಪ್ ಪುಟವನ್ನು ತೆರೆಯಿರಿ.

ವಾಟ್ಸಪ್ ವೆಬ್ ಪುಟ ಮೊಬೈಲಿನಲ್ಲಿ ತೆರೆದುಕೊಳ್ಳುವುದಿಲ್ಲ. ಆದ್ದರಿಂದ ಡೆಸ್ಕ್ ಟಾಪ್ ಸೈಟನ್ನು ತೆರೆಯಿರಿ. ಹೀಗೆ ಮಾಡುವುದರಿಮದ ಎರಡನೇ ಫೋನಿನಲ್ಲಿ ವಾಟ್ಸಪ್ ವೆಬ್ ತೆರೆದುಕೊಳ್ಳುತ್ತದೆ ಮತ್ತು ಕ್ಯೂ.ಆರ್ ಕೋಡ್ ಪರದೆಯ ಮೇಲೆ ಮೂಡುತ್ತದೆ.

ಮೊದಲ ಫೋನಿನಲ್ಲಿ ವಾಟ್ಸಪ್ ಆ್ಯಕ್ಟಿವೇಟ್ ಮಾಡಿ.

ಮೊದಲ ಫೋನಿನಲ್ಲಿ ವಾಟ್ಸಪ್ ಆ್ಯಕ್ಟಿವೇಟ್ ಮಾಡಿ.

ವಾಟ್ಸಪ್ ಆ್ಯಪ್ ಇರುವ ಮೊದಲ ಫೋನಿನಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ --> ವಾಟ್ಸಪ್ ವೆಬ್ ಆಯ್ಕೆ ಮಾಡಿ. ಈಗ ಎರಡನೆಯ ಫೋನಿನಲ್ಲಿರುವ ಕ್ಯೂ.ಆರ್ ಕೋಡನ್ನು ಮೊದಲ ಫೋನಿನಿಂದ ಸ್ಕ್ಯಾನ್ ಮಾಡಿ.

ಮುಗೀತು!

ಮುಗೀತು!

ಅಷ್ಟೇ! ಈಗ ನೀವು ಒಂದೇ ಮೊಬೈಲ್ ನಂಬರಿನಿಂದ ಎರಡೆರಡು ಫೋನುಗಳಲ್ಲಿ ಒಂದೇ ವಾಟ್ಸಪ್ಪನ್ನು ಉಪಯೋಗಿಸಬಹುದು. ಈ ರೀತಿಯಾಗಿ ನೀವು ವಾಟ್ಸಪ್ ಆ್ಯಪ್ ಅನ್ನು ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಅಥವಾ ಇನ್ನೊಂದು ಸ್ಮಾರ್ಟ್ ಫೋನಿನಲ್ಲಿ ಉಪಯೋಗಿಸಬಹುದು.

ಗಮನಿಸಿ: ಎರಡು ಬೇರೆ ಫೋನುಗಳಲ್ಲಿ ವಾಟ್ಸಪ್ ಉಪಯೋಗಿಸಲು ಎರಡೂ ಸಾಧನಗಳಲ್ಲಿ ವಾಟ್ಸಪ್ ಆ್ಯಪ್ ಇರಬೇಕು. ಮೂರನೇ ಫೋನಿನಲ್ಲೂ ಅದೇ ವಾಟ್ಸಪ್ ಉಪಯೋಗಿಸಬೇಕೆಂದರೆ ಒಂದ್ಯಾವುದಾದರೂ ಫೋನಿನಲ್ಲಿ ಲಾಗ್ ಔಟ್ ಆಗಲೇಬೇಕು. ಎರಡನೇ ಫೋನಿನಲ್ಲಿ ಬ್ರೌಸರ್ ಆ್ಯಪ್ ಅನ್ನು ಮುಚ್ಚಬೇಡಿ.

Best Mobiles in India

English summary
Now, you can use the same WhatsApp account on two different smartphones or a smartphone and a tablet at the same time. Here are the steps on how you can do it. Read more from the slider below.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+