Subscribe to Gizbot

ಸ್ಯಾಮ್‌ಸಂಗ್ ಕರ್ವ್ ಟಿವಿ ತ್ವರಿತದಲ್ಲೇ

Posted By:

ಕಳೆದ ವರ್ಷವಷ್ಟೇ, ಸ್ಯಾಮ್‌ಸಂಗ್, ಎಲ್‌ಜಿ ಮತ್ತು ಇತರ ಟಿವಿ ತಯಾರಕ ಕಂಪೆನಿಗಳು ಕರ್ವ್‌ಡ್ ಟಿವಿ ಎಂಬ ಅಂಶಕ್ಕೆ ಹೆಚ್ಚು ಪ್ರಧಾನ್ಯತೆಯನ್ನು ನೀಡುತ್ತಿರುವುದರಿಂದ ಇತರ ಫ್ಲಾಟ್ ಟಿವಿಗಿಂತ ಕರ್ವ್ ಟಿವಿಗೆ ಹೆಚ್ಚು ಬೇಡಿಕೆ ಇರುವುದು ಖಾತ್ರಿಯಾಗುತ್ತಿದೆ.

ಟಿವಿ ನೋಡುವ ಹುಚ್ಚು ನಿಮಗೆ ಸಾಕಷ್ಟಿದೆ ಎಂದಾದಲ್ಲಿ, ಕರ್ವ್ ಮಾದರಿಯಲ್ಲಿರುವ ಟಿವಿ ನಿಮ್ಮ ಬಯಕೆಯನ್ನು ಈಡೇರಿಸುವಲ್ಲಿ ಸಫಲಗೊಳ್ಳಲಿದೆ. ಸ್ಯಾಮ್‌ಸಂಗ್‌ನ ಹೊಸ ಬ್ರ್ಯಾಂಡ್ ಅಲ್ಟ್ರಾಎಚ್‌ಡಿ ಟಿವಿ ಬರುತ್ತಿದ್ದು, ಇದು ತನ್ನ ಪರದೆಯನ್ನು ಫ್ಲಾಟ್‌ ಮಾದರಿಯಿಂದ ಕರ್ವ್ ಮಾದರಿಗೆ ಬದಲಿಸಿಕೊಳ್ಳುವ ತಂತ್ರಗಾರಿಕೆಯನ್ನು ಪಡೆದುಕೊಳ್ಳಲಿದೆ. ಇದು 78-ಇಂಚಿನ ಆವೃತ್ತಿಯಲ್ಲಿ ಬರುತ್ತಿದ್ದು ಕೊರಿಯಾದಲ್ಲಿ ಆಗಸ್ಟ್ 1 ರಿಂದ ಪ್ರಿ ಆರ್ಡರ್ ಮಾಡಿಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌ನಿಂದ ಕರ್ವ್ ಟಿವಿ ಮೋಡಿ

ಮೋಟರ್‌ಗಳ ಸಹಾಯದಿಂದ, ಇದರ ಪರದೆಯನ್ನು ಮುಂದಕ್ಕೆ ಬಗ್ಗಿಸಬಹದಾಗಿದ್ದು, ನಿಮಗೆ ಎಷ್ಟು ಬೇಕೋ ಅಷ್ಟರವರೆಗೆ ಇದು ಬಾಗುತ್ತದೆ. ಟಿವಿಯ ಮಾಡೆಲ್ ಹೆಸರು UN78S9B ಎಂದಾಗಿದ್ದು, ಇದುವರೆಗೆ ಇದರ ಲಾಂಚಿಂಗ್ ದಿನಾಂಕ ತಿಳಿದುಬಂದಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲೇ ಲಾಂಚಿಂಗ್ ಆಗಲಿರುವ ಟಿವಿ ಯಾವಾಗ ಟಿವಿ ಪ್ರೇಮಿಗಳ ಕೈ ಸೇರುವುದೋ ಎಂಬುದನ್ನು ಕಾದು ನೋಡಬೇಕಾಗಿದೆ.

Read more about:
English summary
This article tells about Samsung launching curved Tv as soon.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot