ಯಾರೂ ತಿಳಿಯದ 5 ರಹಸ್ಯ 'ಯೂಟ್ಯೂಬ್' ಟ್ರಿಕ್ಸ್!!
ಪ್ರತಿದಿನ ಯುಟ್ಯೂಬ್ ಓಪನ್ ಮಾಡಿ, ವಿಡಿಯೋಗಳನ್ನು ವೀಕ್ಷಿಸುವ ನಾವು ಯೂಟ್ಯೂಬ್ ನೀಡಿರುವ ಕೆಲವು ಸವಲತ್ತುಗಳನ್ನು ಬಳಸಿಕೊಳ್ಳುವುದೇ ಇಲ್ಲ ಎಂದರೆ ನಿಮಗೆ ನಂಬಿಕೆ ಬರದಿರಬಹುದು. ಆದರೆ, ನಿಜವಾಗಿಯೂ ನಮಗೆ ಯೂಟ್ಯೂಬ್‌ನಲ್ಲಿರುವ ಹಲವು ವಿಷಯಗಳ ಬಗ್ಗೆ ಈ ವರೆಗೂ ತಿಳಿದೇ ಇಲ್ಲ ಎಂದರೆ ಖಂಡಿತಾ ಆಶ್ಚರ್ಯವೇನಿಲ್ಲ.
ಹೌದು, ಯೂಟ್ಯೂಬ್ ತೆರೆದ ನಂತರ ವಿಡಿಯೊ ವೀಕ್ಷಣೆ ಮಾಡುವುದಷ್ಟೆ, ಅದರಲ್ಲಿ ಮತ್ತೇನನ್ನು ತಿಳಿದುಕೊಳ್ಳುವುದು ಇದೆ ಎಂದು ನೀವು ಪ್ರಶ್ನಿಸಬಹುದು. ಆದರೆ, ಯೂಟ್ಯೂಬ್‌ನಲ್ಲಿ ನೀವು ತಿಳಿಯದೇ ಇರಬಹುದಾದ ಹಲವು ಸೇವೆಗಳು ಲಭ್ಯವಿವೆ. ಜಿಐಎಫ್ ಕ್ರಿಯೇಟ್, ಸುಲಭ ವಿಡಿಯೋ ಡೌನ್‌ಲೋಡ್‌ನಂತಹ ಹಲವು ವಿಶೇಷ ಸೌಲಭ್ಯಗಳು ಕೆಲವರಿಂದ ಮರೆಮಾಚಿವೆ.

ಹಾಗಾಗಿ, ಇಂದಿನ ಲೇಖನದಲ್ಲಿ ಜನಪ್ರಿಯ ವಿಡಿಯೋ ಜಾಲತಾಣ ಯೂಟ್ಯೂಬ್‌ನಲ್ಲಿರುವ ನೀವು ತಿಳಿಯದೇ ಇರಬಹುದಾದ ಕೆಲವು ಸೌಲಭ್ಯಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ಯೂಟ್ಯೂಬ್ ಬಳಕೆ ಮಾಡುವ ಎಲ್ಲಾ ಬಳಕೆದಾರರಿಗೂ ಖಂಡಿತವಾಗಿ ಸಹಾಯವಾಗುವಂತಹ ಮಾಹಿತಿಗಳು ಇವಾಗಿವೆ ಎಂದು ತಿಳಿದಿದ್ದೇವೆ.

ಯೂಟ್ಯೂಬ್‌ನಲ್ಲಿ ಜಿಐಎಫ್ ಕ್ರಿಯೇಟ್.!
ಈಗೆಲ್ಲಾ ಜಿಫ್‌ಗಳು ಫೇಮಸ್ ಆಗುತ್ತಿರುವುದು ನಿಮಗೆಲ್ಲಾ ಗೊತ್ತು ಅಲ್ಲವೇ? ಅಂತಹ ಜಿಫ್ ಅನ್ನು ಯೂಟ್ಯೂಬ್‌ನಲ್ಲಿಯೇ ಕ್ರಿಯೇಟ್ ಮಾಡಬಹುದು. ಬ್ರೌಸರ್‌ಟ್ಯಾಬ್‌ನಲ್ಲಿ ಯುಟ್ಯೂಬ್ ಮುಂಚೆ ಜಿಐಎಫ್ ಎಂಬ ಪದ ಸೇರಿಸಿ (gifyoutube) ವೆಬ್‌ಸೈಟ್ ತೆರೆದರೆ ಜಿಫ್ ಕ್ರಿಯೇಟ್ ಮಾಡುವ ಆಯ್ಕೆ ಕಾಣಿಸುತ್ತದೆ. ಇಲ್ಲಿ ಯಾವುದೇ ವಿಡಿಯೋದಿಂದ 15 ಸೆಕೆಂಡ್ ಭಾಗವನ್ನು ಸೆಲೆಕ್ಟ್ ಮಾಡಿ ಅದನ್ನು ಜಿಐಎಫ್ ಪರಿವರ್ತಿಸಬಹುದು!

ಕರೋಕೆಯನ್ನು ನೇರವಾಗಿ ಹುಡುಕಿ.
ಮ್ಯೂಸಿಕ್ ಇದ್ದರೆ ನಾವು ಹಾಡಿದರೆ ಚೆನ್ನಾಗಿರುತ್ತದೆ ಎಂದು ನಿಮಗೆ ಅನಿಸುತ್ತದೆಯೇ? ಹಾಗಾದರೆ, ನಿಮಗೆ ಯಾವ ಹಾಡಿನ ಮ್ಯೂಸಿಕ್ ಬೇಕು ಅದನ್ನು ಪಡೆಯಲು ಸಿಂಪಲ್ ಟ್ರಿಕ್ಸ್ ಇದೆ.!! ಯೂಟ್ಯೂಬ್‌ನ ಸರ್ಚ್ ಬಾಕ್ಸ್‌ನಲ್ಲಿ ಕರೋಕೆ (karaoke) ಅಂತ ಟೈಪ್ ಮಾಡಿ ಬಳಿಕ ನಿಮಗೆ ಬೇಕಾದ ಹಾಡಿನ ಹೆಸರನ್ನು ಟೈಪ್ ಮಾಡಿದರೆ ಸಾಕು. ಮಾಡಿದರೆ ಸಾಕು. ನಿಮಗೆ ಕರೋಕೆ ಸಾಂಗ್ ಸಿಕ್ಕು ಬಿಡುತ್ತದೆ.!

ಡೌನ್‌ಲೋಡ್ ಮಾಡಬಹದು!
ಯುಟ್ಯೂಬ್ ವಿಡಿಯೋ ಡೌನ್‌ಲೋಡ್ ಮಾಡಿಕೊಳ್ಳುವ ತೀರಾ ಸರಳ ಟ್ರಿಕ್ಸ್ ಒಂದು ಬಹುತೇಕರಿಗೆ ಇನ್ನು ಗೊತ್ತಿಲ್ಲ ಎನ್ನಬಹುದು. ನಿಮಗೆ ಬೇಕಾದ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಯೂಟ್ಯೂಬ್ ಲಿಂಕ್‌ನಲ್ಲಿ youtube ಮುಂದೆ ss ಸೇರಿಸಿದರೆ (www.ssyoutube.com) ಸಾಕು. ವಿಡಿಯೋ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆಗೆ ನೇರವಾಗಿ ತೆರಳುತ್ತೀರಾ. ಅಲ್ಲಿ ನಿಮಗೆ ಬೇಕಾದ ಫಾರ್ಮೆಟ್‌ಗಳಲ್ಲಿ ವಿಡಿಯೋ ಡೌನ್‌ಲೋಡ್ ಮಾಡಬಹುದು.!

ಜಾಹಿರಾತು ನಿಯಂತ್ರಿಸಿ!
ಯುಟ್ಯೂಬ್‌ನಲ್ಲಿ ಬರುವ ಜಾಹೀರಾತುಗಳು ನಿಮಗೆ ಸಾಕಷ್ಟು ಕಿರಿಕಿರಿ ಎನಿಸುತ್ತದೆ ಎಲ್ಲವೇ? ಚಿಂತಿಸಬೇಡಿ. ಅವುಗಳನ್ನು ನಿಯಂತ್ರಿಸಬಹುದು. ಗೂಗಲ್‌ನಲ್ಲಿ ಆಡ್ ಪ್ರಿಫರೆನ್ಸ್‌ಗೆ ಹೋಗಿ ಮತ್ತು ಯಾವ ರೀತಿ ಜಾಹೀರಾತುಗಳು ಬೇಡ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆಯ್ಕೆಗೆ ಅನುಸಾರವಾಗಿ ಆ ಜಾಹೀರಾತುಗಳು ನಿಮಗೆ ಕಾಣಿಸುವುದಿಲ್ಲ.

ಸ್ಪೀಡ್ ಹೊಂದಿಸಿಕೊಳ್ಳಬಹುದು!
ಯಾವುದೇ ವಿಡಿಯೋ ನೋಡುವಾಗ ಅದು ನಿಧಾನವಾಗಿ ಅಥವಾ ಫಾಸ್ಟ್ ಆಗಿ ನೋಡಬೇಕು ಎಂದೆನಿಸಿದರೆ ಅದಕ್ಕೂ ಯೂಟ್ಯೂಬ್ ಸಹಾಯ ಮಾಡುತ್ತದೆ. ಯುಟ್ಯೂಬ್ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿರುವ ಸ್ಪೀಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡರೆ, ವಿಡಿಯೋ ಅನ್ನು ಶೇ.50 ಇಲ್ಲವೇ ಶೇ.25ರಷ್ಟು ಸ್ಲೋ ಅಥವಾ ಸ್ಪೀಡ್ ಮಾಡಿಕೊಳ್ಳುವ ಆಯ್ಕೆ ಲಭ್ಯವಾಗುತ್ತದೆ.

ಯೂಟ್ಯೂಬ್ ಹುಟ್ಟಿದ್ದು ಹೇಗೆ?..ಯೂಟ್ಯೂಬ್ ಹುಟ್ಟಲು ಕಾರಣಗಳೇನು ಗೊತ್ತಾ?!!
ಈಗೆಲ್ಲಾ ಯೂಟ್ಯೂಬ್ ಎಂದರೇನು ಎಂದು ಕೇಳಿದರೆ ಚಿಕ್ಕ ಮಕ್ಕಳು ಕೂಡ ಕೂಡ ವಿಡಿಯೋ ಜಾಲತಾಣ ಎಂದು ಹೇಳಿಬಿಡುತ್ತವೆ. ಇನ್ನು ಸ್ವಲ್ಪ ತಿಳಿದವರು ಪ್ರಖ್ಯಾತ ಇಂಟರ್‌ನೆಟ್ ಜಾಲತಾಣ ಗೂಗಲ್‌ನ ವಿಡಿಯೋ ತಾಣ ಎಂದು ಹೇಳಿಬಿಡುತ್ತಾರೆ. ಆದರೆ, ನಿಮಗೆ ಗೊತ್ತಾ?.ಪ್ರಖ್ಯಾತ ವಿಡಿಯೋತಾಣ ಯೂಟ್ಯೂಬ್ ಹುಟ್ಟಿಹಾಕಿದ್ದು ಗೂಗಲ್ ಅಲ್ಲ.!!
ಹೌದು, ಗೂಗಲ್ ಕಂಪೆನಿ ಯೂಟ್ಯೂಬ್ ಅನ್ನು ಖರೀದಿಸುವ ಮುನ್ನವೇ ಯೂಟ್ಯೂಬ್ ಜನ್ಮ ತಾಳಿ ಭಾರೀ ಹೆಸರುವಾಸಿಯಾಗಿತ್ತು. ಹುಟ್ಟಿದ ಒಂದು ವರ್ಷದಲ್ಲಿಯೇ ಬಿರುಸಿನಿಂದ ಬೆಳೆಯುತ್ತಿದ್ದ ಯೂಟ್ಯೂಬಿನ ಮೇಲೆ ದೊಡ್ಡ ದೊಡ್ಡ ಕಂಪನಿಗಳಾದ ಯಾಹೂ, ಮೈಕ್ರೋಸಾಪ್ಟ್, ಗೂಗಲ್ನ ಕಣ್ಣುಗಳು ಬಿದ್ದು, ಕೊನೆಗೆ ಯೂಟ್ಯೂಬ್ 1.65 ಬಿಲಿಯನ್ ಡಾಲರ್‌ಗೆ ಗೂಗಲ್ ಪಾಲಾಯಿತು.!!
ಹಾಗಾದರೆ, ಯೂಟ್ಯೂಬ್ ಹುಟ್ಟಿಹಾಕಿದ್ದು ಯಾರು? ಅವರಿಗೇಕೆ ಯೂಟ್ಯೂಬ್ ಬೇಕಾಗಿತ್ತು? ಯೂಟ್ಯೂಬ್ ಹುಟ್ಟಿದ್ದು ಹೇಗೆ? ಎಂಬ ಕುತೋಹಲ ನಿಮ್ಮನ್ನು ಕಾಡುತ್ತಿದೆಯೇ? ಇಂದಿನ ಲೇಖನದಲ್ಲಿ ಯೂಟ್ಯೂಬ್ ಹುಟ್ಟು, ಬೆಳವಣಿಗೆ ಮತ್ತು ಇನ್ನಿತರೆ ಏನೆಲ್ಲಾ ವಿಶೇಷ ಅಂಶಗಳನ್ನು ಯೂಟ್ಯೂಬ್ ಹೊಂದಿದೆ ಎಂಬುದನ್ನು ತಿಳಿದುಕೊಳ್ಳೋಣ!!

ಯೂಟ್ಯೂಬ್ ಹುಟ್ಟಿದ್ದು ಯಾವಾಗ?
ಈಗಿರುವಂತೆ ಯಾರು ಬೇಕಾದರು ಹೊಸದೊಂದು ಜಾಲತಾಣವನ್ನು ತೆರೆದು ವೀಡಿಯೋಗಳನ್ನು ಉಳಿದವರಿಗೆ ಹಂಚಿಕೊಳ್ಳುವಂತಹ ಆಯ್ಕೆ ಮೊದಲು ಇರಲಿಲ್ಲ. ಯಾಹೂ, ಗೂಗಲ್, ಮೈಕ್ರೋಸಾಪ್ಟ್ ನಂತಹ ದೊಡ್ಡ ಕಂಪನಿಗಳು ಮಾತ್ರ ತಮ್ಮ ಮಾಹಿತಿ ಹಾಗೂ ಸುದ್ದಿಗಳನ್ನು ಹಂಚಿಕೊಳ್ಳುವ ತಾಕತ್ತನ್ನು ಹೊಂದಿದ್ದ ಸಮಯ 2005ರಲ್ಲಿ ಯೂಟ್ಯೂಬ್ ಹುಟ್ಟಿತ್ತು.!!

ಯೂಟ್ಯೂಬ್ ಹುಟ್ಟಿಹಾಕಿದ್ದು ಯಾರು?
ವೀಡಿಯೋಗಳನ್ನು ಹಂಚಿಕೊಳ್ಳಲು ನೆರವಾಗುವ ಜಾಲತಾಣವನ್ನು ಹೊರತರಬೇಕು ಎಂಬ ಪ್ರಯತ್ನದಲ್ಲಿದ್ದ ಚ್ಯಾಡ್ ಹರ್ಲಿ(Chad Hurley), ಸ್ಟೀವ್ ಚೆನ್ (Steve Chen) ಹಾಗೂ ಜಾವೆದ್ ಕರೀಮ್ (Jawed Karim) ಎಂಬ ಮೂವರು ಸೇರಿ ಹುಟ್ಟುಹಾಕಿದ ಕಂಪನಿಯೇ ಯೂಟ್ಯೂಬ್!

ಅವರಿಗೇಕೆ ಯೂಟ್ಯೂಬ್ ಬೇಕಾಗಿತ್ತು?
ಕ್ಯಾಲಿಪೋರ್ನಿಯಾದ ಪೇಪಾಲ್(PayPal) ಕಂಪನಿಯಲ್ಲಿ ಮೂವರು ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಹೊಸದೇನಾದರು ಮಾಡಬೇಕು ಎಂಬ ತುಡಿತವಿದ್ದ ಮೂವರು ಮಾರುಕಟ್ಟೆಯ ಬೇಡಿಕೆಗಳನ್ನು ಅರಿತು ಕೆಲಸ ಮಾಡಿದರು. ಈ ಸಮಯದಲ್ಲಿ ಅವರ ನಡುವೆ ನಡೆದ ಹಲವು ಸಂಗತಿಗಳೂ ಯೂಟ್ಯೂಬ್ ಹುಟ್ಟಲು ಕಾರಣವಾಗಿತ್ತು.!!

ಯೂಟ್ಯೂಬ್ ಹುಟ್ಟಲು ಮುಖ್ಯ ಕಾರಣಗಳೇನು?
ಇಂಡೋನೇಶಿಯಾಕ್ಕೆ ಅಪ್ಪಳಿಸಿದ ಸುನಾಮಿಯ ಕುರಿತು ಇಡೀ ಜಗತ್ತೇ ಮಾತನಾಡಿದರೂ ಆ ಬಗ್ಗೆ ವಿವರ ತಿಳಿಯಬಯಸಿದ್ದ ಕರೀಮ್‍ಗೆ ಯಾವ ವೀಡಿಯೋ ಆಗಲಿ ಸುದ್ದಿತುಣುಕಾಗಲಿ ಮಿಂದಾಣಗಳಲ್ಲಿ ಸಿಕ್ಕಿರಲಿಲ್ಲ. ಹೀಗೆಯೇ, 2004 ರಲ್ಲಿ ಟೆಕ್ಸಾಸ್ ನಲ್ಲಿ ನಡೆದ ಸೂಪರ್ ಬೌಲ್ ಕಾರ‍್ಯಕ್ರಮದಲ್ಲಿ, ಹಾಡುಗಾರ್ತಿ ಜಾನೆಟ್ ಜಾಕ್ಸನ್ ಬಟ್ಟೆಯನ್ನು ಕೈತಪ್ಪಿ ಎಳೆದಿದ್ದ ಜಸ್ಟಿನ್ ಟಿಂಬರಲೇಕ್ ಕುರಿತ ವಿಡಿಯೋಗಳು ಸಿಗದೇ ಇರುವುದು ಸಹ ಯೂಟ್ಯೂಬ್ ಹುಟ್ಟಿಗೆ ಕಾರಣವಾಗಿದ್ದವು.!!

ಯೂಟ್ಯೂಬ್ ಹುಟ್ಟಿದ್ದು ಹೇಗೆ?
ಪೆಬ್ರವರಿ, 14 2005 ರಂದು www.youtube.com ಎಂಬ ನೆಲೆಯ ಹೆಸರನ್ನು ನೋಂದಾಯಿಸಲಾಯಿತು. ಹೆಚ್ಚು ಹಣವನ್ನು ಸಹ ಹೊಂದಿರದ ಯೂಟ್ಯೂಬ್ ಹರಿಕಾರರು ತಮ್ಮ ತಮ್ಮ ಮನೆಗಳಿಂದಲೇ ಮೊದಲ ಕೆಲಸವನ್ನು ಆರಂಭಿಸಿದರು. 2005ರ ಹೊತ್ತಿಗೆ ಸೆಕೋಯ ಕ್ಯಾಪಿಟಲ್ಎಂಬ ಹೂಡಿಕೆದಾರ ಕಂಪನಿ, 11.5 ಮಿಲಿಯನ್ ಡಾಲರ್ ಹಣ ಹೂಡಿದ ನಂತರ ಕಂಪೆನಿಯ ಹಣೆಬರಹವೇ ಬದಲಾಗಿತ್ತು.!!

ಪ್ರಸ್ತುತ ಯೂಟ್ಯೂಬ್!!
ನವೆಂಬರ್ 13, 2006 ಹೊತ್ತಿನಲ್ಲಿ ಯೂಟ್ಯೂಬಿನಲ್ಲಿ 65 ಮಂದಿ ಕೆಲಸ ಮಾಡುತ್ತಿದ್ದರು. ಅಂದು 1.65 ಬಿಲಿಯನ್ ಡಾಲರ್‌ಗೆ ಯೂಟ್ಯೂಬಿನ ಮಾರಾಟವಾಯಿತು. ನಂತರ ಇದೀಗ ಆಲ್ಪಾಬೆಟ್ (Alphabet Inc) ಎಂಬ ಕಂಪನಿಯೊಂದನ್ನು ಗೂಗಲ್ ಹುಟ್ಟುಹಾಕಿದೆ. ಹಾಗಾಗಿ ಅಲ್ಪಾಬೆಟ್ ಕಂಪನಿಯ ಅಡಿಯಲ್ಲಿ ಯೂಟ್ಯೂಬ್ ಈಗ ಕೆಲಸ ಮಾಡುತ್ತಿದೆ ಇನ್ನೂ ಎತ್ತರಕ್ಕೆ ಬೆಳೆಯುವ ಹಮ್ಮುಗೆಗಳನ್ನು ಹಾಕಿಕೊಂಡಿದೆ.!!


Click it and Unblock the Notifications








