ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

By Shwetha
|

ದುಬಾರಿ ಸ್ಮಾರ್ಟ್‌ಫೋನ್ ಅನ್ನು ಕೊಂಡುಕೊಳ್ಳುವುದು ಇಂದಿನ ಆಧುನಿಕ ಯುಗದಲ್ಲಿ ಕಷ್ಟದ ಮಾತಲ್ಲವಾದರೂ ಅದನ್ನು ಜತನದಿಂದ ಕಾಪಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸವಾಗಿದೆ. ಅದರಲ್ಲೂ ಐಫೋನ್‌ನಂತಹ ದುಬಾರಿ ಫೋನ್ ಅನ್ನು ನೀವು ಹೊಂದಿರುವಿರಿ ಎಂದಾದಲ್ಲಿ ಅದರ ಸಂರಕ್ಷಣೆ ನಿಮ್ಮ ಫೋನ್ ಅನ್ನು ಸಂರಕ್ಷಿಸುವ ಕೆಲವು ಸರಳ ಉಪಾಯಗಳನ್ನು ನಾವಿಲ್ಲಿ ನೀಡುತ್ತಿದ್ದು ಇದು ಖಂಡಿತ ನಿಮಗೆ ಸಹಕಾರಿ ಎಂದೆನಿಸಲಿದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಆ ಪರಿಹಾರಗಳನ್ನು ಅರಿತುಕೊಂಡು ಮುಂದುವರಿಯಿರಿ ಮತ್ತು ನಿಮ್ಮ ಐಫೋನ್ ಭದ್ರತೆಯನ್ನು ಮಾಡಿಕೊಳ್ಳಿ.

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ಇಂದಿನ ಯುಗದಲ್ಲಿ ಸ್ಮಾರ್ಟ್‌ಫೋನ್ ಅನ್ನು ನಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ನಾವು ಬಳಸುತ್ತಿದ್ದು ಇಮೇಲ್ ರಚನೆ, ಬ್ಯಾಂಕಿಂಗ್, ಬ್ರೌಸಿಂಗ್, ಶಾಪಿಂಗ್ ಇವೇ ಮುಂತಾದ ಕೆಲಸಗಳಿಗೆ ಸ್ಮಾರ್ಟ್‌ಫೋನ್ ಅತ್ಯುತ್ತಮ ಎಂದೆನಿಸಿದೆ. ನಿಮ್ಮ ಫೋನ್ ಅನ್ನು ಲಾಕ್ ಮಾಡುವುದು ಗೌಪ್ಯ ಮಾಹಿತಿಗಳನ್ನು ಹೊರಗಿನವರಿಗೆ ತಿಳಿಯದಂತೆ ಮಾಡುತ್ತದೆ. ನಿಮ್ಮ ಡಿವೈಸ್‌ನಲ್ಲಿ ಸೆಟ್ಟಿಂಗ್ಸ್ ಅಪ್ಲಿಕೇಶನ್‌ಗೆ ಹೋಗಿ ಮತ್ತು ಜನರಲ್ ಟ್ಯಾಬ್‌ನಲ್ಲಿ "ಟಚ್ ಐಡಿ ಮತ್ತು ಪಾಸ್‌ಕೋಡ್ ಲಾಕ್" ಇಲ್ಲಿ ಸಂಖ್ಯಾತ್ಮಕ ಪಿನ್ ಅಥವಾ ಟಚ್ ಐಡಿ ಫಿಂಗರ್ ಪ್ರಿಂಟ್ ಸ್ಕ್ಯಾನಿಂಗ್ ಆನ್ ಮಾಡಿ.

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ನಿಮ್ಮ ಐಫೋನ್‌ನಲ್ಲಿ "ಟಚ್ ಐಡಿ ಮತ್ತು ಪಾಸ್‌ಕೋಡ್" ತದನಂತರ "ಸಿಂಪಲ್ ಪಾಸ್‌ಕೋಡ್" ಆಫ್ ಮಾಡಿ. ಇದು ನಿಮಗೆ ದೀರ್ಘವಾದ ಅಂತೆಯೇ ಕ್ಲಿಷ್ಟಕರವಾದ ಪಾಸ್‌ವರ್ಡ್‌ಗಳ ರಚನೆಗೆ ನೆರವನ್ನೀಯುತ್ತದೆ.

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ಹೊರಗಿನವರು ನಿಮ್ಮ ಫೋನ್‌ಗೆ ಅಡಚಣೆಯನ್ನುಂಟು ಮಾಡುತ್ತಾರೆ ಎಂಬ ಭಯ ನಿಮ್ಮಲ್ಲಿದ್ದರೆ ಸೆಟ್ಟಿಂಗ್ಸ್ ಅದೇ ಪುಟದಲ್ಲಿ "ಇರೇಸ್ ಡೇಟಾ" ಸಕ್ರಿಯಗೊಳಿಸಿ ಪಿನ್‌ ಮಾದರಿ 10 ಕ್ಕಿಂತ ಹೆಚ್ಚು ಬಾರಿ ತಪ್ಪಾಗಿದ್ದರೆ ಇದು ಫೋನ್ ಅನ್ನು ವೈಪ್ ಮಾಡುತ್ತದೆ.

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ನಿಮ್ಮ ಫೋನ್‌ನಲ್ಲಿ ಹೆಚ್ಚು ಅಪ್ಲಿಕೇಶನ್‌ಗಳ ಸಂಗ್ರಹ ಇದೆ ಮತ್ತು ನಿಮಗೆ ಅವುಗಳು ಅಡಚಣೆಯನ್ನುಂಟು ಮಾಡುತ್ತಿವೆ ಎಂದಾದಲ್ಲಿ ನಿಮ್ಮ ಸೆಟ್ಟಿಂಗ್ ಅಪ್ಲಿಕೇಶನ್‌ಗೆ ಹೋಗಿ ಮತ್ತು "ಪ್ರೈವಸಿ" ಟ್ಯಾಬ್ ಅನ್ನು ಸಮೀಪಿಸಿ. ಇಲ್ಲಿ ನಿಮಗೆ ಬೇಡದೇ ಇರುವ ಅಪ್ಲಿಕೇಶನ್‌ಗಳನ್ನು ಆಫ್ ಮಾಡಬಹುದಾಗಿದೆ.

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ಲಾಕ್ ಸ್ಕ್ರೀನ್‌ನಲ್ಲಿ ಅಧಿಸೂಚನೆಗಳ ಸಾರಾಂಶವನ್ನು ನೀಡುವುದು ಉತ್ತಮ ಅಂಶವೇ. ಅದಾಗ್ಯೂ ಇದು ಖಾಸಗಿ ಅಥವಾ ಗೌಪ್ಯ ಡೇಟಾವನ್ನು ನೀಡಿದಲ್ಲಿ ನಿಮಗೆ ತೊಂದರೆ ಖಂಡಿತ. ಆದ್ದರಿಂದ ಅಧಿಸೂಚನೆಗಳನ್ನು ಆಫ್ ಮಾಡಿ.

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ಅಧಿಸೂಚನೆಗಳೊಂದಿಗೆ, ನಿಮ್ಮ ಫೋನ್ ಲಾಕ್ ಆದಾಗ ಸಿರಿ ಡೇಟಾವನ್ನು ಹೊರಹಾಕಬಹುದು. ಇದನ್ನು ನಿಷ್ಕ್ರಿಯಗೊಳಿಸಲು ಸೆಟ್ಟಿಂಗ್ಸ್, ನಂತರ "ಟಚ್ ಐಡಿ ಮತ್ತು ಪಾಸ್‌ಕೋಡ್" ಮತ್ತು "ಅಲೋ ಆಕ್ಸೆಸ್ ವೆನ್ ಲಾಕ್‌ಡ್" ಇದನ್ನು ಆಫ್ ಮಾಡಿ.

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ಐಫೋನ್ ಸುರಕ್ಷತೆಗೆ ಟಾಪ್ ಸಲಹೆಗಳು ನಿಮಗಾಗಿ

ಆಟೊಫಿಲ್ ಎಂಬುದು ಸರಳ ಫೀಚರ್ ಆಗಿದ್ದು ಇದು ನಿಮ್ಮ ಹೆಸರು, ಬಳಕೆದಾರಹೆಸರು, ಪಾಸ್‌ವರ್ಡ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಸಫಾರಿ ಕಾಣಬಹುದು. ಇದನ್ನು ಆಫ್ ಮಾಡಲು, ಸೆಟ್ಟಿಂಗ್ಸ್ ಇದಕ್ಕೆ ಹೋಗಿ ನಂತರ ಜನರಲ್ ಇಲ್ಲಿ "ಪಾಸ್‌ವರ್ಡ್ ಮತ್ತು ಆಟೊಫಿಲ್" ಆಫ್ ಮಾಡಿ.

Best Mobiles in India

English summary
This article tells about Seven tips to secure your iPhone from hackers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X