ರೀಫರ್ಬಿಶಡ್ ಸ್ಮಾರ್ಟ್‌ಫೋನ್‌ ಬೆಲೆ ಏಕೆ ಕಡಿಮೆ?..ಖರೀದಿಸಿದರೆ ಏನೆಲ್ಲಾ ಲಾಭ?

ಬೆಲೆ ಸಹ ಕಡಿಮೆ ಇರುವುದರಿಂದ ಇವುಗಳಿಗೆ ಬೇಡಿಕೆ ಸಹ ಹೆಚ್ಚಾಗಿರುತ್ತದೆ.!!

|

ಮೊಬೈಲ್ ಮಾರುಕಟ್ಟೆಯಲ್ಲಿ ರೀಫರ್ಬಿಶಡ್ ಸ್ಮಾರ್ಟ್‌ಫೋನ್‌ ಎಂಬ ಎರಡು ಪದಗಳನ್ನು ನೀವು ಕೇಳಿರುತ್ತೀರಾ. ಹಳೆ ಸ್ಮಾರ್ಟ್‌ಫೋನ್‌ಗಳನ್ನೆ ಹೊಸದಾಗಿಸಿದ ಮಾರುಕಟ್ಟೆಗೆ ಬಿಡುವುದನ್ನೇ ರೀಫರ್ಬಿಶಡ್ ಸ್ಮಾರ್ಟ್‌ಫೋನ್ ಎಂದು ಕರೆಯುತ್ತಾರೆ.!! ಬೆಲೆ ಸಹ ಕಡಿಮೆ ಇರುವುದರಿಂದ ಇವುಗಳಿಗೆ ಬೇಡಿಕೆ ಸಹ ಹೆಚ್ಚಾಗಿರುತ್ತದೆ.!!

ಇಂತಹ ರೀಫರ್ಬಿಶಡ್ ಸ್ಮಾರ್ಟ್‌ಫೋನ್‌ಗಳನ್ನೇ ಮಾರಾಟ ಮಾಡಲು ಹಲವು ವೆಬ್‌ಸೈಟ್‌ಗಳು ಕಾರ್ಯನಿರತವಾಗಿದ್ದು, ಹಾಗಾದರೆ, ರೀಫರ್ಬಿಶಡ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಯೋಗ್ಯವೇ? ಇಂತಹ ಫೋನ್‌ಗಳು ಏನಾದರೂ ತೊಂದರೆಗೆ ಸಿಲುಕುತ್ತವೆಯೇ? ಎಂಬ ಪ್ರಶ್ನೆಗಳಿಗೆ ಕೆಳಗಿನ ಸ್ಲೈಡರ್‌ಗಳಲ್ಲಿ ಉತ್ತರ ಪಡೆದುಕೊಳ್ಳಿ.!!

ರೀಫರ್ಬಿಶ್‌ಡ್ ಎಂದರೆ ಸೆಕೆಂಡ್ಸ್ ಅಲ್ಲ.!

ರೀಫರ್ಬಿಶ್‌ಡ್ ಎಂದರೆ ಸೆಕೆಂಡ್ಸ್ ಅಲ್ಲ.!

ರೀಫರ್ಬಿಶ್‌ಡ್ ಮೊಬೈಲ್ ಎಂದರೆ ಸಾಮಾನ್ಯವಾಗಿ ಸೆಕೆಂಡ್ಸ್ ಮೊಬೈಲ್ ಎಂದು ಕರೆಯುವುದು ಸಾಮಾನ್ಯ. ಆದರೆ, ರೀಫರ್ಬಿಶ್‌ಡ್ ಮೊಬೈಲ್ ಎಂದರೆ 'ಮತ್ತೆ ಹೊಸದಾಗಿಸಿದ' ಎಂದು ಅರ್ಥೈಸಿಕೊಳ್ಳಬಹುದು.! ರೀಫರ್ಬಿಶ್‌ಡ್ ಮೊಬೈಲ್ ಸಹ ಕಂಪೆನಿಯಿಂದಲೇ ಹೊರಬಂದಿದ್ದು ಗುಣಮಟ್ಟದಲ್ಲಿಯೂ ಉತ್ತಮವಾಗಿರುತ್ತವೆ.!!

ರೀಫರ್ಬಿಶ್ ಮೊಬೈಲ್‌ಗಳು ಯಾವುವು?

ರೀಫರ್ಬಿಶ್ ಮೊಬೈಲ್‌ಗಳು ಯಾವುವು?

ಕಂಪೆನಿ ನೀಡುವ ವಾರಂಟಿ ಅವಧಿಯಲ್ಲಿ ಕೆಟ್ಟುಹೋದ ಗ್ರಾಹಕರು ಸೇವಾಕೇಂದ್ರಕ್ಕೆ ಮರಳಿಸಿದ ಮೊಬೈಲ್‌ಗಳನ್ನು ಅವುಗಳ ತಯಾರಕರೇ ಸರಿಪಡಿಸಿ ಈ ಹೆಸರಿನಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡುತ್ತಾರೆ. ಇನ್ನು ಅಂಗಡಿಗಳಲ್ಲಿ ಪ್ರದರ್ಶನಕ್ಕಿಟ್ಟ ಮೊಬೈಲ್‌ಗಳು ಮತ್ತು ರಿವ್ಯೂವ್ ಮೊಬೈಲ್‌ಗಳು ರೀಫರ್ಬಿಶ್‌ಡ್ ಮೊಬೈಲ್ ಆಗುತ್ತವೆ.

ಸೆಕೆಂಡ್ ಹ್ಯಾಂಡ್ ಸಾಧನಗಳಿಗಿಂತ ಭಿನ್ನ!!

ಸೆಕೆಂಡ್ ಹ್ಯಾಂಡ್ ಸಾಧನಗಳಿಗಿಂತ ಭಿನ್ನ!!

ರೀಫರ್ಬಿಶ್ ಆಗುವುದಕ್ಕೂ ಮುನ್ನ ಬಳಕೆಯಾಗಿರುವ ಈ ಫೋನ್‌ಗಳಲ್ಲಿ ಸಣ್ಣಪುಟ್ಟ ಗೀಚುಗಳು ಇರುವುದು ಕಾಮನ್ ಆಗಿರುತ್ತದೆ. ಈ ಮೊಬೈಲ್‌ಗಳನ್ನು ತಯಾರಕರೇ ಸಂಪೂರ್ಣವಾಗಿ ಪರೀಕ್ಷಿಸಿ ಹೊಸ ಭಾಗಗಳನ್ನೂ ಅಳವಡಿಸಿರುವುದರಿಂದ ಇವು ಸೆಕೆಂಡ್ ಹ್ಯಾಂಡ್ ಸಾಧನಗಳಿಗಿಂತ ಭಿನ್ನ ಎಂದು ಹೇಳಬಹುದು.!!

ಬೆಲೆ ಕಡಿಮೆ ಉಪಯೋಗ ಜಾಸ್ತಿ!!

ಬೆಲೆ ಕಡಿಮೆ ಉಪಯೋಗ ಜಾಸ್ತಿ!!

ರೀಫರ್ಬಿಶ್‌ಡ್ ಆಗಿ ಹೊರಬರುವ ಮೊಬೈಲ್‌ಗಳ ಬೆಲೆ ಸಾಮಾನ್ಯಕ್ಕಿಂತ 40 ರಿಂದ 50 ಪರ್ಸೆಂಟ್‌ ವರೆಗೂ ಬೆಲೆ ಕಳೆದುಕೊಂಡಿರುತ್ತವೆ.. ಆದರೂ ಈ ಮೊಬೈಲ್‌ಗಳ ಗುಣಮಟ್ಟ ಅತ್ಯುತ್ತಮವಾಗಿಯೇ ಇರುವುದರಿಂದ ಇವುಗಳ ಉಪಯೋಗ ಜಾಸ್ತಿ ಎನ್ನಬಹುದು.!! ಏನಂತಿರಾ?

<strong>ಇದೇ 21ಕ್ಕೆ 500 ರೂಪಾಯಿಗೆ ಜಿಯೋ 4G ಫೋನ್ ಬಿಡುಗಡೆ!..ಪ್ರಮುಖ ಪತ್ರಿಕೆ ವರದಿ!!</strong>ಇದೇ 21ಕ್ಕೆ 500 ರೂಪಾಯಿಗೆ ಜಿಯೋ 4G ಫೋನ್ ಬಿಡುಗಡೆ!..ಪ್ರಮುಖ ಪತ್ರಿಕೆ ವರದಿ!!

Best Mobiles in India

English summary
Some may sell a defective phone that has been returned and repaired.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X