'ಎಟಿಎಂ ಕಾರ್ಡ್'ನಲ್ಲಿನ 'ಸಿವಿವಿ' ನಂಬರ್ ಅನ್ನು ಸ್ಕ್ರಾಚ್ ಮಾಡಿ ಬಳಸಿ!..ಏಕೆ?
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಕಳ್ಳರು ಹೆಚ್ಚಾಗುತ್ತಿದ್ದಾರೆ ಮತ್ತು ಆ ಸುದ್ದಿಗಳನ್ನು ನಾವು ಕೇಳುತ್ತಲೇ ಇದ್ದೇವೆ. ಆದರೆ, ಇವುಗಳಿಂದ ನಾವೇನು ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಮಾತ್ರ ಮರೆತುಬಿಟ್ಟಿದ್ದೇವೆ.! ಹೌದು, ಇತ್ತೀಚೆಗೆ ಯಾರೋ ಒಬ್ಬ ವ್ಯಕ್ತಿ ತನ್ನ ಅಕೌಂಟ್ ಹ್ಯಾಕ್ ಆಗಿ 1 ಲಕ್ಷ ರೂ. ಕಳೆದುಕೊಂಡ ಸುದ್ದಿಯನ್ನು ಓದಿ ಮರೆತುಬಿಡುತ್ತೀರಾ. ಆದರೆ, ಇದೇ ಪರಿಸ್ಥಿತಿ ನಿಮಗೆ ಎದುರಾದಾಗ ಆಗುವ ನೋವು ಖಂಡಿತವಾಗಿಯೂ ನಿಮಗೆ ತಡೆದುಕೊಳ್ಳಲು ಸಾಧ್ಯವಾಗದ್ದು.

ಹಾಗಾಗಿ, ಇಂದಿನ ಲೇಖನದಲ್ಲಿ ನೀವು ಆನ್ಲೈನ್ ವ್ಯವಹಾರ ನಡೆಸುವಾಗ ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿರುವ 10 ಸಂಗತಿಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ. ನೀವು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆ ಮಾಡುವ ಮುನ್ನ ಮತ್ತು ಆನ್ಲೈನ್ ಹಣ ವ್ಯವಹಾರ ಮಾಡುವ ಮುನ್ನ ಪಾಲಿಸುವುವ ಕೆಲ ಸಾಮಾನ್ಯ ನಿಯಮಗಳು ನಿಮ್ಮ ಹಣ ಇತರರ ಪಾಲಾಗುವುದನ್ನು ತಪ್ಪಿಸುತ್ತದೆ. ಈ ಕೆಳಗೆ ನೀಡಲಾಗಿರುವ 10 ಸಲಹೆಗಳು ನಿಮಗೆ ಎಂದೂ ಕೂಡ ಸಮಸ್ಯೆ ಆಗದಂತೆ ತಡೆಯಬಲ್ಲವು.

ಪಬ್ಲಿಕ್ ಕಂಪ್ಯೂಟರ್ ಗಳಲ್ಲಿ ಆನ್ಲೈನ್ ಟ್ರಾನ್ಸ್ಯಾಕ್ಷನ್ ಗಳನ್ನು ಮಾಡುವುದನ್ನು ತಡೆಯಿರಿ
ನಿಮ್ಮ ಪರ್ಸನಲ್ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳಿಂದ ಮಾತ್ರವೇ ಆನ್ ಲೈನ್ ಟ್ರಾನ್ಸ್ಯಾಕ್ಷನ್ ಮಾಡಿ. ಪಬ್ಲಿಕ್ ಅಥವಾ ಶೇರ್ಡ್ ಪಿಸಿ/ ಲ್ಯಾಪ್ ಟಾಪ್ ನಲ್ಲಿ ಆನ್ ಲೈನ್ ಟ್ರಾನ್ಸ್ಯಾಕ್ಷನ್ ಮಾಡಬೇಡಿ. ಇದರಿಂದ ನಿಮ್ಮ ಬ್ಯಾಂಕ್ ಖಾಸಾಗಿ ಮಾಹಿತಿಗಳು ಇತರರ ಕೈಗೆ ಸೇರುವುದು ತಪ್ಪುತ್ತದೆ.

ಇಂಟರ್ನೆಟ್ ಸೆಟ್ಟಿಂಗ್ಸ್ ನಲ್ಲಿ ಆಟೋ-ಫಿಲ್ಲಿಂಗ್ ಡಾಟಾ ಅನೇಬಲ್ ಆಗಿಲ್ಲದಂತೆ ನೋಡಿಕೊಳ್ಳಿ
ಖಂಡಿತವಾಗಲೂ ಆಟೋ ಫಿಲ್ಲಿಂಗ್ ಡಾಟಾ ಸೆಟ್ಟಿಂಗ್ಸ್ ಅನೇಬಲ್ ಆಗಿರುವುದು ಎಷ್ಟೋ ಸಂದರ್ಬದಲ್ಲಿ ಸುಲಭವಾಗುತ್ತದೆ ನಿಜ. ಆನ್ ಲೈನ್ ಟಾಸ್ಕ್ ಗಳಲ್ಲಿ ಸಮಯವನ್ನು ಉಳಿಸುತ್ತದೆ ಎಂಬುದೇನೋ ನಿಜವೇ. ಆದರೆ ಯಾವತ್ತೂ ಇದನ್ನು ಅನೇಬಲ್ ಮಾಡಬೇಡಿ. ಇದರ ಅರ್ಥ ಇಷ್ಟೇ ನೀವು ನಿಮ್ಮ ಹಣಕಾಸಿಗೆ ಸಂಬಂಧಪಟ್ಟ ಡಾಟಾಗಳನ್ನು ಸೇವ್ ಮಾಡುತ್ತಿದ್ದೀರಿ ಎಂದರ್ಥ.

ಕ್ರೆಡಿಟ್ / ಡೆಬಿಟ್ ಕಾರ್ಡ್ ನಲ್ಲಿ ಸಿವಿವಿ ನಂಬರ್ ಅನ್ನು ಸ್ಕ್ರಾಚ್ ಮಾಡಿ ಅಥವಾ ಅಳಿಸಿ ಬಿಡಿ
ನಿಮ್ಮ ಕಾರ್ಡಿನ ಹಿಂಭಾಗದಲ್ಲಿರುವ ಕಾರ್ಡಿನ ಸಿವಿವಿ ನಂಬರ್ ನ್ನು ಅಳಿಸಿ ಬಿಡಬಹುದು. ಆದರೆ ಖಂಡಿತವಾಗಲೂ ಇದನ್ನು ಮಾಡುವುದಕ್ಕಿಂತ ಮುನ್ನ ಆ ನಂಬರ್ ನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಹೀಗೆ ಮಾಡುವುದರಿಂದಾಗಿ ನಿಮ್ಮ ಕಾರ್ಡ್ ನ್ನು ಅನಧಿಕೃತ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಆನ್ಲೈನ್ ಮೂಲಕ ಹಣಕಾಸು ವ್ಯವಹಾರಕ್ಕೆ ಬಳಸಲು ಸಾಧ್ಯವಾಗುವುದಿಲ್ಲ.

ಇ-ಮೇಲ್ ಅಥವಾ ಫೋನ್ ನಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.
ಇತ್ತೀಚೆಗೆ ಕಳ್ಳರು ಮುಗ್ಧ ಕಾರ್ಡ್ ಮಾಲೀಕರನ್ನು ಟಾರ್ಗೆಟ್ ಮಾಡಿದ್ದು ತಮ್ಮ ಕಾರ್ಡ್ ವಿವರಗಳನ್ನು ಆನ್ ಲೈನ್ ನಲ್ಲಿ ತಿಳಿಸುವಂತೆ ಹೇಳುತ್ತಿದ್ದಾರೆ.ಯಾವುದೇ ಕಾರಣಕ್ಕೂ ಆನ್ ಲೈನ್ ನಲ್ಲಿ ನಿಮ್ಮ ಕಾರ್ಡಿನ ವಿವರಗಳನ್ನು ಫೋನ್ ಅಥವಾ ಇಮೇಲ್ ಮೂಲಕ ಯಾರೊಂದಿಗೂ ಕೂಡ ಹಂಚಿಕೊಳ್ಳಬೇಡಿ.

ಇಮೇಲ್ ಅಥವಾ ಎಸ್ಎಂಎಸ್ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ವೆಬ್ ಸೈಟ್ ಲಿಂಕ್ ಬಂದಿದ್ದಲ್ಲಿ ಅದನ್ನು ಕ್ಲಿಕ್ಕಿಸಬೇಡಿ.
ಇಮೇಲ್ ಅಥವಾ ಎಸ್ಎಂಎಸ್ ಗಳಲ್ಲಿರುವ ನಿಮ್ಮ ಬ್ಯಾಂಕ್ ಗೆ ಆಕ್ಸಿಸ್ ಅಥವಾ ಇತರೆ ಯಾವುದೇ ಆನೈನ್ ಡೆಸ್ಟಿನೇಷನ್ ಗಳನ್ನು ಕ್ಲಿಕ್ಕಿಸಬೇಡಿ.ಯಾವಾಗಲೂ ಬ್ರೌಸರ್ ತೆರೆದು ವೆಬ್ ಸೈಟ್ ಅಡ್ರೆಸ್ ಟೈಪ್ ಮಾಡಿ ಮತ್ತು ಯುಆರ್ ಎಲ್ ಸ್ವತಃ ನೀವೇ ಟೈಪ್ ಮಾಡಿ ನಂತರವೇ ತೆರೆಯಿರಿ.

ಅಧಿಕೃತ ಸ್ಟೋರ್ ಗಳಿಂದ ಮಾತ್ರವೇ ಬ್ಯಾಂಕಿಂಗ್ ಅಥವಾ ಇತರೆ ಫೈನಾನ್ಶಿಯಲ್ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ.
ಪ್ರತಿ ಕೆಲವು ದಿನಗಳಿಗೊಮ್ಮೆ ಫೇಕ್ ಬ್ಯಾಂಕಿಂಗ್ ಆಪ್ ಗಳ ಬಗ್ಗೆ ಅಲರ್ಟ್ ನ್ನು ನೀಡಲಾಗುತ್ತದೆ. ಕಳೆದ ತಿಂಗಳು ಸೆಕ್ಯುರಿಟಿ ಫರ್ಮ್ ಆಗಿರುವ ಶಾಫೋಸ್ ಲ್ಯಾಬ್ ಎಸ್ ಬಿಐ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್, ಸಿಟಿ ಮತ್ತು ಇತರೆ ಪ್ರಮುಖ ಬ್ಯಾಂಕ್ ಗಳ ಫೇಕ್ ಆಪ್ ಗಳು ಗೂಗಲ್ ಪ್ಲೇ ನಲ್ಲಿ ಲಭ್ಯವಿರುವ ಬಗ್ಗೆ ಎಚ್ಚರಿಕೆಯನ್ನು ನೀಡಿತ್ತು. ಈ ಆಪ್ ಗಳು ಗ್ರಾಹಕರ 1,000 ಕ್ಕೂ ಅಧಿಕ ಡಾಟಾಗಳನ್ನು ಕದಿಯಲು ಸಿದ್ಧಪಡಿಸಿರುವ ಆಪ್ ಆಗಿದೆ.

ಆದಷ್ಟು ಫಿಸಿಕಲ್ ಕಿಬೋರ್ಡ್ ಗಳಿಗಿಂತ ವರ್ಚುವಲ್ ಕೀಬೋರ್ಡ್ ಗಳನ್ನು ಬಳಸಿ
ಹೆಚ್ಚಿನ ಬ್ಯಾಂಕ್ ಗಳು ಇದೀಗ ವರ್ಚುವಲ್ ಕೀಬೋರ್ಡ್ ಗಳನ್ನು ಪಾಸ್ ವರ್ಡ್ ಎಂಟರ್ ಮಾಡಲು ಆಫರ್ ಮಾಡುತ್ತದೆ. ಹಾಗಾಗಿ ಆದಷ್ಟು ವರ್ಚುವಲ್ ಕೀರ್ಬೋಡ್ ಗಳನ್ನೇ ಬಳಸುವುದು ಉತ್ತಮ. ಕೀಲಾಗರ್ಸ್ ಗಳಿಂದ ರಕ್ಷಣೆ ಪಡೆಯಲು ನೀವು ಆದಷ್ಟು ಫಿಸಿಕಲ್ ಕೀಬೋರ್ಡ್ ಗಳನ್ನು ಬಳಸದೇ ಇರುವುದು ಸೂಕ್ತವಾದದ್ದು.

ನೀವು ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸುತ್ತಿರುವ ವೆಬ್ ಸೈಟ್ 'HTTPS' ಆಗಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ
ಇದೊಂದು ಸಾಮಾನ್ಯ ವಿಚಾರ. ಯಾವಾಗಲೂ 'https' ಯುಆರ್ಎಲ್ ನ್ನು ನೀವು ಯಾವುದೇ ಹಣಕಾಸಿನ ವ್ಯವಹಾರ ನಡೆಸುವಾಗ ಗಮನಿಸಬೇಕು. ಅದು ಗ್ರೀನ್ ಬಣ್ಣದಲ್ಲಿ ಇದ್ದಾಗ ಸೇಫ್ ಆಗಿದೆ ಎಂದು ತಿಳಿಯಬಹುದು.

ವಿದೇಶಕ್ಕೆ ತೆರಳದ ಸಂದರ್ಭದಲ್ಲಿ ಅಂತರಾಷ್ಟ್ರೀಯ ಟ್ರಾನ್ಸ್ಯಾಕ್ಷನ್ ಗಳನ್ನು ಡಿಸೇಬಲ್ ಮಾಡಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2-ಫ್ಯಾಕರ್ ಟ್ರಾನ್ಸ್ಯಾಕ್ಷನ್ ನ್ನು ಡೊಮೆಸ್ಟಿಕ್ ಕ್ರೆಡಿಟ್ ಕಾರ್ಡ್ ಟ್ರಾನ್ಸ್ಯಾಕ್ಷನ್ ಗೆ ಕಡ್ಡಾಯಗೊಳಿಸಿದೆ. ಆದರೆ ಇದು ಅಂತರಾಷ್ಟ್ರೀಯ ಟ್ರಾನ್ಸ್ಯಾಕ್ಷನ್ ಗೆ ಕಡ್ಡಾಯವಲ್ಲ. ಪಿಓಎಸ್ ಸಂದರ್ಬದಲ್ಲಿನ ಡೊಮೆಸ್ಟಿಕ್ ಟ್ರಾನ್ಸ್ಯಾಕ್ಷನ್ ಗೆ ಪಿನ್ 2FA ಆಗಿ ಆನ್ ಲೈನ್ ಟ್ರಾನ್ಸ್ಯಾಕ್ಷನ್ ನಲ್ಲಿ ಕೆಲಸ ಮಾಡುತ್ತದೆ. ಓಟಿಪಿ ಎರಡನೇ ಸೆಕ್ಯುರಿಟಿ ಲೇಯರ್ ಆಗಿರುತ್ತದೆ.

ಅಂತರಾಷ್ಟ್ರೀಯ ಟ್ರಾನ್ಸ್ಯಾಕ್ಷನ್ ನಲ್ಲಿ ಸೆಕೆಂಡ್ ಫ್ಯಾಕ್ಟರ್ ಅಥೆಂಟಿಕೇಷನ್ ಬೇಕಾಗುವುದಿಲ್ಲ.
ನೀವು ಗಮನಿಸಬೇಕಾಗಿರುವ ಅಂಶವೇನೆಂದರೆ ಒಂದು ವೇಳೆ ನೀವು ಅಂತರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಹೋಲ್ಡರ್ ಆಗಿದ್ದಲ್ಲಿ, ಅಂತರಾಷ್ಟ್ರೀಯ ಬಳಕೆಯನ್ನು ಡಿಫಾಲ್ಟ್ ಆಗಿ ಅನೇಬಲ್ ಮಾಡಲಾಗಿರುತ್ತದೆ.ಹಾಗಾಗಿ ಸುರಕ್ಷತಾ ದೃಷ್ಟಿಯಿಂದ ಒಂದು ವೇಳೆ ನೀವು ವಿದೇಶಕ್ಕೆ ಸಂಚರಿಸುವ ಪ್ಲಾನ್ ಇಲ್ಲದೇ ಇರುವ ಸಂದರ್ಭದಲ್ಲಿ ನೀವು ಈ ಅಂತರಾಷ್ಟ್ರೀಯ ಟ್ರಾನ್ಸ್ಯಾಕ್ಷನ್ ನ್ನು ಡಿಸೇಬಲ್ ಮಾಡಿ ಇಟ್ಟುಕೊಳ್ಳಬಹುದು.


Click it and Unblock the Notifications








