ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಭದ್ರಪಡಿಸಲು ಇಚ್ಛಿಸುತ್ತಿದ್ದೀರಾ?..ಹಾಗಾದ್ರೆ ಇಲ್ಲಿ ನೋಡಿ!!

ಇಂಟರ್‌ನೆಟ್ ಎಂಬುದು ಇಂದು ವಂಚನೆಯ ಮೂಲ ದಾರಿಯಾಗಿದೆ. ಮೊದಲೆಲ್ಲ ಮನೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳರು ಇಂದು ಆನ್‌ಲೈನ್ ಮೂಲಕ ಜನರನ್ನು ವಂಚಿಸಿ ಕಳ್ಳತನ ಮಾಡುತ್ತಿದ್ದಾರೆ.

|

ಇಂಟರ್‌ನೆಟ್ ಎಂಬುದು ಇಂದು ವಂಚನೆಯ ಮೂಲ ದಾರಿಯಾಗಿದೆ. ಮೊದಲೆಲ್ಲ ಮನೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳರು ಇಂದು ಆನ್‌ಲೈನ್ ಮೂಲಕ ಜನರನ್ನು ವಂಚಿಸಿ ಕಳ್ಳತನ ಮಾಡುತ್ತಿದ್ದಾರೆ. ಇವರನ್ನು ಆನ್‌ಲೈನ್ ಪರಿಭಾಷೆಯಲ್ಲಿ ಇವರನ್ನು ಆನ್‌ಲೈನ್ ವಂಚಕರು, ಸೈಬರ್ ಕ್ರಿಮಿನಲ್ಸ್ ಎಂದು ಕರೆಯುವುದು ರೂಢಿಯಾಗಿದೆ.

ಈ ಆನ್‌ಲೈನ್ ವಂಚಕರು ಹವುವು ರೀತಿಯಲ್ಲಿ ಜನರನ್ನು ಮೋಸಗೊಳಿಸಲು ಪ್ರಯತ್ನ ನಡೆಸುತ್ತಾರೆ. ಕಂಪ್ಯೂಟರ್ ಬಗ್ಗೆ ಹೆಚ್ಚು ತಿಳಿದಿರುವ ಕಳ್ಳರು ನಿಮ್ಮ ಕಂಪ್ಯೂಟರ್ ಹ್ಯಾಕ್ ಮಾಡಲು ಪ್ರಯತ್ನಿಸಿದರೆ, ಸ್ವಲ್ಪ ಕಡಿಮೆ ತಿಳಿದಿರುವ ಕಳ್ಳರು ವಂಚನೆಯ ಕರೆ ಮತ್ತು ಇಮೇಲ್‌ಗಳ ಮೂಲಕ ನಿಮ್ಮನ್ನು ಸಂಪರ್ಕಿಸಿ ಹಣವನ್ನು ದೋಚಲು ಸಂಚು ಹೂಡಿರುತ್ತಾರೆ.

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಭದ್ರಪಡಿಸಲು ಇಚ್ಛಿಸುತ್ತಿದ್ದೀರಾ?!

ಪ್ರತಿದಿನವೂ ಇಂತಹ ವಂಚಕರ ಬಲೆಗೆ ಹಲವರು ಬೀಳುವುದರಿಂದ ಅವರ ಬಳಿ ಲಕ್ಷಾಂತಹ ರೂಪಾಯಿ ಹಣವನ್ನು ಸುಲಭವಾಗಿ ದೋಚುತ್ತಿದ್ದಾರೆ. ಇನ್ನು ಹಲವರು ತಮ್ಮೆಲ್ಲಾ ವಯಕ್ತಿಕ ದಾಖಲೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದದ್ದಾರೆ. ಹಾಗಾಗಿ, ನಿಮ್ಮ ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ಫೋನ್ ಫೈಲ್‌ಗಳನ್ನು ಹೇಗೆ ಭದ್ರಪಡಿಸುವುದು ಎಂಬುದರ ಬಗ್ಗೆ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಸ್ಪ್ಯಾಮ್‌ ಸಂದೇಶಗಳು

ಸ್ಪ್ಯಾಮ್‌ ಸಂದೇಶಗಳು

ನಿಮ್ಮ ವೆಬ್ ಬ್ರೌಸರ್ ಮೂಲಕ ಮಾಲ್‌ವೇರ್‌ಗಳು ನಿಮ್ಮ ಕಂಪ್ಯೂಟರ್ ಅನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ, ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಇಮೇಲ್‌ಗೆ ಬರುವ ಸ್ಪ್ಯಾಮ್‌ ಸಂದೇಶಗಳ ಫೈಲ್‌ಗಳನ್ನು ತೆರೆಯಬೇಡಿ. ತೆರೆದರೂ ಅದರಲ್ಲಿ ಲಾಟರಿ ಹೊಡೆದಿರುವ ಬಗ್ಗೆ ಎಂದೂ ನಂಬಬೇಡಿ.!

ಆಪರೇಟಿಂಗ್ ಸಿಸ್ಟಮ್ ನವೀಕರಿಸಿ!!

ಆಪರೇಟಿಂಗ್ ಸಿಸ್ಟಮ್ ನವೀಕರಿಸಿ!!

ಭದ್ರತೆ ಮತ್ತು ಅದರ ಬಳಕೆಯನ್ನು ಅನುಸರಿಸಿ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ ಆರಿಸಿ. ಬಳಕೆದಾರರ ಖಾತೆಗಳು, ಫೈಲ್ ಅನುಮತಿಗಳು ಮೊದಲಾದ ಮಾಹಿತಿಗಳನ್ನು ಆಗಾಗ್ಗೆ ನವೀಕರಿಸಲಾಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಆಪರೇಟಿಂಗ್ ವ್ಯವಸ್ಥೆಯನ್ನು ಭದ್ರತಾ ನವೀಕರಣಗಳೊಂದಿಗೆ ನವೀಕರಿಸುತ್ತಿರಿ.

ವಿಶ್ವಾಸಾರ್ಹ ಮೂಲ

ವಿಶ್ವಾಸಾರ್ಹ ಮೂಲ

ಯಾವುದೇ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡುವ ಸಂದರ್ಭದಲ್ಲಿ ವಿಶ್ವಾಸಾರ್ಹ ಮೂಲಗಳಿಂದ ಅವುಗಳನ್ನು ಹುಡುಕಿ ಮತ್ತು ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ. ಅದಕ್ಕೂ ಮುಖ್ಯವಾಗಿ ನಿಮಗೆ ಹೆಚ್ಚಿನ ಅರಿವಿಲ್ಲದ ಸಾಫ್ಟ್‌ವೇರ್‌ಗಳನ್ನು ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ಗೆ ಇನ್‌ಸ್ಟಾಲ್ ಮಾಡಬೇಡಿ.!

ಆಯಂಟಿ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿ

ಆಯಂಟಿ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿ

ಆಯಂಟಿ ಸ್ಪೈವೇರ್ ಮತ್ತು ಆಯಂಟಿ ಮಾಲ್‌ವೇರ್ ಪ್ರೊಗ್ರಾಮ್ ಆದ ಸ್ಪೈಬೋಟ್ ಅನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ಚಾಲನೆ ಮಾಡುವುದು ಅತೀ ಅವಶ್ಯಕವಾಗಿದೆ.ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ಗೆ ಉತ್ತಮ ಕಂಪನಿಯ ಆಯಂಟಿ ವೈರಸ್‌ ಸಾಫ್ಟ್‌ವೇರ್‌ ಮಾತ್ರ ಇನ್‌ಸ್ಟಾಲ್ ಮಾಡಿಕೊಳ್ಳಿ.!

ಒಕೆ ಕ್ಲಿಕ್ ಮಾಡಲೇಬೇಡಿ!!

ಒಕೆ ಕ್ಲಿಕ್ ಮಾಡಲೇಬೇಡಿ!!

ಯಾವುದಾದರೂ ಬ್ರೌಸರ್ ತೆರೆದರೆ ಅಲ್ಲಿ ಕಾಣಸಿಗುವ ವೈರಸ್‌ ಸ್ಕ್ಯಾನ್ಸ್, ಫ್ರೀ ಪಿಸಿ ಸ್ಕ್ಯಾನ್ಸ್, ಕ್ಲೀನ್ ಯುವರ್ ಸಿಸ್ಟಮ್‌ ಇತ್ಯಾದಿ ಆಫರ್‌ಗಳನ್ನು ಒಪ್ಪಿಕೊಳ್ಳಬೇಡಿ. ಒಮ್ಮೆ ನೀವು ಅವುಗಳಿಗೆ ಒಪ್ಪಿದರೆ ನಿಮ್ಮ ಸೆಕ್ಯುರಿಟಿ ಮಾಹಿತಿ ಅವರ ಪಾಲಾಗಬಹುದು ಅಥವಾ ಅವರು ನಿಮ್ಮನ್ನು ವಂಚಿಸಬಹುದು.!

ಲಾಗೌಟ್ ಮಾಡುವುದನ್ನು ಮರೆಯದಿರಿ!!

ಲಾಗೌಟ್ ಮಾಡುವುದನ್ನು ಮರೆಯದಿರಿ!!

ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ನಲ್ಲಿ ಇಮೇಲ್‌ ಖಾತೆ, ಬ್ಯಾಂಕ್‌ ಖಾತೆಗಳಿಗೆ ಲಾಗಿನ್‌ ಆದ ನಂತರ ಲಾಗೌಟ್ ಆಗಲು ಮರೆಯಬೇಡಿ.ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ನಲ್ಲಿ ಏನೇ ಡೌನ್‌ಲೋಡ್‌ ಮಾಡಿಕೊಳ್ಳುವಾಗ 'ಇಂತಹ ಸಾಫ್ಟ್‌ವೇರ್‌, ಗೇಮ್‌ನಿಂದ ನಿಮ್ಮ ಕಂಪ್ಯೂಟರ್‌ಗೆ ಹಾನಿಯಾಗಬಹುದು' ಎಂಬ ಸಂದೇಶಗಳನ್ನು ನಿರ್ಲಕ್ಷಿಸಬೇಡಿ.

Best Mobiles in India

English summary
In a world of ubiquitous computers and persistent threats from hackers, protecting your computer is a must. There are many ways to protect against malware. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X