ಹೀಗೆ ಮಾಡುದ್ರೆ 15 ನಿಮಿಷಗಳಲ್ಲಿ ನಿಮ್ಮ ಸ್ಮಾರ್ಟ್ಫೋನ್ ಫುಲ್ ಚಾರ್ಜ್ ಆಗುತ್ತೆ!!
ಕೆಲವೊಮ್ಮೆ ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ನಮ್ಮ ಸ್ಮಾರ್ಟ್ಫೋನ್ ಬ್ಯಾಟರಿ ಚಾರ್ಜ್ ಶೇ. 10% ಗಿಂತ ಕಡಿಮೆ ಇರುವುದನ್ನು ನೋಡಿ ಆಗುವ ಅನುಭವ ನಿಜವಾಗಿಯೂ ತೀರಾ ಕೆಟ್ಟದಾಗಿರುತ್ತದೆ. ಒಂದು ಕ್ಷಣಮಾತ್ರವೂ ಸ್ಮಾರ್ಟ್ಪೋನ್ ಬಿಟ್ಟು ಇರಲು ಸಾಧ್ಯವಿಲ್ಲದ ಈ ದಿನಗಳಲ್ಲಿ ಸ್ಮಾರ್ಟ್ಫೋನ್ ಬ್ಯಾಟರಿ ಖಾಲಿಯಾಗುತ್ತದೆ ಎಂಬುದೇ ಒಂದು ಮಾನಸಿಕ ಕಿರಿಕಿರಿ ಸಮಸ್ಯೆ ಕೂಡ ಎನ್ನುತ್ತವೆ ವರದಿಗಳು. ಹಾಗಾಗಿ, ಮೊಬೈಲ್ ಬಳಕೆದಾರರ ಬಹುದೊಡ್ಡ ಸಮಸ್ಯೆಗಳಲ್ಲಿ ಇದು ಕೂಡ ಒಂದು ಎನ್ನಬಹುದು.
ದಿನದ ಬಹುತೇಕ ಸಮಯವನ್ನು ಸ್ಮಾರ್ಟ್ಫೋನಿನಲ್ಲೇ ಕಳೆಯುವ ಮೊಬೈಲ್ ಬಳಕೆದಾರರಿಗೆ ಬ್ಯಾಟರಿ ಬಹುಬೇಗ ಖಾಲಿಯಾಗುವ ಸಮಸ್ಯೆ ತಟ್ಟೇ ತಟ್ಟುತ್ತಿದೆ. ಆದರೆ, ಮೊಬೈಲ್ ಬಳಕೆದಾರರಿಗೆ ಅದಕ್ಕಿಂತಲೂ ಹೆಚ್ಚು ತೊಂದರೆಯಾಗಿರುವುದು ಸ್ಮಾರ್ಟ್ಫೋನ್ ಬಹುಬೇಗ ಚಾರ್ಜ್ ಆಗದೇ ಇರುವುದು. ಏಕೆಂದರೆ, ಒಂದು ವೇಳೆ ಸ್ಮಾರ್ಟ್ಪೋನ್ ಬೇಗ ಚಾರ್ಜ್ ಆಗುವಂತಿದ್ದರೆ, ಮೊಬೈಲ್ ಬ್ಯಾಟರಿ ಸಮಸ್ಯೆ ಅಷ್ಟೇನು ತಟ್ಟುತ್ತಿರಲಿಲ್ಲ ಎಂಬುದು ಬಹುತೇಕರ ಅಭಿಪ್ರಾಯ.!

ಹಾಗಾಗಿ, ಇಂದಿನ ಲೇಖನದಲ್ಲಿ ಫಾಸ್ಟ್ ಚಾರ್ಜರ್ ತಂತ್ರಜ್ಞಾನ ಇಲ್ಲದಿರುವವ ಸ್ಮಾರ್ಟ್ಪೋನ್ಗಳನ್ನು ಸಹ ಕೇವಲ 15 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ತಿ ಚಾರ್ಜ್ ಮಾಡುವುದು ಹೇಗೆ ಎಂಬ ಟ್ರಿಕ್ಸ್ ಅನ್ನು ನಾವು ಹೇಳಿಕೊಡಲು ಬಂದಿದ್ದೇವೆ. ಸ್ಮಾರ್ಟ್ಫೋನ್ ಬಳಕೆದಾರರು ಸ್ಮಾರ್ಟ್ಪೋನ್ ಚಾರ್ಜ್ ಮಾಡುವಾಗ ಕೆಳಗೆ ನೀಡಿರುವ ಕೆಲವೊಂದು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಕೇವಲ 15 ನಿಮಿಷಗಳಲ್ಲಿ ಅವರ ಸ್ಮಾರ್ಟ್ಫೋನ್ ಪೂರ್ತಿ ಚಾರ್ಜ್ ಆಗಲಿದೆ.

ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿ.
ಯಾವುದೇ ಸಮಯದಲ್ಲಿ ನಿಮ್ಮ ಸ್ಮಾರ್ಟ್ಫೋನ್ ಬಹುಬೇಗ ಚಾರ್ಜ್ ಮಾಡಲು ಅದನ್ನು ಸ್ವಿಚ್ಆಫರ್ ಮಾಡಿ ಚಾರ್ಜ್ ಮಾಡಿ. ಸ್ಮಾರ್ಟ್ಪೋನ್ ಅನ್ನು ಸ್ವಿಚ್ಆಫ್ ಮಾಡಿ ಚಾರ್ಜ್ ಮಾಡುವುದರಿಂದ ಅದರ ಬ್ಯಾಟರಿ ಶೇ.30 ಪರ್ಸೆಂಟ್ಗಿಂತ ಅಧಿಕ ವೇಗದಲ್ಲಿ ಬ್ಯಾಟರಿ ಚಾರ್ಜ್ ಆಗುತ್ತದೆ. ಹೀಗೆ ಚಾರ್ಜ್ ಮಾಡಿದರೆ ಸ್ಮಾರ್ಟ್ಪೋನ್ ಬಹುಬೇಗ ಚಾರ್ಜ್ ಆಗುತ್ತದೆ ಎಂಬುದು ಈಗಾಗಲೇ ನಿಮಗೆ ತಿಳಿದಿದೆ ಎನ್ನಬಹುದು.

ಕಂಪೆನಿ ಚಾರ್ಜರ್ ಬಳಸಿ!
ನೀವು ಎಷ್ಟೇ ಉತ್ತಮ ಚಾರ್ಜರ್ ಅನ್ನೇ ಬಳಸಿ ಅಥವಾ ಯಾವುದೇ ಲೊಕಲ್ ಚಾರ್ಜರ್ ಬಳಸಿದರೂ ಅದು ನಿಮ್ಮ ಸ್ಮಾರ್ಟ್ಪೋನ್ಗೆ ಹಾನಿಕರ. ಹಾಗಾಗಿ, ನಿಮ್ಮ ಸ್ಮಾರ್ಟ್ಪೋನ್ ಅನ್ನು ಯಾವಾಗಲೂ ಗುಣಮಟ್ಟದ ಕಂಪೆನಿಯ ಚಾರ್ಜರ್ ಅನ್ನು ಬಳಕೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದಕ್ಕಿಂತ ಬೇರೆ ಯಾವ ಚಾರ್ಜರ್ ಕೂಡ ನಿಮ್ಮ ಸ್ಮಾರ್ಟ್ಫೋನ್ ಅನ್ನು ಬೇಗ ಚಾರ್ಜ್ ಮಾಡಲಾರದು. ಫಾಸ್ಟ್ಚಾರ್ಜರ್ ಬಳಸಿ ಬೇಗ ಚಾರ್ಜ್ ಮಾಡಬಹುದಾದರೂ ಸಹ ಅದರ ಬ್ಯಾಟರಿ ಶಕ್ತಿ ಹೆಚ್ಚು ಸಮಯ ಉಳಿಯುವುದಿಲ್ಲ.

ಏರೋಪ್ಲೇನ್ ಮೋಡ್ ಆನ್ ಮಾಡಿ
ನಿಮ್ಮ ಸ್ಮಾರ್ಟ್ಫೋನ್ ಅನ್ನು ಸ್ವಿಚ್ ಆಫ್ ಮಾಡದೇ ಇದ್ದರೂ ಸಹ ಅದನ್ನು ಏರೋಪ್ಲೇನ್ ಮೋಡ್ನಲ್ಲಿ ಇಟ್ಟು ಚಾರ್ಜ್ ಮಾಡಿ. ಮೊಬೈಲ್ ಅಧಿಸೂಚನೆ ಬಾರ್ನಲ್ಲಿ ಕಾಣಿಸುವ ಏರೋಪ್ಲೇನ್ ಮೋಡ್ ಅನ್ನು ಆನ್ ಮಾಡಿ ಚಾರ್ಜಿಂಗ್ ಚಾರ್ಜ್ ಮಾಡಿದರೆ ನಿಮ್ಮ ಫೋನ್ ಬ್ಯಾಟರಿ ಚಾರ್ಜಿಂಗ್ ವೇಗ ಹೆಚ್ಚಾಗಲಿದೆ. ಏರೋಪ್ಲೇನ್ ಮೋಡ್ ಆನ್ ಮಾಡಿದ್ದಾಗ ನೆಟ್ವರ್ಕ್ ವ್ಯವಸ್ಥೆ ಕಟ್ ಆಗಿರುವುದರಿಂದ ನಿಮ್ಮ ಸ್ಮಾರ್ಟ್ಫೋನ್ ಬಹುಬೇಗ ಚಾರ್ಜ್ ಆಗುತ್ತದೆ.

ಬ್ರೌಸಿಂಗ್ ಮಾಡಲೇಬೇಡಿ
ನಿಮ್ಮ ಸ್ಮಾರ್ಟ್ಫೋನ್ ಚಾರ್ಜ್ ಆಗುವಾಗ ಯಾವುದೇ ಕಾರಣಕೂ ಸಹ ಬ್ರೌಸಿಂಗ್ ಮಾಡಲೇಬೇಡಿ. ಏಕೆಂದರೆ ಬ್ಯಾಟರಿ ಚಾರ್ಜ್ ಆಗುತ್ತಿರುವ ಸಮಯದಲ್ಲಿ ಇಂಟರ್ನೆಟ್ ಬಳಕೆ ಮಾಡಿದರೆ ಸಾಮಾನ್ಯ ಸ್ಥಿತಿಗಿಂತ ಹೆಚ್ಚು ಬ್ಯಾಟರಿ ಶಕ್ತಿ ಖಾಲಿಯಾಗುತ್ತದೆ ಎನ್ನುತ್ತವೆ ಅಧ್ಯಯನಗಳು. ಇನ್ನು ಪ್ರತಿಬಾರಿಯೂ ವೈಫೈ, ಬ್ಲೂಟೂತ್ ಮತ್ತು ಜಿಪಿಎಸ್ ಅನ್ನು ಆಫ್ ಮಾಡುವುದು ಕೂಡ ಬ್ಯಾಟರಿ ಹೆಚ್ಚು ಖಾಲಿಯಾಗದಂತೆ ನೋಡಿಕೊಳ್ಳುತ್ತದೆ.

ಲ್ಯಾಪ್ಟಾಪ್ನಲ್ಲಿ ಚಾರ್ಜ್ ಬೇಡ
ಹೆಚ್ಚು ಸ್ಮಾರ್ಟ್ಫೋನ್ ಬಳಕೆದಾರರು ಲ್ಯಾಪ್ಟಾಪ್ ಮೂಲಕ ಚಾರ್ಜ್ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ, ಗೋಡೆಯ ವಿದ್ಯುತ್ ಸ್ಲಾಟ್ಗಳಿಂದ ಬ್ಯಾಟರಿ ವೇಗವಾಗಿ ಚಾರ್ಜ್ ಆದಷ್ಟು ಲ್ಯಾಪ್ಟಾಪ್ ಮೂಲಕ ಚಾರ್ಜ್ ಆಗುವುದಿಲ್ಲ. ಏಕೆಂದರೆ, ಲ್ಯಾಪ್ಟಾಪ್ ಮೊಬೈಲ್ಗೆ ಬೇಕಾದಷ್ಟು ಪ್ರಮಾಣದಲ್ಲಿ ಶಕ್ತಿಯನ್ನು ಬಿಡುವುದಿಲ್ಲ. ಹಾಗಾಗಿ, ಬಹುಬೇಗ ಸ್ಮಾರ್ಟ್ಪೋನ್ ಚಾರ್ಜ್ ಆಗಲು ಮನೆಯ ವಿದ್ಯುತ್ ಸ್ಲಾಟ್ಗಳನ್ನೇ ಬಳಸುವುದು ಒಳ್ಳೆಯದು.

'ಮೊಬೈಲ್ ಬ್ಯಾಟರಿ' ಸುರಕ್ಷತೆ ಬಗ್ಗೆ ನೀವು ನಂಬಿರುವ ಹಸಿಬಿಸಿ ಸುಳ್ಳುಗಳಿವು!!
ನಮಗೆ ನಮ್ಮ ಮೊಬೈಲ್ ಬ್ಯಾಟರಿ ಬಗ್ಗೆ ಇರುವಷ್ಟು ಗೊಂದಲ ಬೇರೆ ಯಾವ ಗ್ಯಾಜೆಟ್ ಮೇಲೂ ಸಹ ಇಲ್ಲ ಎನ್ನಬಹುದು. ಏಕೆಂದರೆ, ಬ್ಯಾಟರಿ ಸುರಕ್ಷತೆಯ ಬಗ್ಗೆ ನಾವು ಎಷ್ಟೇ ಜಾಗರೂಕರಾಗಿದ್ದರೂ ಸಹ ಅದು ಕಡಿಮೆಯೇ. ಎಷ್ಟೇ ಜಾಗೃತವಾಗಿದ್ದರೂ ನನ್ನ ಸ್ಮಾರ್ಟ್ಪೊನ್ ಬ್ಯಾಟರಿ ಹಾಳಾಗುತ್ತದೆ ಎಂಬ ಅನುಭವ ಎಲ್ಲರಿಗೂ ಬರುವುದು ಇದಕ್ಕೆ ಕಾರಣ.
ಸಾವಿರಾರು ರೂ. ಹಣತೆತ್ತು ಖರೀದಿಸಿದ ಸ್ಮಾರ್ಟ್ಫೋನ್ ಬ್ಯಾಟರಿ ಬಹುಬೇಗ ಹಾಳಾದರೆ ಎಂಬ ಭಯ ಎಲ್ಲರಿಗೂ ಕಾಡುತ್ತದೆ. ಹಾಗಾಗಿಯೇ, ಮೊಬೈಲ್ ಬ್ಯಾಟರಿಯನ್ನು ಸುರಕ್ಷಿತವಾಗಿ ಇಡಲು ಹಲವು ಸಲಹೆಗಳನ್ನು ಮೊಬೈಲ್ ಬಳಕೆದಾರರು ಕೇಳಿ ತಿಳಿದುಕೊಳ್ಳುತ್ತಾರೆ. ಆದರೆ, ಅವರು ಹೀಗೆ ತಿಳಿದ ಸಲಹೆಗಳಲ್ಲಿ ಹಲವು ಸುಳ್ಳು ಎಂಬುದೇ ಅವರಿಗೆ ತಿಳಿದಿಲ್ಲ.!
ಹೌದು, ಮೊಬೈಲ್ ಬ್ಯಾಟರಿಯನ್ನು ಸುರಕ್ಷಿತವಾಗಿಡುವುದು ಹೇಗೆ? ಮೊಬೈಲ್ ಬ್ಯಾಟರಿಯನ್ನು ಹೇಗೆ ಚಾರ್ಜ್ ಮಾಡಬೇಕು? ಎಂಬೆಲ್ಲಾ ಪ್ರಶ್ನೆಗಳಿಗೆ ಸೂಕ್ತ ಸಲಹೆಗಳು ಇವೆ. ಆದರೆ, ಮೊಬೈಲ್ ಫೋನ್ ಬ್ಯಾಟರಿ ಬಗ್ಗೆ ವಿಶ್ವದೆಲ್ಲೆಡೆ ಹಲವಾರು ಸುಳ್ಳುಗಳು ಹರಿದಾಡುತ್ತಲೇ ಇವೆ. ಹಾಗಾಗಿ, ಇಂದಿನ ಲೇಖನದಲ್ಲಿ ಬ್ಯಾಟರಿ' ಕುರಿತು ನೀವು ನಂಬಿರುವ ಸುಳ್ಳುಗಳ ಬಗ್ಗೆ ತಿಳಿಯೋಣ.

ಮಿಥ್ಯ: ಚಾರ್ಜಿಂಗ್ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು?
ಸತ್ಯ : ಚಾರ್ಜಿಂಗ್ ಮಾಡುವಾಗ ಮೊಬೈಲ್ ಬಳಕೆ ಮಾಡಿದರೆ ಮೊಬೈಲ್ ಬ್ಲಾಸ್ಟ್ ಆಗುವುದಿಲ್ಲ. ಮೊಬೈಲ್ ಬ್ಯಾಟರಿ ಹಾರ್ಡ್ವೇರ್ ಅಥವಾ ಸಾಫ್ಟ್ವೇರ್ನಲ್ಲಿ ಸಮಸ್ಯೆ ಎದುರಾಗಿದ್ದರೆ ಯಾವ ಸಮಯದಲ್ಲಿಯಾದರೂ ಮೊಬೈಲ್ ಬ್ಲಾಸ್ಟ್ ಆಗಬಹುದು.

ಮಿಥ್ಯ : ಬ್ಯಾಟರಿ ಪೂರ್ತಿಯಾಗಿ ಖಾಲಿಯಾದ ನಂತರವಷ್ಟೇ ಚಾರ್ಜ್ ಮಾಡಬೇಕು.
ಸತ್ಯ :ಬ್ಯಾಟರಿ 0% ಆದ ಮೇಲೆ ನೀವು ಚಾರ್ಜ್ ಮಾಡಿದರೆ ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತದೆ. ಹಾಗಾಗಿ, ಬ್ಯಾಟರಿ ಖಾಲಿಯಾಗುವ ಮುನ್ನವೇ ಮೊಬೈಲ್ ಚಾರ್ಜ್ ಮಾಡಿದರೆ ಒಳ್ಳೆಯದು.

ಮಿಥ್ಯ : ಬ್ಯಾಟರಿಯನ್ನು ಐಸ್ನೊಳಗೆ ಇಟ್ಟರೆ ಅದರ ಲೈಫ್ ಹೆಚ್ಚಾಗುತ್ತದೆ.
ಸತ್ಯ :Li-Ion ಬ್ಯಾಟರಿಗಳು ಚಳಿ ಮತ್ತು ಬಿಸಿಯಿಂದ ಬೇಗನೆ ಹಾಳಾಗುತ್ತದೆ. ಬ್ಯಾಟರಿಗಳನ್ನು ಫ್ರಿಡ್ಜ್ನಲ್ಲಿಟ್ಟರೆ ಅದು ಹಾಳಾಗುತ್ತದೆ. ಬ್ಯಾಟರಿಗೆ ಬೆಸ್ಟ್ ಟೆಂಪ್ರೇಚರ್ ಎಂದರೆ ರೂಮ್ ಟೆಂಪ್ರೇಚರ್ ಆಗಿದೆ.

ಮಿಥ್ಯ : ಮೊಬೈಲ್ ಅನ್ನು ಪದೇ ಪದೇ ಸ್ವಿಚ್ ಆಫ್ ಮಾಡುವುದರಿಂದ ಬ್ಯಾಟರಿ ಹಾಳಾಗುತ್ತದೆ.
ಸತ್ಯ : ಮೊಬೈಲ್ ಅನ್ನು ಒಮ್ಮೊಮ್ಮೆ ಸ್ವಿಚ್ ಆಫ್ ಮಾಡುವುದರಿಂದ ಯಾವುದೇ ಬ್ಯಾಟರಿ ಹಾಳಾಗುವುದಿಲ್ಲ. ಆದರೆ, ಪದೇ ಪದೇ ಸ್ವಿಚ್ ಆಫ್ ಮಾಡುವುದರಿಂದ ಬ್ಯಾಟರಿ ಹಾಳಾಗುತ್ತದೆ.

ಮಿಥ್ಯ: ಮತ್ತೆ ಮತ್ತೆ ಚಾರ್ಜ್ಮಾಡುವುದರಿಂದ ಬ್ಯಾಟರಿ ಹಾಳಾಗುತ್ತದೆ.
ಮತ್ತೆ ಮತ್ತೆ ಚಾರ್ಜ್ಮಾಡುವುದರಿಂದ ಬ್ಯಾಟರಿ ಹಾಳಾಗುವುದಿಲ್ಲ. ಆದರೆ, ಬ್ಯಾಟರಿ ಸಾಕೆಟ್ಗಳನ್ನು ಇದು ಹಾಳುಮಾಡಬಹುದು.

ಮಿಥ್ಯ : ಥರ್ಡ್ ಪಾರ್ಟಿ ಆಪ್ ಬ್ಯಾಟರಿ ಲೈಫ್ ಹೆಚ್ಚಿಸಲು ನೆರವಾಗುತ್ತದೆ.
ಸತ್ಯ :ಯಾವುದೇ ಥರ್ಡ್ ಪಾರ್ಟಿ ಆಪ್ಗಳಿಂದ ಬ್ಯಾಟರಿ ಲೈಫ್ ಹೆಚ್ಚಾಗಲು ಸಾಧ್ಯವೇ ಇಲ್ಲ. ಬದಲಾಗಿ, ಅವುಗಳು ಸಹ ನಿಮ್ಮ ಮೊಬೈಲ್ ಬ್ಯಾಟರಿಯನ್ನು ತಿನ್ನುತ್ತವೆ.

ಮಿಥ್ಯ : ಫೋನ್ ಮೊದಲ ಬಾರಿ ಬಳಕೆ ಮಾಡುವ ಮೊದಲು ಫುಲ್ ಚಾರ್ಜ್ ಮಾಡಿ.
ಸತ್ಯ : ಇದು ಸುಳ್ಳು. ಎಲ್ಲಾ ಗ್ರಾಹಕರು ತೆಗೆದುಕೊಳ್ಳುವ ಫೋನ್ನಲ್ಲಿ ಚಾರ್ಜ್ ಮೊದಲೇ ಇರುತ್ತದೆ. ಇದನ್ನು ಸ್ವಿಚ್ ಆಗುವವರೆಗೂ ಬಳಕೆ ಮಾಡಬಾರದು ಎಂದು ಹಾಗೆ ಹೇಳುತ್ತಾರೆ.


Click it and Unblock the Notifications





