ನಿಮ್ಮ ಸ್ಮಾರ್ಟ್‌ಫೋನನ್ನು 100% ಸೂಪರ್ ಫಾಸ್ಟ್ ಮಾಡೋದು ಹೇಗೆ?

|

ಇತ್ತೀಚಿಗಷ್ಟೇ ಖರೀದಿಸಿದ ನನ್ನ ಸ್ಮಾರ್ಟ್‌ಫೋನ್ ವೇಗ ನಿಧಾನವಾಗಿದೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ ಇಂದಿನ ಲೇಖನವು ನಿಮಗೆ ಅತ್ಯಂತ ಉಪಯೋಗಕಾರಿಯಗಬಲ್ಲದು. ಏಕೆಂದರೆ, ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುತ್ತಿದೆ, ಒಂದು ವಿಡಿಯೋ ಡೌನ್‌ಲೋಡ್ ಮಾಡಬೇಕೆಂದರೂ, ಒಂದು ಅಪ್ಲಿಕೇಷನ್ ತೆರೆಯಲು ನೂರೈವತ್ತು ದೋಸೆಗಳು ಸುತ್ತುತ್ತಲೇ ಇರುತ್ತವೆ ಎಂದರೆ ಅದಕ್ಕೆ ಒಂದಷ್ಟು ಸುಲಭ ಉಪಾಯಗಳು ಇವೆ.!

ನಿಮ್ಮ ಸ್ಮಾರ್ಟ್‌ಫೋನನ್ನು 100% ಸೂಪರ್ ಫಾಸ್ಟ್ ಮಾಡೋದು ಹೇಗೆ?

ಹೌದು, ಈ ಸ್ಮಾರ್ಟ್‌ಫೋನ್‌ ಯುಗದಲ್ಲಿ ನಾವು ನಮ್ಮ ಅಗತ್ಯಕ್ಕೂ ಮೀರಿ ಮೊಬೈಲ್‌ ಫೋನ್‌ಗಳನ್ನು ಅವಲಂಬಿಸಿದ್ದೇವೆ. ಈ ವೇಳೆಯಲ್ಲಿ ಸ್ಮಾರ್ಟ್‌ಫೋನ್ ವೇಗ ನಿಧಾನವಾಗುವುದು ಕೂಡ ಅಪರಾಧ ಎಂದು ಹೇಳಬಹುದು. ಹಾಗಾಗಿ, ಅದರಲ್ಲಿನ ಕೆಲವು ಸಾಮಾನ್ಯ ಹಾಗೂ ತಾಂತ್ರಿಕ ದೋಷಗಳನ್ನು ಪತ್ತೆ ಮಾಡಿ ಸರಿಪಡಿಸುವ ಕೆಲಸವನ್ನು ನಾವು ಮಾಡಬೇಕು. ಇದಕ್ಕೆ ಉದಾಹರಣೆ ಎಂದರೆ ಕ್ಲೀನ್ ಇನ್‌ಸ್ಟಾಲ್, ಕ್ಲೀನಿಂಗ್ ಅಪ್‌ ಮತ್ತು ಜಂಕ್ ಫೈಲ್ ನಿರ್ಮೂಲನೆ.!

ನಿಮ್ಮ ಸ್ಮಾರ್ಟ್‌ಫೋನನ್ನು 100% ಸೂಪರ್ ಫಾಸ್ಟ್ ಆಗಿ ಕೆಲಸ ಮಾಡ ಬೇಕೆಂದರೆ ನಿಮ್ಮ ಫೋನಿನಲ್ಲಿ ಇಂತಹ ಕೆಲವೇ ಕೆಲವು ಕೆಲಸಗಳನ್ನು ಮಾಡಿದರೆ ಸಾಕಾಗುತ್ತದೆ. ಹಾಗಾದರೆ, ನಿಮ್ಮ ಸ್ಮಾರ್ಟ್‌ಫೋನನ್ನು ಸೂಪರ್ ಫಾಸ್ಟ್ ಮಾಡೋದು ಹೇಗೆ?, ಸ್ಮಾರ್ಟ್‌ಫೋನ್ ವೇಗ ಹೆಚ್ಚಿಸಲು ನಾವು ಅನುಸರಿಸಬೇಕಾದ ಕಾರ್ಯಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಬಗ್ಗೆ ನಾವು ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದೇವೆ.

ಮೆಮೊರಿ ಬಗ್ಗೆ ಗಮನವಿರಲಿ

ಮೆಮೊರಿ ಬಗ್ಗೆ ಗಮನವಿರಲಿ

16GB, 32GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇಂದು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB ಮೆಮೊರಿಯನ್ನು ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್‌ನಿಂದಾಗಿ ಫೋನ್‌ಗಳು ನಿಧಾನವಾಗುತ್ತವೆ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರುವ ಮೆಮೊರಿಗಿಂತ ಅರ್ಧಕ್ಕಿಂತಲೂ ಹೆಚ್ಚು ಸ್ಟೋರೇಜ್‌ ಖಾಲಿ ಇರಲಿ.

ಕಡಿಮೆ ಆಪ್‌ಗಳನ್ನು ಬಳಸಿ.

ಕಡಿಮೆ ಆಪ್‌ಗಳನ್ನು ಬಳಸಿ.

ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡಬಹುದಾದ ಶಕ್ತಿ ಸ್ಮಾರ್ಟ್‌ಫೋನ್‌ಗಳಿಗಿದ್ದರೂ ಸಹ, ಒಮ್ಮೆಲೆ ಹೆಚ್ಚು ಆಪ್‌ಗಳನ್ನು ಬಳಕೆ ಮಾಡುವುದು ಫೋನ್ ಸ್ಲೋ ಆಗಲು ಕಾರಣ. ಹಾಗಾಗಿ, ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡದಿರುವುದು ಒಳ್ಳೆಯದು. ಇಲ್ಲದಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್ ಸ್ಲೋ ಆಗುವುದನ್ನು ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ.

ಜಂಕ್ ಫೈಲ್ ತೆಗೆಯಿರಿ.

ಜಂಕ್ ಫೈಲ್ ತೆಗೆಯಿರಿ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಜಂಕ್ ಫೈಲ್‌ಗಳು ಇದ್ದರೆ ಸ್ಮಾರ್ಟ್‌ಪೋನಿನ ಜೀವಿತಾವಧಿಯನ್ನು ಕುಂಠಿತಗೊಳಿಸುತ್ತವೆ. ಹಾಗಾಗಿ, ನಿಮ್ಮ ಫೋನಿನಲ್ಲಿರುವ ಕಡತಗಳನ್ನು ಆಗಾಗ್ಗೆ ಆಯಂಟಿ ವೈರಸ್ ಆಪ್ ಮೂಲಕ ಸ್ವಚ್ಛಗೊಳಿಸಿ. ಸೆಟ್ಟಿಂಗ್ಸ್ ತೆರೆದು ಅಲ್ಲಿ ಕಾಣಿಸುವ ಕ್ಯಾಚೆಯನ್ನು ವಾರಕ್ಕೆ ಒಮ್ಮೆಯಾದರೂ ಕ್ಲೀನ್ ಮಾಡುವುದನ್ನು ಮರೆಯದೇ ಇದ್ದರೆ ಫೋನ್ ವೇಗ ಹೆಚ್ಚುತ್ತದೆ.

ಆನ್‌ಲೈನ್ ಸೇವೆ ಬಳಸಿಕೊಳ್ಳಿ.

ಆನ್‌ಲೈನ್ ಸೇವೆ ಬಳಸಿಕೊಳ್ಳಿ.

ಡಾಕ್ಯುಮೆಂಟ್, ಫೋಟೊಗಳು ಮತ್ತು ಇನ್ನಿತರ ಫೈಲ್‌ಗಳು ಹೆಚ್ಚಿದ್ದಷ್ಟು ಸ್ಮಾರ್ಟ್‌ಫೋನ್ ನಿಧಾನವಾಗುತ್ತದೆ. ಹಾಗಾಗಿ, ಯಾವುದೇ ಡಾಕ್ಯುಮೆಂಟ್ ಮತ್ತು ಇನ್ನಿತರ ಫೈಲ್‌ಗಳನ್ನು ಗೂಗಲ್ ಡ್ರೈವ್‌ನಂತಹ ಆನ್‌ಲೈನ್ ತಾಣದಲ್ಲಿ ಸೇವ್ ಮಾಡಿಕೊಳ್ಳಿ. ಫೋಟೊ ಲೈಬ್ರೆರಿಯನ್ನು ಗೂಗಲ್‌ ಫೋಟೊಸ್ ತಾಣಕ್ಕೆ ಮೂವ್ ಮಾಡುವ ಮೂಲಕ ಫೋನ್ ವೇಗವನ್ನು ಹೆಚ್ಚಿಸಬಹುದು.!

ಕ್ಲೀನ್ ಇನ್‌ಸ್ಟಾಲ್ ಮಾಡಿ

ಕ್ಲೀನ್ ಇನ್‌ಸ್ಟಾಲ್ ಮಾಡಿ

ಎಲ್ಲಾ ಮೊಬೈಲ್ ಕಂಪೆನಿಗಳು ಒಂದೆ ಕ್ಲಿಕ್‌ನಲ್ಲಿ ಹೊಸ ಆಪರೇಟಿಂಗ್ ಸಿಸ್ಟಂಗೆ ಅಪ್‌ಗ್ರೇಡ್ ಮಾಡಲು ಸೂಚಿಸುತ್ತವೆ. ಹೀಗೆ ಅಪ್‌ಡೇಟ್ ಮಾಡುವುದು ಒಳ್ಳೆಯದು. ಆದರೆ, ಅಪ್‌ಡೇಟ್ ಮಾಡುವ ಮುನ್ನ ನಿಮ್ಮೆಲ್ಲಾ ಮೊಬೈಲ್ ಡೇಟಾ ಖಾಲಿ ಮಾಡಿ ಅಪ್‌ಡೇಟ್ ಮಾಡಿ. ಮೊಬೈಲ್‌ ಅನ್ನು ಹಾಗೆಯೇ ಅಪ್‌ಡೇಟ್ ಮಾಡಿದರೆ ಒಎಸ್ ಕ್ರಾಶ್ ಆಗುವ ಸಂಭವ ಹೆಚ್ಚಿರುತ್ತದೆ.

ಕ್ಲೀನಿಂಗ್ ಅಪ್‌ ಮಾಡಿ.

ಕ್ಲೀನಿಂಗ್ ಅಪ್‌ ಮಾಡಿ.

ದೀರ್ಘ ಅವಧಿಯಲ್ಲಿ ಕೆಲವು ಅನವಶ್ಯಕ ಫೈಲ್‌ಗಳು ಫೋನ್‌ ಮೆಮೊರಿಯಲ್ಲಿ ಸಂಗ್ರಹಗೊಂಡು ಫೋನ್ ವೇಗ ಕುಂಠಿತವಾಗುತ್ತದೆ. ಹಾಗಾಗಿ, ಫೋನಿನಲ್ಲಿರುವ ಅನವಶ್ಯಕ ಫೈಲ್‌ಗಳನ್ನು ಡಿಲೀಟ್ ಮಾಡಿ. ಫೋನ್‌ ಸೆಟ್ಟಿಂಗ್ಸ್ ತೆರೆದು ಫೋನ್ ರಿಸೆಟ್ ಮಾಡಿದರೆ ಅನವಶ್ಯಕ ಫೈಲ್‌ಗಳು ಡಿಲೀಟ್ ಆಗಲಿದೆ. ಆದರೆ, ಫೋನ್ ರಿಸೆಟ್ ಮಾಡುವ ಮುನ್ನ ಡೇಟಾವನ್ನು ತೆಗೆದಿಡಿ.

ಡೇಟಾ ಸೇವರ್ ಮೋಡ್‌

ಡೇಟಾ ಸೇವರ್ ಮೋಡ್‌

ಸ್ಮಾರ್ಟ್‌ಫೋನಿನಲ್ಲಿ ಕ್ರೋಮ್ ಬ್ರೌಸರ್ ಬಳಕೆ ಹೆಚ್ಚು. ಈ ಬ್ರೌಸರ್‌ನಲ್ಲಿ ಡೇಟಾ ಸೇವರ್ ಆಯ್ಕೆ ಸಿಗುತ್ತದೆ. ಅದನ್ನು ಸಕ್ರಿಯಗೊಳಿಸಿದರೆ ನಿಮ್ಮ ಮೊಬೈಲ್ ಡೇಟಾ ಬಳಕೆ ಕಡಿಮೆಯಾಗಿ ನಿಮ್ಮ ಫೋನಿನ ವೇಗ ಹೆಚ್ಚುತ್ತದೆ. ಕಡಿಮೆ ಡಾಟಾ ಬಳಸಿಕೊಂಡು ಹೆಚ್ಚು ಪೇಜ್‌ಗಳು ವೇಗವಾಗಿ ಲೋಡ್ ಆಗುತ್ತವೆ. ಜೊತೆಗೆ ಒಂದು ಸಿನೆಮಾವನ್ನೂ ಕಡಿಮೆ ಡಾಟಾದಲ್ಲೇ ನೋಡಬಹುದು.

ಟಾಸ್ಕ್ ಆಪ್ ಬಳಸದಿರಿ

ಟಾಸ್ಕ್ ಆಪ್ ಬಳಸದಿರಿ

ಸ್ಮಾರ್ಟ್‌ಫೋನಿನಲ್ಲಿ ಕೆಲವೊಂದು ಮೊಬೈಲ್ ಆಪ್‌ಗಳು ಪ್ರಾರಂಭವಾಗುವುದಕ್ಕೆ ತುಂಬಾ ಸಮಯ ಪಡೆದುಕೊಳ್ಳುತ್ತವೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ನಿಧಾನ ಗತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಹೆಚ್ಚು ಬ್ಯಾಟರಿ ವ್ಯಯವಾಗುತ್ತದೆ. ಹಾಗಾಗಿ ಯಾವುದೇ ಟಾಸ್ಕ್ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಹರಸಹಾಸ ಮಾಡದಿರಿ. ಇದು ನಿಮಗೆ ಕ್ಷೇಮ.

ಕಸ್ಟಮ್ ROM.

ಕಸ್ಟಮ್ ROM.

ನಿಮ್ಮ ಸ್ಮಾರ್ಟ್‌ಫೋನ್ ಸೂಪರ್ ಫಾಸ್ಟ್ ಆಗಿ ಕೆಲಸ ಮಾಡ ಬೇಕೆಂದರೆ ನಿಮ್ಮ ಮೊಬೈಲ್‌ನಲ್ಲಿ ಕಸ್ಟಮ್ ROM ಇರಲೇ ಬೇಕು. ಹಾಗಾಗಿ, ಅದು ಲೇಟೆಸ್ಟ್ ಆಂಡ್ರಾಯ್ಡ್ ವರ್ಶನ್ ಅನ್ನೇ ಡೌನ್‌ಲೋಡ್ ಮಾಡಿಕೊಳ್ಳಿ. ಬಳಿಕ ನಿಮ್ಮ ಸ್ಮಾರ್ಟ್‌ಫೋನ್ ಸ್ಮಾರ್ಟ್ ಆಗಿ ಕೆಲಸ ನಿರ್ವಹಿಸಲಿದೆ. ಇದರ ಜೊತೆಗೆ ಆಟೋ ಸಿಂಕ್ರನೈಜ್ ಅನ್ನು ಆಫ್ ಮಾಡಿರುವುದು ಸಹ ಒಳ್ಳೆಯದು.

ಹೋಮ್ ಸ್ಕ್ರೀನ್ ಸ್ವಚ್ಛವಿರಲಿ

ಹೋಮ್ ಸ್ಕ್ರೀನ್ ಸ್ವಚ್ಛವಿರಲಿ

ನೀವು ಯಾವುದೇ ಆಪ್ ಡೌನ್‌ಲೋಡ್ ಮಾಡಿಕೊಂಡರೂ ಅದು ನೇರವಾಗಿ ಹೋಮ್‌ಸ್ಕ್ರೀನ್ ಮೇಲೆ ಬಂದು ಕೂರುತ್ತದೆ. ಆ ಆಪ್‌ನ ಮೇಲೆ ಹೆಚ್ಚು ಸಮಯ ಕ್ಲಿಕ್ ಮಾಡಿದರೆ ರಿಮೂವ್ ಮತ್ತು ಆಯ್ಕೆಗಳು ಗೋಚರಿಸುತ್ತವೆ. ರಿಮೂವ್ ಬಟನ್ ಕಡೆಗೆ ಆ ಫೈಲ್‌ನ್ನು ತಳ್ಳಿ. ಆದಷ್ಟು ನಿಮ್ಮ ಸ್ಮಾರ್ಟ್‌ಫೋನ್ ಪರದೆ ಕ್ಲೀನ್ ಸ್ವಚ್ಛವಾಗಿರಿಸಿಕೊಂಡಿದ್ದರೆ ಫೋನ್ ವೇಗ ಹೆಚ್ಚುತ್ತದೆ.

Best Mobiles in India

English summary
10 ways to speed up your smartphone. smartphones are blazing fast these days with processors, RAM and storage type.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X