ಸ್ಕೈಪ್‌ ಅಪ್ಲಿಕೇಶನ್‌ನಲ್ಲಿ ನಾಯ್ಸ್‌ ಕ್ಯಾನ್ಸಲೇಶನ್‌ ಆಕ್ಟಿವ್‌ ಮಾಡುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ವಿಡಿಯೋ ಸ್ಟ್ರೀಮಿಂಗ್‌ ಸೇವೆಗಳು ಸಾಕಷ್ಟು ಜನಪ್ರಿಯತೆಯನ್ನು ಪಡದುಕೊಂಡಿವೆ. ಅದರಲ್ಲೂ ಕಳೆದ ವರ್ಷ ಕೊರೊನಾ ವೈರಸ್‌ ಕಾರಣದಿಂದ ಲಾಕ್‌ಡೌನ್‌ ಆದ ನಂತರ ಇನ್ನೂ ಹೆಚ್ಚಿನ ಜನಪ್ರಿಯತೆಗಳಿಸಿವೆ. ಇದರಲ್ಲಿ ಸ್ಕೈಪ್‌ ಅಪ್ಲಿಕೇಶನ್‌ ಕೂಡ ಒಂದು. ವೀಡಿಯೊ ಮತ್ತ ವಾಯ್ಸ್‌ ಕಾಲ್‌ ಅಪ್ಲಿಕೇಶನ್‌ ಆಗಿರುವ ಸ್ಕೈಪ್‌ ಕಳೆದ ವರ್ಷದಿಂದಲೂ ಸಾಕಷ್ಟು ಅಪ್ಡೇಟ್‌ ಮತ್ತು ಹೊಸ ಮಾದರಿಯ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಬಳಕೆದಾರರ ವಾಯ್ಸ್‌ ಮತ್ತು ವೀಡಿಯೊ ಅನುಭವವನ್ನು ಉತ್ತಮಗೊಳಿಸುವುದಕ್ಕೆ ಹೆಚ್ಚಿನ ಒತ್ತು ನೀಡಿದೆ. ಸದ್ಯ ಇದೀಗ ಕಂಪನಿಯು ಸ್ಕೈಪ್‌ನ ಡೆಸ್ಕ್‌ಟಾಪ್ ಆವೃತ್ತಿಗೆ AI- ಶಕ್ತಗೊಂಡ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಸ್ಕೈಪ್

ಹೌದು, ಸ್ಕೈಪ್ ಕಂಪೆನಿ ತನ್ನ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ AI ಶಕ್ತಗೊಂಡ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ತಂತ್ರಜ್ಞಾನವನ್ನು ಮೂಲತಃ ಮೈಕ್ರೋಸಾಫ್ಟ್ ಟೀಂ ಗಳಿಗಾಗಿ ತಯಾರಿಸಲಾಗಿದೆ ಎಂದು ಕಂಪೆನಿ ಹೇಳಿದೆ. ಈ ಹೊಸ ಫೀಚರ್ಸ್‌ ಮೂಲಕ ನೀವು ಸ್ಕೈಪ್‌ ಬಳಸುವಾಗ ನಿಮ್ಮ ಧ್ವನಿಯನ್ನು ಹೊರತುಪಡಿಸಿ ಇನ್ನುಳಿದ ಇತರೆ ಸೌಂಡ್‌ ಸೈಲೆನ್ಸ್‌ ಇರುವಂತೆ ವಿನ್ಯಾಸಗೊಳಿಸಲಾಗಿದೆ. ಹಾಗಾದ್ರೆ ಸ್ಕೈಪ್‌ನಲ್ಲಿ ನಾಯ್ಸ್‌ ಕ್ಯಾನ್ಸಲೇಶನ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಕೈಪ್‌ನಲ್ಲಿ ನಾಯ್ಸ್‌ ಕ್ಯಾನ್ಸಲೇಶನ್‌ ಆಕ್ಟಿವ್‌ ಮಾಡುವುದು ಹೇಗೆ?

ಸ್ಕೈಪ್‌ನಲ್ಲಿ ನಾಯ್ಸ್‌ ಕ್ಯಾನ್ಸಲೇಶನ್‌ ಆಕ್ಟಿವ್‌ ಮಾಡುವುದು ಹೇಗೆ?

ಹಂತ:1 ಅಪ್ಲಿಕೇಶನ್‌ನ ಡೆಸ್ಕ್‌ಟಾಪ್ ಆವೃತ್ತಿಯಲ್ಲಿನ ಸೆಟ್ಟಿಂಗ್ಸ್‌ ಆಯ್ಕೆಗೆ ಹೋಗುವುದು.
ಹಂತ:2 ಸೆಟ್ಟಿಂಗ್‌ಗಳಲ್ಲಿ, ಆಡಿಯೋ ಮತ್ತು ವಿಡಿಯೋ ಆಯ್ಕೆಗೆ ಹೋಗಿ.
ಹಂತ:3 ಆಡಿಯೋ ಮತ್ತು ವೀಡಿಯೊದಲ್ಲಿ, ನೀವು ನಾಯ್ಸ್‌ ಕ್ಯಾನ್ಸಲೇಶನ್‌ ಆಯ್ಕೆಗೆ ಕೆಳಗೆ ಸ್ಕ್ರಾಲ್ ಮಾಡಬೇಕಾಗುತ್ತದೆ.
ಹಂತ:4 ನಾಯ್ಸ್‌ ಕ್ಯಾನ್ಸಲೇಶನ್‌ ಟ್ಯಾಬ್‌ನ ಕೊನೆಯಲ್ಲಿರುವ ಬಾಣದ ಮೇಲೆ ಕ್ಲಿಕ್ ಮಾಡಿ ಮತ್ತು ‘ಹೈ' ಆಯ್ಕೆಮಾಡಿ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಹೊಸ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ನಿಮ್ಮ ಆಡಿಯೊವನ್ನು ವಿಶ್ಲೇಷಿಸುತ್ತದೆ. ಸ್ಪೀಕರ್‌ನ ವಾಯ್ಸ್‌ಗೆ ಧಕ್ಕೆಯಾಗದಂತೆ ಬ್ಯಾಕ್‌ಗ್ರೌಂಡ್‌ನಲ್ಲಿ ನಾಯ್ಸ್‌ ಅನ್ನು ತೆಗೆದುಹಾಕಲು ಡೀಪ್‌ ನ್ಯೂಟ್ರಲ್‌ ನೆಟ್‌ವರ್ಕ್‌ಗಳನ್ನು ಬಳಸುತ್ತದೆ. ಈ ತಂತ್ರಜ್ಞಾನವು ಸಾಂಪ್ರದಾಯಿಕ ನಾಯ್ಸ್‌ ಕ್ಯಾನ್ಸಲೇಶನ್‌ ತಂತ್ರಜ್ಞಾನಕ್ಕಿಂತ ಭಿನ್ನವಾಗಿದೆ, ಏಕೆಂದರೆ ಕೀಬೋರ್ಡ್‌ನಲ್ಲಿ ಟೈಪ್ ಮಾಡುವುದು, ಸಂಕೀರ್ಣವಾದ ಶಬ್ದಗಳಿಗೆ ಬಂದಾಗ ಮೊದಲಿನದನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಈ ತಂತ್ರಜ್ಞಾನವು ಭಾಷಣ ಮತ್ತು ನಾಯ್ಸ್‌ ನಡುವಿನ ವ್ಯತ್ಯಾಸವನ್ನು ಕಲಿಯಲು ಮೆಷಿನ್‌ ಲರ್ನಿಂಗ್‌ ಅನ್ನು ಅವಲಂಬಿಸಿದ್ದು, ಇದನ್ನು ಕೃತಕ ಬುದ್ಧಿಮತ್ತೆ (AI) ಎಂದು ಕರೆಯಲಾಗುತ್ತದೆ.

ಸ್ಕೈಪ್

ಇನ್ನು ಸ್ಕೈಪ್ ಬಳಕೆದಾರರು ಹೆಚ್ಚಿನ ಸಂದರ್ಭಗಳಲ್ಲಿ ಕೆಲಸ ಮಾಡಲು ಮೆಷಿನ್‌ ಲರ್ನಿಂಗ್‌ ಮಾದರಿಯನ್ನು ಟ್ರೈನ್‌ ಮಾಡಲು ಪ್ರತಿನಿಧಿ ಡೇಟಾಸೆಟ್ ಅನ್ನು ಬಳಸಲಾಗುತ್ತದೆ. ಕ್ಲಿನ್‌ ಸ್ಪಿಚ್‌, ಶಬ್ದ ಪ್ರಕಾರಗಳು ಮತ್ತು ನಮ್ಮ ಬಳಕೆದಾರರು ಆನ್‌ಲೈನ್ ಕರೆಗಳಿಗೆ ಸೇರುವ ಪರಿಸರಕ್ಕೆ ಸಂಬಂಧಿಸಿದಂತೆ ಡೇಟಾಸೆಟ್‌ನಲ್ಲಿ ಸಾಕಷ್ಟು ವೈವಿಧ್ಯತೆ ಇರಬೇಕು ಎಂದು ಕಂಪೆನಿ ಹೇಳಿದೆ. ಕಂಪನಿಯು ತನ್ನ ತರಬೇತಿ ಮಾಡ್ಯೂಲ್‌ನಲ್ಲಿ 760 ಗಂಟೆಗಳ ಕ್ಲೀನ್ ಸ್ಪೀಚ್ ಡೇಟಾ ಮತ್ತು 180 ಗಂಟೆಗಳ ಶಬ್ದ ಡೇಟಾವನ್ನು ಬಳಸಿದೆ ಎಂದು ಕಂಪನಿ ಹೇಳಿದೆ.

Best Mobiles in India

English summary
Voice and video calling platform Skype has introduced an AI-enabled noise cancellation feature for its desktop version of the app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X