ಈ ಮಾರ್ಗಗಳನ್ನು ಅನುಸರಿಸಿದರೆ ಸ್ಮಾರ್ಟ್‌ಪೋನ್ ವ್ಯಸನದಿಂದ ದೂರವಾಗ್ತಿರಿ..!

By Avinash
|

ಇತ್ತೀಚಿಗೆ ಸ್ಮಾರ್ಟ್‌ಪೋನ್ ಬಳಕೆ ವ್ಯಸನವಾಗುತ್ತಿದೆ. ಮೊದ ಮೊದಲು ದಿನದಲ್ಲಿ ಕೆಲವೇ ಕೆಲವು ಸಮಯ ಕೈಯಲ್ಲಿ ಮೊಬೈಲ್‌ ಇರುತ್ತಿತ್ತು. ಆದರೆ, ಇಂದು ಕೆಲವೇ ಕೆಲವು ಕ್ಷಣಗಳು ಮೊಬೈಲ್ ಕೈ ಬಿಟ್ಟು ಕೆಳಗಿಳಿಯದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರಿಂದ ಅನೇಕರು ಸಮಸ್ಯೆಗೆ ಸಿಲುಕಿದ್ದು ಇದೆ. ಅನೇಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ಈ ಮಾರ್ಗಗಳನ್ನು ಅನುಸರಿಸಿದರೆ ಸ್ಮಾರ್ಟ್‌ಪೋನ್ ವ್ಯಸನದಿಂದ ದೂರವಾಗ್ತಿರಿ..!

ಆದ್ದರಿಂದ, ಈ ಸ್ಮಾರ್ಟ್‌ಫೋನ್ ಅಥವಾ ಮೊಬೈಲ್ ಚಟದಿಂದ ಮುಕ್ತವಾಗಲು ಒಂದಿಷ್ಟು ಸಲಹೆಗಳನ್ನು ಇಲ್ಲಿ ನೀಡುವ ಪ್ರಯತ್ನ ಮಾಡಿದ್ದೇವೆ. ಈ ಸಲಹೆಗಳ ಜತೆ ನಿಮ್ಮ ಮನಸ್ಸು ದೃಢವಾಗಿದ್ದರೆ ಸ್ಮಾರ್ಟ್‌ಫೋನ್‌ನಿಂದ ಎಷ್ಟು ದಿನ ಬೇಕಾದರೂ ದೂರವಿರಬಹುದು. ಈಗಾಗಲೇ ಬಹಳಷ್ಟು ಜನ ಸ್ಮಾರ್ಟ್‌ಫೋನ್‌ನ್ನು ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಅವರಿಗೆ ಕಷ್ಟವಾಗುತ್ತಿರಬಹುದು. ಅವರಿಗೆ ಸರಳವಾಗಲಿ ಎಂದೇ ಈ ಸಲಹೆಗಳನ್ನು ನಾವಿಲ್ಲಿ ನೀಡಿದ್ದೇವೆ.

ಮಲಗುವಾಗ ಸ್ಮಾರ್ಟ್‌ಫೋನ್‌ ಏರೋಪ್ಲೇನ್‌ ಮೋಡ್‌ನಲ್ಲಿರಲಿ

ಮಲಗುವಾಗ ಸ್ಮಾರ್ಟ್‌ಫೋನ್‌ ಏರೋಪ್ಲೇನ್‌ ಮೋಡ್‌ನಲ್ಲಿರಲಿ

ಮನುಷ್ಯನಿಗೆ ನಿದ್ದೆ ಬಹಳಷ್ಟು ಪ್ರಮುಖವಾಗಿದೆ. ಸರಿಯಾಗಿ ನಿದ್ದೆಯಾಗಿಲ್ಲವೆಂದರೆ ಮನಸ್ಸಿಗೆ ನೆಮ್ಮದಿಯಿರಲ್ಲ, ಆ ದಿನ ಪೂರ್ತಿ ಮುಖ ಡಲ್‌ ಆಗಿರುತ್ತದೆ. ಇದಕ್ಕೆಲ್ಲಾ ಕಾರಣ ಸ್ಮಾರ್ಟ್‌ಫೋನ್ ಆಗಿರುತ್ತದೆ. ಬೇಕಿಲ್ಲದ ಕರೆಗಳೆಲ್ಲ ರಾತ್ರಿ ಬರುತ್ತಿರುತ್ತವೆ. ಅದಲ್ಲದೇ ಮೊಬೈಲ್ ತರಂಗಗಳು ಕಾರ್ಯನಿರ್ವಹಿಸುವುದರಿಂದ ಮೆದುಳಿಗೂ ಪ್ರಭಾವ ಬೀರುತ್ತದೆ. ಆದ್ದರಿಂದ ಮಲಗುವಾಗ ಸ್ಮಾರ್ಟ್‌ಫೋನ್‌ನ್ನು ಏರೋಪ್ಲೇನ್‌ ಮೋಡ್‌ನಲ್ಲಿಡುವುದು ಉತ್ತಮ ಆಯ್ಕೆ. ಇದರಿಂದ ಮತ್ತೆ ಮತ್ತೆ ಫೋನ್‌ ಮುಟ್ಟುವ ಪ್ರಸಂಗ ಬರುವುದಿಲ್ಲ.

ನೊಟಿಫಿಕೇಶನ್‌ ಆಫ್ ಮಾಡಿ

ನೊಟಿಫಿಕೇಶನ್‌ ಆಫ್ ಮಾಡಿ

ಸ್ಮಾರ್ಟ್‌ಫೋನ್‌ನಲ್ಲಿ ನೊಟಿಫಿಕೇಷನ್‌ ಬರುತ್ತಲೆ ಇರುತ್ತವೆ. ಇದರಿಂದ ನಿಮಗೆ ಕಿರಿಕಿರಿಯಾಗುವುದಲ್ಲದೇ ಮತ್ತೇ ಮತ್ತೇ ಸ್ಮಾರ್ಟ್‌ಫೋನ್‌ ಕೈಗೆತ್ತಿಕೊಳ್ಳುವಂತೆ ಆಗುತ್ತದೆ. ಆದ್ದರಿಂದ ನೊಟಿಫಿಕೇಷನ್ ಆಫ್ ಮಾಡಿ. ಬೇಕಾದಾಗ ಮೊಬೈಲ್ ತೆಗೆದುಕೊಂಡು ಬೇಕಾದ ನೊಟಿಫಿಕೇಷನ್‌ಗಳನ್ನು ಓದಿ. ಈ ಪ್ರಕ್ರಿಯೆಯಿಂದ ನಿಮ್ಮ ಸ್ಮಾರ್ಟ್‌ಫೋನ್‌ ಮುಕ್ತ ಜೀವನಕ್ಕೆ ಯಶಸ್ಸು ಸಿಗಬಹುದು.

ಅಗತ್ಯವಿಲ್ಲದ ಆಪ್‌ ಡಿಲೀಟ್ ಮಾಡಿ

ಅಗತ್ಯವಿಲ್ಲದ ಆಪ್‌ ಡಿಲೀಟ್ ಮಾಡಿ

ಈಗೀಗ ಸ್ಮಾರ್ಟ್‌ಫೋನ್‌ ಹೇಗಾಗಿದೆಯೆಂದರೆ ಕಸದ ರಾಶಿಯಂತಾಗಿದೆ. ಪ್ಲೇ ಸ್ಟೋರ್‌ನಲ್ಲಿರುವ ಕಂಡ ಕಂಡ ಆಪ್‌ಗಳನ್ನೆಲ್ಲ ಇನ್‌ಸ್ಟಾಲ್ ಮಾಡಿಕೊಳ್ಳುತ್ತೇವೆ. ಇದರಿಂದ ಸ್ಮಾರ್ಟ್‌ಫೋನ್‌ನಲ್ಲಿ ಮಾಡಬೇಕಾದ ಕೆಲಸ ಬಿಟ್ಟು ಬೇಕಿಲ್ಲದ ಆಪ್‌ಗಳ ಕಡೆ ಮನಸ್ಸು ತುಡಿಯುತ್ತದೆ. ಇದರಿಂದ ಹೆಚ್ಚೆಚ್ಚು ಸ್ಮಾರ್ಟ್‌ಫೋನ್‌ ಬಳಸುವಂತಾಗುತ್ತದೆ. ಆದ್ದರಿಂದ ಸ್ಮಾರ್ಟ್‌ಫೋನ್‌ನಲ್ಲಿ ಕೊಳೆಯುತ್ತಿರುವ ಬೇಡದಿರುವ ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ.

ಟೈಮ್‌ ನೋಡೋಕೆ ಗಡಿಯಾರ / ವಾಚ್ ಬಳಸಿ

ಟೈಮ್‌ ನೋಡೋಕೆ ಗಡಿಯಾರ / ವಾಚ್ ಬಳಸಿ

ಸಮಯ ನೋಡಲು ಸ್ಮಾರ್ಟ್‌ಫೋನ್‌ ಬಳಸುವುದಕ್ಕಿಂತ ಗೋಡೆ ಗಡಿಯಾರ ಅಥವಾ ವಾಚ್‌ ಬಳಸಿ. ಇದರಿಂದ ನಿಮ್ಮ ಕಣ್ಣಿಗೆ ಹೆಚ್ಚು ಬ್ರೈಟ್‌ನೆಸ್‌ ಬೀಳುತ್ತೆ ಎನ್ನುವಂತೆಯೂ ಇಲ್ಲ. ಸಾಂಪ್ರದಾಯಿಕ ನಡವಳಿಕೆಯನ್ನು ಮುಂದುವರೆಸಿದಂತಾಗುತ್ತದೆ.

ಮೀಡಿಯಾ ಫೈಲ್‌ ಇಲ್ಲದಿದ್ದರೆ ಭಾರೀ ಉತ್ತಮ

ಮೀಡಿಯಾ ಫೈಲ್‌ ಇಲ್ಲದಿದ್ದರೆ ಭಾರೀ ಉತ್ತಮ

ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಇಮೇಜ್‌, ವಿಡಿಯೋ, ಮ್ಯೂಸಿಕ್ ಪ್ಲೇ ಇಲ್ಲದಿದ್ದರೆ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಸುಲಭವಾಗಿ ದೂರವಿರಬಹುದು. ಸ್ಮಾರ್ಟ್‌ಫೋನ್‌ ನಮಗೆ ಸಂಪರ್ಕ ಮಾಧ್ಯಮವಾಗಿರುವುದಕ್ಕಿಂತಲೂ ಮನರಂಜನಾ ಮಾಧ್ಯಮವಾಗಿ ಬಹಳ ಹತ್ತಿರವಾಗಿದೆ. ಆದ್ದರಿಂದ ಇವುಗಳನ್ನೆಲ್ಲ ಡಿಲೀಟ್ ಮಾಡಿದರೆ ಮೊಬೈಲ್ ಕೇವಲ ಸಂಪರ್ಕ ಮಾಧ್ಯಮವಾಗಿ ನೀವು ದೂರವಿರುವಂತೆ ಮಾಡುತ್ತದೆ.

ಮೊಬೈಲ್‌ ಉಪಯುಕ್ತತೆಯ ಪರಿಶೀಲನೆಗೆ ಆಪ್ ಬಳಸಿ

ಮೊಬೈಲ್‌ ಉಪಯುಕ್ತತೆಯ ಪರಿಶೀಲನೆಗೆ ಆಪ್ ಬಳಸಿ

ನಿಮ್ಮ ಸ್ಮಾರ್ಟ್‌ಫೋನ್‌, ನಿಮಗೆಷ್ಟು ಉಪಯುಕ್ತವಾಗಿದೆ ಎಂಬುದನ್ನು ತಿಳಿಸಲು ಹಲವು ಆಪ್‌ಗಳು ಲಭ್ಯವಿದ್ದು, ಇನ್‌ಸ್ಟಾಲ್‌ ಮಾಡಿಕೊಂಡು ಪರಿಶೀಲಿಸಿ. ಆಗ ನಿಮಗೆ ಗೊತ್ತಾಗುತ್ತದೆ ಮೊಬೈಲ್ ಎಷ್ಟು ಉಪಯುಕ್ತ ನಮಗೆ ಅಂತಾ.

ಸಾಮಾಜಿಕ ಮಾಧ್ಯಮಗಳನ್ನು ಮೊಬೈಲ್‌ನಿಂದ ದೂರವಿಡಿ

ಸಾಮಾಜಿಕ ಮಾಧ್ಯಮಗಳನ್ನು ಮೊಬೈಲ್‌ನಿಂದ ದೂರವಿಡಿ

ಸ್ಮಾರ್ಟ್‌ಫೋನ್‌ ಬಳಕೆಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಸೋಷಿಯಲ್ ಮೀಡಿಯಾ. ಆದ್ದರಿಂದ ಸಾಮಾಜಿಕ ಜಾಲತಾಣಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ದೂರವಿಡಿ. ನಿಮಗೆ ಸಾಮಾಜಿಕ ಜಾಲತಾಣಗಳು ಅಗತ್ಯವಿದ್ದಲ್ಲಿ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬಳಸಿ. ಆಗ ಮಾತ್ರ ಮೊಬೈಲ್‌ ವ್ಯಸನದಿಂದ ಹೊರಬರಬಹುದು.

ಗ್ರೂಪ್ ಚಾಟ್‌ ಮ್ಯೂಟ್ ಮಾಡಿ

ಗ್ರೂಪ್ ಚಾಟ್‌ ಮ್ಯೂಟ್ ಮಾಡಿ

ವಾಟ್ಸ್‌ಆಪ್‌, ಫೇಸ್‌ಬುಕ್‌ನಲ್ಲಿರುವ ಗ್ರೂಪ್‌ಗಳನ್ನೆಲ್ಲ ಮ್ಯೂಟ್‌ ಮಾಡಿ ಇಲ್ಲದಿದ್ದರೆ ಪ್ರತಿ ಕ್ಷಣಕ್ಕೂ ನಿಮ್ಮ ಮನಸ್ಸನ್ನು ಅವುಗಳ ಕಡೆ ಸೆಳೆಯುವಂತೆ ಮಾಡುತ್ತವೆ. ಸ್ಮಾರ್ಟ್‌ಫೋನ್‌ ವ್ಯಸನದಿಂದ ಹೊರ ಬರಬೇಕೆಂದರ ಈ ಮಾರ್ಗ ಅವಶ್ಯಕ.

ಸ್ನೇಹಿತರ / ಸಂಬಂಧಿಕರ ಜತೆ ಬೆರೆಯಿರಿ

ಸ್ನೇಹಿತರ / ಸಂಬಂಧಿಕರ ಜತೆ ಬೆರೆಯಿರಿ

ಸ್ಮಾರ್ಟ್‌ಫೋನ್‌ ಬಿಟ್ಟು ನಿಮ್ಮ ಸ್ನೇಹಿತರ ಅಥವಾ ಸಂಬಂಧಿಕರ ಜತೆ ಬೆರೆಯಿರಿ. ಫೇಸ್‌ ಟು ಫೇಸ್ ಸಂಪರ್ಕ ಸಾಧಿಸಿ, ಹೊರತು ನೆಟ್‌ ಮೂಲಕ ಸಂಪರ್ಕ ಮಾಡಬೇಡಿ. ಜನರ ಜತೆ ಬೆರೆಯುವುದರಿಂದ ನಿಮಗೆ ಮೊಬೈಲ್ ಮರೆಯುತ್ತದೆ.

ಸಾಮಾನ್ಯ ಅಲಾರಾಂ ಗಡಿಯಾರ ಬಳಸಿ

ಸಾಮಾನ್ಯ ಅಲಾರಾಂ ಗಡಿಯಾರ ಬಳಸಿ

ಬೆಳಿಗ್ಗೆ ಏಳಲು ಮೊಬೈಲ್ ಅಲಾರಾಂಗಿಂತ ಸಾಮಾನ್ಯ ಅಲಾರಾಂ ಬಳಸಿ. ಇದರಿಂದ ಸ್ಮಾರ್ಟ್‌ಫೋನ್ ಬಳಕೆ ಕಡಿಮೆಯಾಗುತ್ತದೆ. ಈ ಮೇಲಿನ ಹತ್ತು ಮಾರ್ಗಗಳನ್ನು ಅನುಸರಿಸಿ ದೃಢ ಮನಸ್ಸಿನಿಂದ ಸಂಕಲ್ಪ ಮಾಡಿದರೆ ನೀವು ಖಂಡಿತ ಸ್ಮಾರ್ಟ್‌ಫೋನ್ ವ್ಯಸನದಿಂದ ಹೊರಬರಬಹುದು.

Best Mobiles in India

English summary
smart ways to get rid smartphone addiction. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X