Home
ಟೆಕ್ ನೌಕರಿ

ಸೋಶಿಯಲ್‌ ಮೀಡಿಯಾದ ಬಗ್ಗೆ ಹರಡಿರುವ ಮಿಥ್‌ಗಳು

By Ashwath

ಟ್ವೀಟರ್‌,ಫೇಸ್‌ಬುಕ್‌,ಲಿಂಕ್ಡಿನ್‌ ಬಂದ ಮೇಲೆ ನಮ್ಮ ಆಲೋಚನೆಗಳು ಬದಲಾಗಿದೆ. ಈ ಆಲೋಚನೆಗಳು ಬಂದ ಮೇಲೆ ಈ ಮಾಧ್ಯಮಗಳ ಬಗ್ಗೆ ಹೊಸ ಹೊಸ ಮಿಥ್‌ಗಳು ಹುಟ್ಟಲಾರಂಭಿಸಿದೆ .ಬಹಳಷ್ಟು ಮಂದಿ ಈ ಮಿಥ್‌ಗಳನ್ನು ನಂಬುವವರು ಇದ್ದಾರೆ. ಆದರೆ ಈ ಮಿಥ್‌ಗಳಲ್ಲಿ ಕೆಲವು ಮಿಥ್‌ಗಳು ಸತ್ಯವಾದರೂ ಕೆಲವು ಮಾತ್ರ ಶುದ್ಧ ಸುಳ್ಳು.ಹೀಗಾಗಿ ಸದ್ಯ ಹೆಚ್ಚು ಚರ್ಚೆ‌ಯಾಗುತ್ತಿರುವ ಆ ಮಿಥ್‌ಗಳು ಇಲ್ಲಿವೆ.ಒಂದೊಂದೆ ಪುಟ ತಿರುಗಿಸಿ ಓದಿಕೊಂಡು ಹೋಗಿ.

ಸೋಶಿಯಲ್‌ ಮೀಡಿಯಾದ ಬಗ್ಗೆ ಹರಡಿರುವ ಮಿಥ್‌ಗಳು

ಸೋಶಿಯಲ್‌ ಮೀಡಿಯಾದ ಬಗ್ಗೆ ಹರಡಿರುವ ಮಿಥ್‌ಗಳು

ಈ ರೀತಿಯ ಆಲೋಚನೆ ಮಾಡಿಕೊಳ್ಳದಿರಿ. ಇರುವ ಅವಕಾಶವನ್ನು ಸರಿಯಾದ ಸಮಯದಲ್ಲಿ ಬಳಸಿ ಯಶಸ್ವಿಯಾಗುವವನೇ ಬುದ್ದಿವಂತ. ನಿಮ್ಮ ಆಲೋಚನೆ,ಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಗ್ರೂಪ್‌ನಲ್ಲಿ ಹಂಚಿಕೊಳ್ಳಿ. ಆಗ ನಿಮ್ಮ ಬಗ್ಗೆ ಉಳಿದವರಿಗೂ ಗೌರವ ಬರುತ್ತದೆ. ಜೊತೆಗೆ ಒಂದು ವಿಷಯದ ಬಗ್ಗೆ ಮುಂದೊಂದು ದಿನ ನೀವು ತಜ್ಞ ವ್ಯಕ್ತಿಯಾದರೂ ಆಗಬಹುದು.

ಸೋಶಿಯಲ್‌ ಮೀಡಿಯಾದ ಬಗ್ಗೆ ಹರಡಿರುವ ಮಿಥ್‌ಗಳು

ಸೋಶಿಯಲ್‌ ಮೀಡಿಯಾದ ಬಗ್ಗೆ ಹರಡಿರುವ ಮಿಥ್‌ಗಳು

ಸದ್ಯ ಹೊರ ಬರುತ್ತಿರುವ ಬಹಳಷ್ಟು ವಿದ್ಯಾರ್ಥಿ‌ಗಳು ಈ ರೀತಿ ಆಲೋಚನೆ ಮಾಡುತ್ತಿರುತ್ತಾರೆ. ನೀವು ಕಂಪೆನಿಗೆ ಸೇರಬೇಕು ಎಂದಿದ್ದರೆ ತಿಂಗಳಿಗೊಮ್ಮೆಲಿಂಕ್ಡಿನ್‌ನಲ್ಲಿ ನಿಮ್ಮ ಸ್ಕಿಲ್‌,ಪ್ರೊಜೆಕ್ಟ್‌ ಅಪ್‌ಡೇಟ್‌ ಮಾಡಿಕೊಂಡಿರಿ. ಜೊತೆಗೆ ಉಳಿದ ಫ್ರೆಂಡ್ಸ್‌, ಉಳಿದ ಜಾಬ್‌ ಸರ್ಚಿ‌ಂಗ್‌ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ. ನಿಮ್ಮ ಪ್ರಯತ್ನವಿಲ್ಲದೇ ಕಂಪೆನಿಗಳು ನಿಮ್ಮನ್ನು ಕೈ ಬೀಸಿ ಕರೆದು ಕೆಲಸ ಕೊಡುತ್ತದೆ ಎನ್ನುವ ಭ್ರಮೆಯಿಂದ ಹೊರ ಬನ್ನಿ.

ಸೋಶಿಯಲ್‌ ಮೀಡಿಯಾದ ಬಗ್ಗೆ ಹರಡಿರುವ ಮಿಥ್‌ಗಳು

ಸೋಶಿಯಲ್‌ ಮೀಡಿಯಾದ ಬಗ್ಗೆ ಹರಡಿರುವ ಮಿಥ್‌ಗಳು

ಟ್ವೀಟರ್‌ ಮೇಲೆ ತಿಳಿಸಿದ ಈ ವ್ಯಕ್ತಿಗಳಿಗೆ ಮಾತ್ರ ಅಲ್ಲ.ಸಾಹಿತಿಗಳು,ವಿಜ್ಞಾನಿಗಳು, ವಿವಿಧ ವಿಷಯಗಳ ತಜ್ಞರು,ಕಂಪೆನಿಗಳು ಹೆಚ್ಚಾಗಿ ಇಂದು ಟ್ವೀಟರ್‌ನ್ನು ಬಳಸುತ್ತಿದ್ದಾರೆ. ಹೀಗಾಗಿ ನೀವೇ ನೇರವಾಗಿ ತಜ್ಷರ, ಕಂಪೆನಿಗಳ ಜೊತೆ ಮಾತನಾಡಬಹುದು. ಟ್ವೀಟರ್‌ನಲ್ಲಿ ಸಿಗುವ ಈ ಅವಕಾಶ ಬೇರೆ ಸೋಶಿಯಲ್‌ ಮೀಡಿಯಾದಲ್ಲಿ ಸಿಗುವುದು ಕಷ್ಟ.

ಸೋಶಿಯಲ್‌ ಮೀಡಿಯಾದ ಬಗ್ಗೆ ಹರಡಿರುವ ಮಿಥ್‌ಗಳು

ಸೋಶಿಯಲ್‌ ಮೀಡಿಯಾದ ಬಗ್ಗೆ ಹರಡಿರುವ ಮಿಥ್‌ಗಳು

ಈ ರೀತಿಯ ಆಲೋಚನೆಯನ್ನು ಬಿಟ್ಟು ಬಿಡುವುದು ಒಳ್ಳೆಯದು. ಕೆಲವೊಂದು ಸಮೀಕ್ಷೆಗಳ ಪ್ರಕಾರ ಇಂದು ಹೆಚ್ಚಾಗಿ ವ್ಯಕ್ತಿಯ ಸೋಶಿಯಲ್‌ ನೆಟ್‌ವರ್ಕ್‌ಗಳಲ್ಲಿರುವ ಮಾಹಿತಿಗಳು,ಫೋಟೋಗಳನ್ನು ವೀಕ್ಷಿಸಿ ಉದ್ಯೋಗ ನೀಡುವ ಕಂಪೆನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಮದುವೆಯ ಸಂದರ್ಭ‌ದಲ್ಲಿ ಸಂಬಂಧಿಕರು ಹುಡುಗ/ಹುಡುಗಿಯ ಪ್ರೊಫೈಲ್‌ ವೀಕ್ಷಿಸುವುದು ಹೆಚ್ಚಾಗುತ್ತಿದೆ. ಹೀಗಾಗಿ ನಿಮ್ಮ ಬಗ್ಗೆ ಉಳಿದವರು ನೋಡುವಾಗಲೇ ಅಸಹ್ಯ ಪಡುವಂತ ಫೋಟೋಗಳು/ ಮಾಹಿತಿಗಳನ್ನು ಶೇರ್‌ ಮಾಡದಿರಿ.

ಸೋಶಿಯಲ್‌ ಮೀಡಿಯಾದ ಬಗ್ಗೆ ಹರಡಿರುವ ಮಿಥ್‌ಗಳು

ಸೋಶಿಯಲ್‌ ಮೀಡಿಯಾದ ಬಗ್ಗೆ ಹರಡಿರುವ ಮಿಥ್‌ಗಳು

ಸೋಶಿಯಲ್‌ ಮೀಡಿಯಾದಲ್ಲೂ ಕಮೆಂಟ್‌ ಹಾಕವುದಕ್ಕೂ ಒಂದು ವ್ಯಾಪ್ತಿ ಇದೆ.ಆ ವ್ಯಾಪ್ತಿಯನ್ನು ಬಿಟ್ಟು ಮುಂದುವರೆದರೆ ಈ ವ್ಯಕ್ತಿ ಹೇಗಿದ್ದಾರೆ ಎನ್ನುವುದು ಎಲ್ಲರಿಗೂ ಸುಲಭವಾಗಿ ಗೊತ್ತಾಗುತ್ತದೆ.ಹೀಗಾಗಿ ಪೋಸ್ಟ್‌,ಕಮೆಂಟ್‌ ಮಾಡುವಾಗ ಬಳಸುವ ಭಾಷೆಯ ಬಗ್ಗೆ ಗಮನವಿರಲಿ.ವಿಶೇಷವಾಗಿ ಕೆಲಸ ಮಾಡುತ್ತಿರುವ ಕಂಪೆನಿ, ಉದ್ಯೋಗಿಗಳ ಬಗ್ಗೆ ಮಾಹಿತಿ ಹಂಚದಿರಿ.

ಸೋಶಿಯಲ್‌ ಮೀಡಿಯಾದ ಬಗ್ಗೆ ಹರಡಿರುವ ಮಿಥ್‌ಗಳು

ಸೋಶಿಯಲ್‌ ಮೀಡಿಯಾದ ಬಗ್ಗೆ ಹರಡಿರುವ ಮಿಥ್‌ಗಳು

ಸೋಶಿಯಲ್‌ ಮೀಡಿಯಾ ಬ್ಲಾಗ್‌,ವೆಬ್‌ಸೈಟ್‌,ಮಾಧ್ಯಮದ ವ್ಯಕ್ತಿಗಳಿಗೆ ಮಾತ್ರ ಸಹಕಾರಿ ಅಲ್ಲ. ಯಾರು ಬೇಕಾದ್ರೂ ಇದನ್ನು ತಮ್ಮ ಲಾಭಕ್ಕಾಗಿ ಬಳಸಬಹುದು. ತಮ್ಮ ವಿಚಾರಗಳನ್ನು ಹರಿದು ಬಿಡುವ ಮೂಲಕ ಮುದೊಂದು ದಿನ ಆ ವಿಚಾರದಲ್ಲಿ ತಜ್ಞರಾಗಬಹುದು.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+