ಫೋನ್ ಸ್ಕ್ರೀನ್ ಒಡೆದಿದೆಯೇ? ಸೂಪರ್ ಪರಿಹಾರಗಳು
ದುಬಾರಿ ಫೋನ್ ಕೊಂಡಿದ್ದೀರಿ ಆದರೆ ನಿಮಗೆ ಅರಿವಿಲ್ಲದೆ ಅದು ಕೈಜಾರಿ ಕೆಳಗೆ ಬಿದ್ದಿದೆ ಮತ್ತು ಫೋನ್ ಪರದೆಗೆ ಹಾನಿಯಾಗಿದೆ. ಇನ್ನೇನು ಮಾಡುವುದು ಎಂದು ನೀವು ತಲೆಯ ಮೇಲೆ ಕೈ ಇಟ್ಟು ಕೂರುವ ಸಮಯ ಇದಲ್ಲ. ಕೆಲವೊಂದು ಸಮಯೋಚಿತ ಪರಿಹಾರಗಳನ್ನು ನೀವು ಕಂಡುಕೊಳ್ಳುವುದರ ಮೂಲಕ ಒಡೆದ ಸ್ಕ್ರೀನ್‌ಗೆ ಪರಿಹರವನ್ನು ಕಂಡುಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೀಡಲಿರುವೆವು.
ಓದಿರಿ: ಫೋನ್‌ನ ಸ್ಕ್ರಾಚ್ ಅನ್ನು ತೆಗೆಯುವ 8 ಉಪಾಯಗಳು
ಈ ಪರಿಹಾರಗಳು ಅತ್ಯುತ್ತಮವಾಗಿದ್ದು ನಿಮ್ಮ ಒಡೆದ ಫೋನ್ ಪರದೆಯನ್ನು ಸರಿಪಡಿಸಿಕೊಳ್ಳಲು ನೆರವಾಗಲಿದೆ.

ಫೋನ್ ಬ್ಯಾಕಪ್ ಮಾಡಿ
ಫೋನ್ ಪರದೆ ಒಡೆದಿದೆ ಎಂದಲ್ಲಿ ಅದರಲ್ಲಿರುವ ಉಪಯುಕ್ತ ಮಾಹಿತಿಗಳನ್ನು ಬ್ಯಾಕಪ್ ಮಾಡಿಕೊಳ್ಳಿ. ಮೌಲ್ಯಯುತ ಫೋಟೋಗಳು, ಡಾಕ್ಯುಮೆಂಟ್‌ಗಳು ಇದನ್ನು ಕಳೆದುಕೊಳ್ಳದಿರಿ.

ಫೋನ್ ಪಾಲಿಸಿಗಳು
ನಿಮ್ಮ ಫೋನ್ ಹಾನಿಯಾದಲ್ಲಿ ಯಾವುದಾದರೂ ಇನ್ಶೂರೆನ್ಸ್ ಪಾಲಿಸಿಗಳು ಇವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಈ ಪಾಲಿಸಿಗಳನ್ನು ಆನ್‌ಲೈನ್‌ನಲ್ಲಿ ನಿಮಗೆ ಅಪ್ಲೈ ಮಾಡಬಹುದು.

ಫೋನ್ ಸರಿಪಡಿಸುವವರು
ನೀವು ಫೋನ್ ಖರೀದಿ ಮಾಡಿದಲ್ಲಿ ನಿಮ್ಮ ಫೋನ್‌ಗೆ ಉಚಿತ ರಿಪೇರಿಯನ್ನು ಮಾಡಲಾಗುತ್ತದೆಯೇ ಎಂಬುದನ್ನು ವಿಚಾರಿಸಿ. ಒಡೆದ ಫೋನ್ ಪರದೆಗೆ ಇವರು ಸೇವೆಯನ್ನು ಮಾಡಿಕೊಡುತ್ತಾರೆ. ಇದರಿಂದ ನಿಮ್ಮ ಕೆಲಸ ಇನ್ನೂ ಸುಲಭವಾಗುತ್ತದೆ.

ವೆಬ್‌ಸೈಟ್ ಪರಿಶೀಲಿಸಿ
ತಯಾರಕರ ವೆಬ್‌ಸೈಟ್ ಅನ್ನು ಇದಕ್ಕಾಗಿ ತಡಕಾಡಿ. ಇನ್ನು ಅವರು ರಿಪೇರಿಯನ್ನು ನಿಮಗೆ ಒದಗಿಸುತ್ತಾರೆ ಎಂದಾದಲ್ಲಿ ಇತರೆ ಅಂಗಡಿಗಳಿಗಿಂತಲೂ ಅವರು ದುಪ್ಪಟ್ಟು ವೆಚ್ಚವನ್ನು ಹಾಕುತ್ತಾರೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ.

ಸ್ವತಂತ್ರ ರಿಪೇರಿ ಶಾಪ್
ಸ್ವತಂತ್ರ ರಿಪೇರಿ ಅಂಗಡಿಗಳು ಅತಿ ಕಡಿಮೆ ದರದಲ್ಲಿ ನಿಮ್ಮ ಫೋನ್ ಅನ್ನು ರಿಪೇರಿ ಮಾಡಿಕೊಡುತ್ತವೆ ಆದರೆ ನೀವು ಇದನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಸ್ನೇಹಿತರನ್ನು ಇದಕ್ಕಾಗಿ ವಿಚಾರಿಸಿ ಆನ್‌ಲೈನ್ ಕಾಮೆಂಟ್‌ಗಳನ್ನು ಪರಿಶೀಲಿಸಿಕೊಳ್ಳಿ.

ನೀವೇ ಸರಿಪಡಿಸಿಕೊಳ್ಳುವುದು
ಇನ್ನು ಈ ಪರಿಹಾರ ಕೊಂಚ ಜಾಗರೂಕತೆಯಿಂದ ನಿರ್ವಹಿಸಬೇಕಾಗಿರುವುದರಿಂದ ಇಲೆಕ್ಟ್ರಾನಿಕ್ ವಸ್ತುಗಳನ್ನು ರಿಪೇರಿ ಮಾಡುವ ಜ್ಞಾನ ನಿಮ್ಮಲ್ಲಿ ಇರಬೇಕು.

ರಿಪೇರಿ ಕಿಟ್
ಅಮೆಜಾನ್‌ನಂತಹ ತಾಣಗಳು ರಿಪೇರಿ ಕಿಟ್ ಅನ್ನು ಒದಗಿಸುವುದರಿಂದ ಮೊದಲು ಅದನ್ನು ಖರೀದಿಸಿ ನಂತರ ಫೋನ್ ರಿಪೇರಿಯನ್ನು ಮಾಡಿರಿ.

ಫೋನ್ ಮಾರಾಟ
ನಿಮ್ಮ ಫೋನ್ ಹಳೆಯದಾಗಿದೆ ಎಂದಾದಲ್ಲಿ ಅದನ್ನು ರಿಪೇರಿ ಮಾಡುವುದಕ್ಕಾಗಿ ದುಡ್ಡು ಖರ್ಚು ಮಾಡದಿರಿ. ಸ್ವಲ್ಪ ದುಡ್ಡಿಗಾಗಿಯಾದರೂ ನಿಮ್ಮ ಫೋನ್ ಅನ್ನು ಮಾರಾಟ ಮಾಡಬಹುದಾಗಿದೆ.

ಮಾರಾಟ ಸೈಟ್‌ಗಳು
ನಿಮ್ಮ ಹಳೆಯ ಡಿವೈಸ್‌ಗಳು ಒಮ್ಮೊಮ್ಮೆ ಉತ್ತಮ ಬೆಲೆಗೆ ಮಾರಾಟವಾಗುವ ಸಾಧ್ಯತೆ ಇದ್ದು ಇಬೇ ಮೊದಲಾದ ಸೈಟ್‌ಗಳಲ್ಲಿ ನಿಮ್ಮ ಫೋನ್ ಜಾಹೀರಾತು ನೀಡಿ.

ನಿಮ್ಮ ತಪ್ಪುಗಳಿಂದ ಅರಿತುಕೊಳ್ಳಿ
ನಿಮ್ಮ ಫೋನ್‌ನ ಜಾಗರೂಕತೆಯನ್ನು ನೀವೇ ಮಾಡಬೇಕಾಗಿರುವುದರಿಂದ ಫೋನ್‌ನ ಸುರಕ್ಷತೆಗೆ ಹೆಚ್ಚಿನ ಗಮನವನ್ನು ನೀಡಿ. ಎಲ್ಲಿಯೂ ಬೀಳದಂತೆ, ಪೆಟ್ಟಾಗದಂತೆ ಜಾಗರೂಕತೆ ವಹಿಸಿ. ಮುನ್ನೆಚ್ಚರಿಕೆಯೂ ಅಗತ್ಯ.

ಫೋನ್ ಕವರ್
ಫೋನ್‌ನ ಸುರಕ್ಷತೆಗಾಗಿ ಕೆಳಕ್ಕೆ ಬಿದ್ದರೂ ಅಷ್ಟು ಏಟಾಗಂತೆ ಕಾಪಾಡಲು ಫೋನ್‌ಗೆ ಕವರ್‌ಗಳ ಬಳಕೆಯನ್ನು ಮಾಡಿ. ಇದು ಫೋನ್‌ಗೆ ಉಂಟಾಗುವ ಹೆಚ್ಚುವರಿ ಅಪಾಯವನ್ನು ಕಡಿಮೆ ಮಾಡಲು ನೆರವು ನೀಡುತ್ತದೆ.


Click it and Unblock the Notifications








