Home
ಟೆಕ್ ನೌಕರಿ

5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಮಾಡಿಸುವ ವಿಧಾನ: ಪೂರ್ಣ ಮಾರ್ಗದರ್ಶಿ!

ಭಾರತದಲ್ಲಿ 'ಆಧಾರ್ ಕಾರ್ಡ್' ಈಗ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಅಗತ್ಯವಾದ ಗುರುತಿನ ದಾಖಲೆವಾಗಿದೆ. ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ನೀಡುವ ಈ 12 ಅಂಕೆಯ ವಿಶಿಷ್ಟ ಸಂಖ್ಯೆಯು ವ್ಯಕ್ತಿಯ ಗುರುತು ಮತ್ತು ವಿಳಾಸದ ದೃಢೀಕರಣಕ್ಕಾಗಿ ಬಳಸಲಾಗುತ್ತದೆ ಎಂಬುದು ನಿಮಗೂ ಸಹ ತಿಳಿದಿದೆ. ಇದು ಈಗ ಮಕ್ಕಳಿಗೂ ಸಮಾನವಾಗಿ ಉಪಯುಕ್ತವಾಗಿದೆ. ಸರ್ಕಾರದ ವಿವಿಧ ಯೋಜನೆಗಳಿಂದ ಹಿಡಿದು ಪಾಸ್‌ಪೋರ್ಟ್‌ ಪಡೆಯುವುದರವರೆಗೆ, ಶಾಲಾ ದಾಖಲೆಗಳಿಗೂ ಮಕ್ಕಳಿಗೆ ಆಧಾರ್ ಕಾರ್ಡ್ ಅಗತ್ಯವಾಗಿದೆ.

ಹಾಗಾದಿಯೇ, UIDAI ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ವಿಶೇಷವಾಗಿ 'ಬಾಲ ಆಧಾರ್ ಕಾರ್ಡ್' ಅನ್ನು ನೀಡುತ್ತದೆ. ಈ ಬಾಲ ಆಧಾರ್ ಕಾರ್ಡ್‌ನಲ್ಲಿ ಮಗುವಿನ ಹೆಸರು, ಜನ್ಮದಿನಾಂಕ, ಲಿಂಗ ಮತ್ತು ಫೋಟೋ ಇರಲಿದೆ. ಆದರೆ ಈ ವಯಸ್ಸಿನ ಮಕ್ಕಳಿಂದ ಬಯೋಮೆಟ್ರಿಕ್ ಮಾಹಿತಿ, ಅಂದರೆ ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ತೆಗೆದುಕೊಳ್ಳುವುದಿಲ್ಲ. ಬದಲಿಗೆ, ಮಗುವಿನ ಆಧಾರ್ ಕಾರ್ಡ್ ಪೋಷಕರ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾಗುತ್ತದೆ. ಹಾಗಾದರೆ, 'ಬಾಲ ಆಧಾರ್ ಕಾರ್ಡ್' ಮಾಡಿಸುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ.

5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಮಾಡಿಸುವ ವಿಧಾನ: ಪೂರ್ಣ ಮಾರ್ಗದರ್ಶಿ!

ಆನ್‌ಲೈನ್ ಮೂಲಕ ಬಾಲ ಆಧಾರ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
UIDAI ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ತುಂಬಾ ಸುಲಭ,
My Aadhaar ನಲ್ಲಿ Book an Appointment ವಿಭಾಗಕ್ಕೆ ಹೋಗಿ.
ನಿಮ್ಮ ನಗರ, ಮೊಬೈಲ್ ಸಂಖ್ಯೆ ನೀಡಿ, OTP ಮೂಲಕ ದೃಢೀಕರಿಸಿ.
ನಿಮ್ಮ ಅನುಕೂಲಕ್ಕೆ ತಕ್ಕ ದಿನ ಮತ್ತು ಸಮಯ ಆಯ್ಕೆ ಮಾಡಿ.
ಆಯ್ಕೆ ಮಾಡಿದ ದಿನದಂದು ಹತ್ತಿರದ Aadhaar Seva Kendra ಕ್ಕೆ ತೆರಳಿ.
ಆ ದಿನ ಪೋಷಕರಲ್ಲಿ ಒಬ್ಬರ ಆಧಾರ್ ಕಾರ್ಡ್ ಹಾಗೂ ಬಯೋಮೆಟ್ರಿಕ್ ದೃಢೀಕರಣ ಅಗತ್ಯ. ಮಗುವಿನ ಜನನ ಪ್ರಮಾಣಪತ್ರ ಹಾಗೂ ಅರ್ಜಿ ಫಾರ್ಮ್ ಸಲ್ಲಿಸಿದ ನಂತರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಕಾರ್ಡ್ ಪ್ರಿಂಟ್ ಆಗಿ ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ ಅಥವಾ UIDAI ಪೋರ್ಟಲ್ ಮೂಲಕ ಡೌನ್‌ಲೋಡ್ ಮಾಡಬಹುದು.

ಆಫ್‌ಲೈನ್ ಮೂಲಕ ಬಾಲ ಆಧಾರ್ ಮಾಡಿಸುವುದು ಹೇಗೆ?
ನೇರವಾಗಿ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ:
ಬಾಲ ಆಧಾರ್ ಅರ್ಜಿ ಫಾರ್ಮ್ ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಸಲ್ಲಿಸಿ.
ಪೋಷಕರ ಆಧಾರ್ ದೃಢೀಕರಣ ನೀಡಿ.
ಸ್ವೀಕೃತಿ ಸ್ಲಿಪ್ ಹಾಗೂ ನೋಂದಣಿ ಐಡಿ ಪಡೆಯಿರಿ.
ಸಾಮಾನ್ಯವಾಗಿ ಕಾರ್ಡ್ 60 ರಿಂದ 90 ದಿನಗಳ ಒಳಗೆ ಪೋಸ್ಟ್ ಮೂಲಕ ಬರುತ್ತದೆ. UIDAI ವೆಬ್‌ಸೈಟ್‌ನಲ್ಲಿ ನೀವು ಸ್ಥಿತಿಯನ್ನು ಪರಿಶೀಲಿಸಬಹುದು.

ಅಗತ್ಯ ದಾಖಲೆಗಳು
ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯ ಪ್ರಮಾಣಪತ್ರ.
ಪೋಷಕರಲ್ಲಿ ಒಬ್ಬರ ಆಧಾರ್ ಕಾರ್ಡ್ (ಲಿಂಕ್ ಮಾಡಲು).
ಪೋಷಕರ ವಿಳಾಸ ಪುರಾವೆ: ಸಾಮಾನ್ಯವಾಗಿ ಆಧಾರ್‌ನಲ್ಲಿನ ವಿಳಾಸವನ್ನೇ ಪರಿಗಣಿಸಲಾಗುತ್ತದೆ.

ಬಾಲ ಆಧಾರ್ ಕಾರ್ಡ್ ನಿಮ್ಮ ಮಗುವಿನ ಗುರುತಿನ ಅಧಿಕೃತ ದಾಖಲೆ. ಸರ್ಕಾರದ ಸೌಲಭ್ಯಗಳು, ಶಾಲಾ ದಾಖಲಾತಿ ಅಥವಾ ವಿದೇಶ ಪ್ರಯಾಣಕ್ಕೂ ಇದು ಸಹಾಯಕ. UIDAI ನೀಡಿರುವ ಸುಲಭ ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳಿಂದ 2025ರಲ್ಲಿ ಬಾಲ ಆಧಾರ್ ಮಾಡಿಸುವುದು ತುಂಬಾ ಸರಳವಾಗಿದೆ. ಈ ಮಾಹಿತಿ ನಿಮಗೆ ಸಹಾಯವಾಗಿದೆಯೇ? ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. ಮತ್ತು ಈ ಲೇಖನವನ್ನು ಶೇರ್ ಮಾಡಿ.

Best Mobiles in India

English summary
Baal Aadhaar card will include the child’s name, date of birth, gender, and photograph. However, biometric details such as fingerprints and iris scans will not be collected at this age. Instead, the Baal Aadhaar will be linked to the Aadhaar number of one of the parents.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+