ನೀರಲ್ಲಿ ಬಿದ್ದ ಮೊಬೈಲ್/ಲ್ಯಾಪ್ಟಾಪ್ ರಕ್ಷಣೆಗೆ ಟಿಪ್ಸ್

Posted By: Varun
ನೀರಲ್ಲಿ ಬಿದ್ದ ಮೊಬೈಲ್/ಲ್ಯಾಪ್ಟಾಪ್ ರಕ್ಷಣೆಗೆ ಟಿಪ್ಸ್

ಇನ್ನೊಂದು ವಾರ ಕಳೆದರೆ ಜುಲೈ ಮಾಸ ಬಂದೇ ಬಿಡುತ್ತೆ. ಈಗಾಗಲೇ ಬರಬೇಕಿದ್ದ ಮುಂಗಾರು ಮಳೆ ತಡವಾಗಿಯಾದರೂ ಬಂದೇ ಬರುತ್ತದೆ ಎಂದು ಹವಾಮಾನ ಇಲಾಖೆ ಬೇರೆ ತಿಳಿಸಿದೆ. ಮಳೆ ಬಂದರೂ ಕೂಡ ಆಫೀಸಿಗೆ ಹೋಗೋದು ತಪ್ಪುವುದಿಲ್ಲವಾದ್ದರಿಂದ ಮಳೆಯಲ್ಲಿ ನೆಂದರೂ ಹೋಗಬೇಕು.ಆಗ ನಿಮ್ಮ ಮೊಬೈಲ್/ಲ್ಯಾಪ್ಟಾಪ್/ಕ್ಯಾಮರಾ ಆಗಲೀ ಒದ್ದೆಯಾಗುವ ಎಲ್ಲ ಸಾಧ್ಯತೆ ಇದೆ. ಅಕಸ್ಮಾತ್ ಏನಾದರೂ ಒದ್ದೆಯಾದರೆ ಅದು ಕೆಡದಂತೆ ರಕ್ಷಿಸಲು ಹಾಗು ಅದು ಸಮರ್ಪಕವಾಗಿಕೆಲಸ ಮಾಡಲು ಇಲ್ಲಿದೆ 8 ಟಿಪ್ಸ್:

1) ಸ್ವಿಚ್ ಆಫ್ ಮಾಡಿ- ನಿಮ್ಮ ಮೊಬೈಲ್, ಲ್ಯಾಪ್ಟಾಪ್, ಕ್ಯಾಮರಾ ಒದ್ದೆಯಾಗಿದ್ದು ಕಂಡುಬಂದ ತಕ್ಷಣ ಸ್ವಿಚ್ ಆಫ್ ಮಾಡಿ ಬ್ಯಾಟರಿಯನ್ನು ತೆಗೆಯಿರಿ.

2) ಬಿಡಿ ಭಾಗ ತೆಗೆಯಿರಿ- ನಿಮ್ಮ ಸಾಧನದ ಬಿಡಿ ಭಾಗಗಳನ್ನು ತೆಗೆದುಬಿಡಿ. ಉದಾ: ನಿಮ್ಮ ಫೋನಿನ ಸಿಮ್ ಕಾರ್ಡ್, ಮೆಮೊರಿ ಕಾರ್ಡ್.. ಈ ರೀತಿ.

3) ಶೇಕ್ ಮಾಡಿ- ಬಿಡಿ ಭಾಗಗಳನ್ನು ತೆಗೆದ ಮೇಲೆ ನಿಮ್ಮ ಫೋನ್/ಲ್ಯಾಪ್ಟಾಪ್/ಕ್ಯಾಮರಾವನ್ನು ಚೆನ್ನಾಗಿ ಅಲ್ಲಾಡಿಸಿ ನೀರು ಹೊರಬರುವಂತೆ ಮಾಡಿ.

4) ಒಣಗಿಸಿ- ಟಿಶ್ಯೂ ಪೇಪರ್ ಬಳಸಿ ಒದ್ದೆಯಾದ ಜಾಗಗಳನ್ನು ಒರೆಸಿ.

5) ಫ್ಯಾನ್ ಕೆಳಗೆ ಒಣಗಿಸಬೇಡಿ- ಗಾಳಿಗೆ ನೀರಿನಂಶ ಬೇಗ ಒಣಗಬಹುದಾದರೂ ಫ್ಯಾನ್ ಹಾಗು ಡ್ರಯರ್ ಬಳಸಿ ಒಣಗಿಸಬೇಡಿ. ಬಿಸಿ ಗಾಳಿ ಹಾಗು ಅಶುದ್ಧ ಗಾಳಿ ನಿಮ್ಮ ಗ್ಯಾಡ್ಜೆಟ್ ಗೆ ಒಳ್ಳೆಯದಲ್ಲ. ಅದರ ಬದಲಾಗಿ ಎಸಿ ಮುಂದೆ ಒಣಗಿಸಿ.

6) ಅಕ್ಕಿಯಲ್ಲಿ ಹುದುಗಿಸಿ- ನಿಮಗೆ ಇದು ವಿಚಿತ್ರ ಎನಿಸಿದರೂ ಈ ತಂತ್ರ ನಿಜಕ್ಕೂ ಸಹಾಯಕಾರಿ. ಒದ್ದೆಯಾಗಿರುವ ಸಾಧನವನ್ನು ಧೂಳಿಲ್ಲದ ಶುದ್ಧ ಅಕ್ಕಿಯಲ್ಲಿ ಹುದುಗಿಸಿದರೆ ಅದು ತೇವಾಂಶ ಹೀರಿಕೊಳ್ಳುತ್ತದೆ.

7) ಆಲ್ಕೋಹಾಲ್ ಸ್ಪಿರಿಟ್ ಉಪಯೋಗಿಸಿ- ಹೌದು. ಕಿವಿಯನ್ನು ಶುದ್ಧಗೊಳಿಸಲು ಉಪಯೋಗಿಸುವ ಕಾಟನ್ ಬಡ್ಸ್ ಅನ್ನು ಆಲ್ಕೋಹಾಲ್ ಸ್ಪಿರಿಟ್ ನಲ್ಲಿ ಅದ್ದಿ ಅದನ್ನು ಸರ್ಕ್ಯೂಟ್ ಬೋರ್ಡ್ ಮೇಲೆ ಹಾಗು ಒದ್ದೆಯಾಗಿರುವ ಜಾಗಗಳ ಮೇಲೆ ಹೊರಲಾಡಿಸಿದರೆ ನೀರು ಬೇಗ ಆವಿಯಾಗಿ ಒಣಗುತ್ತದೆ.

ಮೇಲೆ ಹೇಳಿದ ಇಷ್ಟೂ ಹಂತಗಳನ್ನು ಮಾಡಿದ ಮೇಲೆ ನಿಮ್ಮ ಗ್ಯಾಡ್ಜೆಟ್ ಒಣಗಿದೆ ಎಂದು ಅನ್ನಿಸಿದರೆ ಬಿಡಿ ಭಾಗಗಳನ್ನು ಮತ್ತೆ ಜೋಡಿಸಿ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot