Home
ಟೆಕ್ ನೌಕರಿ

ಮಕ್ಕಳನ್ನು ಮೊಬೈಲ್ ಮತ್ತು ಟಿವಿಯಿಂದ ದೂರ ಇಡುವುದು ಹೇಗೆ?

ಇದು ಆಧುನಿಕ ತಂತ್ರಜ್ಞಾನ ಯುಗ. ಈ ಸ್ಮಾರ್ಟ್‌ಫೋನ್‌ಗಳ ಕಾಲದಲ್ಲಿ, ಮಕ್ಕಳನ್ನು ಟಿವಿ ಮತ್ತು ಮೊಬೈಲ್‌ಗಳಿಂದ ದೂರವಿರಿಸುವುದು ಪೋಷಕರಿಗೆ ಕಷ್ಟವಾಗಿದೆ. ಮಕ್ಕಳಿಗೆ ಉತ್ತಮ ಹವ್ಯಾಸಗಳನ್ನು ಬೆಳೆಸಲು ಪ್ರೋತ್ಸಾಹಿಸುವುದು ಪೋಷಕರ ಜವಾಬ್ದಾರಿ, ಆದರೆ ಇಂದಿನ ಪೋಷಕರಿಗೆ ಈ ತಂತ್ರಜ್ಞಾನಗಳಿಂದ ಮಕ್ಕಳನ್ನು ದೂರವಿರಿಸುವುದು ದೊಡ್ಡ ಸವಾಲಾಗಿ ಕಾಣುತ್ತಿದೆ. ಈ ತಂತ್ರಜ್ಞಾನಗಳು ನಮ್ಮ ಜೀವನದಲ್ಲಿ ಅತ್ಯಂತ ಮುಖ್ಯವಾಗಿದ್ದರೂ, ಅವುಗಳ ಅತಿಯಾದ ಪ್ರಭಾವವು ಮಕ್ಕಳ ಮೇಲೆ ಹೇಗೆ ಅಪಾಯಕಾರಿ ಪರಿಣಾಮವನ್ನು ಬೀಳುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕಾಗಿದೆ. ಪೋಷಕರಾಗಿ, ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ನಾವು ಕೆಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಬಹುದು. ಆದ್ದರಿಂದ, ಇಂದಿನ ಲೇಖನದಲ್ಲಿ ಮಕ್ಕಳನ್ನು ಟಿವಿ ಮತ್ತು ಮೊಬೈಲ್‌ಗಳಿಂದ ದೂರವಿರಿಸಲು ಹೇಗೆ ಸಾಧ್ಯವಿದೆ ಎಂಬುದರ ಕುರಿತು ನೋಡೋಣ.

ಮೊಟ್ಟ ಮೊದಲನೆಯದಾಗಿ, ಮಕ್ಕಳನ್ನು ಟಿವಿ ಮತ್ತು ಮೊಬೈಲ್ ನಿಂದ ದೂರ ಇಡಲು ನಾವು ಮಕ್ಕಳ ಮುಂದೆ ಮೊಬೈಲ್ ಮತ್ತು ಟಿವಿಯನ್ನು ಕಡಿಮೆ ಬಳಸಬೇಕು. ಮಕ್ಕಳು ಯಾವಾಗಲೂ ನಮ್ಮನ್ನು ಅನುಕರಿಸುತ್ತಾರೆ, ಆದ್ದರಿಂದ ನಾವು ಮಾದರಿಯಾಗಬೇಕು. ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಅತ್ಯಗತ್ಯ. ಅವರೊಂದಿಗೆ ಆಟವಾಡಿ, ಹೊಸ ಹೊಸ ಕಥೆಗಳನ್ನು ಹೇಳಿ ಮತ್ತು ಅವರ ಆಸಕ್ತಿಗಳನ್ನು ಹಂಚಿಕೊಳ್ಳಿ. ಹೊಸ ಆಟಿಕೆಗಳನ್ನು ಪರಿಚಯಿಸಿ ಮತ್ತು ಅವರೊಟ್ಟಿಗೆ ಆಟವಾಡಿ. ಇದು ಅವರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ ಮತ್ತು ಅವರಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುತ್ತದೆ. ಮಕ್ಕಳನ್ನು ಹೊರಗೆ ಆಡಲು ಪ್ರೋತ್ಸಾಹಿಸಿ, ಸ್ನೇಹಿತರೊಂದಿಗೆ ಸಮಯ ಕಳೆಯಲು ಅವಕಾಶ ನೀಡಿ. ಹೊರಾಂಗಣ ಆಟಗಳು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಇದು ಒಂದು ರೀತಿಯಾದರೆ,

ಮಕ್ಕಳನ್ನು ಮೊಬೈಲ್ ಮತ್ತು ಟಿವಿಯಿಂದ ದೂರ ಇಡುವುದು ಹೇಗೆ?

ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸುವುದು ಬಹಳ ಮುಖ್ಯ. ಪುಸ್ತಕಗಳು ಮಕ್ಕಳ ಜ್ಞಾನವನ್ನು ಹೆಚ್ಚಿಸುತ್ತವೆ ಮತ್ತು ಅವರ ಕಲ್ಪನಾ ಶಕ್ತಿಯನ್ನು ವಿಸ್ತರಿಸುತ್ತವೆ. ಪುಸ್ತಕಗಳ ಜಗತ್ತಿನಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡರೆ, ಟಿವಿ ಮತ್ತು ಮೊಬೈಲ್‌ನಿಂದ ದೂರವಿರಲು ಸಾಧ್ಯವಾಗುತ್ತದೆ. ಹಾಗೆಯೇ, ಮಕ್ಕಳನ್ನು ಹೊರಗೆ ಆಡಲು ಪ್ರೋತ್ಸಾಹಿಸಿ, ಸ್ನೇಹಿತರೊಂದಿಗೆ ಸಮಯ ಕಳೆಯಲು ಅವಕಾಶ ನೀಡಿ. ಹೊರಾಂಗಣ ಆಟಗಳು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದುಈ ಬದಲಾವಣೆಗಳನ್ನು ಕಾರ್ಯರೂಪಕ್ಕೆ ತರುವುದು ಸುಲಭವಲ್ಲ, ಆದರೆ ಅಸಾಧ್ಯವೇನಲ್ಲ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಕಥೆಗಳು ಮತ್ತು ಪುಸ್ತಕಗಳು ಅವರ ಗಮನವನ್ನು ಬೇರೆಡೆಗೆ ಸೆಳೆಯುತ್ತವೆ ಮತ್ತು ಅವರನ್ನು ಜ್ಞಾನದ ಹಾದಿಯಲ್ಲಿ ಕೊಂಡೊಯ್ಯುತ್ತವೆ.

ಇಲ್ಲಿ ಒಂದು ಕಾಲ್ಪನಿಕ ಘಟನೆಯನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ತಾಯಿ ಮತ್ತು ಮಗಳು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಗಳು ಅಳಲು ಪ್ರಾರಂಭಿಸಿದಳು. ತಾಯಿ ಮೊಬೈಲ್ ನೀಡಿದರು. ಸ್ವಲ್ಪ ಸಮಯದ ನಂತರ, ಮತ್ತೊರ್ವ ತಾಯಿ ತನ್ನ ಮಗಳಿಗೆ ಪುಸ್ತಕ ನೀಡಿದಾಗ ಆಕೆ ಕೂಡಾ ಪುಸ್ತಕ ಓದುವುದರಲ್ಲಿ ಮಗ್ನಳಾಗಿದ್ದಳು. ಪುಸ್ತಕದ ಶಕ್ತಿ ಎಷ್ಟಿದೆ ಎನ್ನುವುದನ್ನು ಈ ಘಟನೆ ತೋರಿಸುತ್ತದೆ. ಆದರೆ, ಟಿವಿ ಮತ್ತು ಮೊಬೈಲ್ ಅನ್ನು ಸಂಪೂರ್ಣವಾಗಿ ನಿಷೇಧಿಸುವುದು ಸರಿಯಲ್ಲ. ಇಂದಿನ ಜಗತ್ತಿನಲ್ಲಿ, ತಂತ್ರಜ್ಞಾನವು ಶಿಕ್ಷಣದ ಒಂದು ಭಾಗವಾಗಿದೆ. ಯೂಟ್ಯೂಬ್ ಮತ್ತು ಇತರ ಆನ್‌ಲೈನ್ ಸಂಪನ್ಮೂಲಗಳು ಮಕ್ಕಳಿಗೆ ಶಾಲಾ ಪಠ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತವೆ. ಅವುಗಳನ್ನು ಸರಿಯಾಗಿ ಬಳಸಲು ಮಕ್ಕಳಿಗೆ ಕಲಿಸಬೇಕು. ಪೋಷಕರು ಮಾರ್ಗದರ್ಶನ ನೀಡಿದರೆ, ಮಕ್ಕಳು ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬಹುದು.ಈ ಕ್ರಮಗಳನ್ನು ಅನುಸರಿಸುವ ಮೂಲಕ, ಪೋಷಕರು ಮಕ್ಕಳನ್ನು ಟಿವಿ ಮತ್ತು ಮೊಬೈಲ್‌ನಿಂದ ದೂರವಿರಿಸಬಹುದು ಮತ್ತು ಅವರ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡಬಹುದು.

Best Mobiles in India

English summary
To help reduce your child's screen time on televisions and mobile devices, consider establishing specific time limits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+