Subscribe to Gizbot

ಓಲಾ, ಉಬರ್ ವಿರುದ್ದ ಚಾಲಕರೇ ಮೊಬೈಲ್ ಆಪ್ ತಯಾರಿಸಿಕೊಳ್ಳಲು ನಿರ್ಧಾರ!!

Written By:

ಕ್ಯಾಬ್ ಸೇವೆ ನೀಡುತ್ತಿರುವ ಓಲಾ ಮತ್ತು ಉಬರ್ ಕಂಪೆನಿಗಳು ಚಾಲಕರನ್ನು ಕಡೆಗಣಿಸುತ್ತಿವೆ ಎಂದು ದೇಶದಾದ್ಯಂತ ಉಗ್ರ ಪ್ರತಿಭಟನೆ ನಡೆಸುತ್ತಿರುವ ಕ್ಯಾಬ್ ಮಾಲಿಕರು ಮತ್ತು ಚಾಲಕರು ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕ್ಯಾಬ್ ಸೇವೆಗೆ ಚಾಲಕರದ್ದೆ ಆದ ಒಂದು ಮೊಬೈಲ್ ಆಪ್ ತಯಾರಿಸಿಕೊಳ್ಳಲು ನಿರ್ಧರಿಸಿದ್ದಾರೆ.!!

ಈ ಬಗ್ಗೆ ಮಾತನಾಡಿರುವ ಒಲಾ, ಉಬರ್ ಮತ್ತು ಟ್ಯಾಕ್ಸಿ ಶ್ಯೂರ್ ಚಾಲಕ ಸಂಘದ ಅಧ್ಯಕ್ಷರಾಗಿರುವ ತನ್ವಿರ್ ಪಾಶಾ ಈ ಬಗ್ಗೆ ಮಾಹಿತಿ ನೀಡಿದ್ದು, ಓಲಾ ಮತ್ತು ಉಬರ್ ಆಪ್‌ಗಳಿಂದ ಆಗುತ್ತಿರುವ ಅನ್ಯಾಯವನ್ನು ತಡೆಯಲು ಚಾಲಕರು ನಿರ್ಧರಿಸಿದ್ದು, ಚಾಲಕರೇ ಸೇರಿ ಆಪ್ ತಯಾರಿಕೆಗೆ ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.!!

ಓಲಾ, ಉಬರ್ ವಿರುದ್ದ ಚಾಲಕರೇ ಮೊಬೈಲ್ ಆಪ್ ತಯಾರಿಸಿಕೊಳ್ಳಲು ನಿರ್ಧಾರ!!

ಉಬರ್ ಆಪ್‌ ಲೋಪ ಕಂಡುಹಿಡಿದ ಬೆಂಗಳೂರಿನ ಟೆಕ್ಕಿ!! ಸಿಕ್ಕಿದ ಬಹುಮಾನ ಎಷ್ಟು ಗೊತ್ತಾ?

ಓಲಾ ಮತ್ತು ಉಬರ್ ಕಂಪೆನಿಗಳು ಮೊದಮೊದಲು ಚಾಲಕರಿಗೆ ಆಶ್ವಾಸನೆ ನೀಡಿ ಕಾರು ಖರೀದಿಸುವಂತೆ ಮಾಡಿದ್ದವು. ಆದರೆ, ಇದೀಗ ತಮ್ಮ ಇಷ್ಟ ಬಂದತೆ ಕಂಪೆನಿಗಳು ವ್ಯವಹಾರ ನಡೆಸುತ್ತಿದ್ದು, ಚಾಲಕರು ಬೀದಿಗೆ ಬಿದ್ದಂತಾಗಿದೆ. ಇನ್ನು ಇದರ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದರೂ ಏನು ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.!!

ಓಲಾ, ಉಬರ್ ವಿರುದ್ದ ಚಾಲಕರೇ ಮೊಬೈಲ್ ಆಪ್ ತಯಾರಿಸಿಕೊಳ್ಳಲು ನಿರ್ಧಾರ!!

ಹಾಗಾಗಿಯೇ, ಸ್ವಂತ ಆಪ್‌ ತಯಾರಿಸಲು 6000 ಕ್ಕಿಂತ ಹೆಚ್ಚು ತಯಾರಿಸಲು ಆಶಯ ವ್ಯಕ್ತಪಡಿಸಿದ್ದು, ಆಪ್‌ ನಿರ್ವಹಣೆಯ ಎಲ್ಲಾ ವ್ಯವಹಾರಗಳನ್ನು ಚಾಲಕರ ಸಂಘದ ಮೂಲಕವೇ ನೋಡಿಕೊಳ್ಳಲಾಗುವುದು, ಪ್ರತಿನಗರದಲ್ಲಿಯೂ ಚಾಲಕರದ್ದೆ ಆಪ್ ಬಿಡುಗಡೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ತನ್ವಿರ್ ಪಾಶಾ ಹೇಳಿದ್ದಾರೆ.ಜೊತೆಗೆ ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿಯೇ ಸೇವೆ ನೀಡಲಾಗುತ್ತದೆ ಎಮದು ತಿಳಿಸಿದ್ದಾರೆ.!!

Read more about:
English summary
This is something Karl Marx would’ve been proud of. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot