9 ತಿಂಗಳ ಬಳಿಕ ಭೂಮಿಯತ್ತ ಸುನೀತಾ ವಿಲಿಯಮ್ಸ್!..ಅಸಾಧಾರಣ ಪ್ರಯಾಣದ ಲೈವ್ ಇಲ್ಲಿ ವೀಕ್ಷಿಸಿ!
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಒಂಬತ್ತು ತಿಂಗಳು ಕಳೆದ ನಂತರ NASA ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಮರಳಲು ಸಿದ್ಧರಾಗಿದ್ದಾರೆ. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಕಳೆದ ವರ್ಷ ಜೂನ್ 5 ರಂದು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು, ಆದರೆ ಕೇವಲ ಒಂದು ವಾರದಲ್ಲಿ ಮರಳಬೇಕಾಗಿದ್ದರೂ, ಬೋಯಿಂಗ್ ಸ್ಟಾರ್‌ಲೈನರ್‌ನ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ISSನಲ್ಲಿ ಸಿಲುಕಿಕೊಂಡಿದ್ದರು. ಇದೀಗ ಒಂಬತ್ತು ತಿಂಗಳ ನಂತರ ಅವರನ್ನು ಮರಳಿ ಕರೆತರಲು ಕ್ರಮ ಕೈಗೊಳ್ಳಲಾಗಿದೆ. ಫ್ಲೋರಿಡಾದ ಸಮುದ್ರ ತೀರದ ಬಳಿ ಅವರು ನಾಳೆ ಸಂಜೆ 5:57ಕ್ಕೆ (ಭಾರತೀಯ ಕಾಲಮಾನದಲ್ಲಿ ಮಾರ್ಚ್ 19ರ ಬೆಳಗ್ಗೆ 4:27) ಸಮುದ್ರದ ಮೇಲೆ ಭೂಮಿಗೆ ಇಳಿಯಲಿದ್ದಾರೆ.
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ತರಲು ಸ್ಪೇಸ್ಎಕ್ಸ್ ಡ್ರ್ಯಾಗನ್ ನೌಕೆ ಬಳಸಲಾಗುತ್ತಿದೆ. ಈ ಇಬ್ಬರು ಗಗನಯಾತ್ರಿಗಳು ಭೂಮಿಗೆ ಮರಳುವುದು ಎಲೋನ್ ಮಸ್ಕ್ ಅವರ ಕಂಪನಿಯಾದ ಸ್ಪೇಸ್‌ಎಕ್ಸ್‌ನ ತಾಂತ್ರಿಕ ಸಹಾಯದಿಂದ NASA ರೂಪಿಸಿದ "ಪ್ಲ್ಯಾನ್ ಬಿ" ಅಥವಾ "ಬ್ಯಾಕಪ್ ಪ್ಲಾನ್" ಯೋಜನೆಯ ಭಾಗವಾಗಿದೆ. NASA ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವ ವೇಳಾಪಟ್ಟಿಯ ಪ್ರಕಾರ, ಮಾರ್ಚ್ 18, ಮಂಗಳವಾರ (3:27 am IST, ಮಾರ್ಚ್ 19, ಬುಧವಾರ) ಸಂಜೆ 5:57 am IST ಕ್ಕೆ ಮೆಕ್ಸಿಕೊ ಕೊಲ್ಲಿಯಲ್ಲಿ (ಟ್ರಂಪ್ ಆಡಳಿತದಿಂದ ಅಮೆರಿಕ ಕೊಲ್ಲಿ ಎಂದು ಮರುನಾಮಕರಣ ಮಾಡಲಾಗಿದೆ) ಇಳಿಯುವ ನಿರೀಕ್ಷೆಯಿದೆ. ನೌಕೆಯ ನಿಖರವಾದ ಲ್ಯಾಂಡಿಂಗ್ ಸ್ಥಳವು ಸ್ಥಳೀಯ ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ ಎಂದು NASA ಮಾಹಿತಿ ನೀಡಿದೆ.

ಸುನೀತಾ ವಿಲಿಯಮ್ಸ್ ಅವರ ವಾಪಸ್ ಲೈವ್ ಅನ್ನು ಎಲ್ಲಿ ವೀಕ್ಷಿಸಬೇಕು?
SpaceX Crew-9 ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಹ್ಯಾಚ್ ಮಂಗಳವಾರ (ಇಂದು) IST ಬೆಳಿಗ್ಗೆ 8:15 ಕ್ಕೆ ಮುಚ್ಚಲಾಗಿದೆ. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರೀ ಅಲೆಕ್ಸಾಂಡರ್ ಗೋರ್ಬುನೋವ್ ಅವರೊಂದಿಗೆ, 1:05 am ET (ಮಂಗಳವಾರ ಬೆಳಿಗ್ಗೆ 10:35 IST) ಕ್ಕೆ ISS ನಿಂದ ಹೊರಹೋಗಲು ಮತ್ತು ಭೂಮಿಗೆ ಹದಿನೇಳು ಗಂಟೆಗಳ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. NASA ಸಂಸ್ಥೆ SpaceX Crew-9 ನ ವಾಪಸ್ಸಿನ ನೇರ ಪ್ರಸಾರವನ್ನು ಒದಗಿಸುತ್ತಿದೆ. ಇದು ಸೋಮವಾರದಿಂದ https://www.nasa.gov/commercialcrew ನಲ್ಲಿ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಹ್ಯಾಚ್ ಮುಚ್ಚುವಿಕೆಯೊಂದಿಗೆ ಪ್ರಾರಂಭವಾಗಿದೆ. ಈ ಕಾರ್ಯಕ್ರಮವನ್ನು ನಾಸಾದ ಅಧಿಕೃತ ವೆಬ್‌ಸೈಟ್ ಮತ್ತು ಯೂಟ್ಯೂಬ್ ಮೂಲಕ ಇಂದು ಬೆಳಿಗ್ಗೆ 10:15 ರಿಂದ ನೇರ ಪ್ರಸಾರ ಮಾಡಲಾಗುತ್ತಿದೆ.
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಕಳೆದ ವರ್ಷ ಜೂನ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಅವರು ಕೇವಲ ಒಂದು ವಾರದ ನಂತರ ಭೂಮಿಗೆ ಮರಳಬೇಕಾಗಿತ್ತು, ಆದರೆ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ISSನಲ್ಲಿ ಸಿಲುಕಿಕೊಂಡರು. ಬೋಯಿಂಗ್‌ನ ಎಂಜಿನಿಯರ್‌ಗಳು ಹೀಲಿಯಂ ಸೋರಿಕೆ ಮತ್ತು ಪ್ರೊಪಲ್ಷನ್ ಸಿಸ್ಟಮ್ ಸಮಸ್ಯೆಗಳನ್ನು ಪತ್ತೆಹಚ್ಚಿದ ಕಾರಣ, ಅವರ ವಾಪಸಾತಿಗೆ ವಿಳಂಬವಾಯಿತು. ಸುನೀತಾ ಮತ್ತು ಬುಚ್ ಒಂಬತ್ತು ತಿಂಗಳುಗಳಿಗಿಂತ ಹೆಚ್ಚು ಕಾಲ ISSನಲ್ಲಿ ಉಳಿಯಬೇಕಾಯಿತು, ಇದು ಅವರ ಮರಳುವಿಕೆಗೆ ತೊಂದರೆ ಉಂಟುಮಾಡಿತು. ಆದರೆ, ಈ ಅವಧಿಯಲ್ಲಿ ಬಾಹ್ಯಾಕಾಶದಲ್ಲಿ ನಡೆಸಿದ ಅವರ ಸಂಶೋಧನೆಗಳು ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತು.
ಸೆಪ್ಟೆಂಬರ್ 2024ರಲ್ಲಿ, ಸ್ಟಾರ್‌ಲೈನರ್ ಗಗನಯಾತ್ರಿಗಳಿಲ್ಲದೆ ಭೂಮಿಗೆ ಮರಳಿತು. ಈ ಸಂದರ್ಭದಲ್ಲಿ ( ಬಾಹ್ಯಾಕಾಶದಲ್ಲಿ ಉಳಿದ ಒಂಬತ್ತು ತಿಂಗಳುಗಳಲ್ಲಿ) ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 150 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳಲ್ಲಿ ಭಾಗವಹಿಸಿ, ಬಾಹ್ಯಾಕಾಶದಲ್ಲಿ ನಡೆಯುವ ಸಂಶೋಧನೆಗೆ ಮಹತ್ವಪೂರ್ಣ ಕೊಡುಗೆ ನೀಡಿದ್ದಾರೆ. ಇದೀಗ ಅವರ ಯಶಸ್ವಿ ಬರುವಿಕೆಗೆ ಇಡೀ ವಿಜ್ಞಾನ ಜಗತ್ತು ಹಾರೈಸುತ್ತಿದೆ.


Click it and Unblock the Notifications








