ಮಕ್ಕಳಿಂದ ಸ್ಮಾರ್ಟ್‌ಫೋನ್ ಬಳಕೆ ಬಿಡಿಸುವುದು ಹೇಗೆ? ಇಲ್ಲಿದೆ ಉತ್ತರ!!
ಗ್ಯಾಜೆಟ್‌ಗಳ ಕಡೆ ಆಸಕ್ತಿ ವಹಿಸುವ ಮಕ್ಕಳ ಬಗ್ಗೆ ಪೋಷಕರೂ ತಲೆಕೆಡಿಸಿಕೊಳ್ಳದ ಕಾರಣ ಅವರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.!!
ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ಪರಿಚಯವಾದ ನಂತರ ಆನ್‌ಲೈನ್‌ನಲ್ಲಿ ಮಕ್ಕಳು ಚಾಟಿಂಗ್ ನಡೆಸುವುದು ಮತ್ತು ಎಷ್ಟು ಗಂಟೆ ಅವರು ಅದರಲ್ಲಿ ಕಳೆಯುತ್ತಾರೆ ಎಂಬುದು ಅವರು ಮಲಗುವ ಹವ್ಯಾಸದಲ್ಲಿ ಭಾರಿ ಬದಲಾವಣೆ ಆಗಲು ಕಾರಣವಾಗಿದೆ ಎಂದು ಎಂಸಿಎಎಫ್‌ಇಇ (McAfee) ಸೈಬರ್ ಸೆಕ್ಯುರಿಟಿ ಕಂಪೆನಿಯ ಅಧ್ಯಯನ ಹೇಳಿದೆ.
ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳ ಅತಿಯಾದ ಬಳಕೆಯಿಂದ ಮಕ್ಕಳ ದಿನಚರಿಯೇ ಬದಲಾಗಿದೆ. ಗ್ಯಾಜೆಟ್‌ಗಳ ಕಡೆ ಆಸಕ್ತಿ ವಹಿಸುವ ಮಕ್ಕಳ ಬಗ್ಗೆ ಪೋಷಕರೂ ತಲೆಕೆಡಿಸಿಕೊಳ್ಳದ ಕಾರಣ ಅವರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.!!
ಹಾಗಾದರೆ, ಮಕ್ಕಳಿಂದ ಸ್ಮಾರ್ಟ್‌ಫೋನ್ ಅಥವಾ ಗ್ಯಾಜೆಟ್ ಬಳಕೆ ಹೇಗೆ ಬಿಡಿಸುವುದು? ಇದಕ್ಕೆ ತಜ್ಞರು ಏನನ್ನುತ್ತಾರೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪ್ರೀತಿಯೇ ಮುಖ್ಯ!!
ಮಕ್ಕಳಿಗೆ ಪೋಷಕರು ಹೆಚ್ಚು ಪ್ರೀತಿಯನ್ನು ತೋರಿಸಿದಂತೆಲ್ಲಾ ಮಕ್ಕಳು ಸ್ಮಾರ್ಟ್‌ಫೋನ್‌ನಿಂದ ದೂರವಾಗುತ್ತಾರೆ ಎಂದು ಮನಶಾಸ್ತ್ರಜ್ಞರು ಅಧ್ಯಯನದ ಮೂಲಕ ಹೇಳಿದ್ದಾರೆ.!! ಕೇವಲ ಪ್ರೀತಿಯೋಂದೆ ಮಕ್ಕಳನ್ನು ಸ್ಮಾರ್ಟ್‌ಫೋನ್‌ನಿಂದ ದೂರಮಾಡಬಹುದು. ಇನ್ನು ಎರಡನೆ ಕಾರಣವಂತು ವಿಚಿತ್ರ!!

ಗ್ಯಾಜೆಟ್ ಮಾಹಿತಿ ಪೂರ್ಣವಾಗಿ ಮಕ್ಕಳಿಗೆ ತಿಳಿದಿರಲಿ.!!
ಹೌದು, ಮಕ್ಕಳು ಉಪಯೋಗಿಸುವ ಗ್ಯಾಜೆಟ್ ಅಥವಾ ಸ್ಮಾರ್ಟ್‌ಫೋನ್ ಬಗೆಗೆ ಪೋಷಕರು ಮಕ್ಕಳಿಗೆ ಹೆಚ್ಚು ಹೆಚ್ಚು ಮಾಹಿತಿಯನ್ನು ನಿಡುತ್ತಿರಬೇಕೆ. ಇದರಿಂದ ಅವರಿಗೆ ಸ್ಮಾರ್ಟ್‌ಫೋನ್ ಬಗ್ಗೆ ಕುತೋಹಲ ಕಡಿಮೆಯಾಗುತ್ತಾ ಬರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.!!

ಮಕ್ಕಳಿಗೆ ಗೇಮ್ ಆಡಲು ಬಿಡಿ!!
ಸ್ಮಾರ್ಟ್‌ಫೋನಿನಲ್ಲಿ ಮಕ್ಕಳು ಹೆಚ್ಚು ಗೇಮ್ ಆಡುತ್ತಿದ್ದರೆ ಅದನ್ನು ತಡೆಯಬೇಡಿ. ಹೆಚ್ಚು ಹೆಚ್ಚು ಗೇಮ್‌ಗಳನ್ನು ಆಡಿದ ಮಕ್ಕಳ ಮನಸ್ಸು ಹೆಚ್ಚು ಚುರುಕಾಗಿರುತ್ತದೆ. ಇದು ಅವರ ಭವಿಷ್ಯದ ಬೆಳವಣಿಗೆಗೆ ಸಹಕಾರಿಯಾಗಿದೆ.!!

ಒಂದು ಹಂತದವರೆಗೂ ಇಂಟರ್‌ನೆಟ್ ಬೇಡ.!!
ಮಕ್ಕಳ ಸ್ಮಾರ್ಟ್‌ಫೋನ್ ಬಳಕೆ ಕೇವಲ ಗೇಮ್‌ಗೆ ಮಾತ್ರ ಸೀಮಿತವಾಗಿರಲಿ. ಮಕ್ಕಳಿಗೆ 14 ವರ್ಷ ತುಂಬುವವರೆಗೂ ಯಾವುದೇ ಕಾರಣಕ್ಕೂ ಇಂಟರ್‌ನೆಟ್ ಸಂಪರ್ಕವನ್ನು ನೀಡಬೇಡಿ. ನಂತರ ಅವರಿಗೆ ಇಂಟರ್‌ನೆಟ್ ಕಾರ್ಯದ ಬಗ್ಗೆ ನಿಧಾನವಾಗಿ ತಿಳಿಸಿ.!!

ವಾಸ್ತವ ಪ್ರಪಂಚದ ಬಗ್ಗೆ ಅರಿವು ಮೂಡಿಸಿ.!!
ಎಲ್ಲದಕ್ಕಿಂತ ಮುಖ್ಯಾವಾಗಿ ಮಕ್ಕಳಿಗೆ ವಾಸ್ತವ ಪ್ರಪಂಚದ ಬಗ್ಗೆ ಅರಿವು ಮೂಡಿಸುವುದು ಪೋಷಕರ ಕರ್ತವ್ಯ.! ಫ್ಯಾಂಟಸಿ ಪ್ರಪಂಚದಿಂದ ವಾಸ್ತವ ಪ್ರಪಂಚಕ್ಕೆ ಮಕ್ಕಳನ್ನು ಕರೆತರುವುದರ ಮೂಲಕ ಸಾಮಾಜಿಕ ಜಾಲತಾಣದಿಂದ ಮಕ್ಕಳನ್ನು ದೂರಮಾಡಬಹುದು.!! ಹೇಗಿದೆ? ಶೇರ್ ಮಾಡಿ.!!


Click it and Unblock the Notifications








