Home
ಟೆಕ್ ನೌಕರಿ

ಹೊಸ ವರ್ಷ‌ಕ್ಕೆ 8 ಟೆಕ್‌ ರೆಸೂಲ್ಯೂಶನ್‌ಗಳು

By Ashwath

ಗಿಝ್‌ಬಾಟ್‌‌ನ ಎಲ್ಲಾ ಓದುಗರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2013 ಕಳೆಯಿತು 2014 ಬಂದೇ ಬಿಟ್ಟಿದೆ. ಈ ಹೊಸ ವರ್ಷದ ಸಮಯದಲ್ಲಿ ನೀವೆಲ್ಲಾ ಒಂದಲ್ಲ ಒಂದು ಯೋಜನೆ, ಯೋಚನೆಗಳನ್ನು ಹಾಕಿಕೊಂಡಿರುತ್ತೀರಿ. ಆ ನಿಮ್ಮ ಯೋಜನೆ, ಯೋಚನೆಗಳು ಎಲ್ಲಾ ಈ ವರ್ಷ ಯಶಸ್ವಿಯಾಗಲಿ. ನಿಮ್ಮ ಕನಸುಗಳು ನನಸಾಗಲಿ.

ಪ್ರತಿ ವರ್ಷದಂತೆ ವರ್ಷ‌ವೂ ಹೊಸ ರೆಸಲ್ಯೂಶನ್‌‌‌ಗಳು ಬಹಳಷ್ಟು ಮಂದಿ ಅನುಸರಿಸಲು ಯೋಚನೆ ಮಾಡಿರುತ್ತಾರೆ. ಹೀಗಾಗಿ ಇಲ್ಲಿ ನೀವು ಅನುಸರಿಸಬಹುದಾದ 8 ಟೆಕ್ ರೆಸಲ್ಯೂಶನ್‌‌‌ಗಳನ್ನು ನೀಡಲಾಗಿದೆ.ಈ ರೆಸೂಲ್ಯೂಶನ್‌ಗಳನ್ನು ನೀವು ಅನುಸರಿಸಿದರೆ ಈ ವರ್ಷ‌ದ್ದುದ್ದಕ್ಕೂ ನೀವು ಹೆಚ್ಚು ಸಂತಸದಿಂದ ಇರಬಹುದು.ಒಂದೊಂದೆ ಪುಟವನ್ನು ತಿರುಗಿಸಿ ಈ ರೆಸಲ್ಯೂಶನ್‌‌ಗಳನ್ನು ಓದಿಕೊಂಡು ಹೋಗಿ.

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು

ಫೇಸ್‌ಬುಕ್‌,ವಾಟ್ಸ್‌ ಆಪ್‌ ಇನ್ನಿತರ ಗೇಮ್ಸ್‌ ಆಪ್‌‌ಗಳಲ್ಲಿ ಯಾವಾಗಲೂ ಬ್ಯೂಸಿಯಾಗದಿರಿ. ಕುಟುಂಬದ ಸದಸ್ಯರ ಜೊತೆಗೂ ಹೆಚ್ಚಿನ ಸಮಯ ಕಳೆಯಿರಿ. ಸ್ನೇಹಿತರ, ಕುಟುಂಬದ ಸಂತೋಷ ಸಮಯದಲ್ಲಿ ಗ್ಯಾಜೆಟ್‌ಗಳಿಂದ ದೂರವಿರಿ.

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು


ಹಿಂದೆ ನೀವು ತೆಗೆದ ಫೋಟೋಗಳಿದ್ದರೆ ಅದನ್ನು ಅದಷ್ಟು ಬೇಗ ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಿ. ಹಳೇ ಫೋಟೋಗಳು ಹಾಳಾದ್ರೆ ಮತ್ತೇ ಆ ಫೋಟೋದಲ್ಲಿರುವ ನೆನಪುಗಳು ಮತ್ತೆ ಸಿಗುವುದಿಲ್ಲ. ಸ್ಕ್ಯಾನ್‌ ಮಾಡಿದ ಮೇಲೆ ಆ ಫೋಟೋವನ್ನು ನಿಮ್ಮ ಆಪ್ತರಿಗೆ ಕಳುಹಿಸಿ. ಅವರು ಆ ನೆನಪನ್ನು ನೋಡಿ ಮೆಲುಕು ಹಾಕುತ್ತಾರೆ. ಸಾಧ್ಯವಾದ್ರೆ ಒಂದು ಪ್ರತಿ ಪ್ರಿಂಟ್ ಹಾಕಿಸಿ.

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು


ಆಹಾರ ಸೇವಿಸಿದ ಬಳಿಕ ಹೇಗೆ ನೀವು ನಿಮ್ಮ ಡೆಸ್ಕ್‌ನ್ನು ಕ್ಲೀನ್‌ ಮಾಡುತ್ತಿರೋ ಆದೇ ರೀತಿಯಲ್ಲಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡಿದ ನಂತರ ನೀವು ನಿಮ್ಮ ಕೀ ಬೋರ್ಡ್‌ನ್ನು ಕ್ಲೀನ್‌ ಮಾಡಿ.

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು


ನಿಮ್ಮಲ್ಲಿರುವ ಹಳೆಯ ದಾಖಲೆ ಪತ್ರಗಳಿದ್ದರೆ ಅದನ್ನು ಸ್ಕ್ಯಾನ್ ಮಾಡಿ ಡಿಜಟಲೀಕರಣಗೊಳಿಸಿ. ಈ ರೂಪದಲ್ಲಿದ್ದರೆ ನೀವು ಯಾವಾಗ ಬೇಕಾದರೂ ಅದನ್ನು ನೋಡಬಹುದು, ಪ್ರಿಂಟ್ ಹಾಕಿಸಿಕೊಳ್ಳಬಹುದು. ಬಿಲ್‌ಗಳನ್ನು ಪಾವತಿ ಮಾಡುವ ವೇಳೆ ಇಂಟರ್‌ನೆಟ್‌ನಲ್ಲೇ ಪಾವತಿ ಮಾಡಿ. ಈ ರೀತಿ ಮಾಡಿದ್ರೆ ಪೇಪರ್ ಉಳಿತಾಯವಾಗುತ್ತದೆ , ನಿಮ್ಮ ಸಮಯವು ಉಳಿತಾಯವಾಗುತ್ತದೆ.

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು


ಈಗಂತೂ ಯಾವುದೋ ಸೈಟ್‌ಗೆ ಜಾಯಿನ್‌ ಆದ ಮೇಲೆ ಡಜನ್‌ಗಟ್ಟಲೇ ಇಮೇಲ್ ಇನ್‌ಬಾಕ್ಸ್‌ಗೆ ಬರತೊಡಗುತ್ತದೆ. ಹಾಗಾಗಿ ಕೆಲವರು ಇನ್‌ಬಾಕ್ಸ್ ನೋಡುವುದನ್ನೇ ನಿಲ್ಲಿಸಿಬಿಟ್ಟಿರುತ್ತೀರಿ. ಆದರೆ ಹಾಗೇ ಮಾಡದೇ ಇಮೇಲ್ ನೋಡುವ ಆಭ್ಯಾಸ ಮಾಡಿಕೊಳ್ಳಿ. ಅನಗತ್ಯವಾದ ಇಮೇಲ್‌ಗಳನ್ನು ಡಿಲೀಟ್ ಮಾಡಿ. ಕೆಲವೊಂದು ಮೈಲ್‌ಗಳು ಅಗತ್ಯವಿದ್ದರೆ ನಿಮ್ಮ ಇಮೈಲ್‌ನಲ್ಲೇ ಒಂದು ಲೇಬಲ್ ಕ್ರಿಯೆಟ್ ಮಾಡಿ ಸಂಗ್ರಹ ಮಾಡಿಕೊಳ್ಳಿ.

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು


ಸಾಮಾಜಿಕ ತಾಣಗಳನ್ನು ಬಳಸುವಾಗ ತುಂಬಾ ಎಚ್ಚರಿಕೆಯಿಂದ ಬಳಸಿ. ಸ್ನೇಹಿತರನ್ನು ಆಯ್ಕೆ ಮಾಡುವಾಗ ಎಚ್ಚರವಾಗಿರಿ. ಪ್ರೈವೆಸಿ ಸೆಟ್ಟಿಂಗ್‌ ಹೋಗಿ ನಿಮಗೆ ಬೇಕಾದ ಪ್ರೈವೆಸಿ ಆಯ್ಕೆಗಳನ್ನು ಆಯ್ಕೆಮಾಡಿ.

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು


ನಿಮ್ಮ ಮೊಬೈಲ್‌ನಲ್ಲಿ ನೀವು ಬಳಸದೇ ಇರುವಂತಹ ಅನಗತ್ಯವಾಗಿ ಡೌನ್‌ಲೋಡ್ ಮಾಡಿಕೊಂಡ ಅಪ್ಲಿಕೇಶನ್ ಡಿಲೀಟ್ ಮಾಡಿ.ಯಾಕಂದ್ರೆ ಅದು ನಿಮ್ಮ ಮೊಬೈಲ್‌ನಲ್ಲಿ ಹೆಚ್ಚು ಮೆಮೊರಿಯನ್ನು ಕಬಳಿಸುತ್ತಿರುತ್ತದೆ. ಅದೇ ರೀತಿಯಾಗಿ ನಿಮ್ಮ ಕಂಪ್ಯೂಟರ್‌ನಲ್ಲಿ ಅನಗತ್ಯವಾದ ಫೈಲ್‌ಗಳನ್ನು ಡಿಲೀಟ್ ಮಾ

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು

ಹೊಸ ವರ್ಷ‌ಕ್ಕೆ ಟೆಕ್‌ ರೆಸೂಲ್ಯೂಶನ್‌ಗಳು


ನೀವು ಎಷ್ಟು ಕಂಪ್ಯೂಟರ್ ತಂತ್ರಜ್ಞಾನವನ್ನು ಇಷ್ಟಪಡಿತ್ತಿರೋ ಅದೇ ರೀತಿಯಲ್ಲೇ ಫ್ರೆಶ್ ಗಾಳಿ ಮತ್ತು ಮಾನವ ಸಂವಹನ ಅಗತ್ಯ. ಹಾಗಾಗಿ ಯಾವಾಗಲೂ ಟ್ಯಾಬ್ಲೆಟ್ ಲ್ಯಾಪ್‌ಟಾಪ್‌ನೊಂದಿಗೆ ಕೆಲಸ ಮಾಡಬೇಡಿ. ನಿಮ್ಮ ಸ್ನೇಹಿತರು, ಆಪ್ತರ ಜೊತೆ ಮಾತನಾಡಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+