ಸೈಬರ್ ವಂಚನೆಯಿಂದ ಪಾರಾಗುವುದು ಹೇಗೆ ಎಂದು ಹೇಳಿಕೊಟ್ಟ ಪೊಲೀಸ್ ಇಲಾಖೆ!

|

ಜಾಗತಿಕ ಪೀಡುಗಾಗಿರುವ ಸೈಬರ್ ಅಪರಾಧಗಳ ಕುರಿತು ಯುವಕರಿಗೆ ಅರಿವು ಮುಡಿಸಲು ಮುಂದಾಗಿರುವ ಪೊಲೀಸ್ ಇಲಾಖೆ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸೈಬರ್ ಸುರಕ್ಷತಾ ಕೈಪಿಡಿ ತಯಾರಿಸಿದೆ. ಅಪರಾಧಿಗಳನ್ನು ಪತ್ತೆಹಚ್ಚುವ ಮೊದಲು ಅಪರಾಧ ನಡೆಯದಂತೆ ಅರಿವು ಮೂಡಿಸುವುದು ಒಳಿತು ಎಂದು ಅರಿತಿರುವ ಪೊಲೀಸ್ ಇಲಾಖೆಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಲಾಖೆ ಸೈಬರ್ ಅಪರಾಧಗಳ ಕುರಿತು ಜಾಗೃತಿ ಕೈಪಿಡಿಯನ್ನು ವಿತರಿಸುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ.

ಆನ್​ಲೈನ್ ಬೆದರಿಕೆ, ಅಪರಾಧ, ಸೈಬರ್ ಪೀಡನೆ, ಆನ್​ಲೈನ್ ಆಟಗಳು, ಇಮೇಲ್ ವಂಚನೆ, ಡೇಟಾ ಹ್ಯಾಕ್, ಸಾಮಾಜಿಕ ಜಾಲತಾಣಗಳ ಖಾತೆಗಳ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸೈಬರ್ ಸುರಕ್ಷತಾ ಕೈಪಿಡಿ ತಯಾರಿಸಿದ್ದು, ಮಕ್ಕಳು ಮತ್ತು ಯುವಕ-ಯುವತಿಯರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿರುವ ಈ ಎಲ್ಲಾ ಅಂಶಗಳನ್ನು ಮಟ್ಟಹಾಕಲು ಬೌದ್ದಿಕ ತಿಳಿವಳಿಕೆಯನ್ನು ಮೂಡಿಸಲು ರಾಜ್ಯ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಇಲಾಖೆ ಇಂತಹ ಪ್ರಯತ್ನಕ್ಕೆ ಕೈಹಾಕಿದೆ.

ಸೈಬರ್ ವಂಚನೆಯಿಂದ ಪಾರಾಗುವುದು ಹೇಗೆ ಎಂದು ಹೇಳಿಕೊಟ್ಟ ಪೊಲೀಸ್ ಇಲಾಖೆ!

ಒಂದು ವರದಿ ಪ್ರಕಾರ 2017ರಲ್ಲಿ ದೇಶದಲ್ಲಿ 53 ಸಾವಿರ ಸೈಬರ್ ಅಪರಾಧಗಳು ಜರುಗಿದ್ದು, ಸಾರ್ವಜನಿಕರ ಡಿಜಿಟಲ್ ಮಾಹಿತಿ ಕೊರತೆಯನ್ನು ವಂಚನೆಗೆ ಬಳಸಲಾಗುತ್ತಿರುವುದನ್ನು ಪೊಲೀಸ್ ಇಲಾಖೆ ಗಮನಿಸಿದೆ. ಹಾಗಾಗಿ, ಅಪರಾಧ, ಸೈಬರ್ ಪೀಡನೆ, ಇಮೇಲ್ ವಂಚನೆ, ಡೇಟಾ ಹ್ಯಾಕ್, ಸಾಮಾಜಿಕ ಜಾಲತಾಣಗಳ ಖಾತೆಗಳ ಸುರಕ್ಷತೆ ಕುರಿತು ಈ ಕೆಳಗಿನ ರೀತಿಯ ಮಾಹಿತಿ ನೀಡಲಾಗಿದೆ ಎಂದು ರಾಜ್ಯ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಇಲಾಖೆ ಎಡಿಜಿಪಿ ಡಾ.ಎಂ.ಎ. ಸಲೀಂ ಅವರು ತಿಳಿಸಿದ್ದಾರೆ.

ಏನಿದು ಸೈಬರ್ ವಂಚನೆ?

ಏನಿದು ಸೈಬರ್ ವಂಚನೆ?

ಮೊದಲೇ ಹೇಳಿದಂತೆ, ಸೈಬರ್ ಖದೀಮರು ವೈಯಕ್ತಿಕ ಮಾಹಿತಿ ಪಡೆದು ಬ್ಯಾಂಕ್ ವಿವರ ಸಂಗ್ರಹಿಸಿ ಕೋಟ್ಯಂತರ ರೂ. ಮೋಸ ಮಾಡುತ್ತಾರೆ. ಆನ್​ಲೈನ್ ಬೆದರಿಕೆ, ಅಪರಾಧ, ಸೈಬರ್ ಪೀಡನೆ, ಆನ್​ಲೈನ್ ಆಟಗಳು, ಇಮೇಲ್ ವಂಚನೆ, ಡೇಟಾ ಹ್ಯಾಕ್, ಸಾಮಾಜಿಕ ಜಾಲತಾಣಗಳ ಖಾತೆಗಳ ಸುರಕ್ಷತೆ ಈ ಸೈಬರ್ ವಂಚನೆಯ ಮೂಲಗಳಾಗಿದ್ದು, ಹಣ ಕದಿಯುವುದು ,ವೈಯಕ್ತಿಕ ಮಾಹಿತಿ ಕದ್ದು ಕಿರುಕುಳ ನೀಡುವುದು ಎಲ್ಲವೂ ಇದರೊಳಗೆ ಬರಲಿವೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಆಪತ್ತು

ಸಾರ್ವಜನಿಕರಿಗೆ ಆಪತ್ತು

ಹ್ಯಾಕರ್​ಗಳು ಕೇವಲ ಹಣ ಗಳಿಸುವುದಕ್ಕಾಗಿ, ಮಾಲ್​ವೇರ್, ವೈರಸ್ ಅಥವಾ ಟ್ರೋಜರ್​ಗಳ ಮೂಲಕ ಕಂಪ್ಯೂಟರ್, ಮೊಬೈಲ್​ಗಳ ಮೇಲೆ ದಾಳಿ ನಡೆಸಿ ವೈಯಕ್ತಿಕ ಮತ್ತು ರಹಸ್ಯ ಮಾಹಿತಿ ಕದಿಯುತ್ತಿದ್ದಾರೆ. ಮಾಹಿತಿ ಮತ್ತು ತಂತ್ರಜ್ಞಾನ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಸಂವಹನ, ವ್ಯಾಪಾರ ಮತ್ತು ವಹಿವಾಟು ಇತ್ಯಾದಿಗಳಿಗೆ ಐಟಿ-ಬಿಟಿಗೆ ಒಗ್ಗಿಕೊಳ್ಳಲಾಗಿದೆ. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಕ್ರಿಮಿನಲ್‌ಗಳು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ.

‘ಸೈಬರ್ ಸುರಕ್ಷತಾ ಕೈಪಿಡಿ’

‘ಸೈಬರ್ ಸುರಕ್ಷತಾ ಕೈಪಿಡಿ’

ಇ-ಮೇಲ್ ಮೋಸ, ವೈಸರ್ ಇರುವ ಅಪ್ಲಿಕೇಷನ್ ಕಳುಹಿಸುವುದು ಸೇರಿದಂತೆ ಹೇಗೆಲ್ಲಾ ಸೈಬರ್ ಕ್ರಿಮಿನಲ್‌ಗಳು ಮೋಸ ಮಾಡುತ್ತಾರೆ ಎಂಬುದನ್ನು ಪತ್ತೆಹಚ್ಚಿರುವ ಪೊಲೀಸ್ ಇಲಾಖೆ,ಜಾಗತಿಕ ಪೀಡುಗಾಗಿರುವ ಸೈಬರ್ ಅಪರಾಧಗಳ ಕುರಿತು ವಿದ್ಯಾರ್ಥಿ ಜೀವನದಿಂದಲೇ ಜಾಗೃತಿ ಮೂಡಿಸಲು ರಾಜ್ಯ ಪೊಲೀಸ್ ಇಲಾಖೆ ‘ಸೈಬರ್ ಸುರಕ್ಷತಾ ಕೈಪಿಡಿ' ಸಿದ್ಧಪಡಿಸಿದೆ. ಸೈಬರ್ ಪೀಡನೆಗೆ ಒಳಗಾದರೆ ಕಂಪ್ಯೂಟರ್, ಮೊಬೈಲ್ ಬಳಕೆ ನಿರ್ಬಂಧಿಸುವಂತಹ ಸಲಹೆಗಳನ್ನು ಪೊಲೀಸ್ ಇಲಾಖೆ ನೀಡಿದೆ.

ಪರಿಚಿತ/ಅಪರಿಚಿತರಿಗೆ ಪಾಸ್ವರ್ಡ್ ಹೇಳಬೇಡಿ

ಪರಿಚಿತ/ಅಪರಿಚಿತರಿಗೆ ಪಾಸ್ವರ್ಡ್ ಹೇಳಬೇಡಿ

ಪ್ರಾಥಮಿಕ ಹಂತದಲ್ಲಿ ಪರಿಚಿತ ಅಥವಾ ಅಪರಿಚಿತ ವ್ಯಕ್ತಿಗಳಿಗೆ ನಿಮ್ಮ ಪಾಸ್ವರ್ಡ್ ಮಾಹಿತಿಯನ್ನು ಕೊಡಬಾರದು. ನಾವು ವ್ಯಕ್ತಿಗಳ ದುರುದ್ದೇಶಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯ ಇರುವುದಿಲ್ಲ. ಕುಟುಂಬದ ವ್ಯಕ್ತಿಗಳು ಮತ್ತು ಕೆಲ ವಿಶ್ವಾಸಾರ್ಹ ಸ್ನೇಹಿತರನ್ನು ಹೊರತು ಪಡಿಸಿ ಹಣಕಾಸು ಸಂಗತಿಗಳನ್ನು ಇನ್ಯಾರೊಂದಿಗೂ ಹಂಚಿಕೊಳ್ಳಬಾರದು. ನಮಗೆ ಗೊತ್ತಿರುವಂತೆ ಹೆಚ್ಚಿನ ಹಣಕಾಸು ವಂಚನೆ/ಕಳ್ಳತನ ಪರಿಚಯದವರಿಂದಲೇ ಆಗುತ್ತದೆ.

ಫೋನಿನಲ್ಲಿ ವೈಯಕ್ತಿಕ ಮಾಹಿತಿ ನೀಡಬೇಡಿ

ಫೋನಿನಲ್ಲಿ ವೈಯಕ್ತಿಕ ಮಾಹಿತಿ ನೀಡಬೇಡಿ

ಯಾರಿಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾವುದೇ ಕಾರಣಕ್ಕೂ ನೀಡಬೆಡಿ. ಸೇವೆ ಒದಗಿಸುವವರಿಗೆ ಅನವಶ್ಯಕ ವಿಷಯಗಳಿಗಾಗಿ ತೊಂದರೆ ಕೊಡಬೇಡಿ("Do not disturb") ಎಂದು ನೋಂದಣಿ ಮಾಡಿಸಿಕೊಳ್ಳಿ. ಇದರಿಂದಾಗಿ ಅನವಶ್ಯಕ ಮತ್ತು ಫೇಕ್ ಕರೆಗಳಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೇ ವಂಚಕರಿಂದಲೂ ಮುಕ್ತಿ ಪಡೆಯಬಹುದು. ಇನ್ನುಆನ್​ಲೈನ್ ಆಟದ ವೇಳೆ ಧ್ವನಿ ಸಂದೇಶ, ವೆಬ್ ಕ್ಯಾಮರಾಗಳನ್ನು ಬಳಸಬೇಡಿ ಮತ್ತು ಆನ್​ಲೈನ್​ನಲ್ಲಿ ಪರಿಚಯವಾದ ವ್ಯಕ್ತಿ ಅಥವಾ ಮಹಿಳೆಯನ್ನು ನೇರ ಭೇಟಿ ಮಾಡಬೇಡಿ

ಇ-ಮೇಲ್ ಭದ್ರತೆ ಖಚಿತಪಡಿಸಿಕೊಳ್ಳಿ

ಇ-ಮೇಲ್ ಭದ್ರತೆ ಖಚಿತಪಡಿಸಿಕೊಳ್ಳಿ

ಬ್ಯಾಂಕಿನವರು ನೀಡುವ ಇ-ಮೇಲ್ ಐಡಿಗಳನ್ನು ಸಹ ಹೆಚ್ಚು ಬಳಸಬಾರದು. ಅದರಿಂದಾಗಿ ಹೆಚ್ಚೆಚ್ಚು ಮೋಸ ಹೋಗಬೇಕಾಗುತ್ತದೆ. ಇ-ಮೇಲೆ ಮುಖಾಂತರ ಯಾವುದೇ ಸ್ಟೇಟ್ಮೆಂಟ್ ಗಳನ್ನು ತೆರೆಯಬಾರದು ಇದರಿಂದ ಅಪಾಯವೇ ಹೆಚ್ಚು. ಇ-ಮೇಲ್ ಗಳ ಮೇಲೆ ಕ್ಲಿಕ್ ಮಾಡುವುದರಿಂದ ಅವು ಬೇರೆ ವೆಬ್ಸೈಟ್ ಗೆ ಲಿಂಕ್ ಆಗುತ್ತವೆ. ಇದರಿಂದಾಗಿ ನಮ್ಮ ಅಂಕಿಅಂಶ ಹಾಗೂ ಮಾಹಿತಿಯ ಸೋರಿಕೆ ಆಗುತ್ತದೆ. ಇದರ ಜತೆ ಪ್ರಚಾರದ ಇ-ಮೇಲ್ ಗಳು ಸಹ ಬರುತ್ತವೆ. ಆದರಿಂದಾಗಿ ತುಂಬಾ ಜಾಗೂರತೆಯಿಂದ ಇರಬೇಕಾಗುತ್ತದೆ.

ಆಗಾಗ್ಗೆ ಪಾಸ್ವರ್ಡ್ ಗಳನ್ನು ಬದಲಾಯಿಸುತ್ತಿರಿ

ಆಗಾಗ್ಗೆ ಪಾಸ್ವರ್ಡ್ ಗಳನ್ನು ಬದಲಾಯಿಸುತ್ತಿರಿ

ನಾವು ಹಣಕಾಸು ವ್ಯವಹಾರದ ಸಂದರ್ಭಗಳಲ್ಲಿ ಬಳಸುವ ಪಾಸ್ವರ್ಡ್ ಗಳನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು. ಅದರಲ್ಲೂ ಹಿರಿಯ ನಾಗರಿಕರು ಇದನ್ನು ಖಚಿತಪಡಿಸಿಕೊಳ್ಳುತ್ತಿರಬೇಕು. ಇದರಿಂದಾಗಿ ಇನ್ನೊಬ್ಬರೂ ನಿಮ್ಮ ಪಾಸ್ವರ್ಡ್ ಊಹಿಸಲು ಸಾಧ್ಯ ಇರುವುದಿಲ್ಲ. ಇದು ಬ್ಯಾಂಕ್ ಸಂಬಂಧಿ ವ್ಯವಹಾರಗಳಲ್ಲೂ ಪಾಲಿಸಬೇಕು. ಜೀಗೆ ಮಾಡಿದಾಗ ಸೈಬರ್ ಕ್ರಿಮಿನಲ್‌ಗಳಿಗೆ ನಿಮ್ಮ ಪಾಸ್‌ವರ್ಡ್ ಅನ್ನು ಊಹಿಸುವುದು ಕಷ್ಟವಾಗುತ್ತದೆ.

ಶಾಪಿಂಗ್ ಮಾಡುವ ವೆಬ್ಸೈಟ್ ಗಳನ್ನು ಪರಿಶೀಲಿಸುತ್ತಿರಿ

ಶಾಪಿಂಗ್ ಮಾಡುವ ವೆಬ್ಸೈಟ್ ಗಳನ್ನು ಪರಿಶೀಲಿಸುತ್ತಿರಿ

ಶಾಪಿಂಗ್ ವೆಬ್ಸೈಟ್ ಗಳನ್ನು ಬಳಸುವಾಗ ತುಂಬಾ ಜಾಗರೂಕತೆಯಿಂದ ವ್ಯವಹರಿಸಬೇಕಾಗುತ್ತದೆ. ಏಕೆಂದರೆ ವಂಚಕರು ವೆಬ್ಸೈಟ್ ಗಳನ್ನು ಹ್ಯಾಕ್ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಕೆಲ ನಕಲಿ ವೆಬ್ಸೈಟ್ ಗಳಿದ್ದು ಅವುಗಳಲ್ಲಿ ಶಾಪಿಂಗ್ ಮಾಡುವುದರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ಎಲ್ಲವು ಅವರಿಗೆ ಲಭ್ಯವಾಗುತ್ತದೆ. ಇವೆಲ್ಲವೂ ವಂಚನೆಯ ಅನೆಕ ಮುಖಗಳಾಗಿದ್ದು ಇವುಗಳಿಂದ ತಪ್ಪಿಸಿಕೊಳ್ಳುವುದು ನಿಮ್ಮ ಕರ್ತವ್ಯ.

ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳ ಸ್ನೇಹ ಬೇಡ

ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳ ಸ್ನೇಹ ಬೇಡ

ವೈಯಕ್ತಿಕ ಮಾಹಿತಿ, ಜನ್ಮ ದಿನಾಂಕ, ಮೊಬೈಲ್ ನಂಬರ್ ಹಾಗೂ ವಿಳಾಸವನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ. ಹಾಗೆಯೇ, ಅಪರಿಚಿತರು ಆನ್​ಲೈನ್​ನಲ್ಲಿ ಕಳುಹಿಸುವ ಸಾಫ್ಟ್​ವೇರ್, ಆನ್​ಲೈನ್ ಆಟ, ವಿಹಾರ ಆಪ್​ಗಳ ಆಹ್ವಾನವನ್ನು ಯಾವ ಕಾರಣಕ್ಕೂ ಬಳಸಬೇಡಿ. ಸೈಬರ್ ಪೀಡನೆಗೆ ಒಳಗಾದರೆ ಕಂಪ್ಯೂಟರ್, ಮೊಬೈಲ್ ಬಳಕೆ ನಿರ್ಬಂಧಿಸಿ ಎಂದು ಪೊಲೀಸ್ ಇಲಾಖೆ ಮಾರ್ಗದರ್ಶನ ನೀಡಿದೆ.

ಆಯಂಟಿ ವೈರಸ್(Anti Virus Software ) ಬಳಸಿ

ಆಯಂಟಿ ವೈರಸ್(Anti Virus Software ) ಬಳಸಿ

ಉತ್ತಮವಾದ ವೈರಸ್(Anti Virus Software ) ಸಾಪ್ಟವೇರ್ ಖರೀದಿಸಿ. ಇದೊಂದು ಸಮಗ್ರವಾದ ಉತ್ತಮ ತಂತ್ರಾಂಶವಾಗಿದ್ದು ಕೇವಲ ಅಂತರ್ಜಾಲ ವಿರೋಧಿ ತಂತ್ರಾಂಶ ಮಾತ್ರ ಅಲ್ಲ. ಬದಲಾಗಿ ಸಂಪೂರ್ಣವಾದ ಫೈರ್ ವಾಲ್ ರಕ್ಷಣೆಯನ್ನು ಹೊಂದಿರಬೆಕು.ಇದು ಎಲ್ಲ ಅಂಕಿಅಂಶಗಳನ್ನು ಸುರಕ್ಷಿತವಾಗಿಡಬೇಕು. ಜತೆಗೆ ವಂಚಕರು/ಕಳ್ಳರು ದುರುಪಯೋಗ ಮಾಡದಂತೆ ರಕ್ಷಿಸುವಂತಿರಬೇಕು.

Most Read Articles
Best Mobiles in India

English summary
Teens to get safety lessons from cops on cybercrime. The top cop also released a manual for investigating officers giving a detailed list of how they should probe cybercrime cases.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more