ಗುಹೆಯಲ್ಲಿ ಚಿತ್ರಿತವಾದ ಪುರಾತನ ಯುಗದ ಅಂತ್ಯ
ಅನಾದಿಕಾಲದ ಹಲವಾರು ಅನ್ವೇಷಣೆಗಳು ನಮ್ಮನ್ನು ಇಂದಿನ ಯುಗದಲ್ಲೂ ದಂಗುಬಡಿಸುವಂತಿದೆ. ಪುರಾತನ ಕಾಲದಲ್ಲಿ ಅವರು ತಮ್ಮ ಜೀವನ ನಡೆಸುವುದಕ್ಕಾಗಿ ಬಳಸಿಕೊಂಡು ವಸ್ತುಗಳಿರಬಹುದು, ಅವರುಗಳ ಅನ್ವೇಷಣೆಗಳು, ರಸ್ತೆಗಳ ನಿರ್ಮಾಣ, ಕಟ್ಟಡ ಕಟ್ಟುವಿಕೆಯಲ್ಲಿದ್ದ ಅವರ ಜಾಣ್ಮೆ ಹೀಗೆ ಒಂದೊಂದು ನಮಗೆ ಅಚ್ಚರಿಯನ್ನು ತರುವಂತಹದ್ದಾಗಿದೆ.
ಈಗ ಇದಕ್ಕೆ ಪುಷ್ಟಿಯನ್ನು ನೀಡುವಂತೆ ಪುರಾತನ ಗುಹಾಂತರ ಚಿತ್ರಕಲೆಗಳು ದೊರೆತಿದ್ದು ಇದರಲ್ಲಿ ಕುದುರೆ, ಎತ್ತು, ಆಡು ಮೊದಲಾದ ಪ್ರಾಣಿಗಳ ಚಿತ್ರಗಳಿವೆ. ಈಟಿಗಳಿಂದ ತಿವಿತಕ್ಕೊಳಗಾಗಿರುವ ಕಾಡೆಮ್ಮೆ ಚಿತ್ರ ಕೂಡ ಈ ಗುಹೆಯಲ್ಲಿ ದೊರೆತಿದ್ದು ಈ ಚಿತ್ರಕಲೆಯು 12,500 ರಿಂದ 14,500 ರಷ್ಟು ಹಳೆಯದಾಗಿದೆ. ಬೇಸಿಕ್ ದೇಶದಲ್ಲಿ ಇಂತಹುದೇ ಹೆಚ್ಚಿನ ಗುಹಾಂತರ ಚಿತ್ರಗಳೂ ಲಭ್ಯವಾಗಿವೆ. ಬನ್ನಿ ಈ ಕುರಿತ ಹೆಚ್ಚಿನ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ನೋಡೋಣ.

#1
ಪುರಾತನ ಯುಗದ ಸಾಕಷ್ಟು ಚಿತ್ರಗಳು ಗುಹೆಯಲ್ಲಿ ಕಂಡುಬಂದಿದ್ದು ಉತ್ತರ ಸ್ಪೇನ್‌ನ ಅಟುಕ್ಸರಾದಲ್ಲಿ ಈ ಚಿತ್ರಗಳು ಪತ್ತೆಯಾಗಿವೆ. ಹೆಚ್ಚು ಕಡಿಮೆ 70 ಗುಹಾ ಚಿತ್ರಗಳು ಲಭ್ಯವಾಗಿದ್ದು ಇದು 14,500 ವರ್ಷಗಳಷ್ಟು ಹಳೆಯದಾಗಿದೆ.

#2
ಪ್ರಾಣಿಗಳನ್ನೇ ಈ ಚಿತ್ರಗಳು ಒಳಗೊಂಡಿದ್ದು ಇದರೊಂದಿಗೆ ಜೀವನ ಶೈಲಿಯೂ ಇರುವಚಿತ್ರಗಾರಿಕೆಯನ್ನು ಒದಿ ಒಳಗೊಂಡಿದೆ.

#3
ಮೇಲ್ವರ್ಗದ ಪೇಲಿಯೊಲಿಥಿಕ್ ಯುಗದ ಅಂತ್ಯದೆಡೆಗೆ ಅಂದರೆ 14,500 ರಿಂದ 12,500 ವರ್ಷಗಳಷ್ಟು ಹಳೆಯದಾದ ಚಿತ್ರಗಳು ಇವುಗಳಾಗಿದ್ದು ಕಲಾರಚನೆಗಳಲ್ಲಿ ಈ ಯುಗದ ಅಂತ್ಯವನ್ನು ಬಿಂಬಿಸಿದೆ.

#4
ಈ ಯುಗವು ಆರಂಭವಾಗಿದ್ದು 40,000 ವರ್ಷಗಳ ಹಿಂದೆ ಆಗಿದ್ದು ಕೊನೆಗೊಂಡಿದ್ದು 10,000 ವರ್ಷಗಳ ಮುನ್ನವಾಗಿದೆ.

#5
ಮೇಲ್ವರ್ಗದ ಪೇಲಿಯೊಲಿಥಿಕ್ ಸಮಯದಲ್ಲಿ, ಸಾಂಸ್ಕ್ರೃತಿಕ ಸುಧಾರಣೆಯತ್ತ ಜನರು ಕಾಲಿಟ್ಟಿರುವುದು ಕಂಡುಬಂದಿದೆ. ಇವರುಗಳು ಕಲ್ಲುಗಳು, ಮೂಳೆ ಮೊದಲಾದ ಆಯುಧಗಳ ಬಳಕೆಯನ್ನು ಮಾಡಿದ್ದಾರೆ.

#6
ಇದರೊಂದಿಗೆ, ಕಲೆಯ ಆರಂಭ ಕಾಲವನ್ನು ಗುರುತಿಸಬಹುದಾಗಿದೆ. ಜನರು ತಮ್ಮ ಭಾವನೆಗಳನ್ನು ಚಿತ್ರಕಲೆಗಳ ಮೂಲಕ ಪ್ರದರ್ಶಿಸಿದ್ದು ಸಂಗೀತದ ಮಾಧ್ಯಮವನ್ನೂ ಇವರು ಬಳಸಿಕೊಂಡಿದ್ದಾರೆ.

#7
ಅಟುಕ್ಸಾ ಗುಹೆಯು ಬಿಲ್ಬಾವೊ ನಗರದಿಂದ 50 ಕಿಮೀ ದೂರದಲ್ಲಿದ್ದು ಈ ಹಳ್ಳಿಯ ಹೆಸರು ಬೆರ್ರಿಟುವಾ ಎಂದಾಗಿದೆ. ಸ್ಥಳೀಯ ಅಧಿಕಾರಿಗಳು ಹೆಚ್ಚಿನ ಪ್ರಮಾಣದ ಚಿತ್ರಕಲೆಗಳನ್ನು ಒಳಗೊಂಡಿದೆ.

#8
ಈ ಗುಹೆಯನ್ನು 1929 ರಲ್ಲಿ ಮೊದಲು ಪತ್ತೆಹಚ್ಚಲಾಗಿದ್ದು, ನಂತರವಷ್ಟೇ ಸ್ಥಳೀಯ ಅಧಿಕಾರಿಗಳು 2014 ರಲ್ಲಿ ಅನ್ವೇಷಣೆಗಳನ್ನು ನಡೆಸಲು ಗವಿಶೋಧಕರಿಗೆ ಅನುಮತಿಸಿದೆ.
ಇದನ್ನೂ ಓದಿರಿ: ವಿಜ್ಞಾನದ ಮಾತು: ಸಿನಿಮಾಗಳಲ್ಲಿ ತೋರಿಸುವುದೆಲ್ಲಾ ನಿಜವಲ್ಲವಂತೆ!


Click it and Unblock the Notifications








