ಮಕ್ಕಳು ಎಷ್ಟು ಸಮಯ ಟಿವಿ ಮತ್ತು ಮೊಬೈಲ್ ನೋಡಬೇಕು?..ಯಕ್ಷ ಪ್ರಶ್ನೆಗೆ ಉತ್ತರ!
ಮಕ್ಕಳಿಗೆ ಮೊಬೈಲ್ ಕೊಡುವುದು ತಪ್ಪೆಂದು ಎಲ್ಲರಿಗೂ ತಿಳಿಸಿದೆ. ಆದರೆ, ಮೊಬೈಲ್ ಕೊಡದಿದ್ದರೆ ಮಕ್ಕಳು ಬಿಡುತ್ತಾರೆಯೇ?, ಖಂಡಿತವಾಗಿಯೂ ಇಲ್ಲ. ಏಕೆಂದರೆ, ಪೋಷಕರೇ ಮಕ್ಕಳಿಗೆ ಮೊಬೈಲ್ ಕೊಟ್ಟು ರೂಢಿ ಮಾಡಿರುತ್ತಾರೆ. ಇದರಿಂದ ಮಕ್ಕಳಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದ್ದು, ಬೊಜ್ಜುತನ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳ ಪ್ರಮಾಣ ಹೆಚ್ಚಾಗುತ್ತಿದೆ. ಅತಿಯಾದ ಗ್ಯಾಜೆಟ್ ಬಳಕೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ತೊಡಕು ಎಂಬುದು ಈಗಾಗಲೇ ತಿಳಿದಿರುವ ನೈಜ ಸತ್ಯ.
ಹಾಗಾಗಿಯೇ, ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆಯು ಮೊಟ್ಟ ಮೊದಲ ಬಾರಿಗೆ ಚಿಕ್ಕ ಮಕ್ಕಳು ಎಷ್ಟು ಸಮಯ ಮಾತ್ರ ನೋಡಬಹುದು ಎಂಬ ಬಗ್ಗೆ ನಿರ್ದೇಶನ ನೀಡಿದೆ. ಟಿ.ವಿ ಅಥವಾ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಯಾವುದೇ ರೀತಿಯ ಗ್ಯಾಜೆಟ್‌ಗಳನ್ನು ಚಿಕ್ಕ ಮಕ್ಕಳು ಎಷ್ಟು ಸಮಯ ಮಾತ್ರ ನೋಡಬೇಕು ಎಂಬುದರ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಲು ಮುಂದಾಗಿದೆ. ಈ ಮೂಲಕ ಮಕ್ಕಳ ಗ್ಯಾಜೆಟ್‌ಗಳ ಬಳಕೆಗೆ ಕಡಿವಾಣ ಹಾಕಲು ವಿಶ್ವ ಆರೋಗ್ಯ ಸಂಸ್ಥೆ ಪಣತೊಟ್ಟಿದೆ.

ಈ ಆಧುನಿಕ ಯುಗದಲ್ಲಿ ಮಕ್ಕಳಿಂದ ಗ್ಯಾಜೆಟ್‌ಗಳನ್ನು ಸಂಪೂರ್ಣವಾಗಿ ದೂರಗೊಳಿಸಲು ಸಾಧ್ಯವಿಲ್ಲದಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ ವಯಸ್ಸಿನ ಆಧಾರಿತವಾಗಿ ಗ್ಯಾಜೆಟ್ ಬಳಕೆ ಹೇಗಿರಬೇಕು ಎಂದು ತಿಳಿಸಿದೆ. ಯಾವ ವಯಸ್ಸಿನ ಮಕ್ಕಳು ಒಂದು ದಿನದಲ್ಲಿ ಮಕ್ಕಳು ಎಷ್ಟು ಸಮಯ ನಿದ್ರಿಸಬೇಕು?, ಎಷ್ಟು ಸಮಯ ದೈಹಿಕ ಚಟುವಟಿಕೆಯಲ್ಲಿ ತೊಡಗಬೇಕು? ಮತ್ತು ಯಾವ ವಯಸ್ಸಿನ ಮಕ್ಕಳು ಎಷ್ಟು ಸಮಯ ಮಾತ್ರ ಗ್ಯಾಜೆಟ್‌ಗಳನ್ನು ನೋಡಬೇಕು ಎಂಬುದನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ.

0-12 ತಿಂಗಳ ಮಕ್ಕಳು
*ನವಜಾತ ಶಿಶುವಿಗೆ 14 ರಿಂದ 17 ಗಂಟೆ ನಿದ್ದೆ ಬೇಕಾಗುತ್ತದೆ
*ನಿರಂತರ ಮುವತ್ತು ನಿಮಿಷ ಮಗು ಹೊಟ್ಟೆ ಮೇಲೆ ಮಲಗಬೇಕು.
* ಕಡ್ಡಾಯವಾಗಿ ಗ್ಯಾಜೆಟ್ ಬಳಕೆ ನಿಷಿದ್ಧ.

1-2 ವರ್ಷ ಮಕ್ಕಳಿಗೆ
*11 ರಿಂದ 14 ಗಂಟೆ ನಿದ್ದೆ ಬೇಕಾಗುತ್ತದೆ.
*ಕನಿಷ್ಠ ಮೂರು ಗಂಟೆ ದೈಹಿಕ ಚಟುವಟಿಕೆ.
*ಒಂದು ಗಂಟೆ ಗ್ಯಾಜೆಟ್ ಬಳಕೆ ಮಾಡಬಹುದು( ನಿರಂತರವಾಗಿರಬಾರದು).

2-5 ವರ್ಷ ಮಕ್ಕಳಿಗೆ
*10 ರಿಂದ 13 ಗಂಟೆ ನಿದ್ದೆ ಬೇಕಾಗುತ್ತದೆ.
*ಕನಿಷ್ಠ ಮೂರು ಗಂಟೆ ದೈಹಿಕ ಚಟುವಟಿಕೆ.
*ಒಂದು ಗಂಟೆ ಗ್ಯಾಜೆಟ್ ಬಳಕೆ ಮಾಡಬಹುದು.

5 - 10 ವರ್ಷ ಮಕ್ಕಳಿಗೆ
* ಕನಿಷ್ಠ 10 ಗಂಟೆ ನಿದ್ದೆ ಬೇಕಾಗುತ್ತದೆ.
*ಕನಿಷ್ಠ ನಾಲ್ಕು ಗಂಟೆ ದೈಹಿಕ ಚಟುವಟಿಕೆ.( ಹೊರಾಂಗಣ)
*ಒಂದರಿಂದ ಎರಡು ಗಂಟೆ ಗ್ಯಾಜೆಟ್ ಬಳಕೆ ಮಾಡಬಹುದು.

ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.
ಮಾನವನ ದೇಹಕ್ಕೆ ಅಗತ್ಯ ಪ್ರಮಾಣದಷ್ಟು ನಿದ್ರೆ ಬೇಕು. ಮಕ್ಕಳಿಗೆ ಇನ್ನು ಹೆಚ್ಚಿನ ನಿದ್ರೆ ಇದ್ದರೆ ಉತ್ತಮ. ಆದರೆ, ಹೆಚ್ಚು ಮೊಬೈಲ್ ಬಳಕೆ ಮಾಡುವ ಮಕ್ಕಳನಿದ್ರಾ ವ್ಯವಸ್ಥೆಯಲ್ಲಿ ಶೇ.50 ಪರ್ಸೆಂಟ್‌ಗಿಂತಲೂ ಹೆಚ್ಚು ಬದಲಾವಣೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 10,000 ಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿ ಸಂಶೋಧನೆ ನಡೆಸಿ ರಿಪೋರ್ಟ್ ನೀಡಲಾಗಿದೆ.

ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ತೊಂದರೆ.
ಮಕ್ಕಳ ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆ ಮಾಡಿದರೆ ನರಗಳು ಶಕ್ತಿಹೀನವಾಗುತ್ತವೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಮೊಬೈಲ್ ಬಳಕೆಯಿಮದಾಗಿ ನರಮಂಡಲದ ರಚನೆ ಮೇಲೆ ಪರಿಣಾಮ ಬೀರುವುದರಿಮದ ಮುಂದೆ ಸ್ಮರಣ ಶಕ್ತಿ ಮತ್ತು ದೃಷ್ಟಿ ಮೇಲೆ ಸಮಸ್ಯೆಗಳು ತಲೆದೂರಬಹುದು ಎಂದು ಸಂಶೋಧನೆ ತಿಳಿಸಿದೆ.

ಮಕ್ಕಳ ಮನಸ್ಸಿನ ಮೇಲೆ ಒತ್ತಡ ಬೀಳುತ್ತದೆ.
ಮೊಬೈಲ್ ಮೂಲಕ ಸಾಮಾಜಿಕ ಮಾಧ್ಯಮಗಳ ವೀಕ್ಷಣೆ ಮಾಡುತ್ತಿರುವ ಮಕ್ಕಳ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತಿದೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಸಾಮಾಜಿಕ ಮಾಧ್ಯಮಗಳಿಂದ ಹರಡುವ ಸುದ್ದಿಗಳು, ಫ್ಯಾಶನ್, ಜಾಹಿರಾತುಗಳು ಮಕ್ಕಳ ಮನಸ್ಸಿನ ಮೇಲೆ ಒತ್ತಡ ತರುತ್ತವೆ. ಹಾಗಾಗಿ, ಈ ಬಗ್ಗೆ ಪೋಷಕರು ಎಚ್ಚರಿಕೆಯಿಂದ ಇದ್ದರೆ ಒಳಿತು.


Click it and Unblock the Notifications








