ನಿಮ್ಮ ಆಧಾರ್ ಮಾಹಿತಿಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವುದು ಹೇಗೆ?..ಇಲ್ಲಿವೆ 5 ಟಿಪ್ಸ್!!

Written By:

ಆಧಾರ್ ಮಾಹಿತಿ ಸರ್ಕಾರದಿಂದಲೇ ಸೋರಿಕೆಯಾಗಿದೆ ಎಂಬ ಸುದ್ದಿಗಳು ಜನರನ್ನು ತಲುಪುತ್ತಿವೆಯಾದರೂ ಸಹ ಅವುಗಳ ಸತ್ಯಾಸತ್ಯತೆ ಇನ್ನು ಹೊರಬಿದ್ದಿಲ್ಲ. ಆದರೆ, ಆಧಾರ್ ಮಾಹಿತಿ ಸೋರಿಕೆಯಾದರೆ ಏನೆಲ್ಲಾ ತೊಂದರೆಗಳು ಆಗಬಹುದು ಎಂಬುದನ್ನು ಈ ಸೋರಿಕೆ ಸುದ್ದಿ ಒಂದು ಉದಾಹರಣೆಯಾಗಬಹುದು.!!

ಹೌದು, ನಮ್ಮ ಸಮಸ್ತ ಮಾಹಿತಿಯನ್ನೆಲ್ಲಾ ಹೊಂದಿರುವ ಆಧಾರ್ ಅನ್ನು ಹಲವು ಕಂಪನಿಗಳು ದೃಢೀಕರಣಕ್ಕಾಗಿ ಕೇಳುತ್ತವೆ. ಹಾಗೆ ಪಡೆದುಕೊಂಡ ನಿಮ್ಮ ಆಧಾರ್ ವಿವರವು ಅಕಸ್ಮಾತ್ ಆಗಿ ಖದೀಮರ ಪಾಲಾದರೆ ನಾವೇ ಕಷ್ಟ ಅನುಭವಿಸಬೇಕಾಗುತ್ತದೆ.! ನಮ್ಮೆಲ್ಲಾ ಖಾಸಾಗಿ ಮಾಹಿತಿಗಳು ಖದೀಮರಿಗೆ ಸಿಕ್ಕಿದರೆ ಆಗುವ ಅನಾಹುತಗಳು ಸಹ ಹೆಚ್ಚೇ.!!

ನಿಮ್ಮ ಆಧಾರ್ ಮಾಹಿತಿಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವುದು ಹೇಗೆ?.. 5 ಟಿಪ್ಸ್!

ಹಾಗಾಗಿಯೇ, ಆಧಾರ್ ಪ್ರಾಧಿಕರ ಆಧಾರ್ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಹಲವು ಸೇವೆಗಳನ್ನು ನೀಡುತ್ತಿದೆ.! ವಾರದ ಹಿಂದಷ್ಟೆ ವರ್ಚುವಲ್ ಐಡಿ ತಂತ್ರಜ್ಞಾನವನ್ನು ಸಹ ಜಾರಿಗೆ ಬಂದಿದ್ದು, ಹಾಗಾದರೆ, ನಿಮ್ಮ ಆಧಾರ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಯೋಮೆಟ್ರಿಕ್ ಲಾಕ್‌ ಮಾಡಿ!!

ಬಯೋಮೆಟ್ರಿಕ್ ಲಾಕ್‌ ಮಾಡಿ!!

ನಿಮ್ಮ ಆಧಾರ್ ಇತರರಿಂದ ಬಳಕೆಯಾಗಬಹುದು ಎಂಬ ಅನುಮಾನ ಮೂಡಿದರೆ ನಿಮ್ಮ ಆಧಾರ್ ಅನ್ನು ಲಾಕ್ ಮಾಡಿಬಿಡಿ.! ಯುಐಡಿಎಐ (UIDAI - Official Website) ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಆಧಾರ್‌ನ ಲಾಕ್‌ ಮಾಡಲು ಮತ್ತು ಅನ್‌ಲಾಕ್‌ ಮಾಡುವ ಅವಕಾಶವಿದ್ದು, ನಿಮ್ಮ ಆಧಾರ್ ಮಾಹಿತಿ ಕಳುವಾಗದಂತೆ ಎಚ್ಚರಿಕೆಯಿಂದ ಇರಬಹುದು.!!

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ವರ್ಚುವಲ್ ಐಡಿ ಬಳಸಿಕೊಳ್ಳಿ!!

ವರ್ಚುವಲ್ ಐಡಿ ಬಳಸಿಕೊಳ್ಳಿ!!

ಬ್ಯಾಂಕಿಂಗ್‌ ವಹಿವಾಟು ನಡೆಸುವಾಗ ಅಥವಾ ಫೇಸ್‌ಬುಕ್, ಗೂಗಲ್ ಲಾಗಿನ್‌ಗಾಗಿಯೋ ಒನ್ ಟೈಮ್‌ ಪಾಸ್‌ವರ್ಡ್‌ (ಒಟಿಪಿ) ನೀಡುವಂತೆ ಆಧಾರ್ ವರ್ಚುವಲ್‌ ಐಡಿ ಕೂಡ ಒಂದು ಒಟಿಪಿ ಮಾದರಿಯಾಗಿದೆ. ಒಮ್ಮೆ ಮಾತ್ರವೇ ಬಳಸಬಹುದಾದ ಈ ಐಡಿಯನ್ನು ಯಾವಾಗಲೂ ರಚಿಸಿ ದೃಢೀಕರಣಕ್ಕೆ ನೀಡಬಹುದಾದ ಆಯ್ಕೆ ಶೀಘ್ರದಲ್ಲಿಯೇ ಬರಲಿದೆ.!!

ಆಧಾರ್ ಸಂಖ್ಯೆ ಅಥವಾ ಒಟಿಪಿ ನೀಡಲೇಬೇಡಿ!!

ಆಧಾರ್ ಸಂಖ್ಯೆ ಅಥವಾ ಒಟಿಪಿ ನೀಡಲೇಬೇಡಿ!!

ಸೈಬರ್ ಕ್ರಿಮಿನಲ್‌ಗಳು ಫೋನ್‌ ಅಥವಾ ಎಸ್ಸೆಮ್ಮೆಸ್ ಮೂಲಕ ಆಧಾರ್ ಸಂಖ್ಯೆ ಅಥವಾ ಒಟಿಪಿ ಇತ್ಯಾದಿಯನ್ನು ನಿಮ್ಮಿಂದ ಕೇಳುತ್ತಾರೆ. ಆದರೆ, ಯಾವುದೇ ಕಾರಣಕ್ಕೂ ಕಂಪನಿಗಳ ಕಚೇರಿಯನ್ನೋ ಸಂಪರ್ಕಿಸದೆ ಆಧಾರ್ ಬಗೆಗಿನ ಯಾವುದೇ ಮಾಹಿತಿಯನ್ನು ನೀಡಬೇಡಿ.!

ಆನ್‌ಲೈನ್ ಲಾಗಿನ್‌ಗೆ ಬಳಸಬೇಡಿ.!!

ಆನ್‌ಲೈನ್ ಲಾಗಿನ್‌ಗೆ ಬಳಸಬೇಡಿ.!!

ಬ್ಯಾಂಕ್‌ ಖಾತೆ, ವಿಮಾ ಪಾಲಿಸಿ, ಮೊಬೈಲ್‌ ಫೋನ್‌ ಇತ್ಯಾದಿಗಳಿಗೆ ಆಧಾರ್‌ ಲಿಂಕ್‌ ಮಾಡಲೇಬೇಕೆಂಬ ಸೂಚನೆ ಇರುವದನ್ನೆ ಬಂಡವಾಳ ಮಾಡಿಕೊಂಡಿರುವ ವಂಚಕರು ವೆಬ್‌ಸೈಟ್‌ಗೆ ಆಧಾರ್ ಮಾಹಿತಿ ನೀಡಿ ಲಾಗಿನ್ ಆಗುವಂತೆ ರಚಿಸಿರುತ್ತಾರೆ.! ದಯವಿಟ್ಟು ಆಧಾರ್ ಮಾಹಿತಿ ನೀಡಿ ಲಾಗಿನ್ ಆಗುವ ಸಾಹಸ ಬೇಡ.!!

ಆಧಾರ್ ಲಿಂಕ್‌ ಆತುರ ಬೇಡ.!!

ಆಧಾರ್ ಲಿಂಕ್‌ ಆತುರ ಬೇಡ.!!

ದೇಶದಲ್ಲಿ ಈಗಾಗಲೇ 119 ಕೋಟಿ ಮಂದಿ ಆಧಾರ್‌ ಕಾರ್ಡ್‌ ಮಾಡಿಸಿದ್ದಾರೆ ಮತ್ತು ಸುಮಾರು 55 ಕೋಟಿಯಷ್ಟು ಮಂದಿ ಈ ಕಾರ್ಡನ್ನು ತಮ್ಮ ಬ್ಯಾಂಕ್‌ ಖಾತೆಗೆ, ವಿಮಾ ಪಾಲಿಸಿಗಳಿಗೆ ಲಿಂಕ್‌ ಮಾಡಿದ್ದಾರೆ.! ನೀವಿನ್ನು ಲಿಂಕ್ ಮಾಡದಿದ್ದರೆ ಗಾಬರಿ ಬೇಡಿ. ನಿಧಾನವಾಗಿಯೇ ಈ ಬಗ್ಗೆ ತಿಳಿದು ಲಿಂಕ್ ಮಾಡಿ.!!

ಓದಿರಿ:ಒಂದು ನಿರ್ಧಾರಕ್ಕೆ 21 ಸಾವಿರ ಕೋಟಿ ಹಣ ಕಳೆದುಕೊಂಡ ಫೇಸ್‌ಬುಕ್ ಮಾಲಿಕ!..ಆದರೂ ಖುಷಿಯಂತೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These five steps will help you in protecting your Aadhaar data. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot