ಸೆಕೆಂಡ್ ಫೋನ್ ಖರೀದಿ ಪಾಲಿಸಬೇಕಾದ ನಿಯಮಗಳು
ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಬಯಸದವರು ಯಾರಿದ್ದಾರೆ ಹೇಳಿ? ತಾಂತ್ರಿಕ ಯುಗದಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಅನ್ನು ತಮ್ಮದಾಗಿಸಿಕೊಳ್ಳಬೇಕೆಂದು ಬಯಸುವವರೇ ಹೆಚ್ಚು. ಇನ್ನು ಹೊಸ ಫೋನ್ ಖರೀದಿಸುವವರಿಗಿಂತ ಸೆಕೆಂಡ್ ಹ್ಯಾಂಡ್‌ಗೆ ಮನಸೋಲುವವರು ಹೆಚ್ಚು. ಅದರಲ್ಲೂ ಉತ್ತಮ ಗುಣಮಟ್ಟದ ಸೆಕೆಂಡ್ ಹ್ಯಾಂಡ್ ಫೋನ್ ತಮ್ಮದಾಗಬೇಕೆಂದು ಫೋನ್ ಖರೀದಿಸುವವರು ಎದುರು ನೋಡುತ್ತಾರೆ.
ನೀವೂ ಸೆಕೆಂಡ್ ಹ್ಯಾಂಡ್ ಫೋನ್ ಅನ್ನೇ ತಮ್ಮದಾಗಿಸಿಕೊಳ್ಳಬೇಕೆಂಬ ಬಯಕೆಯನ್ನು ಹೊಂದಿದವರಾಗಿದ್ದಲ್ಲಿ ಇಲ್ಲಿದೆ ಸರಳ ಸಲಹೆಗಳು. ನಿಮ್ಮ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಗೆ ಅತ್ಯದ್ಭುತವಾಗಿರುವ ಈ ಸಲಹೆಗಳು ನಿಜಕ್ಕೂ ಉತ್ತಮ ಸೆಕೆಂಡ್ ಹ್ಯಾಂಡ್ ಫೋನ್ ಅನ್ನು ನಿಮಗೆ ಒದಗಿಸುವಲ್ಲಿ ಕಾರಣವಾಗಿರುತ್ತದೆ.
ಸ್ಮಾರ್ಟ್‌ಫೋನ್ ಎಂಬುದು ಇಂದಿನ ಆಧುನಿಕ ಯುಗದಲ್ಲಿ ಹೆಚ್ಚು ಅತ್ಯವಶ್ಯಕ ಗ್ಯಾಜೆಟ್ ಆಗಿ ಮಾರ್ಪಟ್ಟಿದೆ. ದಿನನಿತ್ಯದ ಅರ್ಧದಷ್ಟು ಕೆಲಸಗಳನ್ನು ನಾವು ಪುಟ್ಟ ಡಿವೈಸ್ ಅನ್ನು ಬಳಸಿಕೊಂಡು ಮಾಡುತ್ತಿದ್ದು ಇದು ನಮ್ಮ ಅತ್ಯವಶ್ಯಕ ಅಗತ್ಯವಾಗಿ ಮಾರ್ಪಟ್ಟಿದೆ. ಹಾಗಿದ್ದರೆ ಇಂತಹ ಫೋನ್‌ಗಳ ಖರೀದಿಯನ್ನು ನೀವು ಮಾಡುತ್ತಿದ್ದೀರಿ ಎಂದಾದಲ್ಲಿ ತೆಗೆದುಕೊಳ್ಳಬೇಕಾದ ಸಲಹೆಗಳೇನು ಎಂಬುದನ್ನು ಅರಿತುಕೊಳ್ಳೋಣ.

ಸಲಹೆ: 1
ಹೆಚ್ಚಿನ ರಿವ್ಯೂ ಸೈಟ್‌ಗಳಿಗೆ ಭೇಟಿ ನೀಡಿ ಮತ್ತು ನೀವು ಕೊಳ್ಳಬೇಕೆಂದು ಬಯಸುವ ಸೆಕೆಂಡ್ ಹ್ಯಾಂಡ್ ಫೋನ್‌ನತ್ತ ಗಮನ ಹರಿಸಿ. ಅವುಗಳಲ್ಲಿ ನಿಮಗೆ ಪ್ರಯೋಜನಕಾರಿಯಾಗಿರುವ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ನೋಡಿ.

ಸಲಹೆ: 2
ಕೆಲವೊಂದು ಕಂಪೆನಿಗಳು ಸೆಕೆಂಡ್ ಹ್ಯಾಂಡ್ ಫೋನ್ ಅನ್ನು ಒದಗಿಸುತ್ತವೆ. ಈ ಸಮಯದಲ್ಲಿ ಫೋನ್‌ನ ಗ್ಯಾರಂಟಿಯತ್ತ ಗಮನ ಹರಿಸಿ.

ಸಲಹೆ: 3
ರೀಟೈಲ್ ತಾಣದ ವಿವರಗಳನ್ನು ಪಡೆದುಕೊಳ್ಳಿ ರೀಟೈಲ್ ತಾಣದ ಎಲ್ಲಾ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳಿ.

ಸಲಹೆ: 4
ಫೋನ್ ಮಾರಾಟಗಾರರ ಮಾಹಿತಿ ಪಡೆದುಕೊಳ್ಳಿ ಮಾರಾಟಗಾರರ ವಿವರಗಳನ್ನು ಪಡೆದುಕೊಳ್ಳಿ. ಸೆಕೆಂಡ್ ಹ್ಯಾಂಡ್ ಫೋನ್ ಅನ್ನು ಖರೀದಿಸುವ ಖರೀದಿಗಾರರ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಿ.

ಸಲಹೆ: 5
ಫೋನ್ ಅನ್ನು ಪರಿಶೀಲಿಸಿಕೊಳ್ಳಿ ನೀವು ಖರೀದಿಸುವ ಫೋನ್‌ನ ಕಡೆಗೆ ಗಮನ ಹರಿಸುವುದು ಅತ್ಯುತ್ತಮವಾಗಿದೆ. ಬ್ಯಾಟರಿ ಬಾಳಿಕೆ, RAM ಸಾಮರ್ಥ್ಯ, ಪ್ರೊಸೆಸರ್ ವೇಗ, ಫೋನ್ ಗುಣಮಟ್ಟ ಈ ಎಲ್ಲಾ ಅಂಶಗಳ ಕಡೆಗೆ ಗಮನ ಹರಿಸುವುದು ಅತ್ಯವಶ್ಯಕವಾಗಿದೆ.

ಸಲಹೆ: 6
ಡಿಸ್‌ಪ್ಲೇ ಮತ್ತು ಕೀಬೋರ್ಡ್ ನಿಮ್ಮ ಫೋನ್ ಡಿಸ್‌ಪ್ಲೇ ಮತ್ತು ಕೀಬೋರ್ಡ್ ಗುಣಮಟ್ಟ ಉತ್ತಮವಾಗಿದೆಯೇ ಎಂಬುದನ್ನು ಗಮನಿಸಿಕೊಳ್ಳಿ. ಕೈಯಿಂದ ಫೋನ್‌ನ ಕೀಬೋರ್ಡ್ ಅನ್ನು ಪರಿಶೀಲಿಸಿಕೊಳ್ಳಿ.

ಸಲಹೆ: 7
ಕ್ಯಾಮೆರಾ ಮತ್ತು ಇತರ ಅಂಶಗಳು ಫೋನ್‌ನ ಕ್ಯಾಮೆರಾವನ್ನು ಪರಿಶೀಲಿಸುವುದು ಅತೀ ಉತ್ತಮ ಅಂಶವಾಗಿದೆ. ಕ್ಯಾಮೆರಾ ಲೆನ್ಸ್, ಕ್ಲಾರಿಟಿ ಫೋನ್‌ನ ಖರೀದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸಲಹೆ: 8
ನೀವು ಖರೀದಿ ಮಾಡುತ್ತಿರುವುದು ಸೆಕೆಂಡ್ ಹ್ಯಾಂಡ್ ಫೋನ್ ಆಗಿದ್ದರೂ ಬೆಲೆಯನ್ನು ನಿಗದಿಪಡಿಸುವುದು ಅತ್ಯವಶ್ಯಕವಾಗಿದೆ. ಫೋನ್‌ನ ಕರಾರುವಾಕ್ಕು ಬೆಲೆಯನ್ನು ನೀವು ಗಮನಿಸುವುದು ಅತೀ ಅವಶ್ಯಕವಾಗಿದೆ.

ಸಲಹೆ: 9
ಫೋನ್ ಅನ್ನು ಸರಿಯಾಗಿ ಪರೀಕ್ಷಿಸಿಕೊಳ್ಳುವುದು ಇನ್ನೊಂದು ಮುಖ್ಯ ಅಂಶವಾಗಿದೆ. ಸೆಕೆಂಡ್ ಹ್ಯಾಂಡ್ ಫೋನ್ ಅನ್ನು ಕರಾರುವಾಕ್ಕಾಗಿ ಪರೀಕ್ಷಿಸಿಕೊಳ್ಳುವುದು ಅಗತ್ಯ ಅಂಶವಾಗಿದೆ.


Click it and Unblock the Notifications








