Home
ಟೆಕ್ ನೌಕರಿ

ಕಳೆದ ಹೋದ ಆಪಲ್ ಡಿವೈಸ್ ಹುಡುಕುವುದು ಇನ್ನು ಮುಂದೆ ಮತ್ತಷ್ಟು ಸುಲಭ!

By Gizbot Bureau

ಕಳೆದ ವಾರ ಆಪಲ್ ಐಓಎಸ್ 13 ರನ್ನು ತನ್ನ ಐಫೋನ್ ಡಿವೈಸ್ ಗಳಿಗಾಗಿ ಪ್ರಕಟಿಸಿದೆ ಮತ್ತು ಕೆಲವು ವಿಶೇಷ ಫೀಚರ್ ಗಳ ಬಗ್ಗೆ ಕೂಡ ವಿವರಣೆ ನೀಡಿದೆ. ಅದರಲ್ಲಿ ಬಹಳ ವಿಶೇಷವಾಗಿ ಸ್ಟೇಜ್ ನಲ್ಲಿ ಪ್ರಕಟಿಸಿದ ಮತ್ತು ಕುತೂಹಲಕಾರಿಯಾಗಿರುವ ಫೀಚರ್ ಎಂದರೆ ಫೈಂಡ್ ಮೈ ಆಪ್. ಇದು ಸದ್ಯ ಲಭ್ಯವಿರುವ ಫೈಂಡ್ ಮೈ ಫ್ರೆಂಡ್ ಮತ್ತು ಫೈಂಡ್ ಮೈ ಐಫೋನ್ ಆಪ್ಸ್ ಗಳ ಸಮ್ಮಿಶ್ರಣವಾಗಿರುವ ಆಪ್ ಆಗಿದೆ.

ಕಳೆದ ಹೋದ ಆಪಲ್ ಡಿವೈಸ್ ಹುಡುಕುವುದು ಇನ್ನು ಮುಂದೆ ಮತ್ತಷ್ಟು ಸುಲಭ!

ಸದ್ಯ ಲಭ್ಯವಿರುವ ಆಪ್ ನಲ್ಲಿರುವ ಎಲ್ಲಾ ಫೀಚರ್ ಗಳು ಈ ಆಪ್ ನಲ್ಲಿ ಇರಲಿವೆ ಮತ್ತು ಇದೀಗ ಐಡಿವೈಸ್ ಗಳನ್ನು ಹುಡುಕಾಡುವುದಕ್ಕೆ ಇರುವ ವಿಧಾನಗಳಲ್ಲಿ ಆಪಲ್ ಒಂದು ಹೆಜ್ಜೆ ಮುಂದೆ ಹೋಗಿದೆ ಎಂಬುದನ್ನು ಪ್ರಕಟಪಡಿಸಿದೆ.

ಹೊಸ “ಫೈಂಡ್ ಮೈ” ಆಪ್ ಮ್ಯಾಕ್ ಬುಕ್, ಐಫೋನ್ ಅಥವಾ ಐಪ್ಯಾಡ್ ಡಿವೈಸ್ ಗಳನ್ನು ಹುಡುಕುವ ಸಾಮರ್ಥ್ಯವನ್ನು ಹೊಂದಿದೆ ವಿಶೇಷವೆಂದರೆ ಅಂತರ್ಜಾಲದ ಸಂಪರ್ಕವಿಲ್ಲದೆ ಇರುವಾಗಲೂ ಕೂಡ ಇದು ನಿಮ್ಮ ಡಿವೈಸ್ ಗಳನ್ನು ಹುಡುಕುತ್ತದೆ. ಹೆಚ್ಚಿನ ಮಾಹಿತಿಗಳು ಸದ್ಯ ಲಭ್ಯವಿಲ್ಲದೆ ಇದ್ದರೂ ಕೂಡ ಐಫೋನ್ ತಯಾರಕರು ಇದೀಗ ಇನ್ನಷ್ಟು ಮಾಹಿತಿಗಳನ್ನು ಅಂದರೆ ಆಪ್ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ವಯರ್ಡ್.ಕಾಮ್ ವೆಬ್ ಸೈಟ್ ನಲ್ಲಿ ತಿಳಿಸಿದ್ದಾರೆ.

ಐಫೋನ್, ಐಪ್ಯಾಡ್, ಮ್ಯಾಕ್ ಬುಕ್ ಮತ್ತು ಇತರೆಡೆಗಳಲ್ಲಿ ಫೈಂಡ್ ಮೈ ಆಪ್ ಹೇಗೆ ಕೆಲಸ ಮಾಡುತ್ತದೆ?

ಐಫೋನ್, ಐಪ್ಯಾಡ್, ಮ್ಯಾಕ್ ಬುಕ್ ಮತ್ತು ಇತರೆಡೆಗಳಲ್ಲಿ ಫೈಂಡ್ ಮೈ ಆಪ್ ಹೇಗೆ ಕೆಲಸ ಮಾಡುತ್ತದೆ?

ಆಪಲ್ ವಿವರಿಸುವಂತೆ ಐಡಿವೈಸ್ ಗಳಲ್ಲಿನ ಫೈಂಡ್ ಮೈ ಆಪ್ ಯಾವಾಗಲೂ ಕೂಡ ಬ್ಲೂಟೂತ್ ಕನೆಕ್ಟಿವಿಟಿಯನ್ನು ಬಳಸುತ್ತದೆ ಮತ್ತು ಹತ್ತಿರದ ಡಿವೈಸಿನ ಜಿಯೋ ಲೊಕೇಷನ್ ನ್ನು ಬೀಮ್ ಮಾಡುವುದಕ್ಕೆ ಆ ಮೂಲಕ ಸಾಧ್ಯವಾಗಿಸುತ್ತದೆ.ಹಾಗಾಗಿ ಇದು ಆಫ್ ಲೈನ್ /ಕಳೆದು ಹೋದ ಡಿವೈಸಿನ ಜಾಗವನ್ನು ಹತ್ತಿರದಿಂದಲೇ ಗುರುತಿಸುವುದಕ್ಕೆ ಸಾಧ್ಯಗೊಳಿಸುತ್ತದೆ.ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೇಗೆ ಡಿಸೈನ್ ಮಾಡಲಾಗಿದೆ ಎಂದರೆ ಇತರರು ಟ್ರ್ಯಾಕ್ ಮಾಡಿ ಡಿವೈಸ್ ನ್ನು ತಪ್ಪು ಬಳಕೆಗೆ ಬಳಸುವುದಕ್ಕೆ ಅಸಾಧ್ಯವಾಗುವಂತೆ ಡಿಸೈನ್ ಮಾಡಲಾಗಿದೆ ಎಂದು ಆಪಲ್ ತಿಳಿಸಿದೆ. ಸಂಪೂರ್ಣ ಸಂಭಾಷಣೆಯು ಕೂಡ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ರೂಪದಲ್ಲಿರುವುದರಿಂದಾಗಿ ಕಳೆದು ಹೋದ ಡಿವೈಸಿನ ಲೊಕೇಷನ್ ಕೂಡ ಎನ್ಕ್ರಿಪ್ಟ್ ಆಗಿಯೇ ಲಭ್ಯವಾಗುತ್ತದೆ ಎಂದು ಆಪಲ್ ಹೇಳಿದೆ.

WWDC 2019

WWDC 2019

WWDC 2019 ನಲ್ಲಿ ಈ ಫೀಚರ್ ಬಗ್ಗೆ ಮಾಹಿತಿ ಕೊಡುವ ಸಂದರ್ಬದಲ್ಲಿ ಆಪಲ್ ನ ಹಿರಿಯ ಉಪಾಧ್ಯಕ್ಷರಾಗಿರುವ ಕ್ರಿಗ್ ಫೆಡರಿಗೈ ಅವರು ಎಂಡ್ -ಟು-ಎಂಡ್ ಎನ್ಕ್ರಿಪ್ಟ್ ಆಗಿರುವ ಬಗ್ಗೆ ತಿಳಿಸಿದ್ದಾರೆ. ಸದ್ಯ ಲಭ್ಯವಿರುವ ನೆಟ್ ವರ್ಕ್ ಟ್ರಾಫಿಕ್ ನಲ್ಲಿ ಇದು ಸಣ್ಣ ಬಿಟ್ ಆಗಿರುತ್ತದೆ. ಹಾಗಾಗಿ ಬ್ಯಾಟರಿ ಲೈಫ್, ಡಾಟಾ ಬಳಕೆ ಮತ್ತು ನಿಮ್ಮ ಪ್ರೈವೆಸಿಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ.

ಬ್ಲೂಟೂತ್ ಕನೆಕ್ಟಿವಿಟಿ ಮೂಲಕ ಐಡಿವೈಸ್ ಗಳನ್ನು ಇತರರು ಟ್ರ್ಯಾಕ್ ಮಾಡುವುದನ್ನು ಆಪಲ್ ಹೇಗೆ ತಡೆಯುತ್ತದೆ?

ಬ್ಲೂಟೂತ್ ಕನೆಕ್ಟಿವಿಟಿ ಮೂಲಕ ಐಡಿವೈಸ್ ಗಳನ್ನು ಇತರರು ಟ್ರ್ಯಾಕ್ ಮಾಡುವುದನ್ನು ಆಪಲ್ ಹೇಗೆ ತಡೆಯುತ್ತದೆ?

ಇದರ ಸಂಪೂರ್ಣ ಪ್ರಕ್ರಿಯೆಯ ಸೆಕ್ಯುರಿಟಿ ಪ್ರೊಸೆಸ್ ಅನ್ನುವುದು ಒಂದು ವೇಳೆ ನೀವು ಎರಡು ಆಪಲ್ ಪ್ರೊಡಕ್ಟ್ ಗಳ ಮಾಲೀಕತ್ವವನ್ನು ಹೊಂದಿದ್ದರೆ ಮಾತ್ರವೇ ಸಾಧ್ಯವಾಗುತ್ತದೆ ಎಂದು ನಮೂದಿಸಲಾಗಿದೆ. ಫೈಂಡ್ ಮೈ ಆಪ್ ಮೂಲಕ ನೀವು ಸ್ಟೋರ್ ಮಾಡಿರುವ ಡಿವೈಸ್ ನ್ನು ಮತ್ತೊಬ್ಬ ಬಳಕೆದಾರರ ಐಡಿವೈಸ್ ಬಳಸಿ ಸರ್ಚ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಯಾಕೆಂದರೆ ಎನ್ಕ್ರಿಪ್ಟ್ ಮಾಡಲಾಗಿರುವ ಮಾಹಿತಿಗಳನ್ನು ಡಿಕ್ರಿಪ್ಟ್ ಮಾಡುವುದಕ್ಕೆ ನಿಮ್ಮ ಸ್ವಂತ ಡಿವೈಸ್ ನಲ್ಲಿ ರನ್ ಆಗುವ ನಿರ್ಧಿಷ್ಟ ಕೋಡ್ ಗಳನ್ನೇ ಫೈಂಡ್ ಮೈ ಆಪ್ ರನ್ ಆಗುವುದಕ್ಕೆ ಬಳಸಬೇಕಾಗುತ್ತದೆ( ಕಳೆದು ಹೋಗಿರುವುದಕ್ಕೆ ನೀವು ಬಳಸುವುದು)

Best Mobiles in India

English summary
This App Lets You Find Your Lost iPhone or iPad Without Internet
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+