Home
ಟೆಕ್ ನೌಕರಿ

ಗೂಗಲ್ ಮ್ಯಾಪ್ ಬಳಸಿ ಪೆಟ್ರೋಲ್ ಉಳಿಸಿ..!

By Gizbot Bureau

ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುತ್ತಲೇ ಇದೆ. ಇಂತಹ ಸಂದರ್ಬದಲ್ಲಿ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನೋ ಹಾಗೆ ನಿಮ್ಮ ವೆಹಿಕಲ್ ಪದೇ ಪದೇ ಪೆಟ್ರೋಲ್ ತುಂಬಿಸುವ ಸಿಗ್ನಲ್ ಕೊಡುತ್ತಲೇ ಇರುತ್ತದೆ. ಆದರೆ ಹೇಗಾದ್ರೂ ಮಾಡಿ ನಿಮ್ಮ ಬಜೆಟ್ ನಲ್ಲಿ ಇಂಧನದ ವೆಚ್ಚವನ್ನು ಕಡಿತ ಮಾಡಿಕೊಳ್ಳಬೇಕು ಅಂತ ನೀವು ಯೋಚಿಸುತ್ತಿದ್ದರೆ ನಿಮಗೊಂದು ಅಧ್ಬುತ ಉಪಾಯವನ್ನು ನಾವು ಕೊಡುತ್ತಿದ್ದೇವೆ.

ಗೂಗಲ್ ಮ್ಯಾಪ್ ಬಳಸಿ ಪೆಟ್ರೋಲ್ ಉಳಿಸಿ..!

ಗೂಗಲ್ ಮ್ಯಾಪ್ ಎಲ್ಲರಿಗೂ ತಿಳಿದಿರುವಂತೆ ಒಂದು ಅಧ್ಬುತ ದಾರಿತೋರುಗ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಲು ಗೂಗಲ್ ಮ್ಯಾಪ್ ಬಹಳವಾಗಿ ಸಹಾಯ ಮಾಡುತ್ತದೆ. ನೀವು ತಲುಪಬೇಕಾಗಿರುವ ಪ್ರದೇಶದಲ್ಲಿನ ಟ್ರಾಫಿಕ್ ಮತ್ತು ಇತರೆ ಹಲವಾರು ಮಾರ್ಗಗಳನ್ನು ಇದು ನೀಡುತ್ತದೆ.

ಆದರೆ ಈ ನೇವಿಗೇಷನ್ ಸೇವೆಯು ನಿಮಗೆ ಕೇವಲ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕಿರುವ ದೂರವನ್ನು ಮಾತ್ರ ಹೇಳುವುದಿಲ್ಲ, ಒಟ್ಟಿಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ಮಾರ್ಗಗಳನ್ನು ಸೂಚಿಸುತ್ತದೆ. ಅದರಲ್ಲಿ ಕಡಿಮೆ ದೂರದ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ ಕೇವಲ ನಿಮ್ಮ ಸಮಯ ಮಾತ್ರ ಉಳಿತಾಯವಾಗುವುದಲ್ಲ ಬದಲಾಗಿ ನಿಮ್ಮ ಇಂಧನ ಕೂಡ ಉಳಿತಾಯವಾಗುತ್ತದೆ.

ಈ ಕೆಳಗಿನ ಹಂತಗಳನ್ನು ಅನುಸರಿಸಿ ಸುಲಭದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕಿರುವ ಬೇರೆಬೇರೆ ಮಾರ್ಗಗಳನ್ನು ಕಂಡುಹಿಡಿಯಿರಿ ಮತ್ತು ಹತ್ತಿರದ ಮಾರ್ಗ ಯಾವುದು ಎಂಬುದನ್ನು ಗುರುತಿಸಿಕೊಂಡು ಹಣ, ಇಂಧನ, ಸಮಯ ಮೂರನ್ನೂ ಉಳಿತಾಯ ಮಾಡಿಕೊಳ್ಳಬಹುದು.

ಗೂಗಲ್ ಮ್ಯಾಪ್ ಬಳಸಿ ಪೆಟ್ರೋಲ್ ಉಳಿಸಿ..!

. ಡೆಸ್ಕ್ ಟಾಪ್ ನಲ್ಲಿ

ಹಂತ 1: ನಿಮ್ಮ ಕಂಪ್ಯೂಟರ್ ನ ವೆಬ್ ಬ್ರೌಸರ್ ಮೂಲಕ ಗೂಗಲ್ ಮ್ಯಾಪ್ ನ್ನು ತೆರೆಯಿರಿ.

ಹಂತ 2: ಆರಂಭಿಕ ಕೇಂದ್ರವನ್ನು ಝೂಮ್ ಮಾಡಿ ಮತ್ತು ಅಲ್ಲಿ ರೈಟ್ ಕ್ಲಿಕ್ ಮಾಡಿ.

ಹಂತ 3: ಇದಾದ ನಂತರ, ಡ್ರಾಪ್ ಡೌನ್ ಮೆನು ಮೂಲಕ 'Measure’ ಡಿಸ್ಟೆನ್ಸ್ ನ್ನು ಕ್ಲಿಕ್ ಮಾಡಿ. ಹಂತ 4: ಒಮ್ಮೆ ಮುಗಿದ ನಂತರ, ನೀವು ದೂರವನ್ನು ಅಳತೆ ಮಾಡಬೇಕು ಎಂದುಕೊಂಡಿರುವ ಎರಡನೇ ಪ್ರದೇಶವನ್ನು ಕ್ಲಿಕ್ಕಿಸಿ. ಒಂದು ವೇಳೆ ನೀವು ಹಲವಾರು ಪ್ರದೇಶದ ದೂರವನ್ನು ಕಂಡುಕೊಳ್ಳಲು ಇಚ್ಛಿಸುತ್ತಿದ್ದರೆ ಆ ಎಲ್ಲಾ ಪ್ರದೇಶಗಳನ್ನು ಕ್ಲಿಕ್ಕಿಸಿ.

ಹಂತ 5: ಇದಾದ ನಂತರ, ನೀವು ಆ ಪಾಯಿಂಟ್ ನ್ನು ಡ್ರ್ಯಾಗ್ ಮಾಡಿದರೆ ಮ್ಯಾಪ್ ನಲ್ಲಿ ದೂರವನ್ನು ಕಂಡುಕೊಳ್ಳಬಹುದು. ನೀವು ಹೀಗೆ ಡ್ರ್ಯಾಗ್ ಮಾಡುತ್ತಿದ್ದಂತೆ ಗೂಗಲ್ ಮ್ಯಾಪ್ ನಿಮಗೆ ಪೇಜಿನ ಕೆಳಭಾಗದಲ್ಲಿ ಅದರ ದೂರವನ್ನು ತೋರಿಸುತ್ತದೆ.

ಗೂಗಲ್ ಮ್ಯಾಪ್ ಬಳಸಿ ಪೆಟ್ರೋಲ್ ಉಳಿಸಿ..!

. ಸ್ಮಾರ್ಟ್ ಫೋನ್ ಗಳಲ್ಲಿ

ನೀವು ಇದೇ ಸೇಮ್ ಕ್ರಿಯೆಯನ್ನು ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲೂ ಕೂಡ ಮಾಡಬಹುದು. ಆದರೆ ಪ್ರಕ್ರಿಯೆ ಸ್ವಲ್ಪ ಮಟ್ಟಿಗೆ ಭಿನ್ನವಾಗಿರುತ್ತದೆ ಅಷ್ಟೇ. ಈ ಕೆಳಗಿನ ಹಂತಗಳನ್ನು ಅನುಸರಿಸಿ ದೂರವನ್ನು ಕಂಡುಕೊಳ್ಳಿ.

ಹಂತ 1: ಗೂಗಲ್ ಮ್ಯಾಪ್ ನ್ನು ತೆರೆಯಿರಿ

ಹಂತ 2: ಮೊದಲಿಗೆ ಪ್ರಾಥಮಿಕ ಪಾಯಿಂಟ್ ನ್ನು ಗುರುತಿಸಿ ಮತ್ತು ಅದನ್ನು ಕೆಂಪು ಪಿನ್ ನಿಂದ ಮಾರ್ಕ್ ಮಾಡಿ.

ಹಂತ 3: ಇದಾದ ನಂತರ, ಮ್ಯಾಪ್ ನ ಕೆಳಭಾಗದಲ್ಲಿ ಪ್ರದೇಶದ ಹೆಸರನ್ನು ಟ್ಯಾಪ್ ಮಾಡಿ.

ಹಂತ 4: ಪಾಪ್ ಅಪ್ ಮೆನುಮೂಲಕ ದೂರವನ್ನು ಅಳತೆ ಮಾಡಿ.

ಹಂತ 5: ನೀವು ಸೇರಿಸಲು ಇಚ್ಛಿಸುವ ಮುಂದಿನ ಪಾಯಿಂಟ್ ಗಾಗಿ ನೀವು ಮ್ಯಾಪ್ ನಲ್ಲಿನ ಕಪ್ಪು ವರ್ತುಲವನ್ನು ಡ್ರ್ಯಾಗ್ ಮಾಡಬೇಕು

ಹಂತ 6: ಹೀಗೆ ನೀವು ಹಲವು ಪಾಯಿಂಟ್ ಗಳನ್ನು ಸೇರಿಸಬೇಕು. Add + ನ್ನು ಕ್ಲಿಕ್ ಮಾಡಿ ಕೂಡ ನೀವು ಇದನ್ನು ಮಾಡಬಹುದು.

ಹಂತ 7: ಇದನ್ನು ಮಾಡಿದ ನಂತರ ಕಿಲೋಮೀಟರ್ ಅಥವಾ ಮೈಲ್ಸ್ ನಲ್ಲಿ ದೂರವನ್ನು ಪುಟದ ಕೆಳಭಾಗದಲ್ಲಿ ಡಿಸ್ಪ್ಲೇ ಮಾಡಲಾಗುತ್ತದೆ.

Best Mobiles in India

English summary
This Google Maps trick could help you save petrol. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+