ಬೇರೆಯವರಿಗೆ ತಿಳಿಯದಂತೆ ವಾಟ್ಸ್‌ಆಪ್ ಮೇಸೆಜ್ ಓದುವುದು ಹೇಗೆ..!

|

ಇಂದಿನ ದಿನದಲ್ಲಿ ವಾಟ್ಸ್‌ಆಪ್‌ ಬಳಕೆಯೂ ಸಾಮಾನ್ಯವಾಗಿದೆ. ಸ್ಮಾರ್ಟ್ ಫೋನ್ ಇರುವವರೆಲ್ಲರೂ ಸಹ ವಾಟ್ಸ್‌ಆಪ್ ಬಳಕೆ ಮಾಡುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಅನೇಕ ಹೊಸ ಆಯ್ಕೆಗಳನ್ನು ನೀಡುತ್ತಿದೆ. ವಾಟ್ಸ್‌ಆಪ್ ಆರಂಭದಿಂದ ಇಲ್ಲಿಯವರೆಗೂ ಸಾಕಷ್ಟು ಬದಲಾವಣೆಯನ್ನು ಹೊಂದಿದ್ದು, ಸಂಫೂರ್ಣ ಹೊಸ ಮಾದರಿಯಲ್ಲಿ ಕಾಣಿಸಿಕೊಂಡಿದೆ.

ಬೇರೆಯವರಿಗೆ ತಿಳಿಯದಂತೆ ವಾಟ್ಸ್‌ಆಪ್ ಮೇಸೆಜ್ ಓದುವುದು ಹೇಗೆ..!

ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಕೆಲವು ದಿನಗಳ ಹಿಂದೆ ತನ್ನ ಬಳಕೆದಾರರಿಗೆ ಬ್ಲೂ ಟೀಕ್ ಆಯ್ಕೆಯನ್ನು ನೀಡಿತ್ತು. ನಾವು ಕಳುಹಿಸಿದ ಮೇಸೆಜ್ ಅವರಿಗೆ ತಲುಪಿದೆ ಎಂದರೆ ಎರಡು ಟಿಕ್ ಮಾರ್ಕ್, ಅವರು ಆ ಮೇಸೆಜ್ ಅನ್ನು ಓದಿದ್ದಾರೆ ಎಂದರೆ ಆ ಟಿಕ್ ಮಾರ್ಕ್‌ಗಳು ಬ್ಲೂ ಬಣ್ಣದಲ್ಲಿ ಕಾಣಿಸಲು ಶುರುವಾಗುತಿತ್ತು. ಇದರಿಂದಾಗಿ ಬಳಕೆದಾರರಿಗೆ ತಮ್ಮ ಮೇಸೆಜ್ ಅನ್ನು ಸ್ವೀಕರಿಸಿದವರು ಓದಿದರೋ ಇಲ್ಲವೇ ಎಂಬುದು ತಿಳಿಯಲು ಸಾಧ್ಯವಾಗಿತ್ತು.

ಕಾಣಿಸದಂತೆ ಮೇಸೆಜ್ ಓದುವುದು

ಕಾಣಿಸದಂತೆ ಮೇಸೆಜ್ ಓದುವುದು

ಹಲವು ಸಂದರ್ಭದಲ್ಲಿ ನಾವು ಬೇರೆಯವರು ಕಳುಹಿಸದ ಮೇಸೆಜ್ ಅನ್ನು ಅವರಿಗೆ ತಿಳಿಯದಂತೆ ಓದಬೇಕಾಗಿರುತ್ತದೆ. ಅಲ್ಲದೇ ಅವರಿಗೆ ಆ ಮೇಸೆಜ್ ಅನ್ನು ನಾವು ಓದಿದ್ದೇವೆ ಎಂಬುದು ತಿಳಿಯ ಬಾರದಾಗಿರುತ್ತದೆ. ಈ ಹಿನ್ನಲೆಯಲ್ಲಿ ಕಳುಹಿಸಿದವರಿಗೆ ತಿಳಿಯದಂತೆ, ಚಾಟ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಮೇಸೆಜ್ ಅನ್ನು ಓದುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಹಂತ 01:

ಹಂತ 01:

ಮೊದಲು ನಿಮ್ಮ ಮೊಬೈಲ್‌ಗೆ ಮೇಸೆಜ್ ಬರುವವರೆಗೂ ಕಾಯಿರಿ ಮತ್ತು ನೋಟಿಫಿಕೇಷನ್ ಬಾರ್‌ನಲ್ಲಿ ವಾಟ್ಸ್‌ಆಪ್ ಮೆಸೇಜ್ ಬಂದಿರುವುದನ್ನು ಮೊದಲು ಖಚಿತ ಪಡಿಸಿಕೊಳ್ಳಿ.

ಹಂತ 02:

ಹಂತ 02:

ನಂತರ ನಿಮ್ಮ ಮೊಬೈಲ್ ನಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ ಫ್ಲೈಟ್ ಮೋಡ್ ಅನ್ನು ಆನ್‌ ಮಾಡಿಕೊಳ್ಳಿ.

ಹಂತ 03:

ಹಂತ 03:

ಫೈಟ್‌ ಮೋಡ್ ಹಾಕಿಕೊಂಡ ನಂತರದಲ್ಲಿ ನಿಮ್ಮ ವಾಟ್ಸ್‌ಆಪ್ ಅನ್ನು ಓಪನ್ ಮಾಡಿ ಮತ್ತು ನಿಮಗೆ ಬಂದಿರುವ ಮೇಸೆಜ್ ಅನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ಹಂತ 04:

ಹಂತ 04:

ಮೇಸೆಜ್ ಓದಿದ ನಂತರದಲ್ಲಿ ನಿಮ್ಮ ವಾಟ್ಸ್‌ಆಪ್ ಅನ್ನು ಕ್ಲೊಸ್ ಮಾಡಿ. ಅಲ್ಲದೇ ಬ್ಯಾಕ್‌ಗ್ರೌಂಡಿನಲ್ಲಿಯೂ ರನ್‌ ಆಗದಂತೆ ನೋಡಿಕೊಳ್ಳಿ. ಬ್ಯಾಕ್ ಗ್ರೌಂಡಿನಲ್ಲಿ ರನ್ ಆದರೆ ಬ್ಲೂಟಿಕ್ ಕಾಣಿಸಿಕೊಳ್ಳಲಿದೆ.

ಹಂತ 05:

ಹಂತ 05:

ಇದಾದ ನಂತರದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಫ್ಲೈಟ್ ಮೋಡ್ ಅನ್ನು ಆಫ್ ಮಾಡಿ. ಹೀಗೆ ಮಾಡುವುದರಿಂದಾಗಿ ನಿಮಗೆ ಮೇಸೆಜ್ ಕಳುಹಿಸಿದವರಿಗೆ ನೀವು ಅವರ ಮೇಸೆಜ್ ಓದಿದ ಬಗ್ಗೆ ತಿಳಿಯುವುದಿಲ್ಲ.

Best Mobiles in India

English summary
This WhatsApp smart hack lets you read messages without sender knowing. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X